ಕಾರ್ಪೆಂಟರ್ ಆಗಿದ್ದವ ಗ್ಯಾಂಗ್‌ಸ್ಟರ್, ಬಳಿಕ ಬಾಲಿವುಡ್ ಫೈಟರ್; ಮಗ ಬಾಲಿವುಡ್ ಸೂಪರ್ ಸ್ಟಾರ್!
ಜೈಲಿನಿಂದ ಹೊರಬಂದ ತಂದೆ ನಿಧಾನವಾಗಿ ಕಾರ್ಪೆಂಟರ್ ಕೆಲಸ ಮಾಡುತ್ತ ಕಾರ್ಪೆಂಟರ್ ವೃತ್ತಿಯನ್ನೆ ಆಯ್ದುಕೊಂಡರಂತೆ. ಆದರೆ, ಸಿಯೋನ್ ಕೋಳಿವಾಡದಲ್ಲಿ ಗ್ಯಾಂಗ್ ಜತೆ ಸೇರಿಕೊಂಡು ಗ್ಯಾಂಗ್‌ಸ್ಟರ್ ಆಗಿ ಬದಲಾದರು.
'ನನ್ನ ತಂದೆ 13ನೇ ವಯಸ್ಸಿನಲ್ಲಿ ಪಂಜಾಬ್‌ನಲ್ಲಿ ಇರುವ ಮನೆ ಬಿಟ್ಟು ಮುಂಬೈಗೆ ಓಡಿ ಹೋಗಿದ್ದರಂತೆ. ಟಿಕೆಟ್ ಇಲ್ಲದೇ ಅವರು ಪಂಜಾಬ್‌ನಿಂದ ಮುಂಬೈಗೆ ಪ್ರಯಾಣ ಬೆಳೆಸಿರುವ ಕಾರಣಕ್ಕೆ ಅವರು ಜೈಲು ಸೇರಬೇಕಾಯ್ತು. ಬಳಿಕ, ಅವರನ್ನು ಬಿಡಿಸಿಕೊಳ್ಳಲು ಬಂದ ಅಪರಿಚಿತ ವ್ಯಕ್ತಿಯೊಬ್ಬ ಒಂದು ಕಂಡೀಶನ್ ಹಾಕಿದ್ದಾರೆ. ನನ್ನ ಕ್ಯಾಬ್ ವಾಶ್ ಮಾಡುತ್ತೀಯಾ ಎಂದರೆ ನಾನು ನಿನ್ನನ್ನು ಇಲ್ಲಿಂದ ಬಿಡಿಸಿಕೊಂಡು ಹೋಗುತ್ತೇನೆ, ನೀನು ಅದರಲ್ಲಿ ಮಲಗಬಹುದು ಕೂಡ' ಎಂದರಂತೆ. ಅದಕ್ಕೊಪ್ಪಿದ ತಂದೆ ಜೈಲಿನಿಂದ ಈ ರೀತಿಯಲ್ಲಿ ಬಿಡುಗಡೆಗೊಂಡರು.
ಜೈಲಿನಿಂದ ಹೊರಬಂದ ತಂದೆ ನಿಧಾನವಾಗಿ ಕಾರ್ಪೆಂಟರ್ ಕೆಲಸ ಮಾಡುತ್ತ ಕಾರ್ಪೆಂಟರ್ ವೃತ್ತಿಯನ್ನೆ ಆಯ್ದುಕೊಂಡರಂತೆ. ಆದರೆ, ಸಿಯೋನ್ ಕೋಳಿವಾಡದಲ್ಲಿ ಗ್ಯಾಂಗ್ ಜತೆ ಸೇರಿಕೊಂಡು ಗ್ಯಾಂಗ್‌ಸ್ಟರ್ ಆಗಿ ಬದಲಾದರು. ಗ್ಯಾಂಗ್‌ಸ್ಟರ್ ಆದ್ಮೇಲೆ ಗ್ಯಾಂಗ್ ವಾರ್ ಇರಲೇಬೇಕಲ್ಲ, ಹಾಗೇ ಗ್ಯಾಂಗ್ ವಾರ್‌ನಲ್ಲಿ ನಮ್ಮ ತಂದೆ ವೀರು ದೇವಗನ್ ಕೂಡ ಸೇರಿಕೊಂಡು ಫೈಟ್ ಮಾಡುತ್ತಿದ್ದರಂತೆ. ಹಾಗೇ ನಮ್ಮ ತಂದೆಯವರು ಗ್ಯಾಂಗ್‌ಸ್ಟರ್ ಅಗಿ ಬದಲಾದರು.
ಅದೊಂದು ದಿನ ಪ್ರಸಿದ್ಧ ಆಕ್ಷನ್ ಡೈರೆಕ್ಟರ್ ಒಬ್ಬರು ನಮ್ಮ ತಂದೆಯವರ ಗ್ಯಾಂಗ್‌ವಾರ್ ನಡೆಯುತ್ತಿದ್ದಾಗಲೇ ಅಲ್ಲಿ ಕಾರ್‌ನಲ್ಲಿ ಹೋಗುತ್ತಿದ್ದರಂತೆ. ಅವರು ಕಾರ್ ನಿಲ್ಲಿಸಿ ಹೊಡೆದಾಟ ನೋಡಿ ಇಂಪ್ರೆಸ್ ಆದರಂತೆ. ಹೊಡೆದಾಟ ಮುಗಿದು ನನ್ನ ತಂದೆಯವರು ನಿಂತಿರುವಾಗ 'ನೀವೇನು ಕೆಲಸ ಮಾಡುತ್ತೀರಿ' ಎಂದು ಕೇಳಿದರಂತೆ. ನಮ್ಮ ತಂದೆ 'ಕಾರ್ಪೆಂಟರ್ ಕೆಲಸ' ಎಂದಾಗ, 'ಒಳ್ಳೆಯದು, ಚೆನ್ನಾಗಿ ಕತ್ತರಿಸುತ್ತೀರಿ' ಎಂದು ಹೇಳಿ, ಆ ಸಾಹಸ ನಿರ್ದೇಶಕರು ಕರೆದು ನಾಳೆ ನನ್ನ ಆಫೀಸ್ ಬಳಿ ಬಂದು ಭೇಟಿಯಾಗು ಎಂದು ಹೇಳಿ ಹೋದರಂತೆ.
ಕೊನೆಗೂ ಮೌನ ಮುರಿದ ಶಾರುಖ್ ಖಾನ್; 4 ವರ್ಷದಿಂದ ಬಚ್ಚಿಟ್ಟಿದ್ದ ಸೀಕ್ರೆಟ್ ರಿವೀಲ್ ಆಯ್ತು!
ಬಳಿಕ ನಮ್ಮ ತಂದೆಯವರನ್ನು ಸಿನಿಮಾದಲ್ಲಿ ಫೈಟ್ ಸೀನ್‌ಗೆ ಬಳಸಿಕೊಂಡು, ಮುಂದೆ ಫೈಟರ್ ವೀರು ದೇವಗನ್ ಆಗಲು ಅದೇ ನಿರ್ದೇಶಕರು ಕಾರಣರಾದರಂತೆ. ಹೀಗೆ ನಮ್ಮ ತಂದೆಯವರು ರಿಯಲ್ ಫೈಟಿಂಗ್ ಮಾಡಿ, ರೀಲ್ ಫೈಟರ್ ಆಗಿದ್ದು ಎಂದು ಅಜಯ್ ದೇವಗನ್ ಕಾಫೀ ವಿತ್ ಕರಣ್ ಶೋದಲ್ಲಿ ಹೋಸ್ಟ್ ಕರಣ್ ಜೋಹರ್ ಮುಂದೆ ಹೇಳಿದ್ದಾರೆ. ಅಲ್ಲಿಗೆ ನಟ ಅಜಯ್ ದೇವಗನ್ ತಮ್ಮ ತಂದೆಯ ಲೈಫ್ ಸೀಕ್ರೆಟ್ ಅನ್ನು ರಿವೀಲ್ ಮಾಡಿದಂತೆ ಆಗಿದೆ. ವೀರು ದೇವಗನ್ ಮಗ ಅಜಯ್ ದೇವಗನ್ ಇಂದು ಹಿಂದಿ ಚಿತ್ರರಂಗ್ ಸ್ಟಾರ್ ನಟ, ಸೊಸೆ ಕಾಜಲ್ ಕೂಡ ಸ್ಟಾರ್ ನಟಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಶಾರುಖ್ ಖಾನ್ 'ಡಂಕಿ' ಡಮಾ ರ್, ಪ್ರಭಾಸ್ 'ಸಲಾರ್' ಸೂಪರ್ ಹಿಟ್; ತಪ್ಪಿದ ಕಿಂಗ್ ಖಾನ್ ಲೆಕ್ಕಾಚಾರ!
ಬಾಲಿವುಡ್ ನಟ ಅಜಯ್ ದೇವಗನ್ ಈ ರೀತಿಯಾಗಿ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ. ಕಾಫೀ ವಿತ್ ಕರಣ್ ಜೋಹರ್ ಶೋ ವೇದಿಕೆಯಲ್ಲಿ ನಟ ಅಜಯ್ ದೇವಗನ್ ಹಾಗು ರೋಹಿತ್ ಶೆಟ್ಟಿ ಆಸೀನರಾಗಿದ್ದರು. ಅಲ್ಲಿ ಕರಣ್ ಜೋಹರ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಜಯ್ ದೇವಗನ್, ತಮ್ಮ ತಂದೆಯ ಜೀವನದ ಕೆಲವು ಘಟನೆಗಳನ್ನು ಹಾಗೂ ಅವರು ಬಾಲಿವುಡ್ ಸಿನಿಮಾ ಜಗತ್ತಿಗೆ ಪರಿಚಯವಾಗಿದ್ದು ಹೇಗೆ ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.