Seetha Raama Serial: ದುಷ್ಟೆ ಭಾರ್ಗವಿ ಸೊಕ್ಕು ಅಡಗಿಸಲು ಸುಬ್ಬಿಯೇ ಸಾಕು! ರೋಚಕ ಎಪಿಸೋಡ್‌ನಲ್ಲಿ ಏನಾಗತ್ತೆ?

Seetha Raama Kannada Serial Episode: ʼಸೀತಾರಾಮʼ ಧಾರಾವಾಹಿಯಲ್ಲಿ ಭಾರ್ಗವಿಯ ಸೊಕ್ಕು ಮಟ್ಟ ಹಾಕಲು, ಅವಳ ಸೊಕ್ಕು ಮುರಿಯಲು ಸುಬ್ಬಿಯೇ ಸಾಕು. ಇದಕ್ಕೆ ಪೂರಕವಾಗಿರೋ ರೋಚಕ ಎಪಿಸೋಡ್‌ ಪ್ರಸಾರ ಆಗುತ್ತಲಿದೆ. 
 

Seetha Raama kannada Serial written update 2025 february Episode Subbi is giving trouble to Bhargavi

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಸೀತಾರಾಮʼ ಧಾರಾವಾಹಿಯಲ್ಲಿ ಸಿಹಿ ಜಾಗಕ್ಕೆ ಸುಬ್ಬಿ ಆಗಮನವಾಗಿದೆ. ಸಿಹಿಯನ್ನು ಕೊಂದ ಭಾರ್ಗವಿಗೆ ಸುಬ್ಬಿ ಸಖತ್‌ ಠಕ್ಕರ್‌ ಕೊಡುತ್ತಿದ್ದಾಳೆ. ಒಟ್ಟಿನಲ್ಲಿ ಬಡ್ಡಿ ಬಂಗಾರಮ್ಮ ಆಂಟಿ ಸೊಕ್ಕು ಮುರಿಯಲು ಸುಬ್ಬಿಯೇ ಸಾಕು.

ಸಿಹಿ ರೂಪದಲ್ಲಿರೋದು ಸುಬ್ಬಿ! 
ನನ್ನನ್ನು ಕೊಂದಿದ್ದು ಭಾರ್ಗವಿ ಅನ್ನೋದು ಸಿಹಿಗೆ ಗೊತ್ತಿದೆ. ಆದರೆ ಈ ವಿಷಯವನ್ನು ಅವಳು ಸುಬ್ಬಿಗೆ ಹೇಳಿಲ್ಲ. ಸುಬ್ಬಿಗೆ ಮಾತ್ರ ಈಗಾಗಲೇ ಸತ್ತಿರೋ ಸಿಹಿ ಕಾಣಿಸ್ತಾಳೆ, ಅವಳ ಮಾತು ಕೇಳಿಸತ್ತೆ. ಭಾರ್ಗವಿ, ವಿಶ್ವ ಸೇರಿಕೊಂಡು ಮನೆಯಲ್ಲಿರೋದು ಸಿಹಿ ಅಲ್ಲ, ಸುಬ್ಬಿ ಎನ್ನೋದನ್ನು ಸಾಬೀತುಪಡಿಸಲು ಒದ್ದಾಡುತ್ತಿದ್ದಾರೆ. ಸಿಹಿ ವೇಷದಲ್ಲಿರೋಳು ಸುಬ್ಬಿ ಅನ್ನೋದು ರಾಮ್‌, ಅಶೋಕ್‌ ಬಿಟ್ಟರೆ ಯಾರಿಗೂ ಗೊತ್ತಿಲ್ಲ. ನೋಡಲು ಒಂದೇ ಥರ ಇರೋ ಸಿಹಿ, ಸುಬ್ಬಿ ಅವಳಿ-ಜವಳಿ ಎನ್ನೋದು ಯಾರಿಗೂ ಗೊತ್ತಿಲ್ಲ. 

ಪ್ರಿಯಾ ಮದ್ವೆ ಆಯ್ತು, ಈಗೇನಿದ್ರೂ ಸೀತಾಳದ್ದು! 'ಆ ಹುಡುಗನ' ಬಗ್ಗೆ ಬಾಯ್ಬಿಟ್ಟು ಎಲ್ಲರ ಹುಬ್ಬೇರಿಸಿದ ವೈಷ್ಣವಿ ಗೌಡ

ಸುಬ್ಬಿಗೆ ಎಲ್ಲವನ್ನು ಹೇಳಿಕೊಡ್ತಿರೋ ಸಿಹಿ 
ಮನೆಯಲ್ಲಿರೋದು ಸಿಹಿ ಅಲ್ಲ ಎನ್ನೋದು ಭಾರ್ಗವಿ, ವಿಶ್ವನಿಗೆ ಗೊತ್ತಿದೆ. ಆದರೆ ಅದನ್ನು ಅವರು ಇದನ್ನು ಕಂಡುಹಿಡಿದು ಸಾಬೀತುಪಡಿಸಬೇಕಿದೆ. ಸಿಹಿ ಸಿಹಿತಿಂಡಿ ತಿನ್ನಲ್ಲ, ಇಂಜೆಕ್ಷನ್‌ ತಗೋತಾಳೆ, ಸಿಹಿಗೆ ಕತೆ ಕೇಳೋದು ಇಷ್ಟ, ನಿತ್ಯವೂ ಅಪ್ಪ-ಅಮ್ಮನ ಮಧ್ಯೆ ಮಲಗಬೇಕು, ಸಿಹಿಗೆ ತಮ್ಮ ಬೇಕು-ಹೀಗೆ ಸಾಕಷ್ಟು ಆಸೆಗಳಿವೆ, ರೂಢಿಗಳಿವೆ. ಆದರೆ ಸುಬ್ಬಿ ಹಾಗಲ್ಲ, ಸುಬ್ಬಿಗೆ ಇಂಗ್ಲಿಷ್‌ ಗೊತ್ತಿಲ್ಲ, ಕೆಲ ವಿಷಯಗಳಲ್ಲಿ ಅವಳು ತದ್ವಿರುದ್ಧ. ಸುಬ್ಬಿಗೆ ಏನೇ ಪ್ರಶ್ನೆ ಕೇಳಿದರೂ ಅದಕ್ಕೆ ಸಿಹಿ ಉತ್ತರ ಕೊಡ್ತಾಳೆ. ಸುಬ್ಬಿಗೆ ಸಿಹಿಯೇ ಎಲ್ಲವನ್ನೂ ಹೇಳಿಕೊಡ್ತಾಳೆ. ಒಟ್ಟಿನಲ್ಲಿ ಸುಬ್ಬಿಯನ್ನು ಸಿಹಿಯೇ ಕಾಪಾಡುತ್ತಿದ್ದಾಳೆ.

ಸಣ್ಣ ಪುಟ್ಟ ವಿಷಯಕ್ಕೂ ಮನಸ್ಥಾಪ ಆಗ್ತಿತ್ತು; ಬ್ರೇಕಪ್ ಕಾರಣ ಬಿಚ್ಚಿಟ್ಟ ಬಿಗ್ ಬಾಸ್ ಪವಿ

ಶ್ರೀರಾಮ್‌ಗೆ ಸುಬ್ಬಿ ಪ್ರೀತಿ ಸಿಗ್ತಿಲ್ಲ 
ಸುಬ್ಬಿಗೆ ಸಿಹಿ ಎಷ್ಟೇ ಸಲ ಶ್ರೀರಾಮ್‌ ದೇಸಾಯಿ ಎಷ್ಟು ಒಳ್ಳೆಯವನು ಅಂತ ಹೇಳಿದರೂ ಕೂಡ ಅವಳು ಕೇಳೋಕೆ ರೆಡಿ ಇಲ್ಲ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಸಿಹಿಯನ್ನು ಕಳೆದುಕೊಂಡ ಶ್ರೀರಾಮ್‌ಗೆ ಈಗ ಸುಬ್ಬಿ ಪ್ರೀತಿಯೂ ಸಿಗ್ತಿಲ್ಲ. 

ದೊಡ್ಡ ಚಾಲಾಕಿ ಸುಬ್ಬಿ! 
ನಿತ್ಯವೂ ಸೀತಾಳಿಗೆ ಭಾರ್ಗವಿ ಒಂದು ಜ್ಯೂಸ್‌ ಕೊಡುತ್ತಿದ್ದಾಳೆ. ಆ ಜ್ಯೂಸ್‌ನಲ್ಲಿ ಸೀತಾ ಆರೋಗ್ಯ ಹದಗೆಡುವ ವಿಷಯವೂ ಇದೆ. ಈ ವಿಷಯ ಸಿಹಿಗೆ ಗೊತ್ತಾಗಿದೆ. ಇದನ್ನು ತಡೆಯಲು ಸುಬ್ಬಿ ರೆಡಿ ಆಗಿದ್ದಾಳೆ. ಸೀತಾಳ ಬದಲು ಭಾರ್ಗವಿಯೇ ಆ ಜ್ಯೂಸ್‌ ಕುಡಿಯುವ ಹಾಗೆ ಮಾಡಿದ ಸುಬ್ಬಿ ನಿಜಕ್ಕೂ ದೊಡ್ಡ ಚಾಲಾಕಿಯೇ. ಈಗ ಭಾರ್ಗವಿಯೇ ಆ ಜ್ಯೂಸ್‌ ಕುಡಿದು ತಲೆ ಸುತ್ತಿ ಬಿದ್ದಿದ್ದಾಳೆ. ತನಗೆ ಬೇಕು ಅಂತಲೇ ಸುಬ್ಬಿ ಈ ರೀತಿ ಮಾಡಿರೋದು ಅಂತ ಭಾರ್ಗವಿಗೆ ಗೊತ್ತಾಗತ್ತಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಈ ಎಪಿಸೋಡ್‌ ಏನಾಗಲಿದೆ ಎಂಬ ಕುತೂಹಲ ಶುರುವಾಗಿದೆ.

Aero India ಶೋನಲ್ಲಿ ಭಾಗಿಯಾಗಿ ವಿಶೇಷ ಥ್ಯಾಂಕ್ಸ್‌ ಹೇಳಿದ Seetha Raama Serial ವೈಷ್ಣವಿ ಗೌಡ; ಆ A ಯಾರು?

ಮುಂದೆ ಏನಾಗುವುದು? 
ಒಟ್ಟಿನಲ್ಲಿ ಭಾರ್ಗವಿ ಮಾಡಿದ ಮೋಸಗಳು ಎಲ್ಲವೂ ಬಯಲಾಗಬೇಕು. ಶ್ರೀರಾಮ್ ತಂದೆ-ತಾಯಿ ಸಾಯಲು ಭಾರ್ಗವಿಯೇ ಕಾರಣ ಎನ್ನೋದು ಶ್ರೀರಾಮ್‌ಗೆ ಗೊತ್ತಾಗಿಲ್ಲ. ತನ್ನ ಮನೆಯಲ್ಲಿ ಇಷ್ಟುದಿನ ಒಳ್ಳೆಯಮುಖ ಹಾಕಿಕೊಂಡಿದ್ದ ಭಾರ್ಗವಿಯ ದುಷ್ಟತನ ಬಯಲಾಗಬೇಕು. 

ಪಾತ್ರಧಾರಿಗಳು
ಸಿಹಿ-ರೀತು ಸಿಂಗ್‌
ಭಾರ್ಗವಿ-ಪೂಜಾ ಲೋಕೇಶ್‌
ಶ್ರೀರಾಮ್‌ ದೇಸಾಯಿ- ಗಗನ್‌ ಚಿನ್ನಪ್ಪ
ಸೀತಾ- ವೈಷ್ಣವಿ ಗೌಡ 

ಮುಖ್ಯಮಂತ್ರಿ ಚಂದ್ರು, ಕಲಗಂಗೋತ್ರಿ ಮಂಜು, ಪದ್ಮಕಲಾ, ಸಿಂಧು ರಾವ್‌, ಜ್ಯೋತಿ ಕಿರಣ್‌ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯು ಆರಂಭದಲ್ಲಿ ಒಳ್ಳೆಯ ಟಿಆರ್‌ಪಿ ಪಡೆದಿದ್ದು, ಇತ್ತೀಚೆಗೆ ವೀಕ್ಷಕರ ಸಂಖ್ಯೆ ಕಡಿಮೆ ಆಗಿದೆ ಎನ್ನಲಾಗಿದೆ. 
 

Latest Videos
Follow Us:
Download App:
  • android
  • ios