"ಸೀತಾರಾಮ" ಧಾರಾವಾಹಿಯ ಪ್ರಿಯಾ (ಮೇಘನಾ) ಮದುವೆಯಾಗಿ ಹನಿಮೂನ್‌ನಲ್ಲಿದ್ದಾರೆ. ಸೀತಾ (ವೈಷ್ಣವಿ) ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ವೈಷ್ಣವಿ ತಮ್ಮ ಮೊದಲ ಕ್ರಶ್ ಗಣೇಶ್ ಎಂದು ಬಹಿರಂಗಪಡಿಸಿದ್ದಾರೆ. ಅವರು ಈ ಹಿಂದೆ 300ಕ್ಕೂ ಹೆಚ್ಚು ಪ್ರಪೋಸಲ್‌ಗಳನ್ನು ನಿರಾಕರಿಸಿದ್ದಾರೆ. "ಅಗ್ನಿಸಾಕ್ಷಿ" ಧಾರಾವಾಹಿಯಿಂದ ಖ್ಯಾತಿ ಪಡೆದ ವೈಷ್ಣವಿ, ಬಿಗ್‌ಬಾಸ್‌ನಲ್ಲೂ ಭಾಗವಹಿಸಿದ್ದರು.

ಸೀತಾರಾಮ ಸೀರಿಯಲ್​ ಪ್ರಿಯಾ ಉರ್ಫ್​ ಮೇಘನಾ ಶಂಕರಪ್ಪ ಮತ್ತು ಸೀತಾ ಅರ್ಥಾತ್​ ವೈಷ್ಣವಿ ಗೌಡ ಅವರು ರಿಯಲ್​ ಲೈಫ್​ನಲ್ಲೂ ಸಕತ್​ ಫ್ರೆಂಡ್ಸ್​. ಇಬ್ಬರೂ ಸೇರಿ ಹಲವಾರು ರೀಲ್ಸ್​ಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ಮೇಘನಾ ಅವರ ಮದುವೆ ನಡೆದಿದ್ದು, ಹನಿಮೂನ್​ ಎಂಜಾಯ್​ ಮಾಡುತ್ತಿದ್ದಾರೆ. ವೈಷ್ಣವಿ ಮಾತ್ರ ಇನ್ನೂ ಸಿಂಗಲ್​ ಆಗಿಯೇ ಇದ್ದಾರೆ. ಇವರು ಹೋದಲ್ಲ, ಬಂದಲ್ಲಿ ಮದುವೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಯೇ ಆಗುತ್ತದೆ. ಸೀತಾರಾಮ ಸೀರಿಯಲ್​ ನಾಯಕ ರಾಮ್​ ಅರ್ಥಾತ್​ ಗಗನ್​ ಚೆಂಗಪ್ಪಾ ಕೂಡ ಸಿಂಗಲ್​ ಆಗಿರುವ ಕಾರಣ ಹಾಗೂ ಇವರಿಬ್ಬರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿರುವ ಕಾರಣ, ನಿಜ ಜೀವನದಲ್ಲಿಯೂ ಇವರೇ ಜೋಡಿಯಾಗಲಿ ಎಂದು ಹಾರೈಸುತ್ತಿರುವವರೇ ಹೆಚ್ಚುಮಂದಿ. ಅಷ್ಟಕ್ಕೂ ಯಾವುದೇ ಸೀರಿಯಲ್​ಗಳಲ್ಲಿ ಒಬ್ಬ ನಟ-ನಟಿ ಬಾಂಡಿಂಗ್​ ಚೆನ್ನಾಗಿ ಇದ್ದ ತಕ್ಷಣ, ಅವರನ್ನು ಇವರ ಜೊತೆ ಸಂಬಂಧ ಮಾಡುವುದು ಮೊದಲಿನಿಂದಲೂ ನಡೆದು ಬಂದಿದೆ ಅನ್ನಿ. 

ಮೇಘನಾ ಅವರ ಮದುವೆಯಾದ ಬೆನ್ನಲ್ಲೇ, ಈ ಸ್ನೇಹಿತೆಯರ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ವೈಷ್ಣವಿ ಅವರ ರಿಯಲ್​ ಲೈಫ್​ ಕ್ರಶ್​ ಬಗ್ಗೆ ಮೇಘನಾ ಕೇಳಿದ್ದಾರೆ. ನಿಮ್ಮ ಕ್ರಷ್​ ಯಾರು ಎಂದು ಕೇಳಿದ್ದಾರೆ. ಮೊದ ಮೊದಲಿಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ ವೈಷ್ಣವಿ. ನನಗ್ಯಾರೂ ಕ್ರಷ್​ ಇಲ್ಲ. ಶಾಲಾ-ಕಾಲೇಜಿಗೆ ಹೋಗುವಾಗ ತಲೆ ಬಗ್ಗಿಸಿಕೊಂಡು ಹೋಗುತ್ತಿದ್ದೆ ಎಂದೆಲ್ಲಾ ಹೇಳಿದ್ದಾರೆ. ಕೊನೆಗೂ ಮೇಘನಾ ಅವರು ತುಂಬಾ ಸಲ ಕೇಳಿದಾಗ, ತಮ್ಮ ಮೊದಲ ಕ್ರಷ್​ ಬಗ್ಗೆ ಮಾತನಾಡಿದ್ದಾರೆ. ಇದೀಗ ಮೊದಲ ಕ್ರಷ್​ ಯಾರು ಎಂದು ಮೇಘನಾ ಅವರು ಕೇಳಿದಾಗ ಗಣೇಶ್​ ಎಂಬ ಹೆಸರು ಅವರದ್ದು ಎಂದಿದ್ದಾರೆ. ಯಾವುದೋ ಗಣೇಶ್​ ಎಂದು ತಿಳಿದ ಮೇಘನಾ ಅವರಿಗೆ ಮದ್ವೆಯಾಗಿದ್ಯಾ ಎಂದಾಗ, ವೈಷ್ಣವಿ ಹೌದು ಎಂದಿದ್ದಾರೆ.ಕೊನೆಗೆ ಅವರನ್ನು ಗೋಲ್ಡನ್​ ಸ್ಟಾರ್​ ಎಂದೂ ಕರೆಯುತ್ತಾರೆ ಎಂದಾಗ, ಮೇಘನಾ ಇದು ಚೀಟಿಂಗ್​, ನಾನು ಸೆಲೆಬ್ರಿಟಿಗಳ ಬಗ್ಗೆ ಕೇಳಲಿಲ್ಲ ಎಂದಿದ್ದಾರೆ. ಕೊನೆಗೂ ವೈಷ್ಣವಿ ಮೌನ ಮುರಿದಿಲ್ಲ.

ಫೋನೆಲ್ಲಾ ಜಿಮ್​ಗೆ ಹೋದ್ವಂತೆ ಯಾಕೆ? ವೈಷ್ಣವಿ ಉತ್ತರಕ್ಕೆ ತಲೆ ಚಚ್ಕೊಂಡ ಸೀತಾರಾಮ ಟೀಮ್​!


ಅಷ್ಟಕ್ಕೂ ಇದಾಗಲೇ ವೈಷ್ಣವಿ ಅವರು, ಸುಮಾರು 300ಕ್ಕೂ ಅಧಿಕ ಲವ್‌ ಪ್ರಪೋಸ್‌ಗಳು ಬಂದಿದ್ದರೂ ಒಪ್ಪಿಕೊಂಡಿಲ್ಲ ಎಂಬ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕನ್ನಡ ನಾಡಿನ ಜನತೆಗೆ ಅಗ್ನಿಸಾಕ್ಷಿಯ ಸನ್ನಿಧಿಯಾಗಿ ಪರಿಚಿತಗೊಂಡ ವೈಷ್ಣವಿಗೌಡ ಅವರ ಸೌಂದರ್ಯ ಹಾಗೂ ನಟನೆಯನ್ನು ನೋಡಿ ಲಕ್ಷಾಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಬಿಗ್‌ಬಾಸ್‌ ಮನೆಯಲ್ಲೂ ಕಾಣಿಸಿಕೊಂಡ ವೈಷ್ಣವಿ ಇಲ್ಲಿಯೂ ಕೂಡ ಹೆಚ್ಚಿನ ರಗಳೆ ಮಾಡಿಕೊಳಳದೇ ಸೀದಾ-ಸಾದಾ ನಡತೆಯಿಂದ ಜನರ ಮನಸ್ಸನ್ನು ಗೆದ್ದಿದ್ದರು. ಇದಾದ ನಂತರ ಪುನಃ ಒಂದೆರಡು ಸಿನಿಮಾಗಳಲ್ಲಿಯೂ ನಟಿಸಿದ ವೈಷ್ಣವಿಗೌಡ, ಅಲ್ಲಿ ಹೆಚ್ಚಿನ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಪುನಃ ಕಿರುತೆರೆಗೆ ಆಗಮಿಸಿದ್ದಾರೆ.

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ಊಟ ಮಾಡಿಲ್ಲ, ನಿದ್ದೆಗೆಟ್ಟಿದ್ದೇನೆ, ತಡೆಯೋಕೆ ಆಗ್ತಿಲ್ಲ... ಬಿಕ್ಕಿ ಬಿಕ್ಕಿ ಅತ್ತ ವೈಷ್ಣವಿ ಗೌಡ! ಸೀತಾರಾಮ ನಟಿಗೆ ಆಗಿದ್ದೇನು?

YouTube video player