Aero India ಶೋನಲ್ಲಿ ಭಾಗಿಯಾಗಿ ವಿಶೇಷ ಥ್ಯಾಂಕ್ಸ್‌ ಹೇಳಿದ Seetha Raama Serial ವೈಷ್ಣವಿ ಗೌಡ; ಆ A ಯಾರು?

ಬೆಂಗಳೂರಿನಲ್ಲಿ ನಡೆದ ಏರ್‌ಶೋನಲ್ಲಿ ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಭಾಗಿಯಾಗಿದ್ದಾರೆ. ಈ ವೇಳೆ ಅವರು ವಿಶೇಷವಾಗಿ A ಎಂದು ಬರೆದುಕೊಂಡಿದ್ದಾರೆ. ಅವರು ಯಾರು ಎನ್ನುವ ಪ್ರಶ್ನೆ ಮೂಡಿದೆ. 

seetha raama serial actress vaishnavi gowda participate in Aero india show 2025

ಬೆಂಗಳೂರಿನಲ್ಲಿ ಈ ಬಾರಿಯೂ Aero india show ನಡೆದಿದೆ. ಈ ವೇಳೆ ಯುದ್ಧವಿಮಾನಗಳು ತಮ್ಮ ಹಾರಾಟದ ಮೂಲಕ ಗಮನಸೆಳೆದಿವೆ. ಸಾಕಷ್ಟು ಜನರು ಈ ಶೋಗೆ ಭೇಟಿ ನೀಡಿ, ಅದ್ಭುತವಾದ ಅನುಭವವನ್ನು ಪಡೆದಿದ್ದಾರೆ. ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಕೂಡ ಈ ಶೋಗೆ ಭೇಟಿ ನೀಡಿದ್ದಾರೆ.

ಕುತೂಹಲಭರಿತ ಪೋಸ್ಟ್‌ ಹಂಚಿಕೊಂಡ ವೈಷ್ಣವಿ ಗೌಡ! 
ವೈಷ್ಣವಿ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಏರ್‌ ಶೋನಲ್ಲಿ ಭಾಗಿಯಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ವಿಶೇಷವಾದ ಬರಹವನ್ನು ಕೂಡ ಹಂಚಿಕೊಂಡಿದ್ದಾರೆ. “Aero India 2025 ರಲ್ಲಿ ನಾನು ಅದ್ಭುತವಾದ ಅನುಭವ ಪಡೆದೆ. ನಾನು ಇದರಲ್ಲಿ ಭಾಗಿಯಾಗಿದ್ದಕ್ಕೆ ಹೆಮ್ಮೆಯಿದೆ. ಇದನ್ನು ಸಾಧ್ಯವಾಗಿಸಿದ A ಧನ್ಯವಾದಗಳು” ಎಂದು ವೈಷ್ಣವಿ ಗೌಡ ಅವರು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಸ್ಪಾರ್ಕಲ್‌ ಇಮೋಜಿಯನ್ನು ಕೂಡ ಶೇರ್‌ ಮಾಡಿಕೊಂಡಿದ್ದಾರೆ. ಸ್ಪಾರ್ಕಲ್‌ ಎಂದರೆ ಅಮೂಲ್ಯ ಎಂದರ್ಥ. 

ಜೈಲುಪಾಲಾಗ್ತಿದ್ದಂತೆಯೇ ಕೈಕೊಟ್ಟ ಲವರ್​ 'ರಕ್ಕಮ್ಮ'ಗೆ ಖಾಸಗಿ ಜೆಟ್​ ಗಿಫ್ಟ್​! ಮತ್ತೆ ತೆಕ್ಕೆಗೆ ಬೀಳ್ತಾಳಾ ನಟಿ ಜಾಕ್ವೆಲಿನ್​?

ಈಗ ಕಾಡ್ತಿರೋ ಪ್ರಶ್ನೆ ಏನು? 
ವೈಷ್ಣವಿ ಗೌಡ ಅವರು ಯಾರಿಗೆ ಥ್ಯಾಂಕ್ಸ್‌ ಹೇಳಿದರು? ಯಾರು ಆ A ಎನ್ನೋದು ಈಗ ಇರುವ ಕುತೂಹಲ. ಈ ಮೂಲಕ ವೈಷ್ಣವಿ ಗೌಡ ಅವರು ಬೇರೆ ವಿಚಾರವನ್ನು ಹೇಳುತ್ತಿದ್ದಾರಾ ಎಂಬ ಅನುಮಾನ ಸೃಷ್ಟಿಯಾಗಿದೆ. ಹುಡುಗಿಯಾಗಿದ್ದರೆ ವೈಷ್ಣವಿ ಗೌಡ ಅವರು ಪಕ್ಕಾ ಅವರ ಹೆಸರನ್ನು ನಮೂದಿಸುತ್ತಿದ್ದರು. ಆದರೆ ಅವರು A ಎಂದು ಹಾಕಿಕೊಂಡಿರೋದು ಅನುಮಾನ ಸೃಷ್ಟಿಸಿದೆ. ಈ ಬಗ್ಗೆ ಅವರೇ ಮುಂದಿನ ದಿನಗಳಲ್ಲಿ ಮಾಹಿತಿ ನೀಡಬಹುದೋ ಏನೋ! 

ಮದುವೆ ಬಗ್ಗೆ ಆಸೆ ಇಟ್ಟುಕೊಂಡಿರೋ ವೈಷ್ಣವಿ ಗೌಡ! 
ಅಂದಹಾಗೆ ವೈಷ್ಣವಿ ಗೌಡ ಅವರು ಮದುವೆಯಾಗುವ ಆಸೆಯನ್ನು ಹೊಂದಿದ್ದಾರೆ. ಸಾಕಷ್ಟು ವೇದಿಕೆಗಳಲ್ಲಿ, ಬಿಗ್‌ ಬಾಸ್‌ ಶೋನಲ್ಲಿ ವೈಷ್ಣವಿ ಗೌಡ ಅವರು “ಮದುವೆ ಎನ್ನೋದು ಪವಿತ್ರ ಸಂಬಂಧ, ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗನಿಗೋಸ್ಕರ ಕಾಯುತ್ತಿದ್ದೇನೆ. ನನಗೆ ಮದುವೆ ಮೇಲೆ ನಂಬಿಕೆ ಇದೆ. ಮದುವೆ ಆಗಲು ಕಾಯುತ್ತಿದ್ದೇನೆ” ಎಂದು ಹೇಳಿದ್ದರು. ಆದರೆ ಅವರ ಮದುವೆ ಇನ್ನೂ ಸೆಟ್‌ ಆಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ವೈಷ್ಣವಿ ಗೌಡ ಅವರು ಮದುವೆ ಸಂಗಾತಿಯನ್ನು ಪಡೆದುಕೊಳ್ಳಲಿ ಅಂತ ಹಾರೈಸೋಣ.

ಮೊನ್ನೆ ಟೀಕೆ, ಇಂದು ಮೆಚ್ಚುಗೆ: Seetha Raama Serial ನಟಿ ವೈಷ್ಣವಿ ಗೌಡ ಹೊಸ ವಿಡಿಯೋ ಭಾರೀ ವೈರಲ್!‌

ʼಸೀತಾರಾಮʼ ಧಾರಾವಾಹಿ ಕತೆ ಏನು? 
ಅಂದಹಾಗೆ ʼಸೀತಾರಾಮʼ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಟಿ ವೈಷ್ಣವಿ ಗೌಡ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿಗೆ ಆರಂಭದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಅವರು ಸರೋಗಸಿ ಮದರ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆ ಮಟ್ಟಿಗೆ ಇದು ಹೊಸ ಪ್ರಯತ್ನ. ಸದ್ಯ ಈ ಧಾರಾವಾಹಿಯಲ್ಲಿ ಸಿಹಿ ಸತ್ತುಹೋಗಿದ್ದು, ಸುಬ್ಬಿಯ ಎಂಟ್ರಿ ಆಗಿದೆ. ನನ್ನ ಮಗಳು ಸಿಹಿ ಬದುಕಿದ್ದಾಳೆ ಅಂತ ಸೀತಾ ನಂಬಿದ್ದಾಳೆ, ಆದರೆ ಸಿಹಿ ಬದುಕಿಲ್ಲ ಎನ್ನೋದು ವಾಸ್ತವ. ಸುಬ್ಬಿ ಕೂಡ ಅವಳ ಮಗಳೇ ಎನ್ನೋದು ರಿವೀಲ್‌ ಆಗಬೇಕಿದೆ. ಅವಳಿ-ಜವಳಿ ಮಕ್ಕಳಿಗೆ ಸೀತಾ ಜನ್ಮ ಕೊಟ್ಟಿದ್ದಳು. ಆದರೆ ಓರ್ವ ಮುದುಕ ಅದರಲ್ಲಿ ಒಂದು ಮಗುವನ್ನು ಕದ್ದುಕೊಂಡು ಹೋಗಿದ್ದನು. ಸೀತಾ ಕೂಡ ತಾನು ಸಿಹಿಗೆ ಮಾತ್ರ ಜನ್ಮ ಕೊಟ್ಟಿದ್ದೆ ಎಂದು ನಂಬಿದ್ದಳು. ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಬಗ್ಗೆ ಅಪ್‌ಡೇಟ್‌ ಸಿಗಬಹುದು. ಇನ್ನೊಂದು ಕಡೆ  ಧಾರಾವಾಹಿ ಕತೆಯ ಬಗ್ಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಕಾಣಲಿದೆ ಎಂದು ಕಾದು ನೋಡಬೇಕಿದೆ. 

ನಟಿ ಅಮೂಲ್ಯ ಅವರ ಕ್ಲಾಸ್‌ಮೇಟ್‌ ಆಗಿರೋ ವೈಷ್ಣವಿ ಗೌಡ ಅವರಿಗೆ ʼಅಗ್ನಿಸಾಕ್ಷಿʼ, ʼದೇವಿʼ ಧಾರಾವಾಹಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. 
seetha raama serial actress vaishnavi gowda participate in Aero india show 2025

Latest Videos
Follow Us:
Download App:
  • android
  • ios