ಬಿಗ್‌ಬಾಸ್‌ ಖ್ಯಾತಿಯ ಪವಿ ಪೂವಪ್ಪ ಐದು ವರ್ಷಗಳ ಗೆಳೆಯ ಡಿಜೆ ಮ್ಯಾಡಿಯೊಂದಿಗಿನ ಬ್ರೇಕಪ್‌ಗೆ ಕಾರಣ ಬಹಿರಂಗಪಡಿಸಿದ್ದಾರೆ. ದೂರದ ಸಂಬಂಧ, ನಾಯಿಯ ಬಗ್ಗೆ ಭಿನ್ನಾಭಿಪ್ರಾಯ, ಮತ್ತು ನಂಬಿಕೆ ದ್ರೋಹ ಪ್ರಮುಖ ಕಾರಣಗಳೆಂದು ತಿಳಿಸಿದ್ದಾರೆ. ಸಾರ್ವಜನಿಕವಾಗಿ ಎಲ್ಲಾ ಕಾರಣ ಹೇಳಲು ಇಷ್ಟವಿಲ್ಲದ ಪವಿ, ಕುಟುಂಬಸ್ಥರಿಗೆ ವಿಷಯ ತಿಳಿದಿದೆ ಎಂದಿದ್ದಾರೆ.

ಬಿಗ್ ಬಾಸ್ ಸೀಸನ್ 10ರಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಮಿಂಚಿದ ಮಾಡಲ್ ಹಾಗೂ ಫ್ಯಾಷನ್ ಇನ್‌ಫ್ಲೂಯನ್ಸರ್‌ ಪವಿ ಪೂವಪ್ಪ ಇದೀಗ ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಳ್ಳಲು ಕಾರಣ ಏನೆಂದರು ರಿವೀಲ್ ಮಾಡಿದ್ದಾರೆ. ಈ ಹಿಂದೆ ತಮ್ಮ ಬಾಯ್‌ಫ್ರೆಂಡ್‌ ಜನಪ್ರಿಯ ಡಿಜೆ ಮ್ಯಾಡಿ ಎಂದು ಐರ್‌ಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಲಾಂಗ್‌ ಡಿಸ್ಟೆನ್ಸ್‌ ರಿಲೇಷನ್‌ಶಿಪ್‌ನಲ್ಲಿದ್ದರು. ನಾವಿಬ್ಬರು ಮದುವೆಯಾಗುತ್ತೀವಿ ಎಂದು ಪವಿ ಹೇಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಬ್ರೇಕಪ್ ಮಾಡಿಕೊಳ್ಳಲು ಕಾರಣ ಏನು ಎಂದು ರಿವೀಲ್ ಮಾಡಿದ್ದಾರೆ. 

'ಬಾಯ್‌ಫ್ರೆಂಡ್‌ ಬಗ್ಗೆ ರಿವೀಲ್ ಆಗಿತ್ತು....ಆದರೆ ಈಗ ಬ್ರೇಕಪ್ ಆಗಿದೆ ಅಂತಾನೂ ರಿವೀಲ್ ಆಗಿದೆ. ಸುಮಾರು 5 ವರ್ಷಗಳಿಂದ ನನ್ನ ಜೊತೆಯಲ್ಲಿದ್ದರು ಪ್ರತಿಯೊಂದು ಚೆನ್ನಾಗಿತ್ತು ನಮ್ಮಿಬ್ಬರು ನಡುವೆ ಒಳ್ಳೆ ಹೊಂದಾಣಿಕೆ ಇತ್ತು...ಹೋಗ್ತಾ ಹೋಗ್ತಾ ಅವರಿಗೆ ನನ್ನ ನಾಯಿ ಬಗ್ಗೆ ಸಮಸ್ಯೆ ಶುರುವಾಯ್ತು. ಮದುವೆಯಾದ ಮೇಲೆ ನಾಯಿಯನ್ನು ಬಿಡುವುದಿಲ್ಲ ಮನೆಯಲ್ಲಿ ಅಂದ್ರು...ಸಣ್ಣ ಪುಟ್ಟ ವಿಚಾರಗಳಿಗೆ ಕಾರಣ ಕೊಡಲು ಶುರು ಮಾಡಿದ್ದರು ಹೀಗಾಗಿ ನಾನೇ ಹಿಂದೆ ಸರಿದರೆ ಒಳ್ಳೆಯದಾಗುತ್ತದೆ ಎಂದು ಹೊರ ಬಂದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಪವಿ ಮಾತನಾಡಿದ್ದಾರೆ. 

ಈ ಚಿತ್ರದಿಂದ ಬಂದ ಸಂಭಾವನೆಯಲ್ಲಿ ಮದುವೆ ಸಾಲ ತೀರಿಸಿದ್ದ ಡಾ.ರಾಜ್‌ಕುಮಾರ್; ಶಾಕ್ ಆಗ್ಬೇಡಿ

ಪೋಸ್ಟ್‌ಗೆ ಕಾಮೆಂಟ್:

'5 ನಿಮಿಷಗಳ ವಿಡಿಯೋವನ್ನು ನೋಡಿ ದಯವಿಟ್ಟು ಯಾರ ಬಗ್ಗೆನೂ ಜಡ್ಜ್ ಮಾಡಬೇಡಿ. ಬ್ರೇಕಪ್ ಮಾಡಿಕೊಳ್ಳಲು ನಾಯಿ ಒಂದೇ ಕಾರಣ ಅಲ್ಲ. ಪಬ್ಲಿಕ್‌ನಲ್ಲಿ ಕಾರಣವನ್ನು ಬಹಿರಂಗ ಪಡಿಸಬಾರದು ಎನ್ನುವ ಕಾರಣಕ್ಕೆ ನಾನು ಹೇಳಿಲ್ಲ. ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಗೊತ್ತಿದೆ ನಮ್ಮ ಬ್ರೇಕಪ್ ಕಾರಣ ಏನು ಎಂದು ಹೀಗಾಗಿ ಯಾರಿಗೂ ನಾನು ಹೇಳಿಕೊಂಡು ಓಡಾಡಬೇಕಿಲ್ಲ. ನಾನು ಏನು ಎದುರಿಸುತ್ತಿದ್ದೀನಿ ಅನ್ನೋದು ನನಗೆ ಗೊತ್ತಿದೆ. ಸಂಬಂಧಗಳಲ್ಲಿ ನಿಯತ್ತು ಇರಬೇಕು ಆದರೆ ಅದರಲ್ಲಿ ನಾನು ವಿಫಲವಾಗಿದ್ದೀನಿ' ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗೆ ಪವಿ ಕಾಮೆಂಟ್ ಮಾಡುವ ಮೂಲಕ ಮತ್ತಷ್ಟು ಸ್ಪಷ್ಟನೆ ನೀಡಿದ್ದಾರೆ.

ಕೂದಲು ಬಣ್ಣ ಬದಲಾಯಿಸಿದ ಹಿರಿಯ ನಟ ರಾಮ್‌ಕುಮಾರ್ ಪುತ್ರಿ ಧನ್ಯಾ; ಫೋಟೋ ವೈರಲ್!