'ರಾಮಾಚಾರಿ' ಸೀರಿಯಲ್‌ನಲ್ಲಿ ರಾಮಾಚಾರಿ ಚಾರುವಿಗೆ ಕೊನೆಗೂ ಪರ್ಫಾಮೆನ್ಸ್ ಸರ್ಟಿಫಿಕೇಟ್ ಕೊಟ್ಟಿದ್ದಾನೆ. ಅದರಲ್ಲಿ ಚಾರು ವರ್ಕ್ ಬಗ್ಗೆ ಕಾಂಪ್ಲಿಮೆಂಟ್ ಇದೆ. ರಾಮಾಚಾರಿಯ ಪ್ರಾಜೆಕ್ಟನ್ನು ಸಬ್‌ಮಿಟ್ ಮಾಡಿರೋ ಚಾರು 15 ಲಕ್ಷದ ಪಾರ್ಟಿ ಮಾಡೋ ಉತ್ಸಾಹದಲ್ಲಿದ್ದಾಳೆ.
ರಾಮಾಚಾರಿ (ramachari) ಕಲರ್ಸ್ ಕನ್ನಡದಲ್ಲಿ (colors kannada) ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುವ ಸೀರಿಯಲ್. ಇದರಲ್ಲಿ ರಾಮಾಚಾರಿ ಹೀರೋ ಆದರೆ ಚಾರುಲತಾ ಹೀರೋಯಿನ್. ರಾಮಾಚಾರಿ ಪಾತ್ರದಲ್ಲಿ ರುತ್ವಿಕ್ ಕೃಪಾಕರ್ ಉತ್ತಮ ಅಭಿನಯ ನೀಡಿದರೆ ಚಾರು ಪಾತ್ರದಲ್ಲಿ ಮೌನಾ ಗುಡ್ಡೆಮನೆ ಮಿಂಚುತ್ತಿದ್ದಾರೆ. ಸೀರಿಯಲ್‌ನಲ್ಲಿ ಕರುಣಾಜನಕ ಸ್ಥಿತಿ ಬಂದಿದೆ. ರಾಮಾಚಾರಿಯ ಅತ್ತಿಗೆ ಡೆತ್ ಬೆಡ್‌ನಲ್ಲಿ ಮಲಗಿದ್ದಾರೆ. ಆಕೆಗೆ ಕ್ಯಾನ್ಸರ್ ಬಂದಿದೆ. ಅವಳ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ರಾಮಾಚಾರಿ ಹಗಲು ರಾತ್ರಿ ಕಷ್ಟಪಟ್ಟಿದ್ದಾನೆ. ಬಬ್ಲಿ ಸಾರ್ ರಾಮಾಚಾರಿಗೂ ಚಾರುಲತಾಗೂ ಒಂದು ಪ್ರಾಜೆಕ್ಟ್ ಹೇಳಿದ್ದು, ಆ ಪ್ರಾಜೆಕ್ಟ್ ಓಕೆ ಆದರೆ ಅದರಿಂದ 15 ಲಕ್ಷ ರುಪಾಯಿ ಬರುತ್ತದೆ. ಅದರಿಂದ ಅತ್ತಿಗೆಮ್ಮನ ಚಿಕಿತ್ಸೆ ಮಾಡಬಹುದು ಅನ್ನೋ ಆಸೆಯಲ್ಲಿ ರಾಮಾಚಾರಿ ಆ ಪ್ರಾಜೆಕ್ಟ್‌ಗೋಸ್ಕರ ಹಗಲು ರಾತ್ರಿ ಇನ್ನಿಲ್ಲದ ಹಾಗೆ ಕಷ್ಟಪಟ್ಟಿದ್ದಾನೆ. ಬಹಳ ಕಷ್ಟದಿಂದ ಆ ಪ್ರಾಜೆಕ್ಟ್‌ಅನ್ನು ಸಕ್ಸಸ್‌ಫುಲ್ ಆಗಿ ಮುಗಿಸಿದ್ದಾನೆ. ಆದರೆ ಆ ಪ್ರಾಜೆಕ್ಟ್ ಅನ್ನು ಚಾರು ಡಿಲೀಟ್ ಮಾಡಿದ್ದಾಳೆ. ಮತ್ತು ಅದನ್ನು ಕದ್ದು ತನ್ನದೇ ಪ್ರಾಜೆಕ್ಟ್ ಅದು ಅಂತ ಸಬ್‌ಮಿಟ್ ಮಾಡಿದ್ದಾಳೆ.
ಚಾರುಲತಾ ಮಾಡಿರೋ ಈ ಮೋಸ ರಾಮಾಚಾರಿಗೆ ಗೊತ್ತಾಗಲಿಲ್ಲ. ಹೀಗಾಗಿ ಆತ ಆಕೆಯ ಪ್ರಾಜೆಕ್ಟ್ ನೆವದಲ್ಲಿ ಆಕೆಗೆ ಪರ್ಫಾಮೆನ್ಸ್ ಸರ್ಟಿಫಿಕೇಟನ್ನೂ (Performance Certificate) ನೀಡಿದ್ದಾನೆ. ಅದರಲ್ಲಿ ಚಾರು ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳಿವೆ. ಅದನ್ನು ಎಲ್ಲರ ಎದುರು ಓದಿ ಹೇಳಲು ಚಾರು ರಾಮಾಚಾರಿಗೆ ಹೇಳಿದ್ದಾಳೆ. ಅವಳ ಮಾತಿನಂತೆ ರಾಮಾಚಾರಿ ಅದನ್ನೋದಿದ್ದಾನೆ. ರಾಮಾಚಾರಿ ಮತ್ತು ಟೀಮ್ ಬೇಸರದಲ್ಲಿ ಮುಖ ತಗ್ಗಿಸಿರುವಾಗ ಅತ್ತ ಚಾರು ತನ್ನ ಪ್ರಾಜೆಕ್ಟ್ ಗೆದ್ದ ಖುಷಿಯಲ್ಲಿ ಪಾರ್ಟಿ ಮಾಡುವ ಮಾತಾಡುತ್ತಿದ್ದಾಳೆ. ಅವಳಲ್ಲಿ ಒಂದೇ ರಾತ್ರಿಯಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಮಜಾ ಉಡಾಯಿಸುತ್ತಿದ್ದರೆ, ಇತ್ತ ರಾಮಾಚಾರಿ ಅತ್ತಿಗೆಯ ಚಿಕಿತ್ಸೆಗೆ ದುಡ್ಡು ಹೊಂದಿಸಲು ಇನ್ನಿಲ್ಲದ ಹಾಗೆ ಒದ್ದಾಡುತ್ತಿದ್ದಾನೆ. ಆ ದುಡ್ಡು ಆತನ ಕೈಗೆ ಸಿಗುತ್ತಾ ಅಥವಾ ಪಾರ್ಟಿ ನೆವದಲ್ಲಿ ಒಂದೇ ರಾತ್ರಿಯಲ್ಲಿ ಖರ್ಚಾಗಿ ಹೋಗುತ್ತಾ ಅನ್ನೋದು ಸದ್ಯದ ಪ್ರಶ್ನೆ.
Awards ಕಲರ್ಸ್ ಕನ್ನಡ ಅನುಬಂಧ ಅವಾರ್ಡ್; ಯಾರಿಗೆ ಯಾವ ಪ್ರಶಸ್ತಿ ಬಂತು ನೋಡಿ!
ಇನ್ನೊಂದೆಡೆ ತನ್ನ ಕ್ಯಾನ್ಸರ್ ಸಮಸ್ಯೆಯಿಂದ ಮನೆಯವರಿಗೆಲ್ಲ ತೊಂದರೆ ಆಗುತ್ತಿರುವುದನ್ನು ಅಪರ್ಣಾಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅವಳು ಕ್ಯಾನ್ಸರ್ ನೋವಿನ ಜೊತೆಗೆ ಮನೆಯವರಿಗೆ ಕಷ್ಟ ಕೊಡುತ್ತಿದ್ದೇನೆ ಅನ್ನೋ ನೋವಲ್ಲೂ ವಿಲ ವಿಲ ಒದ್ದಾಡುತ್ತಿದ್ದಾಳೆ. ತನ್ನ ಮನಸ್ಸಿನ ಮಾತುಗಳನ್ನು ಮನೆಯವರ ಬಳಿಯೂ ಆಡುತ್ತಾಳೆ. ತಪಿತಸ್ಥ ಭಾವನೆ, ನೋವು, ಕೀಳರಿಮೆಯಲ್ಲಿ ಅವಳು ನರಳೋದನ್ನು ಮನೆ ಮಂದಿಗೆ ನೋಡೋದಕ್ಕಾಗಲ್ಲ. ಆಗ ಆಕೆಯಲ್ಲಿ ಆತ್ಮವಿಶ್ವಾಸ ತುಂಬಿಸುವ ಕೆಲಸವನ್ನು ರಾಮಾಚಾರಿ ಮಾಡುತ್ತಾನೆ. ಅವಳಿಂದ ಈ ಮನೆಗೆ ಏನೆಲ್ಲ ಉಪಕಾರವಾಗಿದೆ, ಅವಳಿಂದ ತನ್ನ ಅಣ್ಣ ಬದುಕು ಹೇಗೆ ಚೆನ್ನಾಗಿ ಸಾಗುತ್ತಿದೆ, ಮನೆಗೆ ಅವಳ ಕೊಡುಗೆ ಏನು ಅನ್ನೋದನ್ನೆಲ್ಲ ರಾಮಾಚಾರಿ ಅಪರ್ಣಾಗೆ ಪರಿ ಪರಿಯಾಗಿ ವಿವರಿಸುತ್ತಾನೆ. ರೋಗಿ ತನಗೆ ಬಂದಿರೋ ರೋಗವನ್ನು ಗೆಲ್ಲಬೇಕಾದರೆ ಆಕೆಗೆ ಔಷಧವಷ್ಟೇ ಸಾಕೋಗೋದಿಲ್ಲ. ಆತ್ಮವಿಶ್ವಾಸವೂ ಹೆಚ್ಚಿರಬೇಕಾಗುತ್ತದೆ. ಆತ್ಮವಿಶ್ವಾಸ ಇಲ್ಲದೇ ಹೋದರೆ ಆಕೆ ಚಿಕಿತ್ಸೆಗೆ ಸ್ಪಂದಿಸೋದು ಕಷ್ಟ. ಹೀಗಾಗಿ ಅವಳನ್ನು ಚಿಕಿತ್ಸೆಗೆ ಸ್ಪಂದಿಸುವ ಸಾವಿನಿಂದ ಪಾರು ಮಾಡುವ ನಿಟ್ಟಿನಲ್ಲಿ ರಾಮಾಚಾರಿ ಇನ್ನಿಲ್ಲದ ಹಾಗೆ ಕಷ್ಟ ಪಡುತ್ತಿದ್ದಾನೆ.
Ramachari: ಫೈನಲೀ ಚಾರುಗೆ ಚಾರಿ ಮೇಲೆ ಪ್ರೀತಿ ಹುಟ್ಟಿದೆ! ಆದ್ರೆ...
ಏನೇ ಆದರೂ ಚಿಕಿತ್ಸೆಗೆ ಹಣ ಬೇಕೇ ಬೇಕು, ನ್ಯಾಯವಾಗಿ ರಾಮಾಚಾರಿಗೆ ಸೇರಬೇಕಾದ ಹಣ ಸೇರುತ್ತದೆಯೋ ಇಲ್ಲವೋ? ಪರೋಕ್ಷವಾಗಿ ಚಾರು ಅತ್ತಿಗೆ ಅಪರ್ಣಾಳ ಸಾವಿಗೆ ಕಾರಣವಾಗ್ತಾಳಾ ಇತ್ಯಾದಿ ಪ್ರಶ್ನೆಗಳಿಗೆಲ್ಲ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.
