Asianet Suvarna News Asianet Suvarna News

Ramachari: ಫೈನಲೀ ಚಾರುಗೆ ಚಾರಿ ಮೇಲೆ ಪ್ರೀತಿ ಹುಟ್ಟಿದೆ! ಆದ್ರೆ...

ವಿಎಫ್‌ಎಕ್ಸ್‌ನಲ್ಲಿ ಏನೇನೋ ಮಾಡೋದಕ್ಕೆ ಹೋಗಿ ನಗೆ ಪಾಟಲಿಗೆ ಗುರಿಯಾಗಿದ್ದ 'ರಾಮಾಚಾರಿ' ಟೀಮ್ ಈಗ ಮತ್ತೆ ಕತೆಗೆ ಮರಳಿದೆ. ತನ್ನ ಜೀವ, ಮಾನ ಕಾಪಾಡಿದ ರಾಮಾಚಾರಿ ಮೇಲೆ ಚಾರುಗೆ ಒಳಗೊಳಗೇ ಪ್ರೀತಿ ಹುಟ್ತಿದೆ. ಇತ್ತ ರಾಮಾಚಾರಿ ಅಮ್ಮನ ಬಲವಂತಕ್ಕೆ ದೀಪಾಗೆ ತಾಳಿ ಕಟ್ಟಲು ಹೊರಟಿದ್ದಾನೆ!

Finally Charulatha Loves Ramachari
Author
First Published Sep 28, 2022, 1:40 PM IST

ರಾಮಾಚಾರಿ ಸೀರಿಯಲ್‌ನಲ್ಲಿ ಸಖತ್ ಟ್ವಿಸ್ಟ್ ಗಳು ಒಂದರ ಮೇಲೊಂದರಂತೆ ಬರುತ್ತಿವೆ. ಕಳೆದ ಕೆಲವು ದಿನಗಳಿಂದ ಇದರಲ್ಲಿ ವಿಎಫ್‌ಎಕ್ಸ್ ಅಡ್ವೆಂಚರ್‌ಗಳು, ರಾಮಾಚಾರಿಯ ಸಾಹಸಗಳು ಕೊಂಚ ಸಿನಿಮೀಯವಾಗಿ ಬಂದಿದ್ದವು. ಕಥೆಯನ್ನು ಸಿನಿಮಾ ರೇಂಜಿಗೆ ಬೆಳೆಸಲು ಸಿನಿಮಾ ಟೀಮ್ ಹೀಗೆಲ್ಲ ಸರ್ಕಸ್ ಮಾಡಿದರೂ ಸೀರಿಯಲ್‌ ಅನ್ನು ಸೀರಿಯಲ್‌ ಆಗಿಯೇ ನೋಡಲು ಇಷ್ಟ ಪಡೋರು ಮತ್ತು ಈ ತಂತ್ರಜ್ಞಾನದ ಗಿಮಿಕ್‌ಗಳನ್ನೆಲ್ಲ ಅರೆದು ಕುಡಿದಿರೋ ಈ ಕಾಲದ ವೀಕ್ಷಕರು ಈ ಗಿಮಿಕ್‌ ಅನ್ನು ಒಪ್ಪಿಲ್ಲ. ಬದಲಿಗೆ ಎಲ್ಲ ಕಡೆ ಇದು ನಗೆಪಾಟಲಿಗೆ ಈಡಾಯಿತು. ಆದರೆ ಈಗ ಕತೆ ಮರಳಿ ಸೀರಿಯಸ್ ಟ್ರ್ಯಾಕ್ ಗೆ ಬಂದಿದೆ. ಮತ್ತು ಈವರೆಗೂ ಇರದ ಮಹತ್ವದ ಬೆಳವಣಿಗೆಯೊಂದು ಸೀರಿಯಲ್‌ನಲ್ಲಿ ಘಟಿಸಿದೆ. ಅದು ಮತ್ತೇನೂ ಅಲ್ಲ, ಈವರೆಗೆ ರಾಮಾಚಾರಿ ನೆರಳು ಕಂಡರೂ ದ್ವೇಷದ ಮಾತನ್ನೇ ಆಡುತ್ತಿದ್ದ ಚಾರು ಫೈನಲೀ ಚಾರಿಗೆ ಮನಸೋತಿದ್ದಾಳೆ. ತನ್ನ ಮನಸ್ಸಿನ ಮಾತುಗಳನ್ನು ತನ್ನ ಗೆಳತಿ ಜೊತೆಗೆ ಆಡಿದ್ದಾಳೆ. ಆದರೆ ತನಗೆ ಲವ್ವಾಗ್ತಿದೆ ಅನ್ನೋದನ್ನು ಮಾತ್ರ ಒಪ್ಪಿಕೊಳ್ಳೋಕೆ ಅವಳ ಬಿಗುಮಾನ ಬಿಡ್ತಿಲ್ಲ.

ರಾಮಾಚಾರಿ ಸೀರಿಯಲ್‌ನಲ್ಲಿ ಈ ಹಿಂದೆಯೇ ಬಬ್ಲಿ ಸಾರ್ ಚಾರು-ಚಾರಿ ನಡುವಿನ ಕೋಪ, ಜಗಳ ಕಡಿಮೆ ಮಾಡಿ ಅವರಿಬ್ಬರನ್ನೂ ಒಂದು ಮಾಡಬೇಕು ಅಂತ ಪ್ಲಾನ್ ಮಾಡಿದ್ರು. ಈ ಕಾರಣಕ್ಕೆ ಅವರಿಬ್ಬರನ್ನು ಪ್ರಾಜೆಕ್ಟ್ ಸಲುವಾಗಿ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿದ್ರು. ಅಲ್ಲಿ ರಾಮಾಚಾರಿ ದುರ್ಗದ ಕಥೆಯನ್ನೆಲ್ಲ ಹೇಳಿದ್ದ. ಅಲ್ಲಿ ಬಬ್ಲಿ ಸಾರ್ ಚಾರು ಚಾರಿಯನ್ನೇ ಕಲ್ಪಿಸಿಕೊಂಡಿದ್ದರು. ಆದರೆ ಬಬ್ಲಿ ಸಾರ್ ಈ ಮಾತಿಗೆ ಚಾರು ಚಾರಿ ಇಬ್ಬರೂ ವಿರೋಧ ವ್ಯಕ್ತಪಡಿಸಿದ್ದರು. ಆಮೇಲೆ ನಡೆದದ್ದೇ ಮಹಾ ವಿಸ್ಮಯದ ಘಟನೆಗಳು. ಚಾರು ಚಾರಿಯನ್ನು ಕಂದಕಕ್ಕೆ ಬೀಳಿಸಲು ಹೋಗಿ ತಾನೇ ಮಹಾ ಪ್ರಪಾತಕ್ಕೆ ಬೀಳ್ತಾಳೆ. ಅಲ್ಲಿ ಅವಳನ್ನು ರಾಮಾಚಾರಿ ರಕ್ಷಿಸಲು ಪ್ರಯತ್ನ ಪಡ್ತಾನೆ. ಒಂದು ಹಂತದಲ್ಲಿ ಅವನ ಸಹಾಯವನ್ನು ಚಾರು ನಿರಾಕರಿಸುತ್ತಾಳೆ. ಆದರೂ ಚಾರಿ ಅವಳನ್ನು ಕಾಯುತ್ತಲೇ ಇರುತ್ತಾನೆ. ಮುಂದೆ ಈ ಗಂಡಾಂತರಗಳಿಂದೆಲ್ಲ ಪಾರಾಗಿ ಚಾರು ಹೆಲಿಕಾಪ್ಟರ್ ಹತ್ತಿ ಹೋಗ್ತಾಳೆ. ರಾಮಾಚಾರಿ ಒಬ್ಬನೇ ಉಳೀತಾನೆ. ರಾಮಾಚಾರಿಯನ್ನು ಹೊಡೆದು ಹಾಕಬೇಕು ಅಂತ ಚಾರು ರೌಡಿಗಳನ್ನು ಕರೆಸ್ತಾಳೆ. ಆದರೆ ಅವರು ಚಾರುಲತಾಳನ್ನೇ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಾರೆ. ಆಗ ಬಂದು ಅವಳನ್ನು ಮತ್ತೆ ರಾಮಾಚಾರಿ ಕಾಪಾಡ್ತಾನೆ.

Lakshana serial: ಬೊಂಬೆಯಾಟದಲ್ಲಿ ನಕ್ಷತ್ರಾ ಬದುಕನ್ನೇ ಕತೆಯಾಗಿಸಿದ ಮಯೂರಿ, ನಕ್ಷತ್ರಾ ಪರ ನಿಂತ ಭೂಪತಿ!

ಇದನ್ನೆಲ್ಲ ನೋಡಿದ ಮೇಲೆ ಚಾರುಲತಾ ರಾಮಾಚಾರಿ ಕಡೆ ಮೃದುವಾಗ್ತಿದ್ದಾಳೆ. ಅವನ ಬಗ್ಗೆ ಅವಳಲ್ಲಿ ಒಳ್ಳೆಯ ಭಾವನೆಗಳು ಮೂಡ್ತಾ ಇವೆ. ಇದನ್ನೆಲ್ಲ ಅವಳು ತನ್ನ ಆಪ್ತ ಗೆಳತಿ ಜೊತೆಗೆ ಹಂಚಿಕೊಳ್ತಾಳೆ. ಆದರೆ ರಾಮಾಚಾರಿ ಜೊತೆಗೆ ನಿನಗೆ ಲವ್ವಾಗಿದೆಯಾ ಅಂತ ಕೇಳಿದಾಗ ಮಾತ್ರ ಅದನ್ನೊಪ್ಪಿಕೊಳ್ಳೋದಕ್ಕೆ ಅವಳ ಬಿಗುಮಾನ ಬಿಡುತ್ತಿಲ್ಲ. ಈ ನಡುವೆ ಅವಳು ರಾಮಾಚಾರಿಗೆ ಕಾಲ್(Call) ಮಾಡ್ತಾಳೆ. ಇನ್ನೊಂದೆಡೆ ರಾಮಾಚಾರಿ ತಾಯಿಗೆ ತನ್ನ ಮಗ ಎಲ್ಲಿ ಚಾರುವನ್ನು ಮದುವೆ ಆಗಿ ಬಿಡುತ್ತಾನೋ ಅನ್ನೋ ಭಯ(Fear) ಶುರುವಾಗಿದೆ. ಆಕೆ ಈ ಭಯದಲ್ಲೇ ರಾಮಾಚಾರಿಗೆ ದೀಪಾಗೆ ತಾಳಿ ಕಟ್ಟಲು ಒತ್ತಾಯಿಸುತ್ತಾಳೆ. ರಾಮಾಚಾರಿ ಯಾವ ಮಾತು ಹೇಳಿದರೂ ಕೇಳೋದಿಲ್ಲ. ಅಷ್ಟೊತ್ತಿಗೆ ಚಾರು ಫೋನ್(Phone) ಬರುತ್ತೆ. ಫೋನಲ್ಲಿ ಮಾತಾಡೋ ತಾಯಿ ಚಾರು ಬಳಿ ನೇರವಾಗಿ ರಾಮಾಚಾರಿ ಮದುವೆ(Marriage) ಆಗ್ತಿದ್ದಾನೆ ಅನ್ನೋ ವಿಚಾರ ತಿಳಿಸ್ತಾಳೆ. ಇದನ್ನು ಕೇಳಿ ಚಾರು ಮಂಕಾಗ್ತಾಳೆ. ಅವಳಲ್ಲಿನ ಬದಲಾವಣೆ(Change) ನೋಡಿ ಅವಳ ಗೆಳತಿಗೆ ಶಾಕ್ ಆಗುತ್ತೆ.

 

ರಾಮಾಚಾರಿ ತಾಯಿಯ ಒತ್ತಾಯ(Force)ಕ್ಕೆ ಮಣಿದು ದೀಪಾಗೆ ತಾಳಿ ಕಟ್ಟೇ ಬಿಡುತ್ತಾನಾ, ಚಾರುಲತಾ ಪ್ರೀತಿಯ ಕಥೆ ಏನಾಗುತ್ತೆ ಅನ್ನೋದು ಮುಂದಿನ ಸಂಚಿಕೆ(Episode)ಗಳಲ್ಲಿ ತಿಳಿದುಬರಲಿದೆ. ರಾಮಾಚಾರಿಯಾಗಿ ರಿತ್ವಿಕ್ ಕೃಪಾಕರ್, ಚಾರುಲತಾ ಪಾತ್ರದಲ್ಲಿ ಮೌನಾ, ತಾಯಿಯಾಗಿ ಅಂಜಲಿ ನಟಿಸಿದ್ದಾರೆ. ಈ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದೆ.

'ನನ್ನರಸಿ ರಾಧೆ' ಧಾರಾವಾಹಿ ಮುಕ್ತಾಯ; ಅಗಸ್ತ್ಯ ಖ್ಯಾತಿಯ ನಟ ಅಭಿನವ್ ಹೃದಯಸ್ಪರ್ಶಿ ಸಂದೇಶ

Follow Us:
Download App:
  • android
  • ios