ಕಿರುತೆರೆ ಜನಪ್ರಿಯ ಅವಾರ್ಡ್‌ ಕಾರ್ಯಕ್ರಮದಲ್ಲಿ ಬೆಳ್ಳಿ ತೆರೆ ಸ್ಟಾರ್ಸ್‌ ಸಂಭ್ರಮ. ಜನ ಮೆಚ್ಚಿದ ಹಾಗೂ ಮನೆ ಮೆಚ್ಚಿದ ಅವಾರ್ಡ್‌ ಯಾರ ಕೈ ಸೇರಿದೆ?

ಕಿರುತೆರೆ ವೀಕ್ಷಕರಿಗೆ ಮನೋರಂಜನೆ ನೀಡುವ ಟಾಪ್‌ ವಾಹಿನಿ ಕಲರ್ಸ್‌ ಕನ್ನಡ ಪ್ರತಿ ವರ್ಷವೂ ಅನುಬಂಧ ಅವಾರ್ಡ್‌ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸುತ್ತಾರೆ. ಕನ್ನಡ ಚಿತ್ರರಂಗದ ಪ್ರತಿಯೊಬ್ಬರು ಭಾಗಿಯಾಗಿ ಕಿರುತೆರೆ ಕಲಾವಿದರಿಗೆ ಪ್ರಶಸ್ತಿಯನ್ನು ನೀಡುತ್ತಾರೆ. ಈ ಪ್ರಶಸ್ತಿಯಲ್ಲಿ ಎರಡು ಭಾಗವಿದೆ..ಒಂದು ಮನೆ ಮೆಚ್ಚಿರುವ ಅವಾರ್ಡ್‌. ಅಂದ್ರೆ ಧಾರಾವಾಹಿಯಲ್ಲಿ ಅಭಿನಯಿಸಿ ಕೆಲಸ ಮಾಡುವವರು ತಮ್ಮವರಲ್ಲಿ ಯಾರು ಬೆಸ್ಟ್‌ ಎಂದು ಆಯ್ಕೆ ಮಾಡಬೇಕು. ಮತ್ತೊಂದು ಜನ ಮೆಚ್ಚಿದ ಅವಾರ್ಡ್‌. ವೂಟ್ ಆಪ್‌ಗೆ ಲಾಗ್‌ ಇನ್‌ ಆಗಿ ವೀಕ್ಷಕರು ತಮ್ಮ ನೆಚ್ಚಿನವರಿಗೆ ವೋಟ್ ಮಾಡಬಹುದು. 

2022ರ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ವಿಶೇಷ ನಮನ ಸಲ್ಲಿಸಲಾಗಿತ್ತು. ರಾಘವೇಂದ್ರ ರಾಜ್‌ಕುಮಾರ್, ಮೋಹಕ ತಾರೆ ರಮ್ಯಾ, ರಿಷಬ್ ಶೆಟ್ಟಿ, ಆಶಿಕಾ ರಂಗನಾಥ್, ನಿರ್ದೇಶಕ ಕಿರಣ್ ರಾಜ್, ಗಿರಿಜಾ ಲೋಕೇಶ್, ಶರಣ್, ಅಜಯ್ ರಾವ್, ಸೃಜನ್ ಲೋಕೇಶ್, ಮೇಘನಾ ರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಪ್ರಶಸ್ತಿ ಪಡೆದವರು:

 ಜನ ಮೆಚ್ಚಿದ ಸಂಸಾರ - ಕನ್ನಡತಿ

View post on Instagram

ಜನ ಮೆಚ್ಚಿದ ನಾಯಕ - ಹರ್ಷ (ಕನ್ನಡತಿ)

ಜನ ಮೆಚ್ಚಿದ ನಾಯಕಿ - ಭುವಿ (ಕನ್ನಡತಿ)

ಮನೆ ಮೆಚ್ಚಿದ ಹಿರಿಯ - ನಿಮಿಷಾಂಬ ( ರಾಮಚಾರಿ)

ಮುಖ್ಯಮಂತ್ರಿ ಮನೇಲಿ ಜಗಳ ಆಗುತ್ತಾ ? ತಮ್ಮ ಉತ್ತರಗಳಿಂದ ನಕ್ಕು ನಗಿಸ್ತಾರೆ ಸಿಎಂ ಬೊಮ್ಮಾಯಿ

ಮನೆ ಮೆಚ್ಚಿದ ಅಪ್ಪ - ಶ್ರೀಕಾಂತ್ ದೇಶಪಾಂಡೆ (ಗಿಣಿರಾಮ)

ಜನ ಮೆಚ್ಚಿದ ಹೊಸ ಪರಿಚಯ - ವನ್ಶಿಕಾ (ನನ್ನಮ್ಮ ಸೂಪರ್ ಸ್ಟಾರ್)

View post on Instagram

ಜನಪ್ರಿಯ ಡಿಜಿಟಲ್ ಜೋಡಿ - ಗೀತಾ ಮತ್ತು ವಿಜಯ್ (ಗೀತಾ)

ಮನೆ ಮೆಚ್ಚಿದ ಅತ್ತೆ - ವಿದ್ಯಾ ದೇಶಪಾಂಡೆ (ಗಿಣಿರಾಮ)

ಜನ ಮೆಚ್ಚಿದ ಮಂಥರೆ - ಭಾನುಮತಿ (ಗೀತಾ)

ಜನ ಮೆಚ್ಚಿದ ಸ್ಟೈಲ್ ಐಕಾನ್ - ಚಾರು (ರಾಮಚಾರಿ)

ಸೃಜನ್‌ಗೆ ಮೈಸೂರ್ ಭಾಷೆ ಬೈಗುಳ ಹೇಳ್ಕೊಟ್ಟ ನಿವೇದಿತಾ

ಜನ ಮೆಚ್ಚಿದ ಯೂತ್‌ ಐಕಾನ್ - ರಾಮಚಾರಿ (ರಾಮಚಾರಿ)

ಬೆಸ್ಟ್‌ ರೇಟಿಂಗ್ ಧಾರಾವಾಹಿ - ರಾಮಚಾರಿ

ಜನ ಮೆಚ್ಚಿದ ENTERTAINER - ವಿನೋದ್ ಗೊಬ್ಬರಗಾಲ (ಗಿಚ್ಚಿ ಗಿಲಿಗಿಲಿ)

ಮನೆ ಮೆಚ್ಚಿದ ದಂಪತಿ - ಮಹತಿ ಮತ್ತು ಶಿವರಾಮ್ (ಗಿಣಿರಾಮ)

ಮನೆ ಮೆಚ್ಚಿದ ಅಳಿಯ - ವಿಜಯ್ (ಗೀತಾ)

View post on Instagram

ಮನೆ ಮೆಚ್ಚಿದ ಅಳಿಯ - ಅಗಸ್ತ್ಯ (ನನ್ನರಸಿ ರಾಧೆ)

ಬೆಸ್ಟ್‌ ರೇಟಿಂಗ್ - ನನ್ನಮ್ಮ ಸೂಪರ್ ಸ್ಟಾರ್

ಜನ ಮೆಚ್ಚಿನ ಸ್ಟೈಲ್ ಐಕಾನ್ - ಭೂಪತಿ (ಲಕ್ಷಣ)

ಜನ ಮೆಚ್ಚಿನ ಹೊಸ ಪರಿಚಯ - ರಾಮಚಾರಿ (ರಾಮಚಾರಿ)

ಜನ ಮೆಚ್ಚಿನ ಕಾಮಿಡಿಯನ್ - ಶಿವು (ಗಿಚ್ಚಿ ಗಿಲಿಗಿಲಿ)

ಐತಿಹಾಸಿಕ ಧಾರಾವಾಹಿ-ವಿಶೇಷ ಪ್ರಶಸ್ತಿ - ದಾಸ ಪುರಂದರ (ದಾಸ ಪುರಂದರ)

ಉತ್ತಮ ಐತಿಹಾಸಿಕ ಪಾತ್ರ - ಶ್ರೀನಿವಾಸ ನಾಯಕ (ದಾಸ ಪುರಂದರ)

ಮನೆ ಮೆಚ್ಚಿದ ಸಹೋದರ - ರಾಜೇಶ್ (ಕೆಂಡಸಂಪಿಗೆ)

ಮನೆ ಮೆಚ್ಚಿದ ಅಮ್ಮ - ರತ್ನಮಾಲಾ (ಕನ್ನಡತಿ)

 ಜನ ಮೆಚ್ಚಿದ ಎಂಟರ್ಟೈನರ್ (Female) - ನಿವೇದಿತಾ ಗೌಡ (ಗಿಚ್ಚಿ-ಗಿಲಿಗಿಲಿ)

ಮನೆ ಮೆಚ್ಚಿದ ವಿದೂಷಕ - ಸಿತಾರ (ಗೀತಾ)

ಮನೆ ಮೆಚ್ಚಿದ ಸಹೋದರಿ - ಉರ್ವಿ (ನನ್ನರಸಿ ರಾಧೆ)

ಮನೆ ಮೆಚ್ಚಿದ ಮಗ - ಶಿವರಾಮ್ (ಗಿಣಿರಾಮ)

ಮನೆ ಮೆಚ್ಚಿದ ಮಾವ - ಚಂದ್ರಶೇಖರ್ (ಲಕ್ಷಣ)

ಮನೆ ಮೆಚ್ಚಿದ ಸೊಸೆ - ಮಹತಿ (ಗಿಣಿರಾಮ)

ಮನೆ ಮೆಚ್ಚಿದ ಸೊಸೆ - ಮಂಗಳಾ (ಮಂಗಳಗೌರಿ ಮದುವೆ)

 ಮನೆ ಮೆಚ್ಚಿದ ಮಗಳು - ತಾರಿಣಿ (ಒಲವಿನ ನಿಲ್ದಾಣ)