ಕಂಠಿಯನ್ನು ಮದುವೆಯಾಗಲು ರಾಧಾ ಯತ್ನಿಸುತ್ತಿದ್ದು, ಬಂಗಾರಮ್ಮನನ್ನೂ ಎದುರಿಸಲು ಸಿದ್ಧಳಾಗಿದ್ದಾಳೆ. ಗಂಗಾಧರ್‌ ಮತ್ತು ಮಗಳು ಸ್ನೇಹಾ ಅಪಹರಣಕ್ಕೊಳಗಾಗಿದ್ದು, ಬಂಗಾರಮ್ಮ ಪುಟ್ಟಕ್ಕನ ಜೊತೆ ಅವರನ್ನು ರಕ್ಷಿಸಿದ್ದಾಳೆ. ಕಂಠಿ, ತಾಯಿ ಬರುವವರೆಗೂ ರಾಧಾಳನ್ನು ಮದುವೆಯಾಗುವುದಿಲ್ಲ ಎಂದಿದ್ದಾನೆ. ರಾಧಾಳ ಸುಳ್ಳು ಬಯಲಾಗುವ ಸೂಚನೆಗಳಿವೆ.

ಯಾರು ಬದುಕಲೀ, ಯಾರೇ ಸಾಯಲಿ ನಾನು ಕಂಠಿಯನ್ನು ಮದುವೆ ಆಗಬೇಕು ಅಂತ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ರಾಧಾ ಪಣ ತೊಟ್ಟಿದ್ದಾಳೆ. ಇದಕ್ಕಾಗಿ ಅವಳು ಬಂಗಾರಮ್ಮನ ಜೀವ ತೆಗೆಯೋಕೂ ರೆಡಿ ಇದ್ದಾಳೆ. ಗಂಗಾಧರ್‌ ಮಗಳು ಸ್ನೇಹಾ ಬಳಿ ಸುಳ್ಳು ಹೇಳಿಸಿ, ಸ್ನೇಹಾ-ಕಂಠಿ ದೂರ ಆಗೋದನ್ನು ಅವಳು ತಡೆದಳು, ಈಗ ಅವಳು ಕಂಠಿ ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾಳೆ. 

ಬಂಗಾರಮ್ಮನಿಗೆ ಇಷ್ಟ ಇರಲಿಲ್ಲ! 
ರಾಧಾ ಏನು ಎನ್ನೋದು ಬಂಗಾರಮ್ಮನ ತಾಯಿ ಚೌಡವ್ವಗೆ ಗೊತ್ತಿದೆ. ಆದರೆ ಯಾರೂ ಅವಳ ಮಾತನ್ನು ಕೇಳೋಕೆ ರೆಡಿ ಇಲ್ಲ. ಇನ್ನೊಂದು ಗಂಡೆ ಸ್ನೇಹಾ, ಗಂಗಾಧರ್‌ ಕಿಡ್ನ್ಯಾಪ್‌ ಮಾಡಲಾಗಿದೆ. ಕಂಠಿ ಮೊದಲ ಪತ್ನಿ ಸ್ನೇಹಾ ಹೃದಯವನ್ನು ಗಂಗಾಧರ್‌ ಮಗಳು ಸ್ನೇಹಾಗೆ ಕೊಟ್ಟು ಅವಳ ಜೀವವನ್ನು ಉಳಿಸಲಾಗಿದೆ. ಈ ಸ್ನೇಹಾ ಹಾಗೂ ಕಂಠಿ ಮದುವೆ ಆಗೋದು ಬಂಗಾರಮ್ಮನಿಗೆ ಇಷ್ಟ ಇರಲಿಲ್ಲ. ಹೀಗಾಗಿ ಅವಳು ಸ್ನೇಹಾಳಿಗೆ ಕಂಠಿಯಿಂದ ದೂರ ಆಗುವಂತೆ ಹೇಳಿದ್ದಳು.

ಕಿಡ್ನ್ಯಾಪ್‌ ಆಗಿರೋ ಗಂಗಾಧರ್-ಮಗಳು! 
ಈಗ ಸ್ನೇಹ-ಗಂಗಾಧರ್‌ ಕಿಡ್ನ್ಯಾಪ್‌ ಆಗಿರೋದು ಪುಟ್ಟಕ್ಕನ ಮನೆಯವರಿಗೆ ಗೊತ್ತಾಗಿದೆ. ಇವರನ್ನು ಕಾಪಾಡಲು ಪುಟ್ಟಕ್ಕನ ಮನೆಯವರು ಓಡಿದ್ದಾರೆ. ಇನ್ನೇನು ರೌಡಿಗಳು ಪುಟ್ಟಕ್ಕನ ಹೊಟ್ಟೆಗೆ ಚಾಕು ಚುಚ್ಚುತ್ತಾಳೆ ಎನ್ನುವಷ್ಟರಲ್ಲಿ ಬಂಗಾರಮ್ಮನ ಆಗಮನವಾಗಿದೆ. ಬೆಂಕಿ, ಬಿರುಗಾಳಿ ಸೇರಿದಂತೆ ಬಂಗಾರಮ್ಮ-ಪುಟ್ಟಕ್ಕ ಒಂದಾಗಿ ಎಲ್ಲರ ಹೆಡೆಮುರಿ ಕಟ್ಟಿದ್ದಾರೆ.

ತಾಳಿ ಕಟ್ಟಲು ಕಂಠಿ ರೆಡಿಯಿಲ್ಲ. 
ನನ್ನ ತಾಯಿ ಬರದಂತೂ ನಾನು ರಾಧಾ ಕುತ್ತಿಗೆಗೆ ತಾಳಿ ಕಟ್ಟೋದಿಲ್ಲ ಎಂದು ಕಂಠಿ ಹೇಳಿದ್ದಾನೆ. ಮದುವೆ ಮಂಟಪಕ್ಕೆ ಬಂಗಾರಮ್ಮ ಆಗಮನ ಆಗುವುದು. ಬಹುಶಃ ಅಲ್ಲಿ ಅವಳಿಗೆ ಎಲ್ಲ ವಿಷಯವೂ ಅರ್ಥ ಆಗಿದೆ ಎಂದು ಕಾಣುತ್ತದೆ. ರಾಜಿ, ರಾಧಾ, ನಂಜಮ್ಮ ಎಲ್ಲರೂ ಸೇರಿಕೊಂಡು ಗಂಗಾಧರ್-‌ ಸ್ನೇಹಾ ಬಾಯಲ್ಲಿ ಸುಳ್ಳು ಹೇಳಿಸಿದರು ಎಂದು ಕಾಣುತ್ತದೆ. ಕಂಠಿ, ಪುಟ್ಟಕ್ಕನ ಮಗಳು ಸ್ನೇಹಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ಆದರೆ ವೈರಿಗಳಿಂದ ಅವಳು ತೀರಿಕೊಂಡಳು. ಇನ್ನೊಂದು ಕಡೆ ಆ ಸ್ನೇಹಾ ಹೃದಯ ಈಗ ಗಂಗಾಧರ್‌ ಮಗಳು ಸ್ನೇಹಾ ಬಳಿ ಇದೆ. ಹೀಗಾಗಿ ಗಂಗಣ್ಣನ ಮಗಳನ್ನೇ ನಾನು ಮದುವೆ ಆಗ್ತೀನಿ ಅಂತ ಕಂಠಿ ಹೇಳುತ್ತಿದ್ದಾನೆ. ಸಾಕಷ್ಟು ಬಾರಿ ರಾಧಾ-ಕಂಠಿ ಮದುವೆ ಮಾತುಕತೆ ನಡೆದಿದ್ದರೂ ಕೂಡ, ಏನೂ ಪ್ರಯೋಜನ ಆಗಿಲ್ಲ. ಎಷ್ಟೇ ಸಲ ಈ ಮದುವೆ ಮಾತುಕತೆ ಮುರಿದಿದ್ದರೂ ಕೂಡ ರಾಧಾ ಮಾತ್ರ ಬುದ್ಧಿ ಕಲಿತಿಲ್ಲ. 

ಇನ್ನೊಂದು ಕಡೆ ಬಂಗಾರಮ್ಮನಿಗೆ ಎಲ್ಲವೂ ಅರ್ಥ ಆಗಬಹುದು. ರಾಧಾಳನ್ನು ಮನೆಯಿಂದ ಹೊರಗಡೆ ಹಾಕಿ, ಕಂಠಿ, ಸ್ನೇಹಾ ಮದುವೆ ಮಾಡಿಸಲೂಬಹುದು. ಒಟ್ಟಿನಲ್ಲಿ ಈ ಮದುವೆಯಲ್ಲಿ ಭರ್ಜರಿ ಟ್ವಿಸ್ಟ್‌ ಇದ್ದಹಾಗೆ ಕಾಣುತ್ತದೆ. 

ಈ ಎಪಿಸೋಡ್‌ ನೋಡಿ ವೀಕ್ಷಕರು ಏನು ಹೇಳುತ್ತಿದ್ದಾರೆ?
ರಾಧಾಳ ಮುಖವಾಡ ಕಳಚಿ ಬೀಳು ಸಮಯ ಬಂತು
ಬಂಗಾರಮ್ಮ ಕೊಡೊ ಏಟಿಗೆ ರಾಧಾಗೆ ಧಾರಾವಾಹಿಯನ್ನೇ ಬಿಟ್ಟು ಹೋಗ್ಬೇಕು
ಪ್ರತಿಯೊಬ್ಬರ ಜೀವನದಲ್ಲಿಯೂ ರಾಧಾ ತರ ಕಿತಾಪತಿ ಮಾಡೋಕೆ , ಜೀವನ ಹಾಳು ಮಾಡೋಕೆ ಅಂತ ಇದ್ದೇ ಇರುತ್ತಾರೆ.
ರಾಧಾ ಒಳ್ಳೆಯವಳಾಗಿದ್ದರೆ ಕಂಠಿ ಜೊತೆ ಮದುವೆ ಆಗುತ್ತಿತ್ತು. 

ಕಥೆ ಏನು?
ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಪುಟ್ಟಕ್ಕನಿಗೆ ಗಂಡಿಲ್ಲ ಎಂದು ಅವಳ ಗಂಡ ಗೋಪಾಲಯ್ಯ ರಾಜಿಯನ್ನು ಮದುವೆ ಆಗಿದ್ದಾನೆ, ಅವನಿಗೆ ಓರ್ವ ಗಂಡು ಮಗ ಇದ್ದಾನೆ. ರಾಜಿಗೆ ಪುಟ್ಟಕ್ಕಳನ್ನು ಕಂಡರೆ ಆಗೋದಿಲ್ಲ. ಇನ್ನೊಂದು ಕಡೆ ಪುಟ್ಟಕ್ಕನ ಎರಡನೇ ಮಗಳು ಸ್ನೇಹಾ ಹಾಗೂ ಬಂಗಾರಮ್ಮನ ಮಗ ಕಂಠಿ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ವಿಧಿ ಸ್ನೇಹಾಳ ಜೀವವನ್ನು ಬಲಿ ಪಡೆಯಿತು. ಸ್ನೇಹಾ ಎನ್ನುವ ಇನ್ನೊಂದು ಹುಡುಗಿಗೆ ಈ ಡಿಸಿ ಸ್ನೇಹಾಳ ಹೃದಯ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ.

ಪಾತ್ರಧಾರಿಗಳು
ಪುಟ್ಟಕ್ಕ-ಉಮಾಶ್ರೀ
ಬಂಗಾರಮ್ಮ- ಮಂಜು ಭಾಷಿಣಿ
ರಾಧಾ- ರಮ್ಯಾ ರಾಜು