'ಪುಟ್ಟಕ್ಕನ ಮಕ್ಕಳು' ಧಾರವಾಹಿ ಮೂಲಕ ಮತ್ತೆ ನಟನೆಗೆ ಕಮ್ ಬ್ಯಾಕ್ ಮಾಡಿದ ಹಿರಿಯ ನಟಿ ಉಮಾಶ್ರೀ...
ಜೀ ಕನ್ನಡ ವಾಹಿನಿಯಲ್ಲಿ ದಿನದಿಂದ ದಿನಕ್ಕೆ ಹೊಸ ಶೈಲಿಯ ಧಾರಾವಾಹಿಗಳು ವೀಕ್ಷಕರ ಗಮನ ಸೆಳೆಯುತ್ತಿವೆ. ಸ್ಟಾರ್ ನಟ,ನಟಿಯರು ತೀರ್ಪುಗಾರರಾಗಿ, ಗೆಸ್ಟ್ ಆಗಿ, ಪೋಷಕರ ಪಾತ್ರದಲ್ಲಿ ಹಾಗೂ ಕೆಲವೊಮ್ಮೆ ಪ್ರಮುಖ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಮೌಲ್ಯವನ್ನು ಹೆಚ್ಚಿಸುತ್ತಿದ್ದಾರೆ. ಇದೀಗ ಕನ್ನಡ ಚಿತ್ರರಂಗ ಹಿರಿಯ, ಪ್ರತಿಭಾನ್ವಿತ ಕಲಾವಿದೆ ಉಮಾಶ್ರೀ ಧಾರಾವಾಹಿ ಒಂದರಲ್ಲಿ ಅಭಿನಯಿಸುತ್ತಿದ್ದಾರೆ.
ಇದಕ್ಕೆ ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶನ ಮಾಡುತ್ತಿರುವ ಆರೂರು ಜಗದೀಶ್ ಅವರ ಮತ್ತೊಂದು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ವೈಯಕ್ತಿಕ ಜೀವನಕ್ಕೆ ತುಂಬಾ ಹತ್ತಿರವಾದ ಕಥೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇದರ ಬಗ್ಗೆ ಸ್ವತಃ ನಿರ್ದೇಶಕರೇ ಸ್ಪಷ್ಟನೆ ನೀಡಿದ್ದಾರೆ.
'ಬಿಡುಗಡೆ ಮಾಡಿರುವ ಪ್ರೋಮೋ ನೋಡಿ ಹಲವರು ನನಗೆ ಪ್ರಶ್ನೆ ಮಾಡುತ್ತಿದ್ದಾರೆ, ಇದು ಉಮಾಶ್ರೀ ಅವರ ನಿಜ ಜೀವನದ ಕಥೆ ನಾ ಎಂದು. ಇದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಒಂದು ವಿಚಾರವನ್ನು ನಾನು ನಿಮಗೆ ಸ್ಪಷ್ಟ ಪಡಿಸಬಹುದು. ಈ ಕಥೆ ಹೇಗೆಂದರೆ ಒಂದು ಹೆಣ್ಣು ತನ್ನ ಇಡೀ ಜೀವನ ಕಷ್ಟ ಪಡುತ್ತಾ ಮಕ್ಕಳನ್ನು ಸಾಕುತ್ತಾಳೆ. ಆದರೆ ಕೊನೆಯವರೆಗೂ ಆಕೆಯೇ ದುಡಿದು, ಒಬ್ಬಂಟಿಯಾಗಿಯೇ ಜೀವನ ಸವೆಸುತ್ತಾಳೆ. ಧಾರಾವಾಹಿ ಶೀಘ್ರದಲ್ಲಿಯೇ ಪ್ರಸಾರ ಆರಂಭಿಸಲಿದೆ, ಎಂದಿದ್ದಾರೆ.
ವಿದೇಶದಲ್ಲಿ ನಡಿಯಬೇಕಿತ್ತಂತೆ ಅನು- ಆರ್ಯವರ್ಧನ್ ಮದುವೆ; ಶೀಘ್ರದಲ್ಲಿ ರಾಜನಂದಿನಿ ಎಂಟ್ರಿ!
ಗಂಡು ಮಗುವಿಗೆ ಜನ್ಮ ನೀಡದ ಕಾರಣ ಗಂಡ ಪುಟ್ಟಕ್ಕನನ್ನು ಒಬ್ಬಂಟಿ ಮಾಡುತ್ತಾನೆ. ತನ್ನ ಮೂರು ಮಕ್ಕಳನ್ನು ಸಾಕುವುದಕ್ಕೆ ಪುಟ್ಟಕ್ಕ ಸಣ್ಣ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾರೆ. ಆ ಮೂವರು ಹೆಣ್ಣು ಮಕ್ಕಳ ಪಾತ್ರದಲ್ಲಿ ಅಕ್ಷರಾ, ಅಮೀತಾ ಹಾಗೂ ಶಿಲ್ಪಾ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಜನಪ್ರಿಯ 'ರಾಧಮ್ಮ ಕೂತುರು' ಧಾರಾವಾಹಿಯನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದೆ.
