MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಹೀರೋಯಿನ್ ಆಗಲು ಪರ್ಫೆಕ್ಟ್... ಆದ್ರೆ ಸಿನಿಮಾ ಯಾಕೆ ಸಿಕ್ತಿಲ್ಲ ಈ ಬ್ಯೂಟಿಗೆ

ಹೀರೋಯಿನ್ ಆಗಲು ಪರ್ಫೆಕ್ಟ್... ಆದ್ರೆ ಸಿನಿಮಾ ಯಾಕೆ ಸಿಕ್ತಿಲ್ಲ ಈ ಬ್ಯೂಟಿಗೆ

ಕನ್ನಡ ಕಿರುತೆರೆಯೆ ಮೂಲಕ ಜರ್ನಿ ಆರಂಭಿಸಿ, ಸ್ಯಾಂಡಲ್ ವುಡ್ ನಲ್ಲಿ ಒಂದು ಸಿನಿಮಾದಲ್ಲಿ ನಟಿಸಿದ ಬಳಿಕ ಸಾನ್ಯಾ ಅಯ್ಯರ್ ಎಲ್ಲಿ ಮಾಯಾ ಆದ್ರೂ?  

2 Min read
Author : Pavna Das
| Updated : Apr 28 2025, 03:31 PM IST
Share this Photo Gallery
  • FB
  • TW
  • Linkdin
  • Whatsapp
16

ಸಾನ್ಯಾ ಅಯ್ಯರ್ (Sanya Iyer) ಕನ್ನಡ ಕಿರುತೆರೆಗೆ ಬಲು ಚಿರಪರಿಚಿತವಾದ ಮುಖ. ಯಾಕಂದ್ರೆ ಪುಟ್ಟ ಗೌರಿಯ ಮದುವೆ ಸೀರಿಯಲ್ ನಲ್ಲಿ ಪುಟ್ಟ ಗೌರಿಯಾಗಿ, ಮುದ್ದಾಗಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದರು ಈ ಬಾಲ ನಟಿ. ನಂತರ ಜನರಿಗೆ ಹತ್ತಿರಾವಾಗಿದ್ದು ಬಿಗ್ ಬಾಸ್ ಮೂಲಕ. 
 

26

ಬಿಗ್ ಬಾಸ್ ನ ಮೊದಲ ಒಟಿಟಿ ಹಾಗೂ ಬಿಗ್ ಬಾಸ್ ಸೀಸನ್ 9 (Bigg Boss Season 9) ರಲ್ಲಿ ಸ್ಪರ್ಧಿಸಿ, ತಮ್ಮ ಸ್ಟೈಲ್ ಸೌಂದರ್ಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದರು ಸಾನ್ಯಾ ಅಯ್ಯರ್. ಸಾನ್ಯಾ ಹಾಗೂ ರೂಪೇಶ್ ಶೆಟ್ಟಿ ಜೋಡಿ ಕೂಡ ಜನಪ್ರಿಯತೆ ಪಡೆದಿತ್ತು. 
 

36

ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ ಸಾನ್ಯಾ ಅಯ್ಯರ್ ಗೆ ಹೊಸ ಸಿನಿಮಾದಲ್ಲಿ ನಟಿಸುವ ಬಹುದೊಡ್ಡ ಅವಕಾಶ ಕೂಡ ಸಿಕ್ಕಿತ್ತು. ಇಂದ್ರಜಿತ್ ಲಂಕೇಶ್ (Indrajeet Lankesh) ನಿರ್ದೇಶನದ ಗೌರಿ ಸಿನಿಮಾದಲ್ಲಿ, ಸಮರ್ಜಿತ್ ಲಂಕೇಶ್ ಗೆ ನಾಯಕಿಯಾಗಿದ್ದು ಸಾನ್ಯಾ ಅಯ್ಯರ್. ಸಿನಿಮಾ ಬಿಡುಗಡೆಗೆ ಮುನ್ನ ಸದ್ದು ಮಾಡಿತ್ತು. ಆದರೆ ಕಥೆ ಅಷ್ಟಾಗಿ ಗಟ್ಟಿ ಇರದಿದ್ದ ಕಾರಣ ಗೆಲ್ಲುವಲ್ಲಿ ವಿಫಲವಾಗಿತ್ತು. 
 

46

ಆದರೆ ಈ ಸಿನಿಮಾ ಬಳಿಕಾ ಸಾನ್ಯಾ ಕನ್ನಡ ಚಿತ್ರರಂಗದಲ್ಲಿ ಮಿಂಚಲಿದ್ದಾರೆ ಎನ್ನುವ ಭರವಸೆ ಮಾತ್ರ ಜನರಿಗಿತ್ತು, ಆದರೆ ನಟಿ ಆಮೇಲೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಕಾರ್ಯಕ್ರಮಗಳಲ್ಲಿ, ಸೆಲೆಬ್ರಿಟಿ ಶೋಗಳಲ್ಲಿ (celebrity Show) ಕಾಣಿಸಿಕೊಳ್ಳುವ ಸಾನ್ಯಾ, ಹೊಸ ಸಿನಿಮಾ ಸುದ್ದಿ ಮಾತ್ರ ಕೊಡ್ತಾನೆ ಇಲ್ಲ. 
 

56

ಸಿನಿಮಾ, ನಟನೆಯಿಂದ ದೂರ ಇದ್ದರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಾನ್ಯಾ, ಹೆಚ್ಚಾಗಿ ತಮ್ಮ ಫೋಟೊ ಶೂಟ್, ಅಮ್ಮನ ಜೊತೆಗಿನ ಟ್ರಾವೆಲ್ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. 
 

66

ಕಡು ಹಸಿರು ಬಣ್ಣದ ಲಾಂಗ್ ಸ್ಕರ್ಟ್ ಮತ್ತು ಸ್ಲೀವ್ ಲೆಸ್ ಬ್ಲೌಸ್ ಧರಿಸಿ  ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದು, ಇದರ ಜೊತೆಗೆ Giving you something to dream about! ಎಂದು ಬರೆದಿದ್ದಾರೆ. ಸಾನ್ಯಾ ಈ ಫೋಟೊ ನೋಡಿದ್ರೆ, ಪಡ್ಡೆಗಳ ಕನಸಿನಲ್ಲಿ ಆಕೆ ಬರೋದು ಗ್ಯಾರಂಟಿ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಟಿ

Latest Videos
Recommended Stories
Recommended image1
'ಅಗಸ್ತ್ಯ ವೇದಾಂತ್'… ಮಗನಿಗೆ ಮುದ್ದಾದ ಹೆಸರನ್ನಿಟ್ಟ ನಟಿ Rashmi Prabhakar… ನಾಮಕರಣ Photos
Recommended image2
ಶೀಘ್ರದಲ್ಲಿ ಅಂತ್ಯವಾಗಲಿರೋ Colors Kannada Serial ಯಾವುದು?; ಆ ಜಾಗಕ್ಕೆ ಹೊಸ ಧಾರಾವಾಹಿ ಎಂಟ್ರಿ!
Recommended image3
ಕೃಷ್ಣ-ರುಕ್ಕು ಪಯಣಕ್ಕೆ ಮುಹೂರ್ತ; ಸೀರಿಯಲ್ ಆರಂಭಕ್ಕೂ ಮೊದಲೇ ನವೀನ್ ಸಜ್ಜು ಪಾತ್ರ ಮುಕ್ತಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved