'ಮಜಾ ಭಾರತ' ಖ್ಯಾತಿಯ ಚಂದ್ರಪ್ರಭ, "ವೃಷಭ ನಿಲಯ" ಎಂಬ ಹೊಸ ಡುಪ್ಲೆಕ್ಸ್ ಮನೆಗೆ ಗೃಹಪ್ರವೇಶ ಮಾಡಿದ್ದಾರೆ. ಚಿತ್ರರಂಗದ ಗಣ್ಯರು ಶುಭ ಹಾರೈಸಿದ್ದಾರೆ. ಪತ್ನಿ ಭಾರತಿ ಪ್ರಿಯ ಜೊತೆಗೆ ಸುಖಜೀವನ ನಡೆಸುತ್ತಿರುವ ಚಂದ್ರಪ್ರಭ, ರಿಯಾಲಿಟಿ ಶೋ, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗಾರೆ ಕೆಲಸ ಮಾಡಿ, ಸೆಕ್ಯುರಿಟಿ ಗಾರ್ಡ್ ಆಗಿದ್ದ ಚಂದ್ರಪ್ರಭ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.

ಗಾರೆ ಕೆಲಸ ಮಾಡುತ್ತಿದ್ದ ಚಂದ್ರಪ್ರಭ ಅವರು ʼಮಜಾ ಭಾರತʼ, ʼಗಿಚ್ಚಿ ಗಿಲಿಗಿಲಿʼ, ʼಮಜಾ ಟಾಕೀಸ್ʼ ಶೋ ಮೂಲಕ ಹೆಸರು ಮಾಡಿ, ಈಗ ಎಲ್ಲರೂ ನಿಬ್ಬೆರಗು ಆಗುವಂತೆ ಮನೆ ಕಟ್ಟಿದ್ದಾರೆ. ಹೌದು, ಚಂದ್ರಪ್ರಭ ಅವರು ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದು, ಚಿತ್ರರಂಗದ ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ. 

ಭವ್ಯವಾದ ಮನೆ! 
ಭಾರತಿ ಪ್ರಿಯ ಎನ್ನುವವರ ಜೊತೆ ಚಂದ್ರಪ್ರಭ ಮದುವೆಯಾಗಿದ್ದು, ಡುಪ್ಲೆಕ್ಸ್‌ ಮನೆ ಕಟ್ಟಿಸಿದ್ದಾರೆ. ಹೊಸ ಮನೆಯ ವಿಡಿಯೋ ಭಾರೀ ವೈರಲ್‌ ಆಗ್ತಿದೆ. ವೃಷಭ ನಿಲಯ ಎಂದು ಹೊಸ ಮನೆಗೆ ಹೆಸರಿಟ್ಟಿದ್ದಾರೆ. ವಿನೋದ್‌ ಗೊಬ್ರಗಾಲ, ರಾಘವೇಂದ್ರ, ಕೆಂಡಸಂಪಿಗೆ ಧಾರಾವಾಹಿ ನಟಿ ಐಶ್ವರ್ಯ ಮುಂತಾದವರು ಗೃಹ ಪ್ರವೇಶಕ್ಕೆ ಬಂದು ಶುಭ ಹಾರೈಸಿದ್ದಾರೆ. ಇನ್ನು ಮನೆಯಂತೂ ಭವ್ಯವಾಗಿ, ವಿಶಾಲವಾಗಿದೆ. ಅಷ್ಟೇ ಅಲ್ಲದೆ ಮಾಡರ್ನ್‌ ಮಾದರಿಯಲ್ಲಿ ಮನೆ ಕಟ್ಟಿಸಲಾಗಿದೆ. ಬೆಂಗಳೂರಿನಲ್ಲೋ ಅಥವಾ ಊರಿನಲ್ಲಿ ಮನೆ ಕಟ್ಟಿಸಿದ್ದಾರಾ ಎಂಬ ಬಗ್ಗೆ ಮಾಹಿತಿ ಇಲ್ಲ. 

ಭಾರತಿ-ಚಂದ್ರಪ್ರಭ ಮದುವೆ
ಚಂದ್ರಪ್ರಭ ಹಾಗೂ ಭಾರತಿ ಪ್ರಿಯ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಮಧ್ಯೆ ಹೆಚ್ಚಿನ ವಯಸ್ಸಿನ ಅಂತರ ಇದೆ ಎನ್ನಲಾಗಿದೆ. ಆರಂಭದಲ್ಲಿ ಭಾರತಿ ಮನೆಯವರು ಈ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ ಎನ್ನಲಾಗಿದೆ. ಈಗ ಎಲ್ಲರೂ ಖುಷಿಯಿಂದ ಬದುಕುತ್ತಿದ್ದಾರೆ. ಭಾರತಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದು, ರೀಲ್ಸ್‌ ಅಪ್‌ಲೋಡ್‌ ಮಾಡುತ್ತಿರುತ್ತಾರೆ.

ಮಗ ಓದಲಿಲ್ಲ ಎಂಬ ಬೇಸರ! 
ಚಂದ್ರಪ್ರಭರನ್ನು ಓದಿಸಬೇಕು ಅಂತ ಅಪ್ಪ-ಅಮ್ಮ ಆಸೆಪಟ್ಟಿದ್ದರು. ಆದರೆ ಚಂದ್ರಪ್ರಭ ಅವರು ಹತ್ತನೇ ಕ್ಲಾಸ್‌ ಫೇಲ್‌ ಆಗಿದ್ದರು, ಆಮೇಲೆ ಅವರು ತಂದೆ ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದರು. ಮಗ ಓದಲಿಲ್ಲ ಅಂತ ಅವರ ತಂದೆ-ತಾಯಿಗೆ ಬೇಸರ ಆಗಿತ್ತು. ಓದಿನಲ್ಲಿ ಚಂದ್ರಪ್ರಭಗೆ ಆಸಕ್ತಿ ಇರಲಿಲ್ಲ, ಈಗ ಓದಬೇಕು ಎಂದು ಆಸೆಯಾಗ್ತಿದೆ ಎಂದು ಚಂದ್ರಪ್ರಭ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸೆಕ್ಯುರಿಟಿ ಕೆಲಸ ಮಾಡ್ತಿದ್ದ ಚಂದ್ರಪ್ರಭ
ಶ್ರೀರಂಗಪಟ್ಟಣದ ಹೋಟೆಲ್‌ವೊಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾಗ ಥಿಯೇಟರ್‌ನಲ್ಲಿ ಒಮ್ಮೆ ದರ್ಶನ್‌ ಸಿನಿಮಾ ನೋಡಿಕೊಂಡು ಬಂದಿದ್ದರು. ಅಲ್ಲೇ ಇದ್ದ ಪಾರ್ಕ್‌ನಲ್ಲಿ ಕೂಗಾಟ, ಚೀರಾಟ ಕೇಳಿಸ್ತಿತ್ತು. ಅಲ್ಲಿ ಏನಾಯ್ತು ಎಂದು ನೋಡಲು ಹೋದಾಗ ರಂಗಾಯಣ ಅಂತ ಸಂಸ್ಥೆ ಇದೆ, ಆಡಿಷನ್‌ನಲ್ಲಿ ಆಯ್ಕೆಯಾದವರಿಗೆ ನಟನೆ ತರಬೇತಿ ಕೊಡಲಾಗುತ್ತದೆ ಎಂದು ಹೇಳಿದ್ದರು. 80ಜನರಲ್ಲಿ 15 ಜನರನ್ನು ಆಯ್ಕೆ ಮಾಡಿದ್ದರು, ಅವರಲ್ಲಿ ನಾನು ಒಬ್ಬನಾದೆ. ಟಿವಿಯಲ್ಲಿ ಬರಬೇಕು ಎಂಬ ಆಸೆ ಅಲ್ಲಿಂದಲೇ ಶುರುವಾಯ್ತು. ಆಮೇಲೆ ʼಮಜಾ ಭಾರತʼ ಎನ್ನುವ ಶೋ ಬರ್ತಿದೆ, ಆಡಿಷನಲ್‌ ಕೊಡಬಹುದು ಎಂಬ ಮಾತು ಬಂತು. ಅಲ್ಲಿ ಆಯ್ಕೆಯಾಗಿ, ಇಲ್ಲಿಯವರೆಗೆ ಬಂದು ನಿಂತಿದೆ. 

ನಟನೆಯಲ್ಲಿ ಬ್ಯುಸಿ ಆದ ನಟ!
ಚಂದ್ರಪ್ರಭ ಅವರು ಈಗ ರಿಯಾಲಿಟಿ ಶೋ, ಸಿನಿಮಾಗಳು, ನಾಟಕಗಳು ಎಂದು ಬ್ಯುಸಿಯಾಗಿದ್ದಾರೆ. ಈಗ ಅವರು ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಮಜಾ ಭಾರತ ಶೋ ಖ್ಯಾತಿಯ ಮಂಜು ಪಾವಗಡ ಅವರು ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದಾರೆ, ಅಂದಹಾಗೆ ಶಿವು ಕೂಡ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ರಾಘವೇಂದ್ರ ಕೂಡ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಇನ್ನು ಕೆಲ ಕಲಾವಿದರು ಕಾರ್‌ ಖರೀದಿಸಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಸೆಟಲ್‌ ಆಗುತ್ತಿದ್ದಾರೆ. ರಿಯಾಲಿಟಿ ಶೋಗಳನ್ನೇ ಆದಾಯ ಮಾಡಿಕೊಂಡು, ಜೀವನದಲ್ಲಿ ಒಳ್ಳೆಯ ಹಂತ ಪ್ರವೇಶಿಸುತ್ತಿರುವ ಕಲಾವಿದರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ. 

View post on Instagram