Asianet Suvarna News Asianet Suvarna News

ಬಿಗ್​ಬಾಸ್​ ಈಶಾನಿ ಇಂಗ್ಲಿಷ್​ಗೆ ಹಾಸ್ಯನಟ ಚಂದ್ರಪ್ರಭ ಸುಸ್ತೋ ಸುಸ್ತು! ನಗುವಿನ ಅಲೆಯಲ್ಲಿ ವೇದಿಕೆ...

ಬಿಗ್​ಬಾಸ್​ ಖ್ಯಾತಿಯ ಮಾಡೆಲ್​ ಈಶಾನಿ ಇಂಗ್ಲಿಷ್​ನಲ್ಲಿ ಮಾತನಾಡಿದ್ದು, ಅದಕ್ಕೆ ಹಾಸ್ಯನಟ ಚಂದ್ರಪ್ರಭ ಕಾಮಿಡಿಯ ಉತ್ತರ ಕೊಟ್ಟಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ. 
 

Bigg Boss fame Ishani spoke in English and comedian Chandraprabha gave a comedy answer suc
Author
First Published Feb 4, 2024, 4:09 PM IST

ಕಳೆದ ಕೆಲ ವಾರಗಳಿಂದ ಎಲ್ಲೋ ಗೋಜಪ್ಪ ನಿನ್ನ ಅರಮನೆ... ಎಂಬ ಹಾಡು ಮೀಮ್ಸ್​ಗಳಲ್ಲಿ ಕಾಣಸಿಗುತ್ತಿದೆ. ಇದಕ್ಕೆ ಕಾರಣ ಬಿಗ್​ಬಾಸ್​ ಕನ್ನಡ ಸೀಸನ್​ 7ನಲ್ಲಿ ವೈಲ್ಡ್​ ಕಾರ್ಡ್​ ಎಂಟ್ರಿಯಾಗಿ ಹೋಗಿದ್ದ ರ್ಯಾಪರ್ ಊರ್ಮಿಳಾ ಈಶಾನಿ. 2005 ರಲ್ಲಿ ತೆರೆಗೆ ಬಂದ ಬ್ಲಾಕ್ ಬಸ್ಟರ್‌ ‘ಜೋಗಿ’ ಸಿನಿಮಾದಲ್ಲಿ ಆಧುನಿಕ ಟಚ್​ ಕೊಟ್ಟು ಹೇಳಲಾಗಿದ್ದ ಸುಪ್ರಸಿದ್ಧ ಜನಪದ ಗೀತೆ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ..’ ಹಾಡನ್ನು ಕನ್ನಡ ಸರಿಯಾಗಿ ತಿಳಿಯದ ಈಶಾನಿಯವರು ಎಡವಟ್ಟು ಮಾಡಿ ಟ್ರೋಲ್​ ಕೂಡ ಆಗಿದ್ದರು. ಆದರೆ ಕೊನೆಗೆ ಗೋಜಪ್ಪ ಎಂದೇ ಟ್ರೆಂಡಿಂಗ್​ ಕೂಡ ಆಯಿತು.  ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ಪರ್ಧಿಗಳಿಗೆ ‘ಬಿಗ್ ಬಾಸ್‌’ ಮೋಜಿನ ಚಟುವಟಿಕೆ ನೀಡಿದ್ದರು. ಇದರ ಅನುಸಾರ… ‘ಬಿಗ್ ಬಾಸ್‌’ ಪ್ಲೇ ಮಾಡುವ ಹಾಡನ್ನು.. ಬಲೂನ್‌ನಲ್ಲಿ ತುಂಬಿರುವ ಹೀಲಿಯಂ ಅನಿಲ ಸೇವಿಸಿ ಸ್ಪರ್ಧಿಗಳು ಹಾಡಬೇಕಿತ್ತು.

ಆ ಸಂದರ್ಭದಲ್ಲಿ,  ಎಲ್ಲೋ ಜೋಗಪ್ಪ ನಿನ್ನ ಅರಮನೆ..’ ಹಾಡನ್ನ ‘ಬಿಗ್ ಬಾಸ್‌’ ಪ್ಲೇ ಮಾಡಿದ್ದರು. ಹೀಲಿಯಂ ಅನಿಲ ಸೇವಿಸಿ ಹಾಡುವಾಗ ‘ಎಲ್ಲೋ ಗೋಜಪ್ಪ ನಿನ್ನ ಅರಮನೆ..’ ಎಂದು ಹಾಡಿದ್ದರು  ಈಶಾನಿ.  ಇದು ಸಕತ್​ ಟ್ರೋಲ್​ ಆಗಿತ್ತು. ಅಷ್ಟಕ್ಕೂ ಗಾಯಕಿ ಈಶಾನಿ ಹುಟ್ಟಿದ್ದು ಮೈಸೂರಿನಲ್ಲಿ. ಆದರೆ ಅವರ ಮುಂದಿನ ಜೀವನ ಬೆಂಗಳೂರು, ದುಬೈ ಹಾಗೂ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು.  ಪಾಪ್, ಹಿಪ್ ಹಾಪ್, ರಾಪ್ ಸಂಗೀತವನ್ನ ಫ್ಯೂಶನ್ ಮಾಡಿ ತಮ್ಮದೇ ಶೈಲಿಯಲ್ಲಿ ಹಾಡುಗಳನ್ನ ಹಾಡುತ್ತಾರೆ ಇವರು. ಇದುವರೆಗೂ 17 ಇಂಗ್ಲೀಷ್ ಆಲ್ಬಂ, 3 ಕನ್ನಡ ಆಲ್ಬಂ ಮಾಡಿದ್ದಾರೆ ಈಶಾನಿ. ಇಂತಿಪ್ಪ ಈಶಾನಿ ಜೋಗಪ್ಪ ಹೋಗಿ ಗೋಜಪ್ಪ ಮಾಡಿದ್ರು.

ಎಲ್ಲೋ ಗೋಜಪ್ಪಾ ಸಾಕಪ್ಪಾ ಎಂದ ಇಶಾನಿ: ಶಿವಣ್ಣ ಕ್ಷಮಿಸಿಬಿಡಿ ಎನ್ನುತ್ತಲೇ ಮತ್ತೊಮ್ಮೆ ಹಾಡಿದ್ರು ಕೇಳಿ...

ಈ ಬಗ್ಗೆ ಇದೀಗ ಈಶಾನಿಯವರು ಜೋಗಿ ಚಿತ್ರದ ನಾಯಕ ಶಿವರಾಜ್​ ಕುಮಾರ್​ ಅವರ ಕ್ಷಮೆ ಕೋರಿದ್ದಾರೆ. ಕಲರ್ಸ್​ ಕನ್ನಡ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು, ಈ ಹಾಡನ್ನು ಮತ್ತೊಮ್ಮೆ ಸರಿಯಾಗಿ ಹಾಡುವ ಮೂಲಕ ತಪ್ಪು ಹಾಡಿದ್ದಕ್ಕೆ ಕ್ಷಮೆ ಕೋರಿದರು. ಗೋಜಪ್ಪಾ ಸಾಕಪ್ಪ ಎಂದರು. ನಾನು ಕನ್ನಡದ ಹುಡುಗಿ. ಬೆಂಗಳೂರಿನಲ್ಲಿ ಏನಾದರೂ ದೊಡ್ಡದಾಗಿ ಮಾಡಬೇಕು ಎಂದುಕೊಂಡಿದ್ದೇನೆ. ‘ಬಿಗ್ ಬಾಸ್‌’ಗೆ ಬರಲೇಬೇಕು. ಏನಾದರೂ ಡಿಫರೆಂಟ್ ಆಗಿ ಪ್ರೂವ್ ಮಾಡಲೇಬೇಕು ಎಂದುಕೊಂಡಿದ್ದೇನೆ ಎಂದು ‘ಬಿಗ್ ಬಾಸ್’ ವೇದಿಕೆ ಮೇಲೆ ಈಶಾನಿ ಹೇಳಿದ್ದರು. ನಂತರ ಬಹುಬೇಗನೆ ಎಲಿಮಿನೇಟ್​ ಆಗಿ ಹೊರಕ್ಕೆ ಬಂದರು.  

ಇದೀಗ ಗಿಚ್ಚಿ ಗಿಲಿಗಿಲಿ ವೇದಿಕೆಯ ಮೇಲೆ ಈಶಾನಿ ಕಾಣಿಸಿಕೊಂಡಿದ್ದಾರೆ. ಹೇಳಿ-ಕೇಳಿ ಇಂಗ್ಲಿಷ್​ ಬೆಡಗಿ ಈಕೆ. ಇನ್ನು ಈಕೆ ಮಾತನಾಡುವ ಇಂಗ್ಲಿಷ್​ ಅಪ್ಪಟ ಕನ್ನಡಿಗರಿಗೆ ತಿಳಿದುಕೊಳ್ಳುವುದು ಸುಸ್ತೋ ಸುಸ್ತು. ಇದೇ ರೀತಿ ಗಿಚ್ಚಿ ಗಿಲಿಗಿಲಿ ವೇದಿಕೆಯ ಮೇಲೂ ಆಗಿದೆ. ಹಾಸ್ಯ ನಟ ಚಂದ್ರಪ್ರಭ ಅವರಿಗೆ ಕೆಲವೊಂದು ಇಂಗ್ಲಿಷ್​ ವಾಕ್ಯ ಹೇಳಿ ಕನ್ನಡದಲ್ಲಿ ಹೇಳುವಂತೆ ನಿರೂಪಕ ಕೇಳಿದ್ದಾರೆ. ಆದರೆ ಆ ಇಂಗ್ಲಿಷ್​ಗೆ ಚಂದ್ರಪ್ರಭ ಅವರು ತಮ್ಮದೇ ಆದ ರೀತಿಯಲ್ಲಿ ತರ್ಜುಮೆ ಮಾಡುವ ಮೂಲಕ ಎಲ್ಲರನ್ನೂ ನಕ್ಕು ನಗಿಸಿದ್ದಾರೆ. ಈಶಾನಿ ಅವರ ಹೈಫೈ ಇಂಗ್ಲಿಷ್​ಗೆ ಎಲ್ಲರೂ ಬೇಸ್ತು ಬಿದ್ದು, ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿದೆ. 

ಬಿಗ್​ಬಾಸ್​ ಅಂದ್ರೆ ಪ್ರತಾಪ್​ಗೆ ಹೀಗಂತೆ! ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಡ್ರೋನ್​ ಹೇಳಿದ್ದೇನು?

 

 

 

 

 

View this post on Instagram

 

 

 

 

 

 

 

 

 

 

 

A post shared by Colors Kannada Official (@colorskannadaofficial)

Follow Us:
Download App:
  • android
  • ios