As spreading gossip, Majaa Bharatha fame artist Chandraprabha enters in Bigg Boss kannada Season 10. ಮಜಾ ಭಾರತ ಖ್ಯಾತಿಯ ನಟ ಬಿಗ್ ಬಾಸ್ ಕನ್ನಡ ಸೀಸನ್ -10 ಗೆ ಪ್ರವೇಶ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಮಜಾ ಭಾರತ ಖ್ಯಾತಿಯ ನಟ ಚಂದ್ರಪ್ರಭ ಮುಂಬರುವ (8 ಅಕ್ಟೋಬರ್ 2023) ಬಿಗ್ ಬಾಸ್ ಸೀಸನ್ 10ಗೆ ಪ್ರವೇಶ ಪಡೆಯಲಿದ್ದಾರೆ ಎಂಬ ಸುದ್ದು ಹರಡಿದೆ. ನಟ ಚಂದ್ರಪ್ರಭ ಮಜಾ ಭಾರತ ಶೋನಲ್ಲಿ ಸಾಕಷ್ಟು ಮಿಂಚಿ ಕರ್ನಾಟಕದ ಕಿರುತೆರೆ ವೀಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಸ್ಥಾನ ಪಡೆದಿರುವ ಚಂದ್ರಪ್ರಭ, ತಮ್ಮದೇ ಅದ ಅಭಿಮಾನ ವರ್ಗ ಹೊಂದಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
'ಗಿಚ್ಚಿ ಗಿಲಿಗಿಲಿ' ಹಾಗೂ 'ಮಜಾ ಭಾರತ' ಶೋಗಳಲ್ಲಿ ಮಿಂಚಿರುವ ನಟ ಚಂದ್ರಪ್ರಭ ಕಾಂಟ್ರೋವರ್ಸಿಗಳನ್ನು ಚೆನ್ನಾಗಿ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಮನೆ ಎಂದರೆ ಅಲ್ಲಿ ಕಾಂಟ್ರಿವರ್ಸಿಗೆ ಜಾಗ ಇದ್ದೇ ಇರುತ್ತದೆ ಎಂಬುದು ಬಹಳಷ್ಟು ಜನರ ಮಾತು. ಕೆಲವರಂತೂ ಈ ಶೋವನ್ನು ಕಾಂಟ್ರೋವರ್ಸಿ ಶೋ ಎಂದೇ ಕರೆಯುತ್ತಾರೆ. ಇಂತಹ ಶೋಗೆ ಪ್ರವೇಶ ಪಡೆಯಬಲ್ಲ ಅರ್ಹತೆ ಖಂಡಿತವಾಗಿಯೂ ಚಂದ್ರಪ್ರಭಗೆ ಇದೆ ಎಂಬ ಮಾತು ಸಾಕಷ್ಟು ಕೇಳಿಬರುತ್ತಿದೆ.
ಕಣ್ಣು ಮುಚ್ಚಿ 'ಬಾರಮ್ಮ' ಎಂದು ಕರೆದ ವೈಷ್ಣವ್ 'ಲಕ್ಷ್ಮೀ'ಗೆ ತೋರಿಸಿದ್ದೇನು ನೋಡಿ!
ಇನ್ನೇನು ಅಕ್ಟೋಬರ್ 8ಕ್ಕೆ (08 ಅಕ್ಟೋಬರ್ 2023) ಬಿಗ್ ಬಾಸ್ ಸೀಸನ್ -10 ಶುರುವಾಗಲಿದೆ. ಬಿಗ್ ಬಾಸ್ ಮನೆಯಲ್ಲಿ ಒಟ್ಟು 16 ಸ್ಪರ್ಧಿಗಳು ಇರಲಿದ್ದು, ಅವರಲ್ಲಿ ನಟ ಚಂದ್ರಪ್ರಭ ಕೂಡ ಒಬ್ಬರಾಗಿರಬಹುದು. ಈ ನಟನ ಹೆಸರು ಪೈನಲ್ ಆಗಿರುವ ಬಿಗ್ ಬಾಸ್ ಸೀಸನ್-10 ನ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಇದೆ ಎಂಬ ಸುದ್ದಿಯಿದೆ. ಇದು ಅಧಿಕೃತ ಮಾಹಿತಿ ಅಲ್ಲ, ಆದರೆ ಸುದ್ದಿಯಂತೂ ಹರಿದಾಡುತ್ತಿದೆ. ಸುದ್ದಿಯ ಮೂಲ ಗೊತ್ತಿಲ್ಲದಿದ್ದರೂ ಸುದ್ದಿಯಂತೂ ಹಬ್ಬಿದೆ. ಇನ್ನೇನು ಸ್ವಲ್ಪ ದಿನವಷ್ಟೇ ಬಾಕಿಯಿದೆ ಬಿಗ್ ಬಾಸ್ ಪ್ರಸಾರಕ್ಕೆ. ನೋಡೋಣ, ಯಾರ್ಯಾರು ಬರುತ್ತಾರೆ ಎಂದು!
ಬಿಗ್ ಬಾಸ್ ಕನ್ನಡ ಶೋ ವೀಕ್ಷಿಸಲು ಹಲವು ದಾರಿಗಳಿವೆ; ಚಿಂತೆ ಬಿಟ್ಟು ಬಿಡಿ..!
