Asianet Suvarna News Asianet Suvarna News

ಬಿಗ್ ಬಾಸ್ ಏನೋ ಒಂದಕ್ಕೆ ಭಾರೀ ಜಟಾಪಟಿ; ಏನಾಗ್ತಿದೆ ಅಲ್ಲಿ ಕಿತಾಪತಿ!

ಯಾರ ಬಳಿ ಇರುವ ಹಣವನ್ನು ದಿನಸಿಗೆ ವ್ಯವಿಸಬೇಕು ಎಂಬಲ್ಲಿ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ‘ಲೀಡರ್‍ಗಳ ಬಳಿ ಜಾಸ್ತಿ ಹಣವಿದೆ’ ಎಂದು ವಿನಯ್‌ ಹೇಳಿದ್ದಾರೆ.

Luxury purchases in Bigg Boss Kannada season 10 house srb
Author
First Published Dec 22, 2023, 12:30 PM IST

ಈ ವಾರ ಬಿಗ್‌ಬಾಸ್ ಮನೆಯಲ್ಲಿ ವ್ಯವಹಾರದ್ದೇ ಮೇನಿಯಾ. ಖರೀದಿ ಮಾರಾಟದ ವ್ಯವಹಾರವೀಗ ಹೊಸದೊಂದು ಮಜಲು ತಲುಪಿದೆ. ಅದೇನು ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಇಷ್ಟು ದಿನ ವ್ಯಕ್ತಿಗಳನ್ನು ಖರೀದಿಸುವ, ಟಾಸ್ಕ್‌ಗಳ ಮೂಲಕ ಹಣ ಸಂಪಾದಿಸುವ ಚಟುವಟಿಕೆಯಲ್ಲಿ ಮುಳುಗಿಹೋಗಿದ್ದ ಸದಸ್ಯರಿಗೆ ಬಿಗ್‌ಬಾಸ್‌ ಹೊಸದೊಂದು ಅವಕಾಶ ನೀಡಿದ್ದಾರೆ. ಅದು ಲಕ್ಷುರಿ ಖರೀದಿಸುವ ಅವಕಾಶ. ಆದರೆ ಮನೆಯ ಸದಸ್ಯರು ಅವರ ಬಳಿ ಇರುವ ಹಣದಿಂದ ದಿನಸಿಗಳನ್ನು ಖರೀದಿಸಬೇಕು. 

ಭಾಗ್ಯಾಗೆ ಸಂಕಟ, ತಾಂಡವ್-ಶ್ರೇಷ್ಠಾಗೆ ಶಾಕ್; ಸುಂದ್ರಿಗೆ ಭಾರೀ ಖುಷಿ!

ಯಾರ ಬಳಿ ಇರುವ ಹಣವನ್ನು ದಿನಸಿಗೆ ವ್ಯವಿಸಬೇಕು ಎಂಬಲ್ಲಿ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ‘ಲೀಡರ್‍ಗಳ ಬಳಿ ಜಾಸ್ತಿ ಹಣವಿದೆ’ ಎಂದು ವಿನಯ್‌ ಹೇಳಿದ್ದಾರೆ. ಸಂಗೀತಾ, ‘ಅರ್ಧ ಅರ್ಧ ಶೇರ್ ಮಾಡಿಕೊಳ್ಳೋಣ’ ಎಂದೂ ಹೇಳಿದ್ದಾರೆ. ಆದರೆ ತನಿಷಾ ಅದಕ್ಕೆ ಒಪ್ಪಿಲ್ಲ. ‘ದಿನಸಿ ಬೇಕಾಗಿರುವುದು ಮನೆಯ ಎಲ್ಲ ಸದಸ್ಯರಿಗೆ. ಹಾಗಾಗಿ ಎಲ್ಲರೂ ಹಣ ವ್ಯಯಿಸಬೇಕು’ ಎಂಬುದು ಅವರ ವಾದ. ಈ ಹೊತ್ತಿನಲ್ಲಿ ಮಧ್ಯಪ್ರವೇಶಿಸಿದ ನಮ್ರತಾ ವಿರುದ್ಧವೂ ತನಿಷಾ ಹರಿಹಾಯ್ದಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. 

ಸಲಾರ್ ಸಿನಿಮಾ ಉಗ್ರಂ-ಕೆಜಿಎಫ್ ರೀತಿಯೇ ಇದೆ, ಟೀಕೆಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ; ಪ್ರಶಾಂತ್ ನೀಲ್

ಮನೆಯ ಸದಸ್ಯರ ಭಿನ್ನಾಭಿಪ್ರಾಯದಲ್ಲಿ ಲಕ್ಷುರಿ ಬಜೆಟ್ ಕಳೆದುಕೊಳ್ಳುತ್ತಾರಾ? ಯಾರ ಹಣದಲ್ಲಿ ಲಕ್ಷುರಿ ಮನೆಗೆ ಬರುತ್ತದೆ? ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು. 

ಫ್ಯಾನ್ ಕ್ಷಮೆ ಕೇಳಿ ಎಂದು ಬಾಲಿವುಡ್ ನಟ ಗೋವಿಂದಾಗೆ ಸುಪ್ರಿಂ ಕೋರ್ಟ್‌ ಆದೇಶ!

Follow Us:
Download App:
  • android
  • ios