ಫ್ಯಾನ್ ಕ್ಷಮೆ ಕೇಳಿ ಎಂದು ಬಾಲಿವುಡ್ ನಟ ಗೋವಿಂದಾಗೆ ಸುಪ್ರಿಂ ಕೋರ್ಟ್‌ ಆದೇಶ!

ನಟ ಗೊವಿಂದ ಅವರು ಹಲವು ದಶಕಗಳ ಹಿಂದೆ ಬಾಲಿವುಡ್‌ನಲ್ಲಿ ಸ್ಟಾರ್ ನಟ. ಕೂಲಿ ನಂ 1 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ಗೋವಿಂದ ಇತ್ತೀಚೆಗೆ ಸಿನಿಮಾ ನಟನೆಯನ್ನು ಕಡಿಮೆ ಮಾಡಿದ್ದಾರೆ.

Supreme court asks to apologize bollywood actor Govinda to fan srb

ಬಾಲಿವುಡ್ ನಟ ಗೋವಿಂದರಿಗೆ ಸುಪ್ರಿಂ ಕೋರ್ಟ್ ಛೀ ಮಾರಿ ಹಾಕಿದೆ. ಅಭಿಮಾನಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದ ಹಿನ್ನೆಲೆ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇನ್ನೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ದುರ್ವರ್ತನೆ ತೋರಬಾರದು ಎಂದು ಹೇಳಿದೆ. ನೀವು ಕಪಾಳಮೋಕ್ಷ ಮಾಡಿರುವ ಅಭಿಮಾನಿಯ ಬಳಿ ಕ್ಷಮೆ ಯಾಚಿಸಿ ಎಂದೂ ಸುಪ್ರಿಂ ಕೋರ್ಟ್‌ ಆದೇಶ ನೀಡಿದೆ. 

ನಟ ಗೋವಿಂದ ಅವರು ಸಾರ್ವಜನಿಕ ವ್ಯಕ್ತಿಯಾದ್ದರಿಂದ ಇಂತಹ ಘಟನೆಗಳಿಗೆ ಕಾರಣವಾಗುವುದು ಅಥವಾ ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ಸಿನಿಮಾದಲ್ಲಿ ಮಾಡುವುದನ್ನು ನಿಜಜೀವನದಲ್ಲಿ ಮಾಡುವುದು ಯಾವುದೇ ಕಾರಣಕ್ಕೂ ಸರಿಯಾದ ಕ್ರಮವಲ್ಲ ಎಂದು ಸುಪ್ರಿಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ನೀವು ಕಪಾಳ ಮೋಕ್ಷ ಮಾಡಿದ ಅಭಿಮಾನಿಯ ಕ್ಷಮೆ ಕೋರಿ ಪ್ರಕರಣವನ್ನು ನ್ಯಾಯಾಲಯದ ಹೊರಗಡೆ ಇತ್ಯರ್ಥಪಡಿಸಿಕೊಳ್ಳಿ ಎಂದು ಕೋರ್ಟ್‌ ನಟ ಗೋವಿಂದ ಅವರಿಗೆ ಸಲಹೆ ನೀಡಿದೆ. 

ಸಕ್ಸಸ್ ಮಂತ್ರ ಈಗ ಬದಲಾಗಿದೆ, ನನಗೀಗ ಜ್ಞಾನೋದಯವಾಗಿದೆ; ನಟಿ ಸಮಂತಾ ಮುತ್ತಿನಂಥ ಮಾತು!

ಅಂದಹಾಗೆ, ನಟ ಗೊವಿಂದ ಅವರು ಹಲವು ದಶಕಗಳ ಹಿಂದೆ ಬಾಲಿವುಡ್‌ನಲ್ಲಿ ಸ್ಟಾರ್ ನಟ. ಕೂಲಿ ನಂ 1 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ಗೋವಿಂದ ಇತ್ತೀಚೆಗೆ ಸಿನಿಮಾ ನಟನೆಯನ್ನು ಕಡಿಮೆ ಮಾಡಿದ್ದಾರೆ. ಅಂದಿನ ಕಾಲದಲ್ಲಿ ಗೋವಿಂದನ ಕಾಮಿಡಿ ಸಿನಿಮಾಗಳು ಹಾಗೂ ಡಾನ್ಸ್‌ಗಳು ಜನರನ್ನು ಹುಚ್ಚೆಬ್ಬಿಸುತ್ತಿದ್ದವು. ಈಗಲೂ ಬಾಲಿವುಡ್‌ನಲ್ಲಿ ಒಳ್ಳೆಯ ಡಾನ್ಸರ್ ಎಂದರೆ ಗೋವಿಂದನ ಹೆಸರು ಹೇಳುವವರು ತುಂಬಾ ಮಂದಿ ಇದ್ದಾರೆ. ಆ ಕಾಲದ ಎಲ್ಲಾ ಸ್ಟಾರ್ ನಟಿಯರ ಜತೆಗೂ ನಟಿಸಿದ ಖ್ಯಾತಿ ಗೋವಿಂದ ಅವರದು. 

ಶೂಟಿಂಗ್ ಸ್ಪಾಟ್‌ ಸಮಸ್ಯೆಯನ್ನು ಹ್ಯಾಂಡಲ್‌ ಮಾಡಲು ಮಹಾಮಂತ್ರ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ

ಸದ್ಯ ಗೋವಿಂದ ಅವರ ಕಪಾಳಮೋಕ್ಷ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಹೇಳಬಹುದು. ಇನ್ನು ಸುಪ್ರಿಂ ಆದೇಶದಂತೆ ನಟ ಗೋವಿಂದ ಅಭಿಮಾನಿಯ ಬಳಿ ಕ್ಷಮೆ ಕೋರಿ ತಮ್ಮ ಮೇಲಿರುವ ಪ್ರಕರಣವನ್ನು ರದ್ದು ಮಾಡಿಸಿಕೊಳ್ಳಲು ಬಯಸುತ್ತಾರೋ ಇಲ್ಲವೋ ಎಂಬುದಷ್ಟೆ ಸದ್ಯಕ್ಕೆ ಕುತೂಹಲ ಕೆರಳಿಸುತ್ತಿರುವ ಅಂಶ. 

ನಿನ್ನಣ್ಣನ್ನ ಹೇಗೆ ಕಂಟ್ರೋಲ್‌ನಲ್ಲಿ ಇಟ್ಕೊಂಡಿದೀನಿ ನೋಡು; ಅತ್ತಿಗೆ ಮಾತು ಕೇಳಿ ಪುಷ್ಪಾಗೆ ಶಾಕ್ ಆಯ್ತಾ?

Latest Videos
Follow Us:
Download App:
  • android
  • ios