Asianet Suvarna News Asianet Suvarna News

ಸಲಾರ್ ಸಿನಿಮಾ ಉಗ್ರಂ-ಕೆಜಿಎಫ್ ರೀತಿಯೇ ಇದೆ, ಟೀಕೆಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ; ಪ್ರಶಾಂತ್ ನೀಲ್

ಸೋಷಿಯಲ್ ಮೀಡಿಯಾಗಳಲ್ಲಿ, ಹೋದಲ್ಲಿ ಬಂದಲ್ಲಿ ಹಲವರು ಸಲಾರ್ ಚಿತ್ರವು ಉಗ್ರಂ ರೀಮೇಕಾ ಎಂದು ಕೇಳುತ್ತಾರೆ. ಕೆಜಿಎಫ್ ಸರಣಿಯ ಚಿತ್ರಗಳು, ಉಗ್ರಂ ರೀತಿಯಲ್ಲೇ ಸಲಾರ್ ಇದೆ ಎಂಬ ಭಾವ ಮೂಡುತ್ತಿದೆ ಎನ್ನುತ್ತಾರೆ.

I did not mind if someone says salaar is like ugramm and kgf says prashanth neel srb
Author
First Published Dec 21, 2023, 7:47 PM IST

ಪ್ರಶಾಂತ್ ನೀಲ್ ನಿರ್ದೇಶನ, ಪ್ರಭಾಸ್ ಹಾಗೂ ಪೃಥ್ವಿ ಸುಕುಮಾರನ್ ನಟನೆಯ ಸಲಾರ್ ಚಿತ್ರವು ನಾಳೆ (22 December 2023) ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ.  ಈ ಚಿತ್ರವು ಭಾರೀ ಹವಾ ಕ್ರಿಯೇಟ್ ಮಾಡಿದ್ದು, ಈ ವರ್ಷದ ಅತ್ಯಂತ ನಿರೀಕ್ಷೆಯ ಚಿತ್ರವೆಂದು ಕರೆಯಲ್ಪಟ್ಟಿದೆ. ಕನ್ನಡಿಗ ಪ್ರಶಾಂತ್ ನೀಲ್ ಈ ಮೊದಲು ನಿರ್ದೇಶನ ಮಾಡಿದ್ದ ಉಗ್ರಂ, ಕೆಜಿಎಫ್ ಹಾಗೂ ಕೆಜಿಎಫ್ 2 ಚಿತ್ರಗಳು ಸೂಪರ್ ಹಿಟ್ ದಾಖಲಿಸಿರುವ ಹಿನ್ನೆಲೆಯಲ್ಲಿ ಬಿಡುಗಡೆ ಆಗುತ್ತಿರುವ ಸಲಾರ್ ಬಗ್ಗೆ ಎಲ್ಲರಿಗೂ ಕುತೂಹಲ ಮನೆ ಮಾಡಿದೆ. 

ಸಲಾರ್ ಚಿತ್ರದ ಪ್ರಮೋಶನ್ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್, ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರು ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರೊಂದಿಗೆ ಮಾತುಕತೆ ವೇಳೆ ಹಲವು ಸಂಗತಿಗಳನ್ನು ಹೇಳಿದ್ದಾರೆ. ಅದರಲ್ಲಿ ಸಲಾರ್ ಚಿತ್ರದ ಬಗ್ಗೆ, ತಮಗೆ ಕಾಡುತ್ತಿರುವ ಭಯದ ಬಗ್ಗೆ ಮಾತನಾಡಿರುವ ಪ್ರಶಾಂತ್ ನೀಲ್, 'ಸಲಾರ್ ಪೋಸ್ಟರ್, ಟೀಸರ್ ಹಾಗೂ ಟ್ರೈಲರ್ ಉಗ್ರಂ ತರಹವೇ ಇದೆ' ಎಂಬ ಟೀಕೆ ಎದುರಿಸುತ್ತಿರುವ ಬಗ್ಗೆ ಮಾತನಾಡಿದ್ದಾರೆ. 

ಫ್ಯಾನ್ ಕ್ಷಮೆ ಕೇಳಿ ಎಂದು ಬಾಲಿವುಡ್ ನಟ ಗೋವಿಂದಾಗೆ ಸುಪ್ರಿಂ ಕೋರ್ಟ್‌ ಆದೇಶ!

ಸೋಷಿಯಲ್ ಮೀಡಿಯಾಗಳಲ್ಲಿ, ಹೋದಲ್ಲಿ ಬಂದಲ್ಲಿ ಹಲವರು ಸಲಾರ್ ಚಿತ್ರವು ಉಗ್ರಂ ರೀಮೇಕಾ ಎಂದು ಕೇಳುತ್ತಾರೆ. ಕೆಜಿಎಫ್ ಸರಣಿಯ ಚಿತ್ರಗಳು, ಉಗ್ರಂ ರೀತಿಯಲ್ಲೇ ಸಲಾರ್ ಇದೆ ಎಂಬ ಭಾವ ಮೂಡುತ್ತಿದೆ ಎನ್ನುತ್ತಾರೆ. ಪೋಸ್ಟರ್, ಟ್ರೈಲರ್ ಎಲ್ಲವೂ ಅವುಗಳನ್ನೇ ಹೋಲುತ್ತವೆ ಎಂಬ ಟೀಕೆಯನ್ನು ಕೇಳಿ ಕೇಳಿ ನನಗೆ ಸುಸ್ತಾಗಿದೆ. ಆದರೆ, ಈ  ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಸಲಾರ್ ಉಗ್ರಂ ರೀಮೇಕ್‌ ಅಂತೂ ಅಲ್ಲವೇ ಅಲ್ಲ. ಸಲಾರ್ ಬೇರೆ ರೀತಿಯ ಕಥೆಯನ್ನು ಒಳಗೊಂಡಿದೆ.

ಶೂಟಿಂಗ್ ಸ್ಪಾಟ್‌ ಸಮಸ್ಯೆಯನ್ನು ಹ್ಯಾಂಡಲ್‌ ಮಾಡಲು ಮಹಾಮಂತ್ರ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ

ನಾನು ಸಿನಿಮಾ ಮಾಡುವಾಗ ಗಣನೆಗೆ ತೆಗೆದುಕೊಳ್ಳುವುದು ನಿರ್ಮಾಪಕರನ್ನು ಮಾತ್ರ. ನನ್ನನ್ನು ನಂಬಿ ಹಣ ಹಾಕಿರುವ ನಿರ್ಮಾಪಕರಿಗೆ ಯಾವುದೇ ರೀತಿಯಲ್ಲಿ ಮೋಸ ಆಗಬಾರದು. ಜನರಿಗೆ ನಾನು ಮನರಂಜನೆ ನೀಡಬೇಕು. ಸಿನಿಮಾ ನೋಡಲು ಬಂದ ಪ್ರೇಕ್ಷಕ ನಿರಾಸೆಯಿಂದ ಹಿಂತಿರುಗಬಾರದು. ಹಾಗೆಯೇ ಸಿನಿಮಾಕ್ಕೆ ಬಂಡವಾಳ ಹೂಡಿದ ನಿರ್ಮಾಪಕರಿಗೆ ನಷ್ಟವಾಗಬಾರದು. ಅದು ಬಿಟ್ಟು ನಾನು ಮಾಡಿರುವ ಸಿನಿಮಾ ಉಗ್ರಂ ತರಹ ಇದೆಯೋ, ಕೆಜಿಎಫ್ ತರಹ ಇದೆಯೋ ಎಂಬ ಬಗ್ಗೆ ನನಗೆ ಬೇಸರವಿಲ್ಲ. ಏಕೆಂದರೆ, ಕೆಜಿಎಫ್, ಉಗ್ರಂ ಮಾಡಿದ್ದು ಕೂಡ ನಾನೇ. ನನ್ನ ಸಿನಿಮಾ ನಾನು ಮಾಡಿದ ಸಿನಿಮಾಗಳಂತೆ ಇದ್ದರೆ ನನಗೇನೂ ಬೇಸರವಿಲ್ಲ' ಎಂದಿದ್ದಾರೆ ಪ್ರಶಾಂತ್ ನೀಲ್. 

Follow Us:
Download App:
  • android
  • ios