Asianet Suvarna News Asianet Suvarna News

ಭಾಗ್ಯಾಗೆ ಸಂಕಟ, ತಾಂಡವ್-ಶ್ರೇಷ್ಠಾಗೆ ಶಾಕ್; ಸುಂದ್ರಿಗೆ ಭಾರೀ ಖುಷಿ!

ತಾಂಡವ್‌ ಮನೆಯಲ್ಲಿ ರಣರಂಗ ಶುರುವಾಗಿದೆ. ತಾಂಡವ್ ಎಲ್ಲೆಲ್ಲೋ ಹುಡುಕಿದರೂ ಅವನ ವಾಲೆಟ್ ಕಾಣಿಸುತ್ತಿಲ್ಲ. ಆತ ಹುಡುಕಿ ಸುಸ್ತಾಗಿ ಕೊನೆಗೆ ಶ್ರೇಷ್ಠಾ ಕೂಗುವನು. ಅದೇ ವೇಳೆ ಓಡೋಡಿ ಬಂದ ಶ್ರೇಷ್ಠಾ ಕೂಡ ಭಾರೀ ಗಾಬರಿಯಾಗಿದ್ದಾರೆ.

Dont worry bhagya its enough for whole month says kusuma in bhagyalakshmi serial srb
Author
First Published Dec 21, 2023, 4:08 PM IST

'ನಾವೀಗ ಇರೋ ಪರಿಸ್ಥಿತೀಲಿ' ಎಂದು ಭಾಗ್ಯಾ ಹೇಳುತ್ತಿದ್ದಂತೆ ಕುಸುಮಾ ಓವರ್‌ಟೇಕ್ ಮಾಡುತ್ತಾಳೆ. ಕುಸುಮಾ ಸೊಸೆ ಮೇಲೆ ಹುಸಿ ಕೋಪ ತೋರಿಸುತ್ತ 'ಅಲ್ವೇ, 30 ಸಾವಿರದಲ್ಲಿ ಆರಾಮಾಗಿ ಪೂಜೆನೂ ಮುಗ್ಸಿ ತಿಂಗಳದ ಖರ್ಚು ಕೂಡ ಮುಗಿಸ್ಬಹುದು. ಏನು ಯಾಚ್ನೆ ಮಾಡ್ತಾ ಇದೀಯ ಭಾಗ್ಯಾ? ಹೂಂ, ಮತ್ತೆ ಕಂಬದ ತರ ನಿಂತ್ಬಿಟ್ಯಾ? ಅಲ್ವೇ ಭಾಗ್ಯಾ , ನನ್ನ ಮುದ್ದು ಪೆದ್ದು ಸೊಸೆ, 30 ಸಾವಿರ ಬೇಕಾದಷ್ಟಾಯ್ತು. 501 ಕೊಡ್ಬೇಕು ಆಯ್ತಾ? ಯಾರಿಗೂ ಕಮ್ಮಿ ಮಾಡ್ಬಾರ್ದು' ಎನ್ನುವಳು ಕುಸುಮಾ. ಆದರೆ ಲೋನ್‌ ಇನ್‌ಸ್ಟಾಲ್‌ಮೆಂಟ್‌ನವ್ನು ಕಾಲ್ ಮಾಡಿದ್ದು ನೆನಪಾಗಿ ಭಾಗ್ಯಾ ನಿಂತಲ್ಲೇ ಬೆದರುತ್ತಿದ್ದಾಳೆ. 

ಕುಸುಮಾ ತನ್ನ ಮನೆಯ್ಲಲಿ ಪೂಜೆ ಹೇಗೆಲ್ಲಾ ಆಗ್ಬೇಕು ಎಂದು ಭಾಗ್ಯಾಗೆ ಹೇಳುತ್ತಿದ್ದರೆ ಎಲ್ಲವನ್ನೂ ಕೇಳಿಸಿಕೊಂಡಿದ್ದಾಳೆ ಭಾಗ್ಯಾ. ಆದರೆ ಮನಸ್ಸಿನಲ್ಲಿ ಮೂಡಿದ ತಲ್ಲಣ ನಿಂತಿಲ್ಲ. ಸದ್ಯ ಪೂಜೆ ಶುರುವಾಗಿದೆ, ಭಾಗ್ಯಾ ಬಂದವರಿಗೆಲ್ಲ ಹಣ ಉಡುಗೊರೆ ನೀಡುತ್ತಿದ್ದಾಳೆ. ಆದರೆ ಮನಸ್ಸಿನಲ್ಲಿ ಏನೋ ಚಿಂತೆ ಮೂಡಿದೆ. ಅದೇನೆಂದು ತಿಳಿಯಲು ಸಂಚಿಕೆ ನೋಡಬೇಕಷ್ಟೇ. 

ಸಕ್ಸಸ್ ಮಂತ್ರ ಈಗ ಬದಲಾಗಿದೆ, ನನಗೀಗ ಜ್ಞಾನೋದಯವಾಗಿದೆ; ನಟಿ ಸಮಂತಾ ಮುತ್ತಿನಂಥ ಮಾತು!

ಇತ್ತ ತಾಂಡವ್‌ ಮನೆಯಲ್ಲಿ ರಣರಂಗ ಶುರುವಾಗಿದೆ. ತಾಂಡವ್ ಎಲ್ಲೆಲ್ಲೋ ಹುಡುಕಿದರೂ ಅವನ ವಾಲೆಟ್ ಕಾಣಿಸುತ್ತಿಲ್ಲ. ಆತ ಹುಡುಕಿ ಸುಸ್ತಾಗಿ ಕೊನೆಗೆ ಶ್ರೇಷ್ಠಾ ಕೂಗುವನು. ಅದೇ ವೇಳೆ ಓಡೋಡಿ ಬಂದ ಶ್ರೇಷ್ಠಾ ಕೂಡ ಭಾರೀ ಗಾಬರಿಯಾಗಿದ್ದಾರೆ. ತಾಂಡವ್ ಪರ್ಸ್ ಕಾಣೆಯಾಗಿದ್ದರೆ ಶ್ರೇಷ್ಠಾ ಉಂಗುರು ಕಾಣಿಸುತ್ತಿಲ್ಲ. ಎರಡು ಉಂಗುರ ಕಳೆದುಕೊಂಡಿರುವ ಶ್ರೇಷ್ಠಾ ತಾಂಡವ್‌ಗೆ ಹೋಲಿಸಿದರೆ ಡಬ್ಬಲ್ ಶಾಕ್ ಆಗಿದ್ದಾಳೆ. ಅವರಿಬ್ಬರ ಗಾಬರಿ ನೋಡಿದರೆ, ಮನೆಗೆ ಯಾರೋ ಬಂದು ಕಳ್ಳತನ ಮಾಡಿದಂತಿದೆ ಎಂಬುದು ತಾಂಡವ್-ಶ್ರೇಷ್ಠಾ ಯೋಚನೆಗೆ ಬಂದಿದೆ. 

ಶೂಟಿಂಗ್ ಸ್ಪಾಟ್‌ ಸಮಸ್ಯೆಯನ್ನು ಹ್ಯಾಂಡಲ್‌ ಮಾಡಲು ಮಹಾಮಂತ್ರ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ

ಒಂದು ಜಾಗದಲ್ಲಿ ನಿಂತಿರುವ ಶ್ರೇಷ್ಠಾ-ತಾಂಡವ್ ಮನೆ ಕೆಲಸದಾಕೆ ತಾಂಡವ್ ಪರ್ಸ್ ಹಾಗೂ ಶ್ರೇಷ್ಠಾ ಉಂಗುರು ಎರಡನ್ನೂ ತನ್ನ ಸೆರಗಲ್ಲಿ ಕಟ್ಟಿಕೊಂಡಿರುವ ಗಂಟಿನಿಂದ ತೆಗೆಯುತ್ತ ಅದನ್ನು ಎತ್ತಿ ಹಿಡಿದು 'ನಂಗೆ ತಿಂಡಿ ಕೊಡದೇ ಮನೆಯಿಂದ ಹೊರಗೆ ಹಾಕ್ತೀರಾ? ನಾನು ನನ್ನ ಸ್ವಂತ ಸಂಪಾದನೆಯಿಂದ ತಿಂಡಿ ತಿಂತೀನಿ' ಎನ್ನುತ್ತಾಳೆ. ಒಟ್ಟಿನಲ್ಲಿ ಕುಸುಮಾ ಮನೆಯಲ್ಲಿ ಭಾಗ್ಯಾ, ಅತ್ತ ತಾಂಡವ್‌ ಮನೆಯಲ್ಲಿ ಶ್ರೇಷ್ಠಾ-ತಾಂಡವ್ ಗಾಬರಿಯಾಗಿದ್ದರೆ ಸದ್ಯಕ್ಕೆ ಖುಷಿಯಾಗಿರುವುದು ಕೆಲಸದಾಕೆ!

Follow Us:
Download App:
  • android
  • ios