ಈ ಸೀಸನ್‌ ಟಿಆರ್‌ಪಿ ಕಳೆದ ಸೀಸನ್‌ಗಳಿಗಿಂತ ಹೆಚ್ಚು ಎನ್ನಲಾಗುತ್ತಿದೆ. ಹೀಗಾಗಿ ಇನ್ನೂ ಎರಡು ವಾರಗಳ ಕಾಲ ಬಿಗ್ ಬಾಸ್ ಮುಂದುವರೆಯಲಿದ್ದು, ಗ್ರಾಂಡ್ ಫಿನಾಲೆ ಜನವರಿ 27 ಹಾಗೂ 28 ರಂದು ಎನ್ನಲಾಗುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಅದರಲ್ಲೂ ಗ್ರಾಂಡ್ ಫಿನಾಲೆ ಹತ್ತಿರ ಬಂದಂತೆ ಇನ್ನೂ ಹೆಚ್ಚಿನ ಕಾವು ಏರುತ್ತಲೇ ಹೋಗುತ್ತವೆ. ಏಕೆಂದರೆ, ಅಲ್ಲಿ ಎಲ್ಲರೂ ಆಡುವುದು ಗೆಲ್ಲಲಿಕ್ಕೆ ಹಾಗೂ ಗೆಲುವಿನ ಸಮೀಪ ಇರುವವರು ಇನ್ನೂ ಹೆಚ್ಚುಹೆಚ್ಚು ಗಮನ ಕೇಂದ್ರೀಕರಿಸಿ ಆಡುತ್ತಾರೆ. ಹೀಗಾಗಿ ಸಹಜವಾಗಿಯೇ 12-14 ವಾರಗಳು ಕಳೆದ ಬಳಿಕ ಇನ್ನುಳಿದ ಎರಡು ವಾರಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಭಾರೀ ಜೋಶ್ ಕಂಡುಬರುತ್ತದೆ. ಈ ಸೀಸನ್‌ನಲ್ಲೂ ಇದೇನೂ ವಿಭಿನ್ನವಾಗಿಲ್ಲ. 

ಆದರೆ, ಈ ಸೀಸನ್‌ ಟಿಆರ್‌ಪಿ ಕಳೆದ ಸೀಸನ್‌ಗಳಿಗಿಂತ ಹೆಚ್ಚು ಎನ್ನಲಾಗುತ್ತಿದೆ. ಹೀಗಾಗಿ ಇನ್ನೂ ಎರಡು ವಾರಗಳ ಕಾಲ ಬಿಗ್ ಬಾಸ್ ಮುಂದುವರೆಯಲಿದ್ದು, ಗ್ರಾಂಡ್ ಫಿನಾಲೆ ಜನವರಿ 27 ಹಾಗೂ 28 ರಂದು ಎನ್ನಲಾಗುತ್ತಿದೆ. ಈ ಬಗ್ಗೆ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಮಾಹಿತಿ ಕೊಟ್ಟಿದ್ದಾರೆ. ಇದೀಗ, ಇಂದಿನ ಟಾಸ್ಕ್‌ ಪ್ರೊಮೋ ಬಿಡುಗಡೆಯಾಗಿದ್ದು, ಅದರಲ್ಲಿ ಹಾವು ಏಣಿ ಯಾರು ಎಂಬ ಪ್ರಶ್ನೆ ಕೇಳಲಾಗಿದೆ. 

ಸಿನಿಮಾ ಕ್ಷೇತ್ರಕ್ಕೂ ಆಟಕ್ಕೂ ಏನು ಸಂಬಂಧ; ನಮ್ಮಿಬ್ಬರ ಅಕ್ಕ-ತಮ್ಮ ಸಂಬಂಧ ಮುಗಿಯಿತು!

ಕಿಚ್ಚ ಸುದೀಪ್ ಸ್ಪರ್ಧಿಗಳ ಬಳಿ 'ಈ ಮನೆಯಲ್ಲಿ ನಿಮ್ಮ ಪಾಲಿಗೆ ಹಾವು ಮತ್ತು ಏಣಿ ಯಾರು ಎಂದು ಹೇಳುವ ಸಮಯ ಬಂದಿದೆ' ಎನ್ನಲು ಸ್ಪರ್ಧಿಗಳು ತಮ್ಮತಮ್ಮ ಹೆಸರುಗಳನ್ನು ಬಾಯ್ಬಿಟ್ಟಿದ್ದಾರೆ. ಸಹಜವಾಗಿಯೇ ಎಲ್ಲರೂ ಬೇರೆಬೇರೆಯವರ ಹೆಸರುಗಳನ್ನೇ ಹೇಳಿದ್ದಾರೆ. ಆದರೆ, ಎಲ್ಲರೂ ಈ ಮೊದಲು ಯಾರೆಲ್ಲ ಯಾರನ್ನು ಟಾರ್ಗೆಟ್ ಮಾಡುತ್ತಿದ್ದರೋ ಅದನ್ನೇ ಮುಂದುವರೆಸಿದ್ದಾರೆ ಎನ್ನಬಹುದು. ಅದೇ ಸಂಗೀತಾ, ಕಾರ್ತಿಕ್, ವಿನಯ್ ಅವರನ್ನೇ ಹೆಚ್ಚಿನವರು ಟಾರ್ಗೆಟ್ ಮಾಡಿದ್ದಾರೆ. 

ಪೋಸ್ಟ್‌ಪೋನ್ ಆಯ್ತು ಬಿಗ್ ಬಾಸ್ ಕನ್ನಡ ಫಿನಾಲೆ; ಅಸಲಿ ಕಾರಣವೇನು, ಕಾಣದ ಕೈ ಯಾವುದು?

ಒಟ್ಟಿನಲ್ಲಿ, ಹಾವು ಯಾರ ಪಾಲಿಗೆ ಯಾರು, ಏಣಿ ಯಾರು ಎಂಬುದನ್ನು ತಿಳಿಯಲು ಇಂದಿನ ಸಂಚಿಕೆ ನೋಡಬೇಕು. ಜತೆಗೆ, ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯಿಂದ ಇಂದು ಯಾರು ಹೊರಹೋಗಲಿದ್ದಾರೆ ಎಂಬುದನ್ನು ನೋಡಬಹುದು. ಸೋಷಿಯಲ್ ಮೀಡಿಯಾ ಸುದ್ದಿಯನ್ನು ನಂಬುವುದಾದರೆ ಇಂದು ಮನೆಯಿಂದ ಹೊರಹೋಗಲಿರುವ ಕಂಟೆಂಟಿಸ್ಟ್ ಕಿರುತೆರೆ ನಟಿ ಸಿರಿ ಎನ್ನಲಾಗುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಯಾರು ಔಟ್ ಎಂಬುದು ತಿಳಿಯಲಿದೆ. ಬಿಗ್ ಬಾಸ್ ಮನೆಯ ಹಾವು-ಏಣಿ ಯಾರು ಎಂಬುದು ಕೂಡ ತಿಳಿಯಲಿದೆ.