ಸಿನಿಮಾ ಕ್ಷೇತ್ರಕ್ಕೂ ಆಟಕ್ಕೂ ಏನು ಸಂಬಂಧ; ನಮ್ಮಿಬ್ಬರ ಅಕ್ಕ-ತಮ್ಮ ಸಂಬಂಧ ಮುಗಿಯಿತು!
ಒಂದು ಕಡೆ ಕುಳಿತು ಈ ಬಗ್ಗೆ ಸಂಗೀತಾ ಮತ್ತು ಪ್ರತಾಪ್ ಮಧ್ಯೆ ಮಾತುಕತೆ ಆಗಿದೆ. ಈ ವೇಳೆ ಸಂಗೀತಾ 'ನೀನು ಹಾಗೆ ಹೇಳಿದ್ದು ಸ್ವಲ್ಪವೂ ಸರಿಯಲ್ಲ. ಏಕೆಂದರೆ, ಸಿನಿಮಾ ಕ್ಷೇತ್ರಕ್ಕೂ ಆಟಕ್ಕೆ ಏನು ಸಂಬಂಧ?' ಎಂದು ಕೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಈ ಮೊದಲು ಆಟದ ನೆಪದಲ್ಲಿ ತುಂಟಾಟ, ರಂಪಾಟ, ಹೊಡೆದಾಟ ಎಲ್ಲವನ್ನೂ ನೋಡಿದ್ದ ಬಿಗ್ ಬಾಸ್ ಮನೆಯೀಗ ಹೊಸ ಮನಸ್ತಾಪವೊಂದಕ್ಕೆ ಸಾಕ್ಷಿಯಾಗಿದೆ. ಅದು ಸಂಗೀತಾ ಶೃಂಗೇರಿ ಹಾಗೂ ಡ್ರೋಣ್ ಪ್ರತಾಪ್ ಅವರದು. ಸ್ವಲ್ಪ ದಿನಗಳ ಹಿಂದಷ್ಟೇ ಅಕ್ಕ-ತಮ್ಮರಾಗಿ ಸಖತ್ ಮಿಂಚುತ್ತಿದ್ದ ಸಂಗೀತಾ ಹಾಗೂ ಪ್ರತಾಪ್ ಸಂಬಂಧ ಈಗ ಹಳಸಿದೆ. ಈ ಇಬ್ಬರೂ ಈಗ ಬಿಗ್ ಬಾಸ್ ಮನೆಯಲ್ಲಿ 'ನೋ ಮೋರ್ ಅಕ್ಕ, ನೋ ಮೋರ್ ತಮ್ಮ' ಎಂಬಂತಾಗಿದ್ದಾರೆ.
ಹಾಗಿದ್ದರೆ ಇದಕ್ಕೆ ಕಾರಣವಾಗಿದ್ದು ಏನು? ಸೋಪಿನ ನೀರು ಕಣ್ಣಿಗೆ ಬಿದ್ದು ಆಸ್ಪತ್ರೆ ಸೇರಿಕೊಂಡು ಹೊರಗೆ ಬಂದ ಮೇಲೆ ಸಂಗೀತಾ-ಪ್ರತಾಪ್ ತುಂಬಾ ಕ್ಲೋಸ್ ಆಗಿದ್ದರು. ಹಲವಾರು ಬಾರಿ ಸಂಗೀತಾ 'ನನಗೆ ಡ್ರೋನ್ ಪ್ರತಾಪ್ ತಮ್ಮ ಇದ್ದಂತೆ' ಎಂದು ಹೇಳಿದ್ದರು. ಆದರೆ, ಈಗ 'ನನ್ನ ನಿನ್ನ ಸಂಬಂಧ ಇಲ್ಲಿಗೇ ಮುಗಿಯಿತು' ಎಂದಿದ್ದಾರೆ. ಹಾಗಿದ್ದರೆ, ಹೀಗೆ ಹೇಳುವ ಮೊದಲು ಅವರಿಬ್ಬರ ಮಧ್ಯೆ ನಡೆದ ಮಾತಿನ ಚಕಮಕಿ ಏನು? ತುಂಬಾ ಕುತೂಹಲಕಾರಿಯಾಗಿದೆ, ನೋಡಿ..
ವಿಜಯ್‌ಕಾಂತ್ ಅವರದು ಸಹಜ ಸಾವಲ್ಲ, ಕೊಲೆ; ಗಂಭೀರ ಆರೋಪ ಮಾಡಿದ ಖ್ಯಾತ ನಿರ್ದೇಶಕ!
'ಇತ್ತೀಚೆಗೆ ಆಟದಲ್ಲಿ ಯಾವ ಸ್ಪರ್ಧಿ ಹಿಂದುಳಿದಿದ್ದಾರೆ' ಎಂದು ಕೇಳಿದ್ದರು ಬಿಗ್ ಬಾಸ್. ಅದಕ್ಕೆ ಎಲ್ಲರೂ ತಮ್ಮ ಅನಿಸಿಕೆಯಂತೆ ಒಬ್ಬೊಬ್ಬರ ಹೆಸರು ಹೇಳಿದ್ದರು. ಬಹಳಷ್ಟು ಜನರು ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಅವರಿಬ್ಬರ ಹೆಸರು ಹೇಳಿದ್ದಾರೆ. ಆದರೆ, ಅವರ ಅಭಿಪ್ರಾಯಗಳನ್ನು ಒಪ್ಪದ ಡ್ರೋನ್ ಪ್ರತಾಪ್ 'ನಾನು ಮತ್ತು ವರ್ತೂರು ನಿಮ್ಮಂತೆ ಸಿನಿಮಾ ಕ್ಷೇತ್ರದಿಂದ ಬಂದಿಲ್ಲ, ನಾವಿಬ್ಬರು ಬೇರೆ ಕ್ಷೇತ್ರದಿಂದ ಬಂದಿದ್ದೀವೆ' ಎಂದಿದ್ದಾರೆ. ಆದರೆ, ಡ್ರೋನ್ ಪ್ರತಾಪ್ ಮಾತು ಸಂಗೀತಾರನ್ನು ಕೆರಳಿಸಿದೆ.
ಪ್ರಭಾಸ್-ಶಾರುಖ್ ಫ್ಯಾನ್ಸ್ ಸೋಷಿಯಲ್ ವಾರ್ ಬಗ್ಗೆ ಕೊನೆಗೂ ಬಾಯ್ಬಿಟ್ಟ ಪ್ರಶಾಂತ್ ನೀಲ್!
ಒಂದು ಕಡೆ ಕುಳಿತು ಈ ಬಗ್ಗೆ ಸಂಗೀತಾ ಮತ್ತು ಪ್ರತಾಪ್ ಮಧ್ಯೆ ಮಾತುಕತೆ ಆಗಿದೆ. ಈ ವೇಳೆ ಸಂಗೀತಾ 'ನೀನು ಹಾಗೆ ಹೇಳಿದ್ದು ಸ್ವಲ್ಪವೂ ಸರಿಯಲ್ಲ. ಏಕೆಂದರೆ, ಸಿನಿಮಾ ಕ್ಷೇತ್ರಕ್ಕೂ ಆಟಕ್ಕೆ ಏನು ಸಂಬಂಧ? ಅದಿರಲಿ, ಇಲ್ಲಿ ಎಲ್ಲರೂ ಒಂದೇ. ಈ ಬಿಗ್ ಬಾಸ್ ಮನೆಗೆ ಬಂದ 16 ಸ್ಪರ್ಧಿಗಳಲ್ಲಿ ಬಹಳಷ್ಟು ಜನರು ಬೇರೆ ಬೇರೆ ಕ್ಷೇತ್ರಗಳಿಂದಲೇ ಬಂದವರು. ಈ ಮೊದಲಿನ ಸೀಸನ್‌ಗಳಲ್ಲಿಯೂ ಅಷ್ಟೇ. ಈಗ ಉಳಿದಿರುವ ಸ್ಪರ್ಧಿಗಳು ಮನರಂಜನಾ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದರೂ ಆಟಕ್ಕೂ ಅದಕ್ಕೂ ಯಾವ ರೀತಿ ಸಂಬಂಧ ಇದೆ? ನೀನು ಇಷ್ಟ ಬಂದ ಹಾಗೆ ಏನೋ ಹೇಳುಬಿಡುತ್ತೀಯಾ.
ವಿಲನ್ ಪಾತ್ರ ಮಾಡಲಾರೆ ಅಂದಿದ್ರೂ ಒಪ್ಕೊಂಡ್ರಾ; ತಲೈವರ್ 171 ಚಿತ್ರಕ್ಕೆ ಸ್ಟಾರ್ ಹೀರೋನೇ ವಿಲನ್ನಾ!
ನಾನು ನಿನ್ನನ್ನು ನನ್ನ ತಮ್ಮನಂತೆ ಟ್ರೀಟ್ ಮಾಡುತ್ತಿದ್ದೆ. ಆದರೆ, ನೀನು ಯಾವುದನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳದೇ, ಯಾರ ಬಗ್ಗೆಯೂ ಗೌರವ ಇಲ್ಲದೇ ಕೇವಲ ನನ್ನ ಸ್ವಾರ್ಥಕ್ಕೆ ಏನೋ ಹೇಳುತ್ತ ಇರುತ್ತೀ. ಇಲ್ಲಿಗೆ ನನ್ನ ನಿನ್ನ ಅಕ್ಕ-ತಮ್ಮನ ಸಂಬಂಧ ಮುಗಿಯಿತು' ಎಂದಿದ್ದಾರೆ. ಸಂಗೀತಾ ಮಾತು ಕೇಳಿದ ಪ್ರತಾಪ್ ಕೌಂಟರ್ ಕೊಡಲಾಗದೇ ಒದ್ದಾಡಿ ಸುಸ್ತಾಗಿದ್ದಾರೆ. ಒಟ್ಟಿನಲ್ಲಿ ಗೆಲ್ಲಲಿಕ್ಕಾಗಿಯೇ ಬಿಗ್ ಬಾಸ್ ಮನೆಗೆ ಬಂದಿರುವ ಸ್ಪರ್ಧಿಗಳ ಮಧ್ಯೆ ಯಾವಾಗ ಸ್ನೇಹ, ಯಾವಾಗ ದ್ವೇಷ ಮೂಡುತ್ತದೆ ಎಂಬುದನ್ನು ಹೇಳುವುದೇ ಅಸಾಧ್ಯ ಎಂಬಂತಾಗಿದೆ.