ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ತುಂಬಾ ಅಗ್ರೆಸ್ಸಿವ್ ಆಡಿದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಹಲವು ಜನರು ತೊಂದರೆ ಪಟ್ಟರು ಎನ್ನಲಾಗುತ್ತಿದೆ. ಇಷ್ಟೂ ಸೀಸನ್‌ಗಳಲ್ಲಿ ವಿನಯ್ ರೀತಿ ಯಾರೂ ಆಡಿಲ್ಲ ಎನ್ನಲಾಗುತ್ತಿದೆ. 

ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಬಿಗ್ ಬಾಸ್ ಫಿನಾಲೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಹೋಸ್ಟ್ ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ಕನ್ನಡ 100 ದಿನಗಳು ಎಂದರೆ 100 ಎಪಿಸೋಡ್‌ಗಳು ಪ್ರಸಾರವಾಗುತ್ತವೆ. ಕೆಲವು ಸೀಸನ್‌ಗಳಲ್ಲಿ ಅದು 98 ದಿನಗಳಲ್ಲಿ ಕೂಡ ಮಗಿದಿದೆ. ಆದರೆ ಈ ಬಾರಿ ಬಿಗ್ ಬಾಸ್ ಎರಡು ವಾರ ಹೆಚ್ಚುವರಿಯಾಗಿ ನಡೆಯಲಿದೆ ಎಂಬ ಮಾಹಿತಿಯನ್ನು ಸುದೀಪ್ ಹಂಚಿಕೊಂಡಿದ್ದಾರೆ. 

'ಈ ಬಾರಿ ಬಿಗ್ ಬಾಸ್ ಕನ್ನಡ ಫಿನಾಲೆ ಎರಡು ವಾರ ಹೆಚ್ಚುವರಿಯಾಗಿ ನಡೆಯಲಿದೆ. ಕಾರಣ, ಈ ಬಾರಿಯ ಬಿಗ್‌ ಬಾಸ್‌ಗೆ ಒಳ್ಳೆಯ ಟಿಆರ್‌ಪಿ ಇದೆ, ಹೀಗಾಗಿ ವಾಹಿನಿಯವರು ಇನ್ನೂ ಎರಡು ವಾರಗಳ ಕಾಲ ಮುಂದುವರೆಸಲು ನಿರ್ಧರಿಸಿದ್ದಾರೆ. ಈ ಬಾರಿಯ ಬಿಗ್ ಬಾಸ್ ಕನ್ನಡ ಫಿನಾಲೆ ಜನವರಿ 27, 28ರಂದು ನಡೆಯಲಿದೆ' ಎಂದಿದ್ದಾರೆ ಬಿಗ್ ಬಾಸ್ ಹೋಸ್ಟ್ ಆಗಿರುವ ನಟ-ನಿರೂಪಕ ಕಿಚ್ಚ ಸುದೀಪ್. 

ನಿಮ್ಮ ನಿಜವಾದ ಮನೆ ಅಲ್ಲೆಲೋ ಇದೆ, ನಿಮ್ಮ ದೇಹವೂ ನಿಮ್ಮದಲ್ಲ; ಕಂಗನಾ ರಣಾವತ್

ಈ ಬಾರಿಯ ಬಿಗ್ ಬಾಸ್ ಹಲವು ಕಾರಣಕ್ಕೆ ವಿಭಿನ್ನವಾಗಿದೆ ಎನ್ನಲಾಗುತ್ತಿದೆ. ಟಾಸ್ಕ್‌ ವಿಷಯಕ್ಕೆ ಬಂದರೆ ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಬಗೆಬಗೆಯ ಹೊಸ ಟಾಸ್ಕ್‌ ನೀಡಲಾಗಿತ್ತು. ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ತುಂಬಾ ಅಗ್ರೆಸ್ಸಿವ್ ಆಡಿದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಹಲವು ಜನರು ತೊಂದರೆ ಪಟ್ಟರು ಎನ್ನಲಾಗುತ್ತಿದೆ. ಇಷ್ಟೂ ಸೀಸನ್‌ಗಳಲ್ಲಿ ವಿನಯ್ ರೀತಿ ಯಾರೂ ಆಡಿಲ್ಲ ಎನ್ನಲಾಗುತ್ತಿದೆ. ಆದರೆ, ಹಾಗೆ ಆಡಲು ಬಿಡಬಹುದಿತ್ತೇ ಎಂಬುದಕ್ಕೆ ಸಂಬಂಧಪಟ್ಟವರೇ ಉತ್ತರ ನೀಡಬೇಕು. 

ಡಂಕಿ ನಟಿ ತಾಪ್ಸಿ ಪನ್ನು ನಟ ಶಾರುಖ್ ಖಾನ್ ಬಗ್ಗೆ ಹೀಗೆ ಹೇಳಿದ್ರು; ಊಹಿಸಲೂ ಅಸಾಧ್ಯವಾದ ಮಾತುಗಳು!

ಒಟ್ಟಾರೆಯಾಗಿ ಹೇಳುವುದಾದರೆ, ಈ ಬಾರಿಯ ಬಿಗ್ ಬಾಸ್ ಇನ್ನೂ ಎರಡು ವಾರಗಳ ಕಾಲ ಮುಂದುವರೆಯಲಿದೆ ಎಂಬ ಸುದ್ದಿ ಬಿಗ್ ಬಾಸ್ ಶೋ ಪ್ರಿಯರ ಪಾಲಿಗಂತೂ ಶುಭ ಸುದ್ದಿಯಾಗಿದೆ. ಆದರೆ, ಯಾರು ಗೆಲ್ಲಬಹುದು ಎಂಬ ಜೋರಾದ ಲೆಕ್ಕಾಚಾರ ಸದ್ಯ ಸ್ವಲ್ಪ ತಣ್ಣಗಾಗಲಿದೆ. ಏಕೆಂದರೆ, ಈಗಾಗಲೇ 14 ವಾರಗಳನ್ನು ಕಳೆದಿರುವ ಬಿಗ್ ಬಾಸ್ ಶೋ, ಈಗ ಮತ್ತೆ ನಾಲ್ಕು ವಾರಗಳು ಕಂಟಿನ್ಯೂ ಆಗುತ್ತದೆ. ನಾಲ್ಕು ವಾರಗಳಲ್ಲಿ ಏನು ಬೇಕಾದರೂ ಆಗಬಹುದು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಯಾರು ವಿನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೇ!

ಡಿವೋರ್ಸ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಇಷಾ ಕೊಪ್ಪೀಕರ್; ಇಂದರ್ ಕುಮಾರ್ ನೆನಪು ಮರೆಯಾಗಿಲ್ಲವೇ?