ಆನೆ ಹದಿನೆಂಟರಿಂದ ಇಪ್ಪತ್ತೆರಡು ತಿಂಗಳುಗಳ ಅವಧಿಯಷ್ಟು ಕಾಲ ಗರ್ಭ ಧರಿಸುವುದಂತೆ. ಆದರೆ ಇಲ್ಲೊಂದು ಧಾರಾವಾಹಿಯಲ್ಲಿ ಮೂರುವರೆ ವರ್ಷಗಳ ಕಾಲ ಪಾತ್ರಧಾರಿಯೋರ್ವರು ಗರ್ಭಿಣಿಯಾಗಿದ್ದಾಳೆ. 

ಯಾವುದು ನಿಜ ಜೀವನದಲ್ಲಿ ನಡೆಯೋದಿಲ್ಲವೋ ಅದೆಲ್ಲ ಈಗ ಧಾರಾವಾಹಿಯಲ್ಲಿ ನಡೆಯುವುದು. ಇದೇ ಕಾರಣಕ್ಕೆ ಕೆಲ ಸೀರಿಯಲ್‌ಗಳಿಗೆ ವೀಕ್ಷಕರು ಬೈತಾರೆ, ಟ್ರೋಲ್‌ ಮಾಡ್ತಾರೆ. ಈಗೊಂದು ಧಾರಾವಾಹಿಯಲ್ಲಿ ಪಾತ್ರಧಾರಿ ಮೂರುವರೆ ವರ್ಷಗಳ ಕಾಲ ಗರ್ಭ ಧರಿಸಿ, ಕೊನೆಗೂ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಅಂತೂ ಹೆರಿಗೆ ಆಯ್ತು! 
ತಮಿಳಿನ ʼKayalʼ ಧಾರಾವಾಹಿಯಲ್ಲಿ ನಾಯಕಿ ತಂಗಿ ಗರ್ಭಿಣಿ ಆಗಿ ಮೂರುವರೆ ವರ್ಷಗಳು ಆಗಿವೆ. ಈಗ ಹೆರಿಗೆಯಾಗಿದ್ದು, ಗಂಡು ಮಗ ಜನನವಾಗಿದೆ ಎಂದು ಟ್ರೋಲ್‌ ಮಾಡಲಾಗುತ್ತಿದೆ. ಸೋಶಿಯಲ್‌ ಮೀಡಿಯಾ ತುಂಬೆಲ್ಲ ಈ ಹೆರಿಗೆಯದ್ದೇ ಸದ್ದು. ನಾಯಕಿಗೆ ತನ್ನ ತಂಗಿ, ತಮ್ಮ ಎಂದರೆ ತುಂಬ ಇಷ್ಟ, ಇವರ ಖುಷಿಗೋಸ್ಕರ ಅವಳು ತುಂಬ ತ್ಯಾಗ ಮಾಡಿರುತ್ತಾಳೆ. ನಾಯಕಿ ತಂಗಿ ದೇವಿ ಗರ್ಭಿಣಿಯಾಗಿ ಮೂರು ವರ್ಷದ ಮೇಲಾದರೂ ಹೆರಿಗೆ ಆಗಿರಲಿಲ್ಲ. ಈಗ ಆಗಿದೆ ಎಂದು ಅನೇಕರು ವ್ಯಂಗ್ಯ ಮಾಡುತ್ತಿದ್ದಾರೆ. ಆದರೆ ಈ ಧಾರಾವಾಹಿಯಲ್ಲಿ ಮೂರುವರೆ ವರ್ಷ ಆಯ್ತು ಎಂದು ವ್ಯಂಗ್ಯ ಆಡಲಾಗಿದೆ. ಕನ್ನಡದ ʼಪುಟ್ಟಗೌರಿ ಮದುವೆʼಯಲ್ಲೂ ಕೂಡ ಎರಡೂವರೆ ವರ್ಷಗಳ ಕಾಲ ಗೌರಿ ಗರ್ಭಿಣಿ ಆಗಿರುತ್ತಾಳೆ. ಇತ್ತೀಚೆಗೆ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ತುಳಸಿಗೆ ಹೊಟ್ಟೆ ಕಾಣೋದಿಲ್ಲ, ಆದರೆ ಆರು ತಿಂಗಳಿಗೆ ಮಗುವಿಗೆ ಜನ್ಮ ಕೊಡ್ತಾಳೆ. 

ಜ್ಯೋತಿ ರೈ, ಛಾಯಾ ಸಿಂಗ್....ಪರಭಾಷಾ ನಟರ ವರಿಸಿದ ಕನ್ನಡ ಕಿರುತೆರೆ ನಟಿಯರಿವರು!

ಲಿಫ್ಟ್‌ ಒಡೆಯುತ್ತಾರೆ ಅಂದ್ರೆ ಸುಮ್ನೇನಾ? 
ಅಂದಹಾಗೆ ಈ ಧಾರಾವಾಹಿಯಲ್ಲಿ ಲಿಫ್ಟ್‌ ಒಡೆಯುವ ದೃಶ್ಯ ಕೂಡ ಇದೆ. ಲಿಫ್ಟ್‌ನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿರುವ ತಂಗಿ ಜೊತೆ ನಾಯಕಿ ಸಿಕ್ಕಿಹಾಕಿಕೊಳ್ತಾಳೆ. ಏನೇ ಮಾಡಿದರೂ ಈ ಧಾರಾವಾಹಿ ಹೀರೋಗೆ ಲಿಫ್ಟ್‌ ಒಪನ್‌ ಮಾಡಲು ಆಗೋದಿಲ್ಲ. ಲಿಫ್ಟ್‌ ಸರಿಮಾಡಲು ಅಲ್ಲಿ ಯಾರೂ ಇಲ್ಲ. ಕೊನೆಗೂ ಹೀರೋ ಲಿಫ್ಟ್‌ ಒಡೆದು ನಾಯಕಿಯನ್ನು, ದೇವಿಯನ್ನು ಹೊರಗಡೆ ಕರೆದುಕೊಂಡು ಬರ್ತಾನೆ. ಇಲ್ಲಿ ಕ್ರಿಯೇಟಿವಿಟಿ ತಾಂಡವವಾಡ್ತಿದೆ, ಲಾಜಿಕ್‌ ಇಲ್ಲ ಎಂದು ಸಾಕಷ್ಟು ಜನರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡ್ತಿದ್ದಾರೆ. ಆನೆಯು 18-22 ತಿಂಗಳುಗಳ ಕಾಲ ಗರ್ಭ ಧರಿಸುತ್ತದೆ. ಆದರೆ ಇಲ್ಲಿ ಮೂರುವರೆ ವರ್ಷಗಳ ಕಾಲ ಗರ್ಭಿಣಿಯೇ? ಇದಕ್ಕೆ ಏನು ಹೇಳಬೇಕೋ ಏನೋ! ʼಅವನು ಮತ್ತೆ ಶ್ರಾವಣಿʼ ಧಾರಾವಾಹಿ ನಟಿ ಚೈತ್ರಾ ರೆಡ್ಡಿ ಅವರು ಈ ಸೀರಿಯಲ್‌ ನಾಯಕಿ.

ಛಾಯಾಗ್ರಹಕ ರಾಕೇಶ್‌ ಜೊತೆ ಕಿರುತೆರೆ ನಟಿ ಚೈತ್ರಾ ರೆಡ್ಡಿ ನಿಶ್ಚಿತಾರ್ಥ!

ʼಪುಟ್ಟಗೌರಿ ಮದುವೆʼ ಧಾರಾವಾಹಿಯಲ್ಲಿ ಗೌರಿ ಬೆಟ್ಟದಿಂದ ಬೀಳೋದು, ಮಣ್ಣಿನಿಂದ ಎದ್ದು ಬರೋದು, ʼನನ್ನರಸಿ ರಾಧೆʼ ಧಾರಾವಾಹಿಯಲ್ಲಿ ಚಿತೆಯಲ್ಲಿ ಮಲಗಿಸಿದ್ದಾಗಲೂ ಹೀರೋಯಿನ್‌ ಮೇಕಪ್‌ ಹಾಕಿಕೊಳ್ಳೋದು, ಗೀತಾ ಧಾರಾವಾಹಿಯಲ್ಲಿ ಹೀರೋಯಿನ್‌ ಫೈಟ್‌ ದೃಶ್ಯ, ಹೀರೋ ಗೂಳಿ ಜೊತೆ ಫೈಟ್‌ ಮಾಡೋದು ಹೀಗೆ ಕನ್ನಡದಲ್ಲಿ ಕೂಡ ಸಾಕಷ್ಟು ದೃಶ್ಯಗಳು ಟ್ರೋಲ್‌ ಆಗಿವೆ.

ಇನ್ನು ಹಿಂದಿಯಲ್ಲಂತೂ ಚಂದ್ರನನ್ನು ಹಿಡಿಯಲು ವ್ಯಕ್ತಿಯೋರ್ವ ಕಾರ್‌ನಲ್ಲಿ ಹೋಗ್ತಾನೆ, ಒಂದು ದುಪ್ಪಟ್ಟಾ ಫ್ಯಾನ್‌ಗೆ ಸಿಲುಕಿ ವ್ಯಕ್ತಿಯೇ ಪ್ರಾಣವೇ ಹೋಗುತ್ತದೆ. ಹತ್ತು ಅಡಿ ಅಂತರದಿಂದ ಹೀರೋಯಿನ್‌ ಬೀಳಬೇಕಿರುತ್ತದೆ, ಆಗ ಹೀರೋ ಎಲ್ಲಿಂದಲೋ ಓಡಿ ಬಂದು ಹಿಡಿದುಕೊಳ್ತಾನೆ. ಅಬ್ಬಬ್ಬಾ. ಹೀಗೆ ಒಂದೇ ಎರಡೇ…!