ಜ್ಯೋತಿ ರೈ, ಛಾಯಾ ಸಿಂಗ್....ಪರಭಾಷಾ ನಟರ ವರಿಸಿದ ಕನ್ನಡ ಕಿರುತೆರೆ ನಟಿಯರಿವರು!
ಕನ್ನಡದ ಅನೇಕ ನಟ-ನಟಿಯರು ಇಂದು ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿರೋ ಕೆಲ ನಟಿಯರ ಲಿಸ್ಟ್ ಇಲ್ಲಿದೆ!

ಛಾಯಾ ಸಿಂಗ್
2010ರಲ್ಲಿ ʼಸೂಪರ್‌ನ್ಯಾಚುರಲ್ ಮಿಸ್ಟರಿʼ ಸಿನಿಮಾದಲ್ಲಿ ಕೃಷ್ಣ, ಛಾಯಾ ಸಿಂಗ್ ಅವರು ನಟಿಸಿದ್ದರು. ಈ ಸಿನಿಮಾದಲ್ಲಿಯೇ ಇವರಿಬ್ಬರ ಪ್ರೀತಿ ಶುರು ಆಯ್ತು. 2012ರಲ್ಲಿ ಈ ಜೋಡಿ ಮದುವೆಯಾಗಿತ್ತು. ಕೃಷ್ಣ ಅವರು ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಚೈತ್ರಾ ರೆಡ್ಡಿ
ʼಅವನು ಮತ್ತೆ ಶ್ರಾವಣಿʼ ಧಾರಾವಾಹಿಯಲ್ಲಿ ನಟಿಸಿದ್ದ ಚೈತ್ರಾ ರೆಡ್ಡಿ ಅವರು ಕೆಲ ವರ್ಷಗಳಿಂದ ತಮಿಳು ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ. ಚೈತ್ರಾ ರೆಡ್ಡಿ ಅವರು ರಾಕೇಶ್ ಎನ್ನುವ ಸಿನಿಮಾಟೋಗ್ರಾಫರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. 2020ರಲ್ಲಿ ಈ ಮದುವೆ ನಡೆದಿದೆ.
ಜ್ಯೋತಿ ರೈ
ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಜ್ಯೋತಿ ರೈ ಅವರು ಈಗಾಗಲೇ ಮದುವೆಯಾಗಿ ಡಿವೋರ್ಸ್ ಪಡೆದಿದ್ದಾರೆ. ಇವರಿಗೆ ಓರ್ವ ಮಗ ಕೂಡ ಇದ್ದಾನೆ. ಈಗ ಅವರು ಪರಭಾಷಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಸುಕುಮಾರ್ ಪೂರ್ವಜ ಅವರನ್ನು ಜ್ಯೋತಿ ಮದುವೆಯಾಗಿದ್ದಾರೆ.
ದಿವ್ಯಾ ಶ್ರೀಧರ್
ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ದಿವ್ಯಾ ಶ್ರೀಧರ್ ಅವರು ಪರಭಾಷೆಯ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಸಹನಟ ಅಮ್ಝಾದ್ ಖಾನ್ ಆರ್ನವ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರಿಬ್ಬರು ಈಗ ದೂರ ಆಗಿದ್ದಾರೆ. ಆರ್ನವ್ ವಿರುದ್ಧ ದಿವ್ಯಾ ಅವರು ಪೊಲೀಸ್ ಠಾಣೆ ಕೂಡ ಮೆಟ್ಟಿಲೇರಿದ್ದರು.
ಅನುಷಾ ಹೆಗಡೆ
ʼನಿನ್ನೆ ಪೆಲ್ಲಾಡ್ತʼ ಧಾರಾವಾಹಿಯಲ್ಲಿ ಅನುಷಾ ಹೆಗಡೆ, ಪ್ರತಾಪ್ ಸಿಂಗ್ ಅವರು ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಹೈದರಾಬಾದ್‌ನಲ್ಲಿ ಈ ಮದುವೆ ನಡೆದಿತ್ತು. ಪ್ರತಾಪ್ ಸಿಂಗ್ ಅವರು ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ರಚಿತಾ ಮಹಾಲಕ್ಷ್ಮೀ
ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ರಚಿತಾ ಮಹಾಲಕ್ಷ್ಮೀ ಅವರು ಜಗ್ಗೇಶ್ ನಟನೆಯ ʼರಂಗನಾಯಕʼ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೇರೆ ಬೇರೆ ಭಾಷೆಯ ಕಿರುತೆರೆಯಲ್ಲಿಯೂ ಅವರು ನಟಿಸಿದ್ದಾರೆ. ʼನಚಿಯಾರಪುರಂʼ ಧಾರಾವಾಹಿಯಲ್ಲಿ ಅವರಿಗೆ ದಿನೇಶ್ ಎನ್ನುವವರ ಪರಿಚಯ ಆಗಿತ್ತು. ಈ ಜೋಡಿ ಪ್ರೀತಿಸಿ ಮದುವೆಯಾಗಿದೆ. ಆದರೆ ಕೆಲ ಮನಸ್ತಾಪದಿಂದ ಇವರು ಡಿವೋರ್ಸ್ ಪಡೆದಿದ್ದಾರೆ. ಇದಾದ ನಂತರವೂ ದಿನೇಶ್ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಿದ್ದರು. ಸದ್ಯ ರಚಿತಾ ಸಿಂಗಲ್ ಆಗಿದ್ದಾರೆ ಎನ್ನಲಾಗಿದೆ.