ಬಹುಭಾಷಾ ಕಿರುತೆರೆ ನಟಿ ಚೈತ್ರಾ ರೆಡ್ಡಿ ಹಾಗೂ ಛಾಯಾಗ್ರಹಕ ರಾಕೇಶ್‌ ಸರಳ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

'ಅವನು ಮತ್ತು ಶ್ರಾವಣಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಚೈತ್ರಾ ಇಂದು (ಅಕ್ಟೋಬರ್ 23, 2020) ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

'ರಗಡ್‌' ಆಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ Non-Veg ಪ್ರೇಮಿ, ನ್ಯಾಷನಲ್‌ ಕಾಲೇಜ್‌ ಹುಡ್ಗಿ! 

ಮೂಲತಃ ಆಂಧ್ರ ಪ್ರದೇಶದ ಚೆಲುವೆ ಚೈತ್ರಾ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು ಧಾರಾವಾಹಿಗಳಲ್ಲಿಯೂ ಅಭಿನಯಿಸುತ್ತಾರೆ. ರಾಕೇಶ್‌ ಛಾಯಾಗ್ರಯಕ ಹಾಗೂ ಕಾರ್ಪೋರೇಟ್ ಜಾಹೀರಾತುಗಳನ್ನು ನಿರ್ದೇಶಿಸುತ್ತಾರೆ. ಬೈಕ್ ರೈಡಿಂಗ್ ಅಂದ್ರೆ ರಾಕೇಶ್‌ ತುಂಬಾನೇ ಇಷ್ಟವಂತೆ.

View post on Instagram

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ 'ರಾಧಾ ರಮಣ' ನಟಿ ಕಾವ್ಯಾ ಗೌಡ ಕೂಡ ಭಾಗಿಯಾಗಿದ್ದರು. ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಅವರು ಸ್ನೇಹಿತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹಾಕಿಪಟು ಎಸ್‌ ಕೆ ಉತ್ತಪ್ಪ

ಏಪ್ರಿಲ್ 28,2020 ರಂದು ರಾಕೇಶ್‌ ಜೊತೆ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಯ ವಿಚಾರದ ಬಗ್ಗೆ ಸುಳಿವು ನೀಡಿದ್ದರು ಚೈತ್ರಾ. 'ಹೌದು ನೀವೆಲ್ಲಾ ಊಹೆ ಮಾಡಿರುವುದು ಸರಿ. ಈ ಪೋಸ್ಟ್ ನಾನು ಆವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಕಾರಣ ಹಾಗೂ ಅವರಿಗೆ ಹಾಯ್ ಹೇಳಲು. ಈ ಕ್ವಾರಂಟೈನ್‌ ಸಮಯದಲ್ಲಿ ನಾನು ಅವರನ್ನು ತುಂಬಾನೇ ಮಿಸ್ ಮಾಡಿಕೊಂಡಿರುವೆ'ಎಂದು ಬರೆದಿದ್ದರು.