Karna Serial : ಕರ್ಣನನ್ನು ಮದುವೆ ಆಗುವ ಹುಡುಗಿ ಹೇಗಿರಬೇಕು? ಲೀಸ್ಟ್ ಮಾಡಿ ಮನಸ್ಸಿನಲ್ಲಿಯೇ ಮಂಡಿಗೆ ತಿಂತಿರುವ ನಿಧಿ
ಡಾಕ್ಟರ್ ಕರ್ಣ (Doctor Karna) ಮದುವೆ ಆಗ್ಬಾರದು. ಇದು ಕರ್ಣನಿಗೆ ಅಪ್ಪ ಹಾಕಿರುವ ಷರತ್ತು. ಅಜ್ಜಿ ಒತ್ತಾಯಕ್ಕೆ ಕರ್ಣ, ಅಪ್ಪನ ಷರತ್ತು ಮುರಿದು ಮದುವೆ ಆಗೋಕೆ ಒಪ್ಪಿಗೆ ನೀಡಿದ್ದಾನೆ. ಆದ್ರೆ ಅದನ್ನು ಕರ್ಣ ಎಷ್ಟು ಪಾಲಿಸ್ತಾನೆ ಗೊತ್ತಿಲ್ಲ. ಇದೆಲ್ಲ ಗೊತ್ತಿಲ್ದೆ ಕರ್ಣನನ್ನು ಮನಸ್ಸು ತುಂಬಾ ತುಂಬಿಕೊಂಡಿರುವ ಮುದ್ದು ನಿಧಿ, ಕರ್ಣನ ಮದುವೆ ಆಗೋ ದೊಡ್ಡ ಕನಸು ಕಾಣ್ತಿದ್ದಾಳೆ. ಅಕ್ಕ ನಿತ್ಯನ ನಿಶ್ಚಿತಾರ್ಥದಲ್ಲಿ ಕರ್ಣನ ಜೊತೆ ಮಿಂಚುತ್ತಿರುವ ನಿಧಿಗೆ ಕರ್ಣನಿಗೆ ಹುಡುಗಿ ಸಿಕ್ಕಿದ್ಯಾ ಎನ್ನುವ ಅನುಮಾನ ಕಾಡಿದೆ. ಕರ್ಣನ ಅಜ್ಜಿ, ಅಮ್ಮನ ಬಳಿ ಹೋಗಿ ಈ ವಿಷ್ಯದಲ್ಲಿ ಕ್ಲಾರಿಟಿ ತೆಗೆದುಕೊಂಡ ನಿಧಿ, ಕರ್ಣನ ಮದುವೆ ಆಗೋ ಹುಡುಗಿ ಹೇಗಿರಬೇಕು ಅಂತ ಲೀಸ್ಟ್ ಮಾಡ್ಕೊಂಡಿದ್ದಾಳೆ.
ಝೀ ಕನ್ನಡ (Zee Kannada)ದಲ್ಲಿ ಪ್ರಸಾರ ಆಗ್ತಿರುವ ಕರ್ಣ ಸೀರಿಯಲ್ (Karna Serial) ಪ್ರೇಕ್ಷಕರ ಮನಸ್ಸು ಗೆಲ್ಲೋದ್ರಲ್ಲಿ ಯಶಸ್ವಿಯಾಗಿದೆ. ಕರ್ಣನ ಸ್ವಭಾವ ಅಭಿಮಾನಿಗಳ ಹೃದಯಕ್ಕೆ ಹತ್ತಿರ ಆಗಿದೆ. ಮನೆಯಲ್ಲಿ ಎಲ್ಲರಿಂದ ತಾತ್ಸಾರಕ್ಕೆ ಒಳಗಾದ್ರೂ ಕೆಲ್ಸವನ್ನು ನಿಷ್ಠೆಯಿಂದ, ಪ್ರೀತಿಯಿಂದ ಮಾಡುವ ಕರ್ಣನ ಮೇಲೆ ನಿಧಿಗೆ ಮನಸ್ಸಾಗಿದೆ. ಕರ್ಣನಿಂದ ದೂರ ಇರ್ಬೇಕು ಎನ್ನುವ ಸೂಚನೆ ನಡುವೆಯೂ ಆಗಾಗ ಆಕೆ ಮುಂದೆ ಬಂದ ಕರ್ಣ ಮತ್ತಷ್ಟು ಹತ್ತಿರ ಆಗ್ತಿದ್ದಾನೆ.
ನಿತ್ಯ ಎಂಗೇಜ್ಮೆಂಟ್ ಉಸ್ತುವಾರಿ ಹೊತ್ತುಕೊಂಡಿರುವ ಕರ್ಣ, ತಾನು ಮಾಡದ ತಪ್ಪಿಗೆ ನಿತ್ಯಾಳಿಂದ ಬೈಸಿಕೊಳ್ತಿದ್ದಾನೆ. ನಿತ್ಯಾ ಪ್ರೀತಿ ಮಾಡಿದ ಹುಡುಗನ ಪಾಲಕರಿಗೆ ಈ ಮದುವೆ ಇಷ್ಟವಿಲ್ಲ. ಅವ್ರು ಬರ್ತಾರೆ ಅಂತ ಸುಳ್ಳು ಹೇಳ್ತಾನೆ, ಹುಡುಗ ನಿಶ್ಚಿತಾರ್ಥಕ್ಕೆ ಬಂದಿದ್ದಾನೆ. ನಿತ್ಯಾ ಹುಡುಗನನ್ನು ರಕ್ಷಿಸೋಕೆ, ಕರ್ಣ ಸುಳ್ಳು ಹೇಳ್ತಾ, ನಿತ್ಯಾಳಿಂದ ಬೈಸಿಕೊಳ್ತಿದ್ದಾನೆ. ನಿಶ್ಚಿತಾರ್ಥಕ್ಕೆ ಬರ್ಬೇಡ ಅಂತ ನಿತ್ಯಾ ಖಡಕ್ ವಾರ್ನಿಂಗ್ ನೀಡಿದ್ರೂ ಕರ್ಣನೇ ಎಂಗೇಜ್ಮೆಂಟ್ ಗೆ ಕಾವಲುಗಾರ. ಪ್ರೋಮೋ ಪ್ರಕಾರ, ನಿತ್ಯಾ ಎಂಗೇಜ್ಮೆಂಟ್ ಮಧ್ಯೆ ಅವಗಢ ನಡೆದಿದೆ. ನಿತ್ಯಾ ಗಾಯಗೊಂಡಿದ್ದಾಳೆ. ಅವಳನ್ನು ರಕ್ಷಿಸಿದ್ದು ಕರ್ಣ. ಹಾಗಾಗಿ ಕರ್ಣನೇ ನಿತ್ಯಾಗೆ ಜೋಡಿ ಎನ್ನುವ ಕೂಗು ವೀಕ್ಷಕರಿಂದ ಕೇಳಿ ಬರ್ತಿದೆ. ನಿತ್ಯಾ ಕರ್ಣನ ಜೋಡಿ ಆಗ್ಬೇಕಾ ಇಲ್ಲ ನಿಧಿ ಆಗ್ಬೇಕಾ? ಈ ಪ್ರಶ್ನೆಗೆ ಅಭಿಮಾನಿಗಳ ಉತ್ತರ ಭಿನ್ನವಾಗಿದೆ. ನಿಧಿಗೆ ಹೆಚ್ಚಿನ ಮಾರ್ಕ್ಸ್ ಬಿದ್ರೂ, ಕರ್ಣನ ಮನಸ್ಸು ನಿತ್ಯಾ ಮೇಲಿದೆ ಎನ್ನುವ ಅನುಮಾನ ಮೂಡಿದೆ.
ಅಕ್ಕನ ಎಂಗೇಜ್ಮೆಂಟ್ ನಲ್ಲಿ ನಂದೇ ಎಂಗೇಜ್ಮೆಂಟ್ ಎನ್ನುವಂತೆ ಚುರುಕಾಗಿ ಓಡಾಡ್ತಿರೋ ನಿಧಿ ಮಾತ್ರ ಕರ್ಣನ ಬೆನ್ನು ಬಿಡ್ತಿಲ್ಲ. ಕರ್ಣನ ಅಜ್ಜಿ ಹಾಗೂ ಅಮ್ಮ, ತಂಗಿ, ಕರ್ಣನ ಮದುವೆ ಬಗ್ಗೆ ಮಾತನಾಡ್ತಿರೋದನ್ನು ಕೇಳಿ ಅಲ್ಲಿಗೆ ಬಂದ ನಿಧಿ, ಕರ್ಣ ಸರ್ ಗೆ ಹುಡುಗಿ ಫಿಕ್ಸ್ ಆಯ್ತಾ ಅಂತ ಆತಂಕದಿಂದ ಕೇಳಿದ್ದಾಳೆ. ಕರ್ಣನ ತಂಗಿ ರಾಧಿಕಾ, ಒಂದಿಷ್ಟು ಸುಳ್ಳು ಹೇಳಿ, ನಿಧಿ ಟೆನ್ಷನ್ ಡಬಲ್ ಮಾಡ್ತಾಳೆ. ಆದ್ರೆ ಅರ್ಧಕ್ಕೆ ಬಾಯಿ ಹಾಕುವ ಕರ್ಣನ ಅಜ್ಜಿ ಒಳ್ಳೆ ಹುಡುಗಿ ಸಿಕ್ಕಿದ್ರೆ ಈಗ್ಲೇ ಮದುವೆ ಅಂತಾರೆ. ಅಷ್ಟು ಹೇಳಿದ್ದೆ ತಡ, ಹುಡುಗಿ ಹೇಗಿರಬೇಕು ಅಂತ ಲೀಸ್ಟ್ ಮಾಡೋಕೆ ನಿಧಿ ನಿಲ್ತಾಳೆ. ಕರ್ಣನ ಮದುವೆ ಆಗೋ ಹುಡುಗಿ ಗುಣವಂತೆ, ಸಂಸ್ಕಾರವಂತೆ, ಬುದ್ಧಿವಂತೆ ಆಗಿರ್ಬೇಕು. ಹುಡುಗಿ, ಸೂರ್ಯನ ಸುತ್ತೋ ಭೂಮಿ ತರ ಇರ್ಬೇಕು. ಕರ್ಣನ ಹಾಗೆ ನಗ್ತಾ ಇರ್ಬೇಕು. ಬರೋ ಅತ್ತಿಗೆ ರಾಧಿಕಾಗೆ ಬೈಬಾರದು. ಈ ಎಲ್ಲ ಗುಣ ನಿಧಿ ಬಳಿ ಇದೆ. ಪರೀಕ್ಷೆ ಇಟ್ರೆ ನಿಧಿ ಪಾಸ್ ಆಗೋಹಾಗೆ ಕಾಣ್ತಿದ್ದಾಳೆ. ಆದ್ರೆ ನಿಧಿ, ಅಜ್ಜಿ ಕಣ್ಣಿಗೆ ಬೀಳ್ತಾಳಾ ಕಾದು ನೋಡ್ಬೇಕಿದೆ.
