ಕನ್ನಡತಿ ಸರಿಯಾಗಿ ಕೊನೆಯಾಗಿಲ್ಲ, ಪಾರ್ಟ್ 2 ಶುರುಮಾಡಿ ಅಂತಿದ್ದಾರೆ ವೀಕ್ಷಕರು

ಕನ್ನಡತಿ ಸೀರಿಯಲ್ ಮುಕ್ತಾಯವಾಗಿದೆ. ಹರ್ಷ ಭುವಿ ಜೊತೆ ಅಮ್ಮಮ್ಮ ಕಾಫಿ ಕುಡಿಯುತ್ತಾ ಆಶೀರ್ವಾದಿಸುವುದರೊಂದಿಗೆ ಕನ್ನಡತಿಗೆ ಫುಲ್ ಸ್ಟಾಪ್ ಬಿದ್ದಿದೆ. ಆದರೆ ಇದು ಸರಿಯಾದ ಎಂಡಿಂಗ್ ಅಲ್ಲ, ಕನ್ನಡತಿ ಪಾರ್ಟ್ 2 ಶುರುಮಾಡಿ ಅಂತ ಜನರಿಂದ ಒತ್ತಾಯ ಶುರುವಾಗಿದೆ.

Kannadathi serial get ended people asking for part 2

ಕನ್ನಡತಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಸೀರಿಯಲ್. ನಿನ್ನೆಗೆ ಈ ಸೀರಿಯಲ್ ಕೊನೆಯಾಗಿದೆ. ಎಲ್ಲ ವೀಕ್ಷಕರ ಬಯಕೆಯಂತೆ ಸೀರಿಯಲ್‌ಗೆ ಹ್ಯಾಪಿ ಎಂಡಿಂಗ್‌ ಸಿಕ್ಕಿದೆ. ಆದರೆ ಜನರಿಗೆ ಇದು ತೃಪ್ತಿ ನೀಡಿಲ್ಲ. ಕನ್ನಡತಿ ಅಬ್ರಪ್ಟ್ ಆಗಿ ಎಂಡ್ ಆಗಿದೆ. ಇಂಥ ಸೀರಿಯಲ್‌ಗೆ ಇದು ಸರಿಯಾದ ಕೊನೆ ಅಲ್ಲ ಅಂದಿದ್ದಾರೆ ವೀಕ್ಷಕರು. ಹಾಗೆ ನೋಡಿದರೆ ಕನ್ನಡತಿ ಸೀರಿಯಲ್‌ ಕೊನೆ ಕೊನೆಯೇ ಅಲ್ಲ. ಅದು ಸಹಜವಾಗಿ ಬಂದಿಲ್ಲ ಅನ್ನೋದು ಈ ಸೀರಿಯಲ್ ಅಭಿಮಾನಿಗಳ ಕಂಪ್ಲೇಂಟ್. ಅದಕ್ಕೇ ಕನ್ನಡತಿ ೨ ಶುರು ಮಾಡಿ ಅಂತ ಜನ ಪಟ್ಟು ಹಿಡಿಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಇದೀಗ ಚರ್ಚೆ ಆಗುತ್ತಿದೆ.

ಕನ್ನಡತಿ ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿತ್ತು. ಇದೀಗ ಈ ಸೀರಿಯಲ್‌ ಅಂತ್ಯವಾಗಿದೆ. ನಿನ್ನೆ ತಾನೆ ‘ಕನ್ನಡತಿ’ ಧಾರಾವಾಹಿಯ ಕಟ್ಟ ಕಡೆಯ ಸಂಚಿಕೆ ಪ್ರಸಾರವಾಗಿದೆ. 800ನೇ ಸಂಚಿಕೆ ನಿನ್ನೆ ಸಂಜೆ ಪ್ರಸಾರವಾಗಿದೆ. ಆ ಎಪಿಸೋಡ್ ಟೆಲಿಕಾಸ್ಟ್ನೊಂದಿಗೆ, ‘ಕನ್ನಡತಿ’ ಧಾರಾವಾಹಿ ಅಂತ್ಯ ಕಂಡಿದೆ. ಕೊನೆಯ ಎಪಿಸೋಡ್ ಸುಖಾಂತ್ಯ ಕಂಡಿದೆ. ಇದಕ್ಕೂ ಮೊದಲೇ ಸಾನಿಯಾ ಒಳ್ಳೆಯವಳಾಗಿ ಬದಲಾಗಿದ್ದಳು ಇನ್ನೊಂದೆಡೆ ಹರ್ಷ ಭುವಿಯ ನಡುವೆ ಬಿರುಗಾಳಿಯಾಗಿ ಬಂದಿದ್ದ ವರೂಧಿನಿ ಕೊನೆಗೂ ತನ್ನ ಹೀರೋಗೆ ತನ್ನ ಕಾಟದಿಂದ ಬಿಡುಗಡೆ ಕೊಟ್ಟಿದ್ದಾಳೆ. ವರೂಧಿನಿ ಹರ್ಷನನ್ನ ಬಿಟ್ಟು ಲಾಯರ್‌ ಹರ್ಷಿತ್‌ನನ್ನು ಮದುವೆಯಾಗಿದ್ದಾಳೆ. ಅಲ್ಲಿಗೆ, ಹರ್ಷ - ಭುವಿ ಬಾಳಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದ್ದ ಸಾನಿಯಾ ಹಾಗೂ ವರೂಧಿನಿ ಕೇಸ್ ತಣ್ಣಗಾದಂತಾಗಿದೆ. ಪರಿಣಾಮ, ‘ಕನ್ನಡತಿ’ ಧಾರಾವಾಹಿಗೆ ಹ್ಯಾಪಿ ಎಂಡಿಂಗ್ ಸಿಕ್ಕಿದೆ.

ಈ ಮೊದಲು ಹರ್ಷನನ್ನ ವರೂಧಿನಿ ಹುಚ್ಚಿಯಂತೆ ಪ್ರೀತಿಸಿದ್ದಳು. ಆದರೆ ಹರ್ಷ ಶುರುವಿಗೆ ವರೂಧಿನಿ ಮೇಲೆ ಕೊಂಚ ಆಸಕ್ತಿ ತೋರಿದರೂ, ಯಾವಾಗ ಭುವಿಯನ್ನು ನೋಡಿದನೋ ಆಗಿಂದ ಆಕೆಯ ಬಗ್ಗೆ ಪ್ರೇಮ ಶುರುವಾಯ್ತು. ಮುಂದೆ ಭುವಿ ಹರ್ಷನನ್ನು ಬೇರೆ ವರೂಧಿನಿ ಮಾಡದ ಸರ್ಕಸ್ ಇಲ್ಲ. ಇದೀಗ ಕೊನೆಯಲ್ಲಿ ಹರ್ಷನ ಮೇಲೆ ವರೂಧಿನಿಗಿರುವುದು ಪ್ರೀತಿ ಅಲ್ಲ ಮೋಹ ಅನ್ನೋದನ್ನ ಭುವಿ ಮನದಟ್ಟು ಮಾಡಿಸಿದ್ದಾಳೆ. ಕೊನೆಗೂ ವರೂಗೆ ನಿಜ ಗೊತ್ತಾಗಿದೆ. ಅದರ ಜೊತೆಗೇ ಕ್ರಿಮಿನಲ್ ಲಾಯರ್ ಹರ್ಷಿತ್ ತನ್ನನ್ನ ಪ್ರೀತಿಸುತ್ತಿದ್ದಾನೆ ಎಂದು ವರೂಧಿನಿಗೆ ಗೊತ್ತಾಗಿದೆ. ಶುರುವಲ್ಲಿ ನಿರಾಕರಿಸಿದರೂ ಕೊನೆಗೂ ಹರ್ಷಿತ್ ಕೊರಳಿಗೆ ಹೂಮಾಲೆ ಹಾಕಿದ್ದಾಳೆ.

ಅಂತಿಮ ವಿದಾಯ ಹೇಳಿದ ಕನ್ನಡತಿ: ಸ್ಕ್ರಿಪ್ಟ್ ಬರೆದ ವಿಕಾಸ್ ಭಾವುಕ ಮಾತು!

ಮಂತ್ರ ಮಾಂಗಲ್ಯ ವಿವಾಹವಾದ ವರೂ
ವೆಡ್ಡಿಂಗ್ ಪ್ಲಾನರ್ ವರೂ ಎಲ್ಲ ಆಡಂಬರ ತೊರೆದು ಸಿಂಪಲ್ಲಾಗಿ ಮಂತ್ರ ಮಾಂಗಲ್ಯ ಆಗಿದ್ದು ಈ ಸೀರಿಯಲ್‌ನ ಮತ್ತೊಂದು ಹೈಲೈಟ್(Highlight). ಹರ್ಷ ಮತ್ತು ಭುವಿ ಶಾಸ್ತ್ರಬದ್ಧವಾಗಿ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಮದುವೆ ಆಗಿದ್ದರೆ ವರೂ ಮತ್ತು ಹರ್ಷಿತ್ ಇನ್ನೂ ಮುಂದೆ ಹೋಗಿ ಅರ್ಥಪೂರ್ಣವಾದ ಮಂತ್ರ ಮಾಂಗಲ್ಯವಾಗಿದ್ದಾರೆ.

ಅಮ್ಮಮ್ಮನ ಜೊತೆ ಕಾಫಿ ಕುಡಿದ ಹರ್ಷ ಭುವಿ
ಅಮ್ಮಮ್ಮನ ಆಸೆಯಂತೆ ಹರ್ಷ ಹೊಸ ಕೆಫೆ ತೆರೆದಿದ್ದಾರೆ. ಹೊಸ ಕೆಫೆಗೆ ‘ಅಮ್ಮಮ್ಮನ ಕಾಫಿ ಅಂಗಡಿ’ ಅಂತ ಹರ್ಷ ಹೆಸರಿಟ್ಟಿದ್ದಾರೆ. ಕನ್ನಡದ ಕಂಪಿರುವ ‘ಅಮ್ಮಮ್ಮನ ಕಾಫಿ ಅಂಗಡಿ’ ಕಂಡು ಭುವಿ ಖುಷಿ(Happy) ಪಡುತ್ತಾಳೆ. ಇನ್ನೊಂದು ಖುಷಿ ಅಂದರೆ ಅಮ್ಮಮ್ಮ ರತ್ನಮಾಲಾ ಕೂಡ ಸರ್‌ಪ್ರೈಸ್ ಎಂಟ್ರಿಕೊಟ್ಟಿದ್ದಾರೆ. ಜೊತೆಯಾಗಿ ಕಾಫಿ ಕುಡಿದು ಹರ್ಷ ಭುವಿಗೆ ಶುಭ ಹಾರೈಸಿದ್ದಾರೆ.

ಇಷ್ಟೆಲ್ಲ ಆದರೂ ಈ ಸೀರಿಯಲ್ ಅಬ್ರಪ್ಟ್ ಆಗಿ ಎಂಡ್ ಆಗಿದೆ ಅನ್ನೋದು ಜನರ ಕಂಪ್ಲೇಂಟ್(Complaint). ಅದಕ್ಕಾಗಿ ಕನ್ನಡತಿ ೨ ಶುರು ಮಾಡಿ ಅಂತ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸಿದ್ದಾರೆ.

‘ಕನ್ನಡತಿ’ ಧಾರಾವಾಹಿಯಲ್ಲಿ ಭುವನೇಶ್ವರಿ ಆಗಿ ರಂಜನಿ ರಾಘವನ್, ಹರ್ಷ ಆಗಿ ಕಿರಣ್ ರಾಜ್, ರತ್ನಮಾಲಾ ಆಗಿ ಚಿತ್ಕಳಾ ಬಿರಾದಾರ, ವರೂಧಿನಿ ಆಗಿ ಸಾರಾ ಅಣ್ಣಯ್ಯ, ಸಾನಿಯಾ ಆಗಿ ಆರೋಹಿ ನೈನಾ ನಟಿಸಿದ್ದಾರೆ.

800 ಸಂಚಿಕೆಗಳ ನಂತರ ಕನ್ನಡತಿ ಧಾರಾವಾಹಿಗೆ ಸುಖಾಂತ್ಯ; ಕನ್ನಡ ಕ್ಲಾಸ್ ಮುಗಿಸಿದ ಟೀಚರ್

Latest Videos
Follow Us:
Download App:
  • android
  • ios