800 ಸಂಚಿಕೆಗಳ ನಂತರ ಕನ್ನಡತಿ ಧಾರಾವಾಹಿಗೆ ಸುಖಾಂತ್ಯ; ಕನ್ನಡ ಕ್ಲಾಸ್ ಮುಗಿಸಿದ ಟೀಚರ್
ಅಂತ್ಯಕಂಡ ಕನ್ನಡತಿ ಧಾರಾವಾಹಿ. 800 ಸಂಚಿಕೆ ಮೆಚ್ಚಿಕೊಂಡ ಅಭಿಮಾನಿಗಳಿಗೆ ಇನ್ನೂ 200 ಸಂಚಿಕೆ ಬೇಕಿತ್ತಂತೆ.....
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಕನ್ನಡತಿ 800 ಸಂಚಿಕೆ ಪೂರೈಸಿದ ಸುಖಾಂತ್ಯ ಕಂಡಿದೆ. ಫೆಬ್ರವರಿ 2ರಂದು ಕೊನೆಯ ಸಂಚಿಕೆ ಪ್ರಸಾರವಾಗಿದೆ. ಆರಂಭದಿಂದಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಸ್ವೀಕರಿಸಿದ ಕನ್ನಡತಿ, ಅಮ್ಮಮ್ಮನ ಅಗಲಿಕೆ ನಂತರ ಕೊಂಚ ಕುಸಿತ ಖಂಡಿತು ಆದರೆ ಭುವಿ ಜವಾಬ್ದಾರಿ ಪಡೆದುಕೊಂಡ ನಂತರ ಮತ್ತೆ ಕಥೆ ಇಂಟ್ರೆಸ್ಟಿಂಗ್ ಆಗಿತ್ತು. ಕೊನೆ ಸಂಚಿಕೆ ಮುಗಿಸಿ ಇಡೀ ತಂಡ ಭಾವುಕ ವಿದಾಯ ಹೇಳಿದ್ದಾರೆ.
ಕನ್ನಡಿತಿಯಲ್ಲಿ ಹರ್ಷ ಭುವಿ ಲವ್ ಸ್ಟೋರಿ, ಸಾನಿಯಾ ಕ್ರಿಮಿನಲ್ ಮೈಂಡ್, ವರೂಧಿನಿ ಮಾಸ್ಟರ್ ಪ್ಲ್ಯಾನ್, ಅಮ್ಮಮ್ಮ ಪ್ರೀತಿ, ಅಣ್ಣ ಅತ್ತಿಗೆ ಸಂಬಂಧ ಅದ್ಭುತವಾಗಿ ತೋರಿಸಿದ್ದಾರೆ. ಧಾರಾವಾಹಿ ಹ್ಯಾಪಿ ಎಂಡಿಂಗ್ ಕಾಣಬೇಕು ಸಿಗಬೇಕು ಅಂದ್ರೆ ಪ್ರತಿಯೊಬ್ಬರನ್ನು ಸರಿ ದಾರಿಗೆ ತರಬೇಕು ಅನ್ನೋದು ವೀಕ್ಷಕರ ಆಸೆ ಆಗಿದೆ. ಅದರಂತೆ ಸಾನಿಯಾ ಒಳ್ಳೆಯವಳಾಗಿ ಹರ್ಷ ಭುವಿ ಪರ ನಿಲ್ಲುತ್ತಾಳೆ, ವರೂಧಿನ ಹರ್ಷ ಬೇಡ ಎಂದು ಮನಸಾರೆ ಒಪ್ಪಿಕೊಂಡು ಲಾಯರ್ ಹರ್ಷಿತ್‌ನ ಮದುವೆ ಮಾಡಿಕೊಳ್ಳುತ್ತಾಳೆ, ಹರ್ಷ ಭುವಿ ನಡುವೆ ಇದ್ದ ಮನಸ್ತಾಪಗಳು ಕ್ಲರಿಯರ್ ಆಗಿ ಹ್ಯಾಪಿ ಎಂಡಿಂಗ್ ಪಡೆದುಕೊಂಡಿದೆ.
ಅಮ್ಮಮ್ಮನ ಹೆಸರಿನಲ್ಲಿ ಹೋಟೆಲ್ ಓಪನ್ ಮಾಡಬೇಕು ಎಂದು ಹಲವು ವರ್ಷಗಳಿಂದ ಹರ್ಷ ಪ್ಲ್ಯಾನ್ ಮಾಡುತ್ತಿದ್ದರು ಅಂತ್ಯ ಕಾಣುವ ಸಮಯದಲ್ಲಿ ಅಮ್ಮಮ್ಮನ ಕಾಫಿ ಅಂಗಡಿ ಓಪನ್ ಮಾಡುತ್ತಾರೆ. ಅಮ್ಮಮ್ಮ ಇಲ್ಲದೆ ಧಾರಾವಾಹಿ ಅಂತ್ಯವಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದ ವೀಕ್ಷಕರಿಗೆ ಸರ್‌ಪ್ರೈಸ್ ಎಂಟ್ರಿ ಕೊಟ್ಟರು. ಹೀಗಾಗಿ ಕೊನೆಯಲ್ಲಿ ಅಮ್ಮಮ್ಮ ರತ್ನಮಾಲಾ ಕೂಡ ಎಂಟ್ರಿ ಕೊಟ್ಟರು. ವಿಶೇಷ ಏನೆಂದರೆ ಕುವೆಂಪು ಅವರ ಮಂತ್ರ ಮಾಂಗಲ್ಯಕ್ಕೆ ಪ್ರಮುಖ್ಯ ಕೊಟ್ಟು ವರುಧಿನ ಮತ್ತು ಹರ್ಷಿತ್ ಮದುವೆ ಮಾಡಿಸಿದ್ದಾರೆ.
Kannadathi : ಬದಲಾದ ಸಾನಿಯಾ ಕಂಡು ದಂಗಾದ ಹರ್ಷ, ವರೂ ಕೊಟ್ಳು ಬಿಗ್ ಶಾಕ್!
ಅಮ್ಮಮ್ಮ ರತ್ನಮಾಲಾ ಪಾತ್ರದಲ್ಲಿ ಚಿತ್ಕಳಾ ಬಿರಾದಾರ, ಭುವನೇಶ್ವರಿ ಪಾತ್ರದಲ್ಲಿ ರಂಜನಿ ರಾಘವನ್, ಹರ್ಷನ ಪಾತ್ರದಲ್ಲಿ ಕಿರಣ್ ರಾಜ್, ವರೂಧಿನ ಪಾತ್ರದಲ್ಲಿ ಸಾರಾ ಅಣ್ಣಯ್ಯ, ಸಾನಿಯಾ ಪಾತ್ರದಲ್ಲಿ ಆರೋಹಿ ನೈನಾ ಸೇರಿದಂತೆ ಹಲವಾರು ಅದ್ಭುತ ಕಲಾವಿದರು ಈ ಧಾರಾವಹಿಯಲ್ಲಿ ಅಭಿನಯಿಸಿದ್ದಾರೆ.
'ನಿಮ್ಮೆಲ್ಲರ ಹೆಮ್ಮೆಯ ಧಾರಾವಾಹಿ 'ಕನ್ನಡತಿ'ಯ ಕಡೆಯ ಸಂಚಿಕೆ ಇಂದು ಪ್ರಸಾರವಾಗಿದೆ. ಇನ್ನಷ್ಟು ಸಂಚಿಕೆ ಬರಬಹುದಿತ್ತು, ನಿಮ್ಮನ್ನು ಮಿಸ್ ಮಾಡಿಕೊಳ್ತೀವಿ ಅಂತ ಹೇಳುವಾಗಲೇ ಗೌರವದಿಂದ ಮುಕ್ತಾಯ ಕಾಣುತ್ತಿರೋದು ನಮಗೆಲ್ಲಾ ಹೆಮ್ಮೆಯ ವಿಚಾರ. ಮುಂದೆ ಅರ್ಥಪೂರ್ಣವಾದ ಪಾತ್ರಗಳ ಮೂಲಕ, ಒಳ್ಳೆಯ ಬರವಣಿಗೆ ಹೊಂದಿರೋ ಪ್ರಾಜೆಕ್ಟ್‌ಗಳ ಮೂಲಕ ನಿಮ್ಮ ಮುಂದೆ ಬರುವ ನಿರೀಕ್ಷೆಯಲ್ಲಿದ್ದೇನೆ. ನಿಮ್ಮ ನಿರಂತರ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು' ಎಂದು ರಂಜನಿ ರಾಘವನ್ ಬರೆದುಕೊಂಡಿದ್ದಾರೆ. 'ನಿಮ್ಮಲ್ಲರ ಪ್ರೀತಿಗೆ ವಂದನೆಗಳು' ಎಂದು ಕಿರಣ್ ರಾಜ್ ಬರೆದುಕೊಂಡಿದ್ದಾರೆ.
'ಸಿರಿಗನ್ನಡಂ ಗೆಲ್ಗೆ ಕನ್ನಡ ಕ್ಲಾಸ್ ಮುಗಿಯೋ ಸಮಯ ಬಂತು. ಎಷ್ಟು ಜನ ಕನ್ನಡ ಟೀಚರ್‌ನ ಮಿಸ್ ಮಾಡಿಕೊಳ್ಳುತ್ತೀರ?' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಹರ್ಷ ಭುವಿ ಹೆಸರಿನಲ್ಲಿ ಹರ್ವಿ (harvi_cutiepies) ಫ್ಯಾನ್ ಪೇಜ್ ಭಾವುಕ ವಿದಾಯ ಹೇಳಿದ್ದಾರೆ.
'ಕನ್ನಡತಿ ಧಾರಾವಾಹಿ ಇಷ್ಟು ದಿನಗಳ ಕಾಲ ಅದೆಷ್ಟೋ ನೆನಪುಗಳನ್ನು, ನೀತಿಗಳನ್ನು, ಮನೋರಂಜನೆಯನ್ನು ನಮಗೆಲ್ಲ ಉಣಬಡಿಸಿದೆ. ಆದರೆ ಕನ್ನಡತಿಯನ್ನು ಕೊನೆಯವರೆಗೂ ವೀಕ್ಷಿಸುತ್ತಿರಲು ಬಹು ಮುಖ್ಯ ಕಾರಣಗಳಲ್ಲಿ ಹರ್ವಿಯೂ ಒಂದು ಎಂದರೆ ಅತಿಶಯೋಕ್ತಿಯಲ್ಲ. ಇದೇ ಶಬ್ದ ಸಾಕು ನಮ್ಮ ಮೊಗದಲ್ಲಿ ನಗುವನ್ನು ತರಿಸಲು.
ಹೇಗೆ ಹರ್ವಿಯೋ ಹಾಗೆಯೇ ಹರ್ವಿಯನ್ಸ್ ಹಾಗೂ ಹರ್ವಿ ಅಭಿಮಾನಿ ಪುಟಗಳು. ಇಂದು ನಾವೆಲ್ಲಾ ನಮ್ಮ ನೆನಪುಗಳ, ಸ್ನೇಹದ, ಕಲಿಕೆಯ, ಪ್ರೀತಿಗಾಗಿ ಈ ಸಿಡಿಪಿಯನ್ನು ಆಚಾರಿಸೋಣವೆಂದುಕೊಂಡಿರುವೆವು..ಕ್ವಾರಂಟೈನ್ ದಿನಗಳಿಂದ ಹಿಡಿದು .. ಹರ್ವಿಯ ನೈಜತೆಗೆ ಮರುಳಾಗಿ ಎಷ್ಟೋ ಅಭಿಮಾನಿಗಳು , ಅದೆಷ್ಟೋ ಅಭಿಮಾನಿ ಪುಟಗಳು ಹುಟ್ಟಿಕೊಂಡವು. ಪ್ರತಿ ದಿನ ಬೆಳಿಗ್ಗೆ 6 ರಿಂದ ಟಿವಿಯಲ್ಲಿ ಪ್ರೋಮೋಗಾಗಿ ಕಾಯುವುದು, ನಂತರ ಅದರ ಬಗ್ಗೆ ಚರ್ಚೆಗಳು, ಅದರ ಚಿತ್ರಗಳ ಎಡಿಟ್ ಗಳು, ವೀಡಿಯೊ ಎಡಿಟ್‌ಗಳು , ಎಡಿಟ್‌ಗಳಿಗಾಗಿ ಹಾಡುಗಳ ಹುಡುಗಾಟ, ಎಲ್ಲೇ ಇದ್ದರೂ ಸರಿಯಾಗಿ 4 ಗಂಟೆಯ ಕಲರ್ಸ್ ಪುಟದಲ್ಲಿ ಕಾಮೆಂಟ್ಸ್ ಹಾಕುವುದು...ಒಂದೊಂದು ಸಂಚಿಕೆಯ ಕುರಿತು ಉದ್ದುದ್ದ ವಿಶ್ಲೇಷಣೆಗಳು,, ಅದರ ಮೀಮ್ ಗಳು, ಅದರ ಬಗ್ಗೆ ಅಭಿಪ್ರಾಯಗಳ ಹಂಚಿಕೆ , ಪ್ರತಿಯೊಂದು ವಿಶೇಷ ಸಂದರ್ಭಗಳ ಆಚರಣೆ (ವಾರ್ಷಿಕೋತ್ಸವಗಳು, ಪ್ರೇಮ ನಿವೇದನೆ, ಒಪ್ಪಿಗೆ, ಅಮ್ಮಮ್ಮ ಆಗಮನ , ಮದುವೆಗೆ ಒಂದು ವಾರದಿಂದಲೇ ಕೌಂಟ್ ಡೌನ್... ಇತ್ಯಾದಿ) ಎಷ್ಟೊಂದು ಗುಂಪುಗಳು... ಸಂಚಿಕೆಯಲ್ಲಿ ಹರ್ವಿ ಇಲ್ಲದಿದ್ದರೆ ಹಳೆಯ ಸಂಚಿಕೆಯನ್ನು ಹುಡುಕಿಕೊಂಡು ಬಂದು ಪೋಸ್ಟ್ ಮಾಡುವುದು .. ಅಭಿಮಾನಿ ಕತೆಗಳು, ಕವನಗಳು...ಅಬ್ಬಾ .. ಹೇಳುತ್ತಾ ಹೋದರೆ ಪದಗಳೇ ಸಾಲದು..ಎಂದಿಗೂ ಕುಗ್ಗದೆ, ಎಷ್ಟೋ ಪುಟಗಳು disable ಆದರೂ ಧೃತಿಗೆಡದೆ, ಏನನ್ನೂ ನಿರೀಕ್ಷಿಸದೇ, ಹೊಸ ಹೊಸ ಪುಟಗಳನ್ನು ಮತ್ತೆ ಮತ್ತೆ ಮಾಡಿ, ಬೇಸರವಾದರೂ ಸಿಡಿದೆದ್ದು ವಾಪಾಸ್ ಬಂದು ತಮ್ಮ ನಾಯಕ ನಾಯಕಿಗೆ ಬೆಂಬಲವನ್ನು ನೀಡಿದವರು...... ಅದೇಷ್ಟೋ ಕೆಲಸಗಳ ಮಧ್ಯೆ ( ವಿದ್ಯಾರ್ಥಿಗಳು, ವೃತ್ತಿಪರರು, ವಿದ್ಯಾವಂತರು , ಗೃಹಿಣಿಯರು...ಹೀಗೆ ಎಲ್ಲರೂ ಒಳಗೊಂಡ ಕುಟುಂಬವಿದು ) ಸಮಯವನ್ನು ಇವರುಗಳು ಮೀಸಲಿಟ್ಟರು' ಎಂದು ಫ್ಯಾನ್ ಪೇಜ್ ಬರೆದುಕೊಂಡಿದೆ.