Kannada Tv TRP Rating: ಕನ್ನಡ ಕಿರುತೆರೆಯ ಟಿಆರ್‌ಪಿ ರಿಲೀಸ್‌ ಆಗಿದೆ. ಈ ವಾರ ಟಿಆರ್‌ಪಿ ಸೂಪರ್‌ ಆಗಿ ಬಂದಿರುವ ಹಾಗೆ ಕಾಣ್ತಿದೆ. ಸೀರಿಯಲ್‌, ರಿಯಾಲಿಟಿ ಶೋಗಳ ಮಧ್ಯೆ ಭಾರೀ ಪೈಪೋಟಿ ನಡೆದಿದ್ದು, ಟಿಆರ್‌ಪಿ ಕೂಡ ಚೆನ್ನಾಗಿ ಬಂದಿದೆ. ಹಾಗಾದರೆ ಯಾರಿಗೆ ಎಷ್ಟು ಬಂತು? 

ಈ ವಾರದ ಟಿಆರ್‌ಪಿ ಹೊರಗಡೆ ಬಂದಿದೆ. ಕಳೆದ ವಾರಗಳಿಗೆ ಹೋಲಿಕೆ ಮಾಡಿ ನೋಡಿದರೆ, ಟಿವಿ ಹಾಗೂ ರಿಯಾಲಿಟಿ ಶೋಗಳ ಟಿಆರ್‌ಪಿ ಸೂಪರ್‌ ಆಗಿ ಬಂದಿದೆ ಎನ್ನಬಹುದು. ಸದ್ಯ ವೀಕ್ಷಕರು ಟಿವಿಯತ್ತ ಮುಖ ಮಾಡಿದಂತೆ ಕಾಣುತ್ತದೆ. ಸೀರಿಯಲ್‌ಗಳ ಟಿಆರ್‌ಪಿ ವೀಕ್ಷಣೆ ಕೂಡ ಹೆಚ್ಚಾಗಿದೆ. ಅಂದಹಾಗೆ ಹೊಸದಾಗಿ ಧಾರಾವಾಹಿಗಳು ಪ್ರಸಾರ ಆಗಲು ರೆಡಿಯಾಗಿವೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ಒಳ್ಳೆಯ ಟಿಆರ್‌ಪಿ ಸಿಗುತ್ತಿದೆ. ಈ ಶೋ ವೀಕ್‌ ದಿನಗಳಲ್ಲಿ 7.4 TVR ಹಾಗೂ ವೀಕೆಂಡ್‌ನಲ್ಲಿ ಶನಿವಾರ 10.8 TVR, ರವಿವಾರ 11.1 TVR ಬಂದಿದೆ.

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋ

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋಗೆ ಒಳ್ಳೆಯ ಟಿಆರ್‌ಪಿ ಬಂದಿದೆ. 11.2 TVR ಸಿಕ್ಕಿದೆ. ಶಿವರಾಜ್‌ಕುಮಾರ್‌, ರಚಿತಾ ರಾಮ್‌, ವಿಜಯ್‌ ರಾಘವೇಂದ್ರ, ಅರ್ಜುನ್‌ ಜನ್ಯ, ಅನುಶ್ರೀ ಭಾಗಿಯಾಗಿರುವ ಈ ಶೋನಲ್ಲಿ ಸೆಲೆಬ್ರಿಟಿಗಳು, ಸಾಮಾನ್ಯ ಜನರು ಡ್ಯಾನ್ಸ್‌ ಮಾಡುತ್ತಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿ ಧಾರಾವಾಹಿಗಳು

ಭಾಗ್ಯಲಕ್ಷ್ಮೀ ಧಾರಾವಾಹಿ- 5.7 TVR

‌ಮುದ್ದು ಸೊಸೆ ಧಾರಾವಾಹಿ- 6.9 TVR

ಪ್ರೇಮಕಾವ್ಯ ಧಾರಾವಾಹಿ-5.8 TVR

ಗಂಧದ ಗುಡಿ ಧಾರಾವಾಹಿ- 5.1 TVR

ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ- 6.2 TVR

ನಂದಗೋಕುಲ ಧಾರಾವಾಹಿ- 6.3 TVR

ಸ್ಟಾರ್‌ ಸುವರ್ಣ ವಾಹಿನಿಯ ಧಾರಾವಾಹಿಗಳು

ನಿನ್ನ ಜೊತೆ ನನ್ನ ಕಥೆ ಧಾರಾವಾಹಿ- 5.2 TVR

ಆಸೆ ಧಾರಾವಾಹಿ 4.0 TVR

ವಸುದೇವ ಕುಟುಂಬ ಧಾರಾವಾಹಿ 3.5 TVR

ಶಾರದೆ ಧಾರಾವಾಹಿ 3.7 TVR

ಜೀ ಕನ್ನಡ ವಾಹಿನಿಯ ಧಾರಾವಾಹಿ

ಅಣ್ಣಯ್ಯ ಹಾಗೂ ಕರ್ಣ ಧಾರಾವಾಹಿ ಸಂಗಮ-9.3 TVR

ಅಮೃತಧಾರೆ ಧಾರಾವಾಹಿ-8.9 TVR

ಪುಟ್ಟಕ್ಕನ ಮಕ್ಕಳು ಧಾರಾವಾಹಿ-6.2 TVR

ಲಕ್ಷ್ಮೀ ನಿವಾಸ ಧಾರಾವಾಹಿ-7.3 TVR

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ- 4.0 TVR

ನಾ ನಿನ್ನ ಬಿಡಲಾರೆ ಧಾರಾವಾಹಿ-5.5 TVR