- Home
- Entertainment
- TV Talk
- BBK 12: ಚಿಕ್ಕಪ್ಪನ ಕಥೆ ಹೇಳಿ ಬಿಸಿ ಮುಟ್ಟಿಸೋ ಗಿಲ್ಲಿ ನಟನಿಗೆ ಈಗ ತನ್ನ ಮನೆಯಲ್ಲಿ ನಡೆದ ಸಂಭ್ರಮದ ಅರಿವಿಲ್ಲ!
BBK 12: ಚಿಕ್ಕಪ್ಪನ ಕಥೆ ಹೇಳಿ ಬಿಸಿ ಮುಟ್ಟಿಸೋ ಗಿಲ್ಲಿ ನಟನಿಗೆ ಈಗ ತನ್ನ ಮನೆಯಲ್ಲಿ ನಡೆದ ಸಂಭ್ರಮದ ಅರಿವಿಲ್ಲ!
BBK 12 Episode Update ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ತಪ್ಪು ಮಾಡಿದವರಿಗೆ, ಎಡವಿದವರಿಗೆ, ವ್ಯಂಗ್ಯ ಮಾಡಿದವರಿಗೆ ಗಿಲ್ಲಿ ನಟ ಮಾತ್ರ ಕಾಮಿಡಿ ಮಾಡಿ ಅಥವಾ ಚಿಕ್ಕಪ್ಪನ ಕತೆ ಹೇಳಿ ಬಿಸಿ ಮುಟ್ಟಿಸುತ್ತಾರೆ. ಈಗ ಅವರಿಗೆ ಅಸಲಿ ಚಿಕ್ಕಪ್ಪ ಯಾರು ಎನ್ನೋದು ಗೊತ್ತಿಲ್ಲ. ಹಾಗಾದರೆ ಏನದು?

ಗಿಲ್ಲಿ ನಟ ಎಲ
ಗಿಲ್ಲಿ ನಟ ಅವರು ಮಂಡ್ಯ ಮೂಲದವರು. ಇವರಿಗೆ ಓರ್ವ ಅಣ್ಣ, ಅಕ್ಕ ಇದ್ದಾರೆ. ಅಣ್ಣ ಹಾಗೂ ಅಕ್ಕನಿಗೆ ಮದುವೆಯಾಗಿದೆ. ಅಕ್ಕನಿಗೆ ಮಗು ಕೂಡ ಇದೆ. ಮನೆಯಲ್ಲಿ ಗಿಲ್ಲಿಯವರೇ ಮೂರನೇಯವರು. ಗಿಲ್ಲಿ ಮದುವೆ ಆಗೋದು ಬಾಕಿ ಇದೆ.
ಗಿಲ್ಲಿ ನಟ ಹೇಳಿದ್ದೇನು?
ಗಿಲ್ಲಿ ನಟ ಅವರ ಅಣ್ಣ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, “ಗಿಲ್ಲಿ ನಟನ ವಯಸ್ಸು ಏನು ಎಂದು ಅವನ ಬಳಿ ಕೇಳಿ, ನಾನೀಗ ಹೇಳೋದಿಲ್ಲ. ಗಿಲ್ಲಿ ನಟನ ಮದುವೆ ಅವನ ಇಷ್ಟ. ಗಿಲ್ಲಿ ಆಡುತ್ತಿರೋದು ಖುಷಿ ಕೊಟ್ಟಿದೆ, ಅವನಿಗಿಂತ ಚೆನ್ನಾಗಿರುವ ಕಲಾವಿದರು ಇದ್ದಾರೆ” ಎಂದಿದ್ದರು.
ಬನಿಯನ್, ಚಡ್ಡಿ ಹಾಕ್ತಾರೆ
ಯಾವಾಗಲೂ ಟ್ರ್ಯಾಕ್ ಪ್ಯಾಂಟ್, ಚಡ್ಡಿ, ಬನಿಯನ್ ಹಾಕುವ ಗಿಲ್ಲಿ ನಟ ಬಡವನ ಥರ ನಾಟಕ ಮಾಡ್ತಾನೆ ಎಂದು ಧ್ರುವಂತ್, ರಘು ಆರೋಪ ಮಾಡಿದ್ದರು. ಕಳೆದ ಮೂರು ವಾರಗಳಿಂದ ಗಿಲ್ಲಿಗೆ ಡಿಸೈನರ್‌ಗಳು ಬಟ್ಟೆ ಕಳಿಸುತ್ತಿದ್ದರೂ ಕೂಡ ಅವರು ಹಾಕಿಕೊಳ್ತಿಲ್ಲವಂತೆ.
ಗಿಲ್ಲಿಗೆ ಗೊತ್ತಿರದ ವಿಷಯ ಏನು?
ಹೌದು, ಒಂದು ವಿಷಯ ಹೇಳುವಾಗ ಚಿಕ್ಕಪ್ಪ ಹೆಸರು ಹೇಳಿ, ಏನು ಹೇಳಬೇಕೋ ಅದನ್ನು ಹೇಳುತ್ತಿದ್ದ ಗಿಲ್ಲಿ ನಟನಿಗೆ ಗೊತ್ತಿರದ ವಿಷಯ ಒಂದಿದೆ. ಮನೆಯೊಳಗೇ ಕೂತು ಚಿಕ್ಕಪ್ಪನ ಕಥೆ ಹೇಳೋ ಗಿಲ್ಲಿ ನಿಜಕ್ಕೂ ಇತ್ತೀಚೆಗೆ ಚಿಕ್ಕಪ್ಪ ಆಗಿದ್ದಾರೆ.
ಮುದ್ದು ಕೃಷ್ಣ ಹುಟ್ಟಿರೋ ಖುಷಿ
ಗಿಲ್ಲಿಯ ಪ್ರೀತಿಯ ಅಣ್ಣ ಅತ್ತಿಗೆಗೆ ಇಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ ಒಂದು ಕಡೆ ಆದ್ರೆ, ಮುದ್ದು ಕೃಷ್ಣ ಹುಟ್ಟಿರೋ ಖುಷಿ ಇನ್ನೊಂದು ಕಡೆ. ಈ ಜೋಡಿ ಸಂಭ್ರಮಕ್ಕೆ ನೀವು ಶುಭ ಹಾರೈಸಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

