Bigg Boss Kannada 12 TRP Rating: ಕಿಚ್ಚ ಸುದೀಪ್‌ ನಿರೂಪಣೆಯ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನ ಮೊದಲ ವಾರದ TRP ಹೊರಗಡೆ ಬಂದಿದೆ. ವೀಕೆಂಡ್‌ ಹಾಗೂ ಲಾಂಚಿಂಗ್‌ ಎಪಿಸೋಡ್‌ನಲ್ಲಿ ಎಷ್ಟು TRP ಬಂದಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. 

ಕನ್ನಡದ ಅತಿ ದೊಡ್ಡ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಪ್ರಸಾರವಾಗುತ್ತಿದೆ. ಈ ಶೋ ಶುರುವಾಗಿ ಮೊದಲ ವಾರದ ಎಲಿಮಿನೇಶನ್‌ ಕೂಡ ಆಗಿದೆ, ಸದ್ಯ ಎರಡನೃ ವಾರ ಪ್ರಸಾರವಾಗುತ್ತಿದೆ. ಹಾಗಾದರೆ ಕಿಚ್ಚ ಸುದೀಪ್‌ ನಿರೂಪಣೆಯ ಈ ಶೋಗೆ ಮೊದಲ ವಾರ ಎಷ್ಟು ಟಿಆರ್‌ಪಿ ಬಂದಿತು? ವೀಕೆಂಡ್‌ನಲ್ಲಿ ಎಷ್ಟು ಟಿಆರ್‌ಪಿ ಬಂದಿತು?

ಎಷ್ಟು TRP ಸಿಕ್ಕಿತು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಲಾಂಚಿಂಗ್‌ ದಿನ 11 TVR ಬಂದಿದೆ. ಅಂದಹಾಗೆ ವೀಕೆಂಡ್‌ ಎಪಿಸೋಡ್‌ಗಳಲ್ಲಿ 6.6 TVR ಬಂದಿದೆ. ಸ್ಪರ್ಧಿಗಳು ಯಾರು ಯಾರು ಬರುತ್ತಾರೆ ಎನ್ನುವ ಕುತೂಹಲ ಒಂದು ಕಡೆಯಾದರೆ, ಕಿಚ್ಚ ಸುದೀಪ್‌ ನೋಡಬಹುದು ಎನ್ನುವ ಕುತೂಹಲ ಇನ್ನೊಂದು ಕಡೆ. ಸೆಪ್ಟೆಂಬರ್‌ 28ರಂದು ಬಿಗ್‌ ಬಾಸ್‌ ಶುರುವಾಗಿದೆ. ಒಟ್ಟೂ 19 ಸ್ಪರ್ಧಿಗಳು ದೊಡ್ಮನೆಗೆ ಆಗಮಿಸಿದ್ದರು.

ಸ್ಪರ್ಧಿಗಳು

ಅಭಿಷೇಕ್‌ ಶ್ರೀಕಾಂತ್‌

ಅಶ್ವಿನಿ ಗೌಡ

ಅಶ್ವಿನಿ ಎಸ್‌ ಎಸ್‌

ಸ್ಪಂದನಾ ಸೋಮಣ್ಣ

ಗಿಲ್ಲಿ ನಟ

ಕಾವ್ಯ ಶೈವ

ಧ್ರುವಂತ್‌

ಜಾಹ್ನವಿ

ಮಂಜುಭಾಷಿಣಿ

ಕರಿಬಸಪ್ಪ

ಆರ್‌ ಜೆ ಅಮಿತ್‌

ಚಂದ್ರಪ್ರಭ

ಸತೀಶ್‌

ಮಾಳು ನಿಪನಾಳ

ಮಲ್ಲಮ್ಮ

ಧನುಷ್‌ ಗೌಡ

ಕಾಕ್ರೋಚ್‌ ಸುಧಿ

ರಕ್ಷಿತಾ ಶೆಟ್ಟಿ

ಸೀಕ್ರೇಟ್‌ ರೂಮ್‌, ಎಲಿಮಿನೇಶನ್

ಅಂದಹಾಗೆ ಮೊದಲ ವಾರ ಕರಿಬಸಪ್ಪ ಹಾಗೂ ಆರ್ ಜೆ ಅಮಿರ್‌ ಎಲಿಮಿನೇಟ್‌ ಆಗಿದ್ದಾರೆ. ಈ ಶೋ ಶುರುವಾದ ಮೊದಲ ದಿನವೇ ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಟ್‌ ಮಾಡಿದ್ದಾರೆ ಎಂದು ಹೇಳಿ ಸೀಕ್ರೇಟ್‌ ರೂಮ್‌ಗೆ ಕಳಿಸಲಾಗಿತ್ತು, ಆಮೇಲೆ ಅವರು ಮನೆಯೊಳಗಡೆ ಬಂದಿದ್ದರು. ಈ ಶೋ ಈಗ ಜಿಯೋಸಿನಿಮಾ OTT ಪ್ಲಾಟ್‌ಫಾರ್ಮ್‌ನಲ್ಲಿ 24/7 ಲೈವ್ ಸ್ಟ್ರೀಮಿಂಗ್ ಆಗುತ್ತಿದೆ.

ಒಂದು ದಿನಗಳ ಬಾಲ ಬಿಗ್‌ ಬಾಸ್‌ ಮನೆಗೆ ಬೀಗ

ಅಕ್ಟೋಬರ್ 7 ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಜಾಲಿವುಡ್‌ ಸ್ಟುಡಿಯೋದಲ್ಲಿ ಪರಿಸರ ನಿಯಮಗಳ ಉಲ್ಲಂಘನೆ ಮಾಡಲಾಗಿದೆ. ನಿಯಂತ್ರಣ ಮಂಡಳಿಯ ಅನುಮತಿ ಪಡೆದಿಲ್ಲ, ಸರಿಯಾಗಿ ತ್ಯಾಜ್ಯ ನಿವಾರಣೆ ಆಗಿಲ್ಲ ಎಂದು ಬಿಗ್‌ ಬಾಸ್‌ ಶೋಗೆ ಬೀಗ ಹಾಕಿತ್ತು. ಹೀಗಾಗಿ ಸ್ಪರ್ಧಿಗಳನ್ನು ಹೊರಗಡೆ ಕರೆದುಕೊಂಡು ಬಂದಿದ್ದಲ್ಲದೆ, ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. ಈಗ ಒಂದಿಷ್ಟು ಕಾನೂನು ಪ್ರಕ್ರಿಯೆ ಮಾಡಿ, ಮತ್ತೆ ಬಿಗ್‌ ಬಾಸ್‌ ಶೋ ಒಪನ್‌ ಆಗಿದೆ. ಇದರಿಂದ ಕಾಂಟೆಸ್ಟೆಂಟ್‌ಗಳನ್ನು ತೆರವುಗೊಳಿಸಲಾಯಿತು ಮತ್ತು ಶೋದ ಒಂದು

ಬಿಗ್‌ ಬಾಸ್‌ ಕನ್ನಡ ಸೀಸನ್‌ ಸೀಸನ್ 11 ರ ಪ್ರೀಮಿಯರ್ ಎಪಿಸೋಡ್‌ಗೆ 9.9 TRP ಸಿಕ್ಕಿತ್ತು, ಫೈನಾಲೆಗೆ 11.8 ಎಂದು ಹೇಳಲಾಗಿತ್ತು. ಈಗ ಈ ಸೀಸನ್‌ರ ಆರಂಭದಲ್ಲೇ ಉತ್ತಮ TRP ಸಿಕ್ಕಿದೆ.