ಡ್ರಾಮ ಜೂನಿಯರ್ಸ್ ವೇದಿಕೆಯಲ್ಲಿ ಜನಪ್ರಿಯ ನ್ಯಾ. ಶ್ರೀ ಬಿ ವೀರಪ್ಪ
ಕರ್ನಾಟಕ ಉಚ್ಚನ್ಯಾಯಾಲಯದ ಜನಪ್ರಿಯ ನ್ಯಾಯಮೂರ್ತಿಗಳು ಹಾಗು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಶ್ರೀ ಬಿ (Justice B Veerappa). ವೀರಪ್ಪ ಅವರು ಮಕ್ಕಳ ಲೋಕಕ್ಕೆ ವಿಶೇಷ ಅತಿಥಿಯಾಗಿ ಬಂದು ಪ್ರಚಂಡರ ಅಭಿನಯವನ್ನು ಆನಂದಿಸಿ , ಆಶೀರ್ವದಿಸಿ , ಸರಳ ಸುಲಭ ಅತಿಮುಖ್ಯ ಕಾನೂನಿನಲ್ಲಿ ಒಂದಾಗಿರುವ ಲೋಕ್ ಅದಾಲತ್ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮಹತ್ಕಾರ್ಯ ಮಾಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಅನೇಕ ರಿಯಾಲಿಟಿ ಶೋಗಳು (Reality Shows) ಪ್ರಸಾರವಾಗುತ್ತಿವೆ. ಗಾಯನ, ಡಾನ್ಸ್, ಕಾಮಿಡಿ, ಡ್ರಾಮ ಸೇರಿದಂತೆ ಅನೇಕ ಶೋಗಳು ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿವೆ. ಅನೇಕ ರಿಯಾಲಿಟಿ ಶೋಗಳಲ್ಲಿ ಜೀ ವಾಹಿನಯಲ್ಲಿ (Zee Kannada) ಪ್ರಸಾರವಾಗುತ್ತಿರುವ ಡ್ರಾಮ ಜೂನಿಯರ್ಸ್ (Drama Juniors season 4) ಶೋ ಕೂಡ ಒಂದು. ಮನರಂಜನೆ ಜೊತೆಗೆ ಈ ಶೋ ಅನೇಕ ವಿಶೇಷತೆಗಳೊಂದಿಗೆ ಗಮನ ಸೆಳೆಯುತ್ತಿದೆ. ಹೌದು, ಜೀ ಕನ್ನಡ ವಾಹಿನಿ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಕೇವಲ ಮನರಂಜನೆಗಷ್ಟೇ ಸೀಮಿತಗೊಳಿಸದೆ ಸಮಾಜಕ್ಕೆ ಉತ್ತಮ ಸಂದೇಶ ಕೊಡುವದನ್ನು ವಾಡಿಕೆಯನ್ನಾಗಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಡ್ರಾಮಾ ಜೂನಿಯರ್ಸ್ ವೇದಿಕೆ ಆರಂಭದಿಂದಲೂ ಇದನ್ನು ಪಾಲಿಸಿಕೊಂಡು ಬರುತ್ತಿದೆ. ನಾಲ್ಕನೇ ಸೀಸನ್ ನಲ್ಲಿ ಹಲವು ವಿಶೇಷ , ಭಕ್ತಿ ಪ್ರಧಾನ ಕಥೆಗಳಿಗೆ, ಸ್ಪೂರ್ತಿದಾಯಕ ಜೀವನಚರಿತ್ರೆಗಳಿಗೆ ನಾಟಕದ ರೂಪ ನೀಡಿ ಪ್ರಚಂಡ ಪುಟಾಣಿಗಳ ಮೂಲಕ ವೀಕ್ಷಕರಿಗೆ ರಂಜನೆ ಜೊತೆಗೆ ಜ್ಞಾನಾರ್ಜನೆಯನ್ನು ಮಾಡುತ್ತಿದೆ .
ಈ ವಾರ , ಕರ್ನಾಟಕ ಉಚ್ಚನ್ಯಾಯಾಲಯದ ಜನಪ್ರಿಯ ನ್ಯಾಯಮೂರ್ತಿಗಳು ಹಾಗು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಶ್ರೀ ಬಿ (Justice B Veerappa). ವೀರಪ್ಪ ಅವರು ಮಕ್ಕಳ ಲೋಕಕ್ಕೆ ವಿಶೇಷ ಅತಿಥಿಯಾಗಿ ಬಂದು ಪ್ರಚಂಡರ ಅಭಿನಯವನ್ನು ಆನಂದಿಸಿ , ಆಶೀರ್ವದಿಸಿ , ಸರಳ ಸುಲಭ ಅತಿಮುಖ್ಯ ಕಾನೂನಿನಲ್ಲಿ ಒಂದಾಗಿರುವ ಲೋಕ್ ಅದಾಲತ್ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮಹತ್ಕಾರ್ಯ ಮಾಡಿದ್ದಾರೆ.
3 ಕೋಟಿ ಜನರ ಪ್ರೀತಿ ಪಡೆದ ಜೊತೆ ಜೊತೆಯಲಿ ಶೀರ್ಷಿಕೆ ಗೀತೆ!
ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನ್ಯಾಯಮೂರ್ತಿಗಳೊಬ್ಬರು ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ಡ್ರಾಮಾ ಜೂನಿಯರ್ಸ್ ಸೂಕ್ತ ವೇದಿಕೆ ಎಂದು ಆಯ್ಕೆ ಮಾಡಿಕೊಂಡು ಆಗಮಿಸಿರುವುದು ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟಿದೆ ತಂಡ .
ಜಾಕೆಟ್ ಸೂಪರ್ ಅಂದಿದ್ದಕ್ಕೆ ಆಟೋಗ್ರಾಫ್ ಹಾಕಿ ಅನುಶ್ರೀಗೆ ಕೊಟ್ಟ ಶಿವಣ್ಣ; ವಿಡಿಯೋ ವೈರಲ್
ಲೋಕ್ ಅದಾಲತ್ ಎನ್ನುವ ಕಾನೂನಿನ ಮೂಲಕ ಯಾವುದೇ ಪ್ರಕರಣಗಳನ್ನು ಬಹುಬೇಗ ಇತ್ಯರ್ಥಗೊಳಿಸಬಹುದಾಗಿದೆ. ಈ ಬಗ್ಗೆ ಯಾರಿಗೂ ತಿಳಿದಿರದ ಅದೆಷ್ಟೋ ವಿಷಯಗಳನ್ನು ಮಕ್ಕಳು ಹಾಗು ನ್ಯಾಯಮೂರ್ತಿಗಳ ಮೂಲಕ ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ. ಇನ್ನು ಶ್ರೀ ಬಿ .ವೀರಪ್ಪ ಅವರ ಜೊತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಾದ ಕಾರ್ಯದರ್ಶಿಗಳಾದ ಶಶಿಧರ್ ಶೆಟ್ಟಿ , ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಿಘ್ನೇಶ್ ಕುಮಾರ್ , ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಡಿಷನಲ್ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಆಗಿರುವ ಹರೀಶ್ ಅವರು ಆಗಮಿಸಿದ್ದಾರೆ. ವೇದಿಕೆಗೆ ಆಗಮಿಸಿ ಘನತೆ ಹೆಚ್ಚಿಸಿದ ಕಾನೂನಿನ ಜ್ಞಾನ ಹೆಚ್ಚಿಸಿದ ಶ್ರೀ ಬಿ . ವೀರಪ್ಪ ಹಾಗು ಅವರ ಸಹೋದ್ಯೋಗಿಗಳಿಗೆ ಡ್ರಾಮಾ ಜೂನಿಯರ್ಸ್ ವೇದಿಕೆ ಮತ್ತು ಜೀ ಕನ್ನಡ ವಿಶೇಷ ಗೌರವ ನೀಡಿ ಅಭಿನಂದಿಸಿದೆ. ಈ ವಾರ ತಪ್ಪದೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ನೋಡಿ ನಿಮಗೆ ತಿಳಿದಿರದ ಕಾನೂನಿನ ಬಗ್ಗೆ ತಿಳಿಯಿರಿ .