3 ಕೋಟಿ ಜನರ ಪ್ರೀತಿ ಪಡೆದ ಜೊತೆ ಜೊತೆಯಲಿ ಶೀರ್ಷಿಕೆ ಗೀತೆ!

 ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಜೊತೆ ಜೊತೆಯಲಿ ಧಾರಾವಾಹಿ ಶೀರ್ಷಿಕೆ ಗೀತೆ 3 ಕೋಟಿ ವೀಕ್ಷಣೆ ಪಡೆದುಕೊಂಡಿದೆ.

Zee kannada Jothe Jotheyali serial song hits 3 crore view vcs

"ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು " ಎಂದು ವೀಕ್ಷಕರು ಜೀ ಕನ್ನಡದ ಜೊತೆ ಜೊತೆಗೆ ವಿಶೇಷವಾದ ನಂಟು ಹೊಂದಿದ್ದಾರೆ. ಅದಕ್ಕೆ ಸಾಕ್ಷಿಯಂತೆ ಕನ್ನಡಿಗರ ಮನಗೆದ್ದಿರುವ ಜೊತೆ ಜೊತೆಯಲಿ ಧಾರಾವಾಹಿಯ ಶೀರ್ಷಿಕೆ ಗೀತೆ ಯೂಟ್ಯೂಬ್‌ನಲ್ಲಿ ಮೂರು ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡು ಇತಿಹಾಸ ನಿರ್ಮಿಸಿದೆ.

ಸುನಾದ್ ಗೌತಮ್ ಅವರು ಸಂಗೀತ ಸಂಯೋಜಿಸಿರುವ ಮಾಧುರ್ಯ ತುಂಬಿದ ಈ ಹಾಡಿಗೆ ಹರ್ಷಪ್ರಿಯ ಅವರ ಪ್ರೀತಿಯ ಸಾಹಿತ್ಯವಿದ್ದು ಸರಿಗಮಪ ಖ್ಯಾತಿಯ ನಿಹಾಲ್ ತಾವ್ರೋ , ರಜತ್ ಹೆಗ್ಡೆ ಮತ್ತು ನಿನಾದ ನಾಯಕ್ ಅವರ ಸುಮಧುರ ಗಾಯನವಿದೆ.

ಧಾರಾವಾಹಿಯನ್ನು ಸಿನಿಮಾ ಶೈಲಿಯಲ್ಲಿ ಚಿತ್ರೀಕರಿಸಿ ಕಿರುತೆರೆಗೆ ಹೊಸತನ , ಸಿರಿತನವನ್ನು  ಪರಿಚಯಿಸಿರುವ  ಹೆಗ್ಗಳಿಕೆ ಹೊಂದಿರುವ ಜೊತೆಜೊತೆಯಲಿ ಯಶಸ್ವಿಯಾಗಿ 700 ಸಂಚಿಕೆಗಳನ್ನು ಪೂರೈಸಿ ಇಂದಿಗೂ  ಕುತೂಹಲ ತಿರುವುಗಳೊಂದಿಗೆ ನೋಡುಗರನ್ನು ಸೆಳೆಯುತ್ತಿದೆ. ಕಥೆ ಹಾಗೂ ನಿರೂಪಣೆಯಿಂದ ತನ್ನದೇ ಆದ ವಿಶೇಷತೆ ಮತ್ತು ವಿಭಿನ್ನತೆಯನ್ನು ಕಾಯ್ದಿರಿಸಿಕೊಂಡು ಅತಿಹೆಚ್ಚು ರೇಟಿಂಗ್ ಗಳಿಸುತ್ತ ಮನರಂಜನೆಯನ್ನು ಇಮ್ಮಡಿಗೊಳಿಸುತ್ತಿದೆ.

Zee kannada Jothe Jotheyali serial song hits 3 crore view vcs

ಕನ್ನಡ ಕಿರುತೆರೆಯ ಹೆಸರಾಂತ ನಿರ್ದೇಶಕ ಆರೂರು ಜಗದೀಶ್ ಅವರ ಜೆ ಎಸ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಗೆ ಜಗದೀಶ್ ಅವರೇ ಪ್ರಧಾನ ನಿರ್ದೇಶನದ ಜವಾಬ್ಧಾರಿ ಹೊತ್ತಿದ್ದರೆ ಉತ್ತಮ್ ಮಧು  ಅವರು ಸಂಚಿಕೆ ನಿರ್ದೇಶಕರಾಗಿದ್ದಾರೆ.  ಸಾಹಸಸಿಂಹ ಡಾ . ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ , ಮೇಘಾ ಶೆಟ್ಟಿ , ಮಾನಸ ಮನೋಹರ್ , ಹಿರಿಯ ನಟ - ನಟಿಯರಾದ ವಿಜಯಲಕ್ಷ್ಮಿ ಸಿಂಗ್ , ಶಿವಾಜಿ ಜಾದವ್ , ಅಪೂರ್ವ , ಬಿಎಂ . ವೆಂಕಟೇಶ್  ಸೇರಿದಂತೆ ಇನ್ನು ಅನೇಕ ಕಲಾವಿದರು ಅದ್ಭುತವಾಗಿ ಅಭಿನಯಿಸುತ್ತಾ ಧಾರಾವಾಹಿಯ ಜನಪ್ರಿಯತೆಗೆ ಕಾರಣರಾಗಿದ್ದಾರೆ. 

Jothe Jotheyali : ಅನು ಸಿರಿಮನೆಯೇ ಈಗ ರಾಜನಂದಿನಿ, ವಾವ್, ಎಂಥಾ ಆ್ಯಕ್ಟಿಂಗ್!

ಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ಈ ಗೀತೆ ಇಂದಿಗೂ ಅದೆಷ್ಟೋ ಜನರ ಕಾಲರ್ ಟ್ಯೂನ್ ,  ಮದುವೆ ಸಮಾರಂಭಗಳ ಸಂಭ್ರಮ ಗೀತೆಯಾಗಿ , ಸೋಷಿಯಲ್ ಮೀಡಿಯಾದಲ್ಲೂ ಅತಿಹೆಚ್ಚು ಮೆಚ್ಚುಗೆಯ ಸಂಪಾದನೆ,  ಹೆಸರಾಂತ ಸಂಗೀತಗಾರರ ವಾದ್ಯಗಳಿಂದಲೂ ನುಡಿಸಿಕೊಂಡು ತನ್ನ ಜನಪ್ರಿಯತೆಯ ವ್ಯಾಪ್ತಿಯನ್ನು ವಿಸ್ತರಿಕೊಂಡ ಕೀರ್ತಿ ಈ ಹಾಡಿಗಿದೆ. ಎಲ್ಲಕ್ಕೂ ಮಿಗಿಲಾಗಿ ಮಕ್ಕಳ ಸಹ ಗುನುಗುವ ಹಾಗೆ ಮಾಡಿದ ಹೆಗ್ಗಳಿಕೆ ಈ ಹಾಡಿನದ್ದು. 
ಇನ್ನು ಮುಂದೆಯೂ ಜನರ ಪ್ರೀತಿ , ಪ್ರೋತ್ಸಾಹ ಹೀಗೆ ಮುಂದುವರೆಯಲಿದೆ ಎಂಬ ನಂಬಿಕೆ ನಮ್ಮದು ವಾಹಿನಿ ಹಾಗು ಧಾರಾವಾಹಿ ತಂಡ ಅಭಿಪ್ರಾಯ ಪಟ್ಟಿದೆ.

ಅನು ಸಿರಿಮನೆಯೇ ಈಗ ರಾಜನಂದಿನಿ:

ಈ ಸೀರಿಯಲ್ ನೋಡಿದವರಿಗೆ ಅನು ಸಿರಿಮನೆ ಮತ್ತು ಆರ್ಯ ಸರ್ ಲವ್‌ಸ್ಟೋರಿ ಗೊತ್ತು. ಆರ್ಯವರ್ಧನ್ (Aryavardhan) ವರ್ಧನ ಕಂಪೆನಿಯ ಬಾಸ್. ಮಧ್ಯಮ ವರ್ಗದ ಅನು ಸಿರಿಮನೆ ಮುಗ್ಧ ಹುಡುಗಿ. ಆಕೆಗೆ ಆರ್ಯ ಸಾರ್ ಬಗ್ಗೆ ಆರಂಭದಿಂದಲೂ ಆಕರ್ಷಣೆ. ಕ್ರಮೇಣ ಅದು ಪ್ರೀತಿಯಾಗಿ ತಿರುಗುತ್ತದೆ. ಇನ್ನೂ ೨೦ರ ವಯಸ್ಸಿನ ಅನು 45ರ ಮಧ್ಯ ವಯಸ್ಕ ಆರ್ಯವರ್ಧನ್ ಮೇಲೆ ಲವ್ವಲ್ಲಿ(Love) ಬೀಳ್ತಾಳೆ. ಅನೇಕ ಅಡೆತಡೆಗಳನ್ನು ದಾಟಿ ಅವರಿಬ್ಬರ ಮದುವೆ ಆಗುತ್ತೆ. ಈವರೆಗಿನ ಎಪಿಸೋಡ್‌ಗಳಲ್ಲಿ ಅನು ಮತ್ತು ಆರ್ಯ ಜೋಡಿಯನ್ನು ಪ್ರೇಕ್ಷಕರು ಬಹಳ ಇಷ್ಟ ಪಟ್ಟರು. ಈ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಹುಟ್ಟಿಕೊಂಡಿತು. ಆದರೆ ಇವರಿಬ್ಬರ ಮದುವೆ ಆದ ಕೆಲವೇ ದಿನಕ್ಕೆ ಆರ್ಯವರ್ಧನ್‌ನ ಮತ್ತೊಂದು ಮುಖ ಕಾಣಲಾರಂಭಿಸಿತು. ರಾಜನಂದಿನಿ ಎಂಬ 20 ವರ್ಷಗಳ ಕೆಳಗೆ ತೀರಿಕೊಂಡ ಆರ್ಯವರ್ಧನ್ ಮೊದಲ ಹೆಂಡತಿ ಎಂಟ್ರಿ(Entry)ಯಿಂದ ಆರ್ಯವರ್ಧನ್ ಬಗ್ಗೆ ಮತ್ತೊಂದು ಸತ್ಯ ಹೊರಗೆ ಬರಲಾರಂಭಿಸಿತು. ಇದ್ದಕ್ಕಿದ್ದಂತೆ ಇಲ್ಲೀವರೆಗೆ ಅತೀ ಒಳ್ಳೆಯ ವ್ಯಕ್ತಿಯಾಗಿದ್ದ ಆರ್ಯ ವಿಲನ್ ಆಗಿ ಕಾಣಿಸಿಕೊಳ್ಳಲಾರಂಭಿಸುತ್ತಾನೆ. ಅನುಗೆ ಕನಸಿನಲ್ಲಿ ಸುಪ್ತ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ರಾಜನಂದಿನಿ ತನಗಾದ ಅನ್ಯಾಯವನ್ನು, ತನ್ನ ಕುಟುಂಬಕ್ಕೆ ಆರ್ಯ ಮಾಡುವ ದ್ರೋಹವನ್ನು ಅನುಗೆ ಹೇಳುತ್ತಾಳೆ. ಜೊತೆಗೆ ಈಗ ಅನು ಸಿರಿಮನೆ ಆಗಿರುವವಳು ಮತ್ಯಾರೂ ಅಲ್ಲ. ಅದು ಸ್ವತಃ ರಾಜನಂದಿನಿಯೇ ಅನ್ನೋದು ತಿಳಿಯುವ ಹಾಗೆ ಮಾಡ್ತಾಳೆ. ಮೊದ ಮೊದಲು ಕನಸಿನಲ್ಲಿ, ಯಾರೂ ಇಲ್ಲದಿರುವಾಗ ಕಾಣಿಸಿಕೊಳ್ಳುತ್ತಿದ್ದ ರಾಜ ನಂದಿನಿ ಇದೀಗ ಅನುವಿನೊಳಗೇ ಸೇರಿಕೊಂಡಿದ್ದಾಳೆ.

ಜೊತೆ ಜೊತೆಯಲಿ ಧಾರಾವಾಹಿ ಬದುಕು ಬದಲಿಸಿತು: Megha Shetty

ಅನು ಇದೀಗ ರಾಜನಂದಿನಿಯಾಗಿ, ಅನು ಸಿರಿಮನೆಯಾಗಿ ಎರಡೂ ಪಾತ್ರಗಳನ್ನೂ ನಿಭಾಯಿಸುತ್ತಿದ್ದಾಳೆ. ಆಫೀಸ್‌ನಲ್ಲಿ ನಡೆಯುತ್ತಿದ್ದ ಒಳ ವ್ಯವಹಾರಗಳನ್ನು ತನ್ನ ನಿಯಂತ್ರಣಕ್ಕೆ ತಗೊಂಡಿದ್ದಾಳೆ. ಇನ್ನೊಂದು ಕಡೆ ತನ್ನ ತಮ್ಮ ಹರ್ಷನಿಗೆ ಎಲ್ಲ ಅಧಿಕಾರ ಸಿಗುವಂತೆ ಮಾಡಲು ಹೊರಟಿದ್ದಾಳೆ. ಆ ಮನೆಯಲ್ಲಿ ಯಾರೂ ಹೊಗದ ರೂಮೊಂದಿದೆ. ಅದರಲ್ಲಿ ರಾಜ ಮನೆತನದವರ ಭಾವಚಿತ್ರ, ಅವರಿಗೆ ಸಂಬಂಧಿಸಿದ ವಸ್ತುಗಳೆಲ್ಲ ಇವೆ. ರಾಜ ನಂದಿನಿಯಾಗಿ ಮಾರ್ಪಟ್ಟಿರುವ ಅನು ಅದನ್ನೆಲ್ಲ ತಮ್ಮ ಹರ್ಷವರ್ಧನನಿಗೆ ತೋರಿಸುತ್ತಾಳೆ. ಆತನಿಗೆ ಈ ಬಗ್ಗೆ ಸತ್ಯ ತಿಳಿಯುವಂತೆ ಮಾಡುತ್ತಾಳೆ. ಇನ್ನೊಂದು ಕಡೆ ಆಕ್ಸಿಡೆಂಟ್(Accident) ಆಗಿ ಮಲಗಿರುವ ಆರ್ಯವರ್ಧನ್ ಬಗ್ಗೆ ಅವಳಿಗೆ ಪ್ರೀತಿ, ದ್ವೇಷ ಎರಡೂ ಇದೆ.

Latest Videos
Follow Us:
Download App:
  • android
  • ios