ಜಾಕೆಟ್ ಸೂಪರ್ ಅಂದಿದ್ದಕ್ಕೆ ಆಟೋಗ್ರಾಫ್ ಹಾಕಿ ಅನುಶ್ರೀಗೆ ಕೊಟ್ಟ ಶಿವಣ್ಣ; ವಿಡಿಯೋ ವೈರಲ್
ಶಿವಣ್ಣ ಜೊತೆ ವಿಡಿಯೋ ಹಂಚಿಕೊಂಡ ಅನುಶ್ರೀ. ಸರಳತೆಯ ಸಾಹುಕಾರ ಎಂದ ನೆಟ್ಟಿಗರು....
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕನ್ನಡ ಕಿರುತೆರೆಯಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪೆಷಲ್ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಾರವಾರವೂ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಶಿವಣ್ಣನ ಒಂದು ಜಾಕೆಟ್ ಮೇಲೆ ನಿರೂಪಕಿ ಅನುಶ್ರೀಗೆ ಕ್ರಶ್ ಆಗಿದೆ. ಜಾಕೆಟ್ ಸೂಪರ್ ಶಿವಣ್ಣ......
'ಇದು ಯಾವ ಜನ್ಮದ ಪುಣ್ಯ..ಕಳೆದ ವಾರ ಡಿಕೆಡಿ ಶೂಟ್ ವೇಳೆ ಹೇಳಿದೆ ಅಣ್ಣ ಜಾಕೆಟ್ ಸಕ್ಕತ್ ಆಗಿದೆ ಅಂತ. ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಅಂದ್ರು. ನಾನು ಸುಮ್ಮನೆ ಹೇಳಿರ್ತಾರೆ ಅನ್ಕೊಂಡೆ. ಅದರೆ ಎಷ್ಟೇ ಆದರೂ ಅಣ್ಣಾವರ ರಕ್ತ ಅಲ್ವಾ. ಆಕಾಶ ನೋಡದ ಕೈ ಪ್ರೀತಿ ಹಂಚಿದ ಕೈಗಳು ಅದು. ಹೊರಡುವ ಮುನ್ನ ಜಾಕೆಟ್ ಬಿಚ್ಚಿ ಅದರ ಮೇಲೆ 'with lots of love to dearest friend Anu' ಅಂತ ಬರೆದು ಸಹಿ ಹಾಕಿ ತಮ್ಮ ಕಯ್ಯಾರೆ ಜಾಕೆಟ್ ತೊಡಿಸಿ ಮತ್ತೊಮ್ಮೆ ಮಮತೆ ಮರೆದ ಮುತ್ತಣ್ಣ. ಥ್ಯಾಂಕ್ಯೂ ಶಿವಣ್ಣ ನಿಮ್ಮ ರೂಪದಲ್ಲಿ ನಮ್ಮ ಪರಮಾತ್ಮನನ್ನು ಕಾಣ್ತಿದ್ದೀವಿ' ಎಂದು ಅನುಶ್ರೀ ಬರೆದುಕೊಂಡಿದ್ದಾರೆ.
ಡಿಕೆಡಿ ಕಳೆದ ವಾರ ಎಪಿಸೋಡ್‌ಗೆ ಶಿವಣ್ಣ ವೈಟ್ ಆಂಟ್ ವೈಟ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಔಟ್‌ಫಿಟ್‌ಗೆ ಎಂಬ್ರಾಡರಿ ಮಾಡಿರುವ ವೈಟ್ ಜಾಕೆಟ್ ಧರಿಸಿದ್ದರು. ಈ ಜಾಕೆಟ್ ಮೇಲೆ ಅನುಶ್ರೀ ಅವರು ಕಣ್ಣು ಬಿದಿದ್ದೆ. ಸುಮ್ಮೆನ ಜಾಕೆಟ್ ಕೊಡುವುದು ಬೇಡ ಎಂದು ಹೇಳಿ ಅಲ್ಲಿದ್ದವರಿಂದ ಪೆನ್ ಪರೆದುಕೊಂಡು ಪ್ರೀತಿಯಿಂದ ಸಂದೇಶ ಬರೆದು ಕೈಯಾರ ಜಾಕೆಟ್ ತೊಡಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋಗೆ ಅರ್ಜುನ್ ಜನ್ಯಾ ಅವರು ಭಜರಂಗಿ ಚಿತ್ರಕ್ಕೆ ಶಿವಣ್ಣ ಅವರಿಗೆಂದು ಬರೆದಿರುವ ಬಾಸ್ ನಮ್ಮ ಬಾಸು ಹಾಡನ್ನು ಸೇರಿಸಿದ್ದಾರೆ. ಜಾಕೆಟ್ ಪಡೆದುಕೊಂಡ ಅನುಶ್ರೀ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹಲವು ವರ್ಷಗಳಿಂದ ಅನುಶ್ರೀ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರತಿಯೊಂದು ರಿಯಾಲಿಟಿ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ. ಹೀಗಾಗಿ ಯಾರನ್ನು ಹೇಗೆ ಮಾತನಾಡಿಸಬೇಕು ಯಾವ ರೀತಿ ಮಾತನಾಡಿಸಬೇಕು ಅನ್ನೋ ಕಾರ್ಡ್ ಅನುಶ್ರೀಗೆ ಗೊತ್ತಿದೆ. ಅನುಶ್ರೀಯಿಂದಲೇ ಟಿಅರ್‌ಪಿ ಟಾಪ್‌ನಲ್ಲಿ ಇದೆ ಎಂದು ಅನೇಕರು ಹೇಳುವುದು ಕಹಿ ಸತ್ಯವೇ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ನಂತರ ಶಿವಣ್ಣ ಒಪ್ಪಿಕೊಂಡಿರುವ ಮೊದಲ ರಿಯಾಲಿಟಿ ಶೋ ಇದು. ಮನಸ್ಸು ಗಟ್ಟಿ ಮಾಡಿಕೊಂಡು ಪ್ರತಿಯೊಂದು ಕ್ಷಣವೂ ಅಮೂಲ್ಯ ಎಂದು ಕಳೆಯುತ್ತಾರೆ. ಸ್ಪರ್ಧಿಗಳು ಅಪ್ಪುಗೆ ಸಂಬಂಧ ಪಟ್ಟ ಡ್ಯಾನ್ಸ್, ವಿಡಿಯೋ ಅಥವಾ ಫೋಟೋ ಬಳಸಿದಾಗ ಶಿವಣ್ಣ ಭಾವುಕರಾಗುತ್ತಾರೆ. ಬೇಧ ಭಾವ ಮಾಡದೆ ಶಿವಣ್ಣ ಪ್ರತಿಯೊಬ್ಬರ ಜೊತೆ ನಡೆದುಕೊಳ್ಳುವ ರೀತಿ ವೀಕ್ಷಕರು ಫಿದಾ ಆಗಿದ್ದಾರೆ.
ನೆಚ್ಚಿನ ಹಾಡು ಬಂದರೆ ಸಾಕು ಶಿವಣ್ಣ ವೇದಿಕೆ ಮೇಲೆ ಓಡಿ ಹೋಗಿ ಡ್ಯಾನ್ಸ್ ಮಾಡುತ್ತಾರೆ. ಸ್ಪರ್ಧಿಗಳು ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದರೆ ಅವರೇ ಹೋಗಿ ಫಯರ್ ಬ್ರ್ಯಾಂಡ್ ಹೊಡೆಯುತ್ತಾರೆ. ಯಾರೇ ಕಾಲು ಮುಟ್ಟಿ ನಮಸ್ಕಾರ ಮಾಡಲು ಬಂದರೂ ಬೇಡ ಹೀಗೆ ಮಾಡಬೇಡಿ ಅಭಿಮಾನಿಗಳೇ ದೇವರು ಎಂದು ಹೇಳುತ್ತಾರೆ. ಈ ಸ್ಟೆಪ್ ಹೇಳಿ ಕೊಡಬೇಕು ಟ್ರೈ ಮಾಡಿ ಅಥವಾ ನಮ್ಮ ಜೊತೆ ಡ್ಯಾನ್ಸ್ ಮಾಡಿ ಅಂದ್ರೆ ಒಂದು ಕ್ಷಣವೂ ಯೋಚಿಸದೇ ಬಂದು ಕಲಿತು ಡ್ಯಾನ್ಸ್ ಮಾಡುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಡಾ.ಶಿವರಾಜ್‌ಕುಮಾರ್ ಅವರನ್ನು ಸರಳತೆಯ ಸಾಹುಕಾರ ಎಂದು ಹೇಳುತ್ತಾರೆ.