ಕನ್ನಡತಿ ಸೀರಿಯಲ್‌ ಮುಗಿದೇ ಹೋಗ್ತಿದೆಯಾ? ಸೀರಿಯಲ್ ಫ್ಯಾನ್ಸ್‌ಗೆ ಬಿಗ್‌ ಶಾಕ್‌!

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಕನ್ನಡತಿ' ಮುಗಿದೆಯೇ ಹೋಗ್ತಿದೆಯಾ? ಸದ್ಯ ಕತೆ ತೆಗೆದುಕೊಳ್ತಿರೋ ತಿರುವು ನೋಡಿದ್ರೆ ಈ ಮಾತು ನಿಜ ಅನಿಸುತ್ತೆ. ಈ ಸುದ್ದಿ ಕನ್ನಡತಿ ಫ್ಯಾನ್ಸ್‌ಗಂತೂ ಬಿಗ್‌ ಶಾಕ್‌!

Is Kanndathi serial winding up?

ಇರೋ ಬರೋ ಕನ್ನಡ ಸೀರಿಯಲ್‌ಗಳಲ್ಲಿ(Serial) ಡಿಫರೆಂಟ್ ಕತೆಯ ಮೂಲಕ ಆರಂಭದಿಂದಲೇ ಗಮನ ಸೆಳೀತಾ ಇರೋದು 'ಕನ್ನಡತಿ'(Kannadathi). ಬೇರೆಲ್ಲ ಸೀರಿಯಲ್‌ಗೆ ಗೃಹಿಣಿಯರು, ಮಧ್ಯವಯಸ್ಸು ದಾಟಿದ ಹೆಂಗಸರೇ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಾಗಿದ್ರೆ ಕನ್ನಡತಿ ಸೀರಿಯಲ್‌ ಮಾತ್ರ ಕಾಲೇಜ್‌ ಸ್ಟೂಡೆಂಟ್ಸ್‌(Collage students), ಯಂಗ್‌ ಜನರೇಶನ್‌ನ(Young generation) ಆಡಿಯನ್ಸ್‌ಅನ್ನೂ ಹಿಡಿದಿಟ್ಟುಕೊಂಡಿರೋ ಧಾರಾವಾಹಿ. ಇದರ ಕಥೆಯಲ್ಲಿ ಕನ್ನಡದ ಕಂಪಿದೆ. ಹೆಚ್ಚಿನ ಸೀರಿಯಲ್‌ಗಳೂ ಹಿಂದಿ(Hindi) ಸೀರಿಯಲ್‌ಗಳ ಯಥಾವತ್‌ ಕಾಪಿ ಅಂದುಕೊಳ್ತಿರುವಾಗ ಇದೊಂದು ಅಚ್ಚಗನ್ನಡ ಧಾರಾವಾಹಿಯಾಗಿ ಹೊರಬಂತು. ಇದರ ಜನಪ್ರಿಯತೆ ಯಾವ ಲೆವೆಲ್‌ವರೆಗೂ ಹೋಯ್ತು ಅಂದರೆ ಹಿಂದಿಯವರೇ ಈ ಸೀರಿಯಲ್‌ಅನ್ನು ಡಬ್‌(Dub) ಮಾಡಲು ನಿರ್ಧರಿಸಿದರು. 'ಅಜ್ನಬಿ ಬನೇ ಹಮ್‌ ಸಫರ್‌' (Ajnabi Hum Suffer)ಅನ್ನೋ ಹೆಸರಲ್ಲಿ 'ಕನ್ನಡತಿ' ಹಿಂದಿಯಲ್ಲೂ ಮಿಂಚುತ್ತಿದೆ. ಈ ಧಾರಾವಾಹಿ ಬೇರೆ ಸೀರಿಯಲ್‌ನಿಂದ ಸ್ಫೂರ್ತಿ ಪಡೆದಿರಬಹುದು. ಆದರೆ ಕನ್ನಡತನ ಉಳಿಸಿಕೊಂಡಿರೋದು ಇದರ ಗ್ರೇಟ್‌ನೆಸ್‌(Greatness).

ಹೀಗೆ ಕ್ಲಾಸ್‌ (Class)ಹಾಗೂ ಮಾಸ್(Mass) ಆಡಿಯನ್ಸ್‌ಗಳನ್ನು ಜೊತೆಯಾಗಿ ಸಂಪಾದಿಸಿರೋ ಈ ಅಚ್ಚಗನ್ನಡ ಧಾರಾವಾಹಿ ಟಿಆರ್‌ಪಿ(TRP)ಯಲ್ಲಿ ಹಿಂದೆ ಬೀಳದಿದ್ದರೂ ಇದೀಗ ಸೀರಿಯಲ್‌ ವೈಂಡ್‌ಅಪ್‌(windup) ಮಾಡ್ತಿದ್ದಾರೆ ಅನ್ನೋ ಸುದ್ದಿ ಹಬ್ಬುತ್ತಿದೆ. ಇದಕ್ಕೆ ಎರಡು ಕಾರಣ. ಮೊದಲ ಕಾರಣ ಈ ಸೀರಿಯಲ್‌ನ ಕತೆ. ಈ ಸೀರಿಯಲ್‌ನ ಕತೆ ಇರೋದೇ ಸೌಪರ್ಣಿಕಾ(Souparnika) ಅನ್ನೋ ಹುಡುಗಿ ಮೇಲೆ. ಕೆಳ ಮಧ್ಯಮ ವರ್ಗದ ಮಲತಾಯಿಯ ನಿರ್ಲಕ್ಷ್ಯದಿಂದ ಬೆಳೆದ ಈ ಸ್ವಾಭಿಮಾನಿ ಹುಡುಗಿ ಹೇಗೆ ಕೋಟ್ಯಾಧಿಪತಿ ಆಗ್ತಾಳೆ, ತನ್ನ ನೈಜ ಐಡೆಂಟಿಟಿಯನ್ನು ಮರೆ ಮಾಚಿ ದೊಡ್ಡ ಕಂಪನಿ ಓನರ್‌ ಆಗ್ತಾಳೆ ಅನ್ನೋದು. ಕುಗ್ರಾಮದಿಂದ ಬಂದ ಸೌಪರ್ಣಿಕಾ, ಭುವನೇಶ್ವರಿ (Bhuvaneshvari) ಎಂಬ ಹೆಸರಿನಲ್ಲಿ ಸ್ವಂತ ಪ್ರಯತ್ನದಿಂದ ಕನ್ನಡವನ್ನೇ ಮುಖ್ಯವಾಗಿಟ್ಟು ಮುಂದೆ ಬರುತ್ತಾಳೆ. ತನ್ನ ಒಳ್ಳೆತನದಿಂದಲೇ ಜಗತ್ತನ್ನು ಗೆಲ್ಲುತ್ತಾ ಹೋಗುತ್ತಾಳೆ.

ಇದನ್ನೂ ಓದಿ: ಶೀಘ್ರದಲ್ಲೇ ಪ್ರಸಾರ ನಿಲ್ಲಿಸಲಿದೆ 'ಮನಸೆಲ್ಲ ನೀನೆ' ಧಾರಾವಾಹಿ?

ಈಕೆಯ ಸಾಮರ್ಥ್ಯದ ಬಗ್ಗೆ ಇದ್ದ ದೂರದೃಷ್ಟಿಯಲ್ಲೇ ಮಾಲಾ ಕೆಫೆಯನ್ನು ಕಟ್ಟಿ ಬೆಳೆಸಿದ ರತ್ನಮಾಲಾ ತನ್ನ ಸಮಸ್ತ ಆಸ್ತಿಯನ್ನೂ ಈಕೆಗೆ ಧಾರೆ ಎರೆಯುತ್ತಾರೆ. ಇದು ಈ ಸೀರಿಯಲ್ ಕಥೆಯ ಜಿಸ್ಟ್‌(gist). ಈ ಕಥೆಯ ಪ್ರಕಾರ ಸೀರಿಯಲ್‌ ಸದ್ಯ ಕೊನೆಯ ಘಟ್ಟಕ್ಕೆ ಬರುತ್ತಿದೆ. ಅಮ್ಮಮ್ಮ ತನ್ನ ಸಮಸ್ತ ಆಸ್ತಿಯ ಹಕ್ಕನ್ನೂ ಭುವಿ ನೀಡಿದ್ದನ್ನು ರಿವೀಲ್ ಮಾಡದಿದ್ದರೂ ಆ ಆಸ್ತಿ ಭುವಿಗೆ ಬಂದ ಮೇಲೆ ಏನೂ ಸಮಸ್ಯೆ ಬರದಂತೆ ನಿಭಾಯಿಸಿದ್ದಾಳೆ. ಇತ್ತ ಭುವಿಯನ್ನು ಮನಸಾರೆ ಮೆಚ್ಚಿರುವ ಹರ್ಷ (Harsha) ಅವಳನ್ನು ಮದುವೆ ಆಗಲು ಮುಂದಾಗಿದ್ದಾನೆ. ಇನ್ನೇನು ಕೆಲವೇ ದಿನಗಳಲ್ಲಿ ಹಲವು ಅಡ್ಡಿಗಳ ನಡುವೆ ಇವರ ಮದುವೆ ನಡೆಯಲಿದೆ. ಸದ್ಯದ ರತ್ನಮಾಲಾ (Rathnamala) ಸ್ಥಿತಿ ನೋಡಿದರೆ ಆಕೆ ಈ ಮದುವೆಗಾಗಿ ಜೀವ ಹಿಡಿದಿಟ್ಟುಕೊಂಡಿರೋ ಹಾಗಿದೆ.

ಇದನ್ನೂ ಓದಿ: ಭುವನೇಶ್ವರಿ ದೇವಾಲಯದಲ್ಲಿ ಹರ್ಷ ಭುವಿ, ಇಲ್ಲೇ ನಡಿಯುತ್ತಾ ಕನ್ನಡದ ಮದುವೆ?

ಈ ಮದುವೆಯ ಬಳಿಕ ಅಮ್ಮಮ್ಮ ಅರ್ಥಾತ್ ರತ್ನಮಾಲಾ ಕ್ಯಾರೆಕ್ಟರ್ ಕಳಚಿ ಬೀಳುತ್ತೆ. ಇಡೀ ಆಸ್ತಿಯ ಒಡತಿಯಾಗಿ ಭುವಿ, ಆಕೆಗೆ ಬೆಂಗಾವಲಾಗಿ ಹರ್ಷ ಇರುತ್ತಾನೆ. ಆಕೆ ಇದನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ ಅನ್ನುವಲ್ಲಿಗೆ ಕಥೆ ಮುಗಿಯೋ ಸಾಧ್ಯತೆ ಇದೆ.

ಈ ಸೀರಿಯಲ್ ನಿಲ್ಲುತ್ತೆ ಅನ್ನೋದಕ್ಕೆ ಇನ್ನೊಂದು ಕಾರಣ ಹೀರೋ ಹರ್ಷನ ಪಾತ್ರ ಮಾಡಿರೋ ಕಿರಣ್‌ ರಾಜ್‌ ಹಾಕಿರೋ ಮೋಟಿವೇಶನಲ್ ಕೋಟ್‌(Motivational quote). ಇದರಲ್ಲಿ ಅವರು ಸೀರಿಯಲ್ ಎಂಡ್ ಆಗೋ ಬಗ್ಗೆ ಸಣ್ಣ ಹಿಂಟ್ ಕೊಟ್ಟಿದ್ದಾರೆ ಅಂತ ಕೆಲವರು ಅಂದುಕೊಂಡಿದ್ದಾರೆ. ಅಂತ್ಯ ಮತ್ತು ಆರಂಭಗಳ ಬಗ್ಗೆ ಅವರು ಹಾಕಿರೋ ಸ್ಟೇಟಸ್(Status) ನೋಡಿ ಹಲವರಿಗೆ ಈ ಸೀರಿಯಲ್ ಮುಕ್ತಾಯವಾಗುತ್ತಾ ಅನ್ನೋ ಅನುಮಾನ ಬಂದಿದೆ. 

ಇದನ್ನೂ ಓದಿ: ಕಿರುತೆರೆ ನಟಿ Nia Sharma ಅವರ ಹಾಟ್‌ ಆಂಡ್ ಬೋಲ್ಡ್‌ ಫೋಟೋಶೂಟ್‌

ಆದರೆ ಸೀರಿಯಲ್ ಟೀಮ್ ಮಾತ್ರ ಈ ಸುದ್ದಿ ನಿರಾಕರಿಸಿದೆ. ಸದ್ಯದಲ್ಲೇ ಹರ್ಷ ಭುವಿ(Harsha Bhuvi) ಮದುವೆ ನಡೀಲಿಕ್ಕಿದೆ. ನಾವೆಲ್ಲ ಆ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದೇವೆ. ಕನ್ನಡತಿ ಅಭಿಮಾನಿಗಳಿಗೆ ದೊಡ್ಡ ದೊಡ್ಡ ಅಚ್ಚರಿಗಳು ಮುಂದಿವೆ ಎಂಬ ಬಗೆಯ ಮಾತುಗಳನ್ನು ಹೇಳಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಹೆಚ್ಚೆಂದರೆ ಜೂನ್ ಕೊನೆ ಅಥವಾ ಜುಲೈವರೆಗೆ ಕನ್ನಡತಿ ಸೀರಿಯಲ್ ಇರಬಹುದು, ಆಮೇಲೆ ವೈಂಡ್‌ಅಪ್ ಆಗಬಹುದು ಅನ್ನೋ ಮಾತು ಸದ್ಯ ಸೀರಿಯಲ್ ವಲಯದಲ್ಲಿ ಹರಿದಾಡುತ್ತಿದೆ. ಯಶವಂತ್ ಪಾಂಡು(Yashvanth Pandu) ನಿರ್ದೇಶನದ ಈ ಸೀರಿಯಲ್‌ನಲ್ಲಿ ರಂಜನಿ ರಾಘವನ್(Ranjini Raghavan), ಕಿರಣ್‌ರಾಜ್‌(Kiran Raj), ಚೀತ್ಕಲಾ ಬಿರಾದಾರ್(Chithkala biradar), ಸಾರಾ ಅಣ್ಣಯ್ಯ(Sara annaiah), ಆರೋಹಿ ನೈನಾ ಮೊದಲಾದವರು ಮುಖ್ಯಪಾತ್ರಗಳಲ್ಲಿದ್ದಾರೆ. ವಿಕಾಸ್ ನೇಗಿಲೋಣಿ ಅವರ ಚಿತ್ರಕಥೆ, ಮಂಜುನಾಥ್ ಭಟ್ ಸಂಭಾಷಣೆ ಇದೆ.

Latest Videos
Follow Us:
Download App:
  • android
  • ios