ಶೀಘ್ರದಲ್ಲೇ ಪ್ರಸಾರ ನಿಲ್ಲಿಸಲಿದೆ 'ಮನಸೆಲ್ಲ ನೀನೆ' ಧಾರಾವಾಹಿ?
ಮನಸೆಲ್ಲಾ ನೀನೆ ಧಾರಾವಾಹಿ ಸಧ್ಯದಲ್ಲೇ ತನ್ನ ಪಯಣ ಮುಗಿಸುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಈ ಬಗ್ಗೆ ಧಾರಾವಾಹಿ ತಂಡದಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಅಂದಹಾಗೆ ಸದ್ಯ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ರಾಗಾ ಮತ್ತು ಅರುಣ್ ಪಾತ್ರಗಳು ಪ್ರೇಕ್ಷಕರ ಮನಗೆದ್ದಿದ್ದವು.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ. ಹಾಗೂ ಹೊಸ ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಲೇ ಇವೆ. ಅನೇಕ ಧಾರಾವಾಹಿಗಳು ಟಿಆರ್‌ಪಿ ಇಲ್ಲದ ಕಾರಣ ದಿಢೀರ್ ಪ್ರಸಾರ ನಿಲ್ಲಿಸುತ್ತವೆ. ಕಿರುತೆರೆ ಲೋಕದಲ್ಲಿ ಧಾರಾವಾಹಿಗಳ ನಡುವೆ ಪೈಪೋಟಿ ಜೋರಾಗಿದೆ. ಪ್ರೇಕ್ಷಕರನ್ನು ಮೆಚ್ಚಿಸುವ, ಅವರ ಗಮನ ಸೆಳೆಯುವ ಧಾರಾವಾಹಿಗಳನ್ನು ಕಟ್ಟಿಕೊಡುವುದು ಚಾಲೆಂಜಿಂಗ್ ಕೆಲಸವಾಗಿದೆ. ಪ್ರಾರಂಭದಲ್ಲಿ ಧಾರಾವಾಹಿಗಳು ಭಾರಿ ಕುತೂಹಲ ಮತ್ತು ನಿರೀಕ್ಷೆಯನ್ನು ಮೂಡಿಸಿರುತ್ತವೆ. ಆದರೆ ಅದನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವುದು ಕಷ್ಟದ ಕೆಲಸ.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಸ್ಟಾರ್ ಸುವರ್ಣ(Star Suvarna) ವಾಹಿನಿಯಲ್ಲಿ ಪಯಣ ಮುಗಿಸಿದ ಧಾರಾವಾಹಿಗಳ ಸಂಖ್ಯೆ ಹೆಚ್ಚಿಸಿದೆ. ಅದರಲ್ಲಿ ಇಂತಿ ನಿಮ್ಮ ಆಶಾ, ಮತ್ತೆ ವಸಂತ, ಜೀವ ಹೂವಾಗಿದೆ ಮತ್ತು ರಾಧೆ ಶ್ಯಾಮ, ಸಂಘರ್ಷ ಹೀಗೆ ಮುಂತಾದ ಧಾರಾವಾಹಿಗಳು ತನ್ನ ಪ್ರಸಾರ ನಿಲ್ಲಿಸುವ ಮೂಲಕ ಪ್ರೇಕ್ಷಕರಿಗೆ ಶಾಕ್ ನೀಡಿವೆ. ಇದೀಗ ಮತ್ತೊಂದು ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹೌದು ಮನಸೆಲ್ಲಾ ನೀನೆ ಧಾರಾವಾಹಿ ಸಧ್ಯದಲ್ಲೇ ತನ್ನ ಪಯಣ ಮುಗಿಸುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಆದರೆ ಈ ಬಗ್ಗೆ ಧಾರಾವಾಹಿ ತಂಡದಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಅಂದಹಾಗೆ ಸದ್ಯ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ರಾಗಾ ಮತ್ತು ಅರುಣ್ ಪಾತ್ರಗಳು ಪ್ರೇಕ್ಷಕರ ಮನಗೆದ್ದಿತ್ತು. ಆದರೆ ಇನ್ಮುಂದೆ ಇರಲ್ಲ ಎನ್ನುವ ಬೇಸರದ ಸಂಗತಿ ಬಹಿರಂಗವಾಗಿದೆ. ಅಂದಹಾಗೆ ಈ ಧಾರಾವಾಹಿಯಲ್ಲಿ ಮೊದಲು ನಾಯಕಿ ಪಾತ್ರದಲ್ಲಿ ರಶ್ಮಿ ಪ್ರಭಾಕರ್ ಕಾಣಿಸಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣದಿಂದ ರಶ್ಮಿಕಾ ಧಾರಾವಾಹಿಯಿಂದ ಹೊರನಡೆದಿದ್ದರು. ಅವರ ಜಾಗಕ್ಕೆ ನಟಿ ಪ್ರಿಯಾಂಕಾ ಎಂಟ್ರಿ ಕೊಟ್ಟಿದ್ದರು. ಪ್ರಿಯಾಂಕಾ, ರಾಗಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕನಾಗಿ ಸುಜಿತ್ ಗೌಡ ನಟಿಸುತ್ತಿದ್ದಾರೆ.
'ಅರ್ಧಾಂಗಿ'ಯಲ್ಲಿ ಪ್ರಿಯಾಂಕಾ ಉಪೇಂದ್ರ; ಹೊಸ ಧಾರಾವಾಹಿ ಬಗ್ಗೆ ನಟಿ ಹೇಳಿದ್ದೇನು?
ನಟ ಸುಜಿತ್ ಅರುಣ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಥಮ ಪ್ರಸಾದ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಧಾರಾವಾಹಿ ಕೂಡ ಮುಕ್ತಾಯದ ಹಂತಕ್ಕೆ ಬಂದಿದ್ದು ಶೀಘ್ರದಲ್ಲೇ ಪ್ರಸಾರ ನಿಲ್ಲಿಸಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಕಿರುತೆರೆ ಪ್ರೇಕ್ಷಕರಿಗೆ ಬೇಸರ ಸುದ್ದಿ; ಪ್ರಸಾರ ನಿಲ್ಲಿಸುತ್ತಿದೆ ಸ್ಟಾರ್ ಸುವರ್ಣ ವಾಹಿನಿಯ ಮತ್ತೊಂದು ಧಾರಾವಾಹಿ
ಹೊಸ ಧಾರಾವಾಹಿ ಅರ್ಧಾಂಗಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಅರ್ಧಾಂಗಿ ಪ್ರಸಾರವಾಗುತ್ತಿದೆ. ಈಗಾಗಲೇ ಪ್ರೋಮ್ ಬಿಡುಗಡೆಯಾಗಿದ್ದು ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಈ ಧಾರಾವಾಹಿಗೆ ನಟ ಪ್ರಿಯಾಂಕಾ ಉಪೇಂದ್ರ ರಾಯಭಾರಿಯಾಗಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕ ದಿಗಂತ್‌ಗೆ ಆಕ್ಸಿಡೆಂಟ್‌ನಲ್ಲಿ ತಲೆಗೆ ಪೆಟ್ಟು ಬಿದ್ದು 8 ವರ್ಷದ ಮಗುವಿನಂತಾಗಿರುತ್ತಾನೆ. ಆತನನ್ನು ಮದುವೆಯಾಗುವ ಅದಿತಿ ಆತನಿಗೆ ಆಸರೆಯಾಗಿ ಧೈರ್ಯ ತುಂಬುವ ಹಿನ್ನೆಲೆ ಧಾರಾವಾಹಿಯಾಗಿದೆ. ಧಾರಾವಾಹಿಗೆ ಎಮ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.