Asianet Suvarna News Asianet Suvarna News
breaking news image

ಉಡಿಸುವೆ ಬೆಳಕಿನ ಸೀರೆಯಾ.. ಸೀತಾ ರಾಮರ ಸೀರೆ ರೊಮ್ಯಾನ್ಸ್ ನೋಡಿ!

ಸೀತಾ ರಾಮರ ಮದುವೆ ಗಮ್ಮತ್ತು ಶುರುವಾಗಿದೆ. ಈ ನಡುವೆ ಸೀರೆ ನೆವದಲ್ಲಿ ರೊಮ್ಯಾಂಟಿಕ್ ಸೀನ್ ಬಂದಿದೆ. ಮುಖ ಮುಚ್ಕೊಂಡು ಒಂದೇ ಕಣ್ಣಲ್ಲಿ ಈ ಸೀನ್ ಕಣ್ತುಂಬಿಕೊಳ್ತಿದ್ದಾರೆ ಜಾಣ ವೀಕ್ಷಕರು.

In seetha rama serial new romantic scene of Vaishnavi Gowda and Gagan Channappa bni
Author
First Published Jul 2, 2024, 12:20 PM IST

ಸೀತಾರಾಮ ಕಲ್ಯಾಣ ಭರ್ಜರಿಯಾಗಿ ನಡೀತಿದೆ. ಪ್ರೋಮೋದಲ್ಲಿ ಆ ವೈಭವಗಳೆಲ್ಲ ಒಂದೊಂದಾಗಿ ವೀಕ್ಷಕರನ್ನು ತಲುಪುತ್ತಿದೆ. ಅದರಲ್ಲಿ ಸೀತಾ ಮತ್ತು ರಾಮರ ನಡುವಿನ ಕಣ್ಣಾಮುಚ್ಚಾಲೆ ಸೀನ್‌ಗಳಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಸೀತೆಗಾಗಿ ಕೊರಳುದ್ದ ಮಾಡಿ ಹುಡುಕಾಡುವ ರಾಮನನ್ನು ಹುಡುಕಿಕೊಂಡು ಪುಟಾಣಿ ಸಿಹಿ ಬಂದಿದ್ದಾಳೆ. ಸಿಹಿ ತನ್ನ ಮಗಳು ಎನ್ನುವ ರಾಮ ಅವಳನ್ನೆತ್ತಿ ಅಕ್ಕರೆಯಿಂದ ಮುತ್ತು ಕೊಡುತ್ತಾನೆ. ನಂಗೆ ಊಟ ಹೆಚ್ಚಾದರೆ ಸೀತಮ್ಮಂಗೆ ಕೊಡ್ತೀನಿ, ಫ್ರೆಂಡ್ ನೀನ್ ಕೊಟ್ಟ ಮುತ್ತೂ ಹೆಚ್ಚಾಗಿದೆ ಸೀತಮ್ಮಂಗೆ ಕೊಡ್ತೀನಿ.. ಅಂತ ತರಲೆ ಸುಬ್ಬಿ ಸಿಹಿ ಅಲ್ಲಿಂದ ಓಡ್ತಾಳೆ. ರಾಮ ಏನೋ ಹೇಳಲು ಬಾಯಿ ತೆರೆಯುವಷ್ಟರಲ್ಲಿ ಅವಳು ಅಲ್ಲಿಂದ ಮಾಯವಾಗಿ ಸೀತಾ ರಾಮಲ್ಲಿ ಪ್ರತ್ಯಕ್ಷ,

ಬಂದು ಸೀತಾಗೆ ಮುತ್ತು ಕೊಡುವ ಸಿಹಿ. ಇದನ್ನು ಕಂಡು ತನ್ನ ಅಮ್ಮನ ಮೇಲೆ ಸಿಹಿಗೆ ಮುದ್ದು ಬಂದಿದೆ ಅಂತಲೇ ಅಂದುಕೊಂಡು ಸೀತಾ ವಿಚಾರಿಸಿದರೆ ಅದು ರಾಮನ ಮುತ್ತು ಅಂತಾಳೆ ಸಿಹಿ. ಅಲ್ಲೇ ಇದ್ದ ಪ್ರಿಯಾ ಇದನ್ನೇ ಹಿಡ್ಕೊಂಡು ಇನ್ನೊಂದು ಬದಿ ರಾಮನ ಬಳಿ ಇರುವ ತನ್ನ ಗಂಡ ಅಶೋಕಂಗೆ ಕಾಲ್ ಮಾಡಿ ತರಲೆ ಮಾಡೋದಕ್ಕೆ ಶುರು ಮಾಡ್ತಾಳೆ. ಈ ಎಪಿಸೋಡ್ ಸಖತ್ ಚೆಂದಕ್ಕೆ ಮೂಡಿಬಂದಿದೆ.

 ಸೀತಾ-ರಾಮರ ಮದ್ವೆಗೆ ಅಬ್ಬಾ ಹೇಗೆಲ್ಲಾ ಭರ್ಜರಿ ರೆಡಿ ಮಾಡಲಾಗಿದೆ ನೋಡಿ: ಶೂಟಿಂಗ್ ಸೆಟ್​ ವಿಡಿಯೋ ವೈರಲ್​

ಇದೀಗ ಇನ್ನೂ ಚೆಂದಕೆ ಬಂದಿರೊ ಎಪಿಸೋಡ್ ಅಂದರೆ ರಾಮ ಸೀತೆಗೆ ಸೀರೆ ಉಡಿಸೋ ಸೀನ್. ಇದರಲ್ಲಿ ಸೀತೆ ಕೈಗೆಲ್ಲ ಮಹೆಂದಿ ಹಚ್ಚಿಕೊಂಡಿದ್ದಾಳೆ. ಅತ್ತಿಗೆ ಅವಳಿಗೆ ಸೀರೆ ಉಡಿಸ್ತಿದ್ದಾರೆ. ನಡುವೆ ಅನುಶ್ರೀ ಬಂದರು ಅಂತ ಯಾರೋ ಕೂಗಿ ಕೊಳ್ತಾರೆ. ಅನುಶ್ರೀ ನೋಡೋ ಕ್ರೇಜ್‌ನಿಂದ ಅತ್ತಿಗೆ ಸೀರೆ ಉಡಿಸೋದನ್ನು ಬಿಟ್ಟು ಹೊರಗೆ ಓಡ್ತಾಳೆ. ಆಗ ಅಲ್ಲಿ ಪ್ರತ್ಯಕ್ಷ ಆಗೋದು ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ರಾಮ. ರಾಮನೆದುರು ಅರ್ಧ ಸೀರೆ ಉಟ್ಟ ಸೀತೆ ಇದ್ದಾಳೆ. ಅವಳ ಕೈ ಇಡೀ ಮೆಹೆಂದಿ ಇದೆ. ಅವಳು ಸೀರೆ ಉಡೋ ಸ್ಥಿತಿಯಲ್ಲಿ ಇಲ್ಲ. ಸೋ ರಾಮನೇ ಉಡಿಸಬೇಕು. ಆದರೆ ರಾಮ ಒಳ್ಳೇವ್ನಲ್ವಾ, ಮದುವೆಗೆ ಮೊದಲು ಸೀತೆಯನ್ನು ಬೇರೆ ಥರ ನೋಡಲ್ಲ. ಸೋ ಕಣ್ಣಿಗೆ ಬಟ್ಟೆ ಕಟ್ಕೊಂಡೇ ಸೀರೆ ಉಡಿಸ್ತಾನೆ.

ಇದಕೆ ಕಾಯ್ಕಿಣಿ ಬರೆದ 'ಉಡಿಸುವೆ ಬೆಳಕಿನ ಸೀರೆಯ' ಹಾಡಿನ ಬ್ಯಾಗ್ರೌಂಡ್ ಇದೆ. ಬಹಳ ಆರ್ಟಿಸ್ಟಿಕ್ ಆಗಿ ಈ ಸೀನ್ ಮೂಡಿ ಬಂದಿದೆ. ರಾಮ ಸೀತೆಗೆ ಸೀರೆ ಉಡಿಸ್ತಿದ್ರೆ ವೀಕ್ಷಕರು ಮುಖ ಮುಚ್ಕೊಂಡು ಒಂದೇ ಕಣ್ಣಲ್ಲಿ ನೋಡ್ತಿದ್ದಾರೆ. ಕಾಮೆಂಟ್ ಸೆಕ್ಷನ್ ಹಾರ್ಟ್ ಸಿಂಬಲ್, ಬೆಂಕಿ ಸಿಂಬಲ್ ಗಳಿಂದ ತುಂಬಿ ಹೋಗಿವೆ.

ಇದೇ ಸಂದರ್ಭದಲ್ಲಿ ಭಾರ್ಗವಿ ತಾನು ಮಾಡಬೇಕಾದ ಎಲ್ಲ ಕುತಂತ್ರಗಳನ್ನು ಈಗ ರೆಡಿ ಇಟ್ಟುಕೊಂಡಿದ್ದಾಳೆ. ಇವರ ಮದುವೆಯಿಂದಲೇ ಅವಳ ದ್ವೇಷ ಆರಂಭವಾಗುತ್ತದೆ. ಅವಳು ಮಾಡಬೇಕಾದ ಮೊದಲ ಕೆಲಸವನ್ನ ಅವಳು ಈಗಾಗಲೇ ಮಾಡಿದ್ದಾಳೆ.

 ಗುಟ್ಟು ಬಯಲಾದ ಭಯದಲ್ಲಿ ಭಾಗ್ಯ! ಕುಸುಮಾಳಿಂದ ತಾಂಡವ್‌ಗೆ ಚಪ್ಲಿ ಸೇವೆ ಗ್ಯಾರಂಟಿ ಅಂತಿದ್ದಾರೆ ಜನ!

ಅವಳು ಮಾಡಿದ ಮೊದಲ ಕೆಲಸವೇ ಸಿಹಿಯನ್ನು ಬೇಸರ ಮಾಡುವುದು. ಅವಳಿಗೆ ಅಮ್ಮ ಹಾಗೂ ಅಪ್ಪನ ಮಧ್ಯೆ ತನಗೆ ಎಲ್ಲೂ ಜಾಗ ಇಲ್ಲ ಎಂದು ಅನಿಸುವಂತೆ ಮಾಡಿ ಅವಳಿಗೆ ಅವರನ್ನು ಕಂಡರೆ ಆಗದಂತೆ ಮಾಡುವುದು. ಆ ರೀತಿಯ ಕೆಲವನ್ನು ಮಾಡುತ್ತ ಇದ್ದಾಳೆ. ಆದರೆ ಈ ವಿಚಾರ ಯಾರಿಗೂ ಗೊತ್ತಾಗೋದಿಲ್ಲ.

ಮದುವೆ ಆಗುತ್ತಿರುವ ಸಂದರ್ಭದಲ್ಲಿ ಅವಳನ್ನು ಪಕ್ಕಕ್ಕೆ ಕರೆದು ಸಿಹಿ ತಲೆಗೆ ಬೇಡದ ವಿಚಾರವನ್ನು ತುಂಬಿದ್ದಾಳೆ. ಮೊದಲಿಗೆ ಸಿಹಿ ತುಂಬಾ ಖುಷಿಯಾಗೇ ಇರ್ತಾಳೆ. ಅವಳಿಗೆ ಎಲ್ಲವೂ ಇಷ್ಟವಾಗುತ್ತಾ ಇರುತ್ತದೆ. ಅವಳು ತಾತನ ಕಾಲಮೇಲೆ ಕುಳಿತು ಮಾತಾಡ್ತಾ ಇರ್ತಾಳೆ.

ತಾಳಿ ಕಟ್ಟಿದ ನಂತರ ಭಾರ್ಗವಿ ಸಿಹಿಗೆ ಹೇಳ್ತಾಳೆ, ಇನ್ಮುಂದೆ ನಿನ್ನ ಸೀತಮ್ಮ ರಾಮನ್ ಜೊತೆ ಮಾತ್ರ ಇರ್ತಾಳೆ ಎಂದು. ಅದನ್ನು ಕೇಳಿದ ತಕ್ಷಣ ಸಿಹಿಗೆ ಅಳು ಬರುತ್ತದೆ. ಸೀತಮ್ಮ ತನ್ನಿಂದ ದೂರ ಆಗ್ತಿದ್ದಾಳೆ ಎಂದು ಅವಳು ಅಂದುಕೊಂಡು ಅಳುತ್ತ ಇರುತ್ತಾಳೆ. ಅವರು ಸಪ್ತಪದಿ ತುಳಿಯುವ ಸಂದರ್ಭದಲ್ಲಿ ಇವಳು ಅಳುತ್ತ ಹೋಗುತ್ತಾಳೆ. ರಾಮ ತಾನೇ ಅವಳನ್ನು ಎತ್ತಿಕೊಂಡು ಸಮಾಧಾನ ಮಾಡುತ್ತಾನೆ. ನಾನು ಎಂಟನೇ ಹೆಜ್ಜೆಯನ್ನು ಸಿಹಿಗಾಗಿ ಇಡ್ತಾ ಇದ್ದೀನಿ ಎಂದು ಹೇಳುತ್ತಾನೆ. ಅವಳನ್ನು ಎತ್ತಿಕೊಂಡು ಇನ್ನು ಮುಂದಿನಿಂದ ಇವಳು ನನ್ನ ಮಗಳು ಎಂದು ಹೇಳುತ್ತಾನೆ. ಆಗ ಸಿಹಿ ಅಪ್ಪ ಎಂದು ಹೇಳುತ್ತಾಳೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಅದನ್ನು ನೋಡಿ ಭಾರ್ಗವಿಗೆ ಕೋಪ ಹೆಚ್ಚಾಗುತ್ತದೆ.

ಸೋ ವಿವಾಹ ಪೂರ್ವ ರೊಮ್ಯಾನ್ಸ್‌ಗಳನ್ನು ಸವಿಯುತ್ತಾ ಸೀತಾರಾಮ ಕಲ್ಯಾಣೋತ್ಸವ ಕಣ್ತುಂಬಿಕೊಳ್ಳಲು ವೀಕ್ಷಕರು ಫುಲ್ ಜೋಶ್‌ನಿಂದ ರೆಡಿ ಆಗ್ತಿದ್ದಾರೆ.

Latest Videos
Follow Us:
Download App:
  • android
  • ios