ಗುಟ್ಟು ಬಯಲಾದ ಭಯದಲ್ಲಿ ಭಾಗ್ಯ! ಕುಸುಮಾಳಿಂದ ತಾಂಡವ್ಗೆ ಚಪ್ಲಿ ಸೇವೆ ಗ್ಯಾರಂಟಿ ಅಂತಿದ್ದಾರೆ ಜನ!
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಫೈವ್ ಸ್ಟಾರ್ ಹೊಟೇಲ್ ಶೆಫ್ ಅನ್ನೋದು ನ್ಯೂಸ್ ಮೂಲಕ ಮನೆಗೆ ತಲುಪಿದ್ದು, ಭಾಗ್ಯಾಗೆ ಗುಟ್ಟಿ ಬಯಲಾದ ಭಯದಲ್ಲಿದ್ರೆ, ತಾಂಡವ್ ಅತ್ತೆ -ಸೊಸೆ ಜಗಳ ನೋಡೋ ಕಾತುರದಲ್ಲಿದ್ದಾನೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ (Bhagyalakshmi serial) ಧಾರಾವಾಹಿ ಟ್ವಿಸ್ಟ್ ಗಳನ್ನು ನೀಡುತ್ತಾ, ಜನರನ್ನ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದು, ಟಿಆರ್’ಪಿಯಲ್ಲೂ ಸೀರಿಯಲ್ ಮುಂದಿದೆ. ಈಗಂತೂ ಭಾಗ್ಯ ತನ್ನ ಗಂಡ ತಾಂಡವ್ ನನ್ನೆ ಸೋಲಿಸಿ, ಶ್ರೇಷ್ಠಾ ದುರ್ಬುದ್ಧಿಗೆ ಆಕೆಗೆ ಕಪಾಳ ಮೋಕ್ಷ ಮಾಡಿದ್ದ ಎಪಿಸೋಡ್ ಗಳಂತೂ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.
ಪ್ರತಿ ಹಂತ ಹಂತದಲ್ಲೂ ಕೇವಲ ನೋವು ಅನುಭವಿಸಿಕೊಂಡೇ ಬಂದ ಭಾಗ್ಯ, ಹತ್ತನೇ ತರಗತಿ ಪರೀಕ್ಷೆ ಬರೆದು ಪಾಸ್ ಆಗಿ, ತನ್ನ ಸಂಸಾರ ತೂಗಿಸೋ ಸಲುವಾಗಿ, ಕೆಲಸ ಅರಸಿ ಕೊನೆಗೆ ಫೈವ್ ಸ್ಟಾರ್ ಹೊಟೇಲ್ ಸೇರಿ, ಅಲ್ಲಿ ಪಡಬಾರದ ಕಷ್ಟ ಅನುಭವಿಸಿದ ಭಾಗ್ಯಗೆ ಕೊನೆಗೂ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಕ್ಕಿದೆ. ಕಾರಣ ಭಾಗ್ಯಳ ಕೈ ರುಚಿ ಮೆಚ್ಚಿದ ಹೊಟೇಲ್ ಆಕೆಗೆ ಚೀಫ್ ಶೆಫ್ ಪಟ್ಟ ಕೊಟ್ಟು, ಲಕ್ಷ ರೂಪಾಯಿ ಸಂಬಳನೂ ನೀಡುತ್ತಿದೆ.
ಭಾಗ್ಯ ಪರಿಶ್ರಮಕ್ಕೆ ಫಲ ಸಿಕ್ಕಿದ್ರೂ ಅತ್ತೆ ಕುಸುಮಾಗೆ ಮನೆ ಸೊಸೆ ಹೊರಗೆ ಹೋಗಿ ದುಡಿಯೋದು ಇಷ್ಟವಿಲ್ಲದ ಕಾರಣ, ಕೆಲಸ ಮಾಡಬಾರದೆಂದು ಭಾಗ್ಯಳಿಗೆ ಶರತ್ತು ಹಾಕಿರುವ ಅತ್ತೆ, ತಾನೇ ಕೆಲಸಕ್ಕೆ ಹೋಗುತ್ತಿದ್ದರು. ಇದೀಗ ಭಾಗ್ಯ ಸಾಧನೆ ಬಗ್ಗೆ ಸುದ್ದಿ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗುತ್ತಿರೋದನ್ನ ನೋಡಿ ಮನೆಮಂದಿಯೆಲ್ಲಾ ಖುಷಿ ಪಟ್ಟರೆ, ತಾಂಡವ್ ಶಾಕ್ ಆಗಿದ್ದಾನೆ.
ಇದೆಲ್ಲದರ ನಡುವೆ ಕೆಲಸ ಕಳೆದುಕೊಂಡು ಮನೆಗೆ ಬಂದ ಕುಸುಮಾ, ಟಿವಿಯಲ್ಲಿ ಭಾಗ್ಯಾಳ ಸಾಧನೆ ನೋಡಿ ಒಂದೂ ಮಾತನಾಡದೇ ಕೋಪದಿಂದ ಹೊರ ನಡೆದಿದ್ದಾರೆ. ಇದನ್ನೆಲ್ಲಾ ನೋಡಿ ಮನೆಮಂದಿಯೆಲ್ಲಾ ಏನಾಗ್ತಿದೆ ಅಂತ ಭಯ ಪಡ್ತಿದ್ರೆ, ತಾಂಡವ್ ಮಾತ್ರ ಅತ್ತೆ ಸೊಸೆ ಜಗಳ ಇನ್ನು ಶುರುವಾಗಲಿದೆ ಎಂದು ಭಾರಿ ಖುಷಿ ಪಡ್ತಿದ್ದಾನೆ.
ಅಮ್ಮ ಇನ್ನೆಲ್ಲಿ ಹೋಗ್ತಾರೆ, ಆ ಭಾಗ್ಯಾಗೆ ಬೆಂಡೆತ್ತೋಕೆ ಹೋಗ್ತಿದ್ದಾಳೆ, ಈ ಥರ ಸುಳ್ಳು ಹೇಳಿ, ನಾಚಿಕೆ ಆಗುವಂತಹ ಕೆಲಸ ಮಾಡಿದ್ರೆ, ಸುಮ್ನೆ ಬಿಡ್ತಾರ ನನ್ನ ಅಮ್ಮ. ಭಾಗ್ಯಗೆ ಇದೆ ಮಾರಿ ಹಬ್ಬ. ನಮ್ಮಮ್ಮ ಯಾವಾಗ್ಲೂ ಹೇಳ್ತಿದ್ರು ಮನೆ ಸೊಸೆ ಹೊರಗೆ ಕೆಲಸ ಮಾಡ್ಬಾರ್ದು ಅಂತ , ಅಂತಾದ್ರಲ್ಲಿ ಅವಳು ಇಂತದ್ದೆಲ್ಲಾ ಕೆಲಸ ಮಾಡಿದ್ರೆ ಬೇಜಾರಾಗಲ್ವಾ, ಅಮ್ಮನಿಗೆ ಮೊದಲೇ ಸುಳ್ಳು ಹೇಳೋರನ್ನ ಕಂಡ್ರೆ ಆಗಲ್ಲ, ಅಂತಾದ್ರಲ್ಲಿ ಭಾಗ್ಯ ಸುಳ್ಳು ಹೇಳಿದ್ರೆ ಸುಮ್ನೆ ಬಿಡ್ತಾರ ಖಂಡಿತಾ ಇಲ್ಲ ಅಂತಿದ್ದಾನೆ ತಾಂಡವ್.
ತಾಂಡವ್ ನ ಧಿಮಾಕಿನ ಮಾತು ಕೇಳಿ ಸೀರಿಯಲ್ ವೀಕ್ಷಕರು ಕೋಪಗೊಂಡಿದ್ದು, ತರಹೇವಾರಿ ಕಾಮೆಂಟ್ ಗಳ ಮೂಲಕ ತಮ್ಮ ಕೋಪ ಹೊರ ಹಾಕಿದ್ದಾರೆ. ನಿನ್ನಂತ ಕಚಡ ಗಂಡ ಇದ್ದರೆ ಏನು ಮಾಡುತ್ತಾಳೆ ದುಡಿದು ಸಂಪಾದಿಸಿ ನಿನ್ನ ಮುಖಕ್ಕೆ ಬಿಸಾಕ್ತಾಳೆ ಅಷ್ಟೇ ಎಂದಿದ್ದಾರೆ, ಇನ್ನೂ ಕೆಲವರು ನೀನೇನು ಸತ್ಯ ಹರಿಶ್ಚಂದ್ರನ ಮೊಮ್ಮಗ, ಮನೆಯವರಿಗೆ ಮೋಸ ಮಾಡಿ, ಬೇರೆ ಮದ್ವೆ ಆಗೋಕೆ ರೆಡಿ ಆಗ್ತಿರೋನು ಇಷ್ಟೊಂದೆಲ್ಲಾ ಡೈಲಾಗ್ ಹೇಳೋದ ಎಂದಿದ್ದಾರೆ. ಜೊತೆಗೆ ನೀನು ಸುಳ್ಳು ಹೇಳಿ ಮದುವೆ ಆಗ್ತಿರೋದು ಗೊತ್ತಾದ್ರೆ ಚಪ್ಲಿ ತಕೊಂಡು ಹೊಡಿತಾರೆ ನಿನಗೆ ಎಂದು ತಾಂಡವ್ ಗೆ ಬಿಸಿ ಮುಟ್ಟಿಸಿದ್ದಾರೆ.
ಇನ್ನು ಹೆಚ್ಚಿನ ವೀಕ್ಷಕರು ಕುಸುಮಾ ಭಾಗ್ಯ ನಾ ಖಂಡಿತಾ ಬಿಟ್ಟುಕೋಡೋಲ್ಲ, ಇನ್ನೂ ಖುಷಿ ಪಡ್ತಾರೆ ಪಕ್ಕ . ಭಾಗ್ಯ ಇದು ನಾನು ಹೇಳಿಕೊಟ್ಟಿದ್ದಕ್ಕೆ ಇವತ್ತು ನಿನಗೆ ಇಷ್ಟು ದೊಡ್ಡ ಕೆಲಸ ಸಿಕ್ತು ಇದೆಲ್ಲ ನನ್ನಿಂದನೇ ಸಾಧ್ಯ ಆಗಿದ್ದು ಅಂತಾ ಕುಸುಮ ಬಿಲ್ಡಪ್ ಕೊಡ್ತಾರೆ, ನೋಡ್ತಾ ಇರು ತಾಂಡವ್ ಕುಸುಮಾ ಅವರೇ ಭಾಗ್ಯಗೆ ಸನ್ಮಾನ ಮಾಡೋ ಮೂಲಕ ನಿನಗೆ ಶಾಖ್ ಕೊಡ್ತಾರೆ, ಜಾಸ್ತಿ ಖುಷಿ ಪಡ್ಬೇಡ ಎಂದು ಬುದ್ದಿ ಹೇಳಿದ್ದಾರೆ.