Asianet Suvarna News Asianet Suvarna News

ಸೀತಾ-ರಾಮರ ಮದ್ವೆಗೆ ಅಬ್ಬಾ ಹೇಗೆಲ್ಲಾ ಭರ್ಜರಿ ರೆಡಿ ಮಾಡಲಾಗಿದೆ ನೋಡಿ: ಶೂಟಿಂಗ್ ಸೆಟ್​ ವಿಡಿಯೋ ವೈರಲ್​

ಸೀತಾರಾಮ ಸೀರಿಯಲ್​ನ ಸೀತಾ ಮತ್ತು ರಾಮ್​ ರೀಲ್​ ಮದ್ವೆಗೆ ಹೇಗೆಲ್ಲಾ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು ನೋಡಿ. ಮೇಕಿಂಗ್​ ವಿಡಿಯೋ ವೈರಲ್​
 

Seeta and Ram of Seeta Rama serial grand marriage making video gone viral suc
Author
First Published Jul 1, 2024, 6:05 PM IST

ಸೀತಾ ರಾಮ ಸೀರಿಯಲ್​  ಇದೀಗ ಕುತೂಹಲ ಘಟ್ಟಕ್ಕೆ ತಲುಪಿದೆ. ಇದೀಗ ಪ್ರೇಕ್ಷಕರು ಬಹು ನಿರೀಕ್ಷೆ ಹೊಂದಿರುವ ಸೀತಾ-ರಾಮ ಮದುವೆಯ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದೆ.   ಎಲ್ಲಾ ಅಡೆತಡೆಗಳನ್ನು ಮೀರಿ ಸೀತಾರಾಮರ ಕಲ್ಯಾಣ ಕಾರ್ಯಕ್ರಮ ನಡೆಯುತ್ತಿದೆ.  ಅದ್ಧೂರಿ ನಿಶ್ಚಿತಾರ್ಥದ ಬಳಿಕ, ಈಗ ಮದುವೆಯೂ ಆಗಿದೆ.  ಸೀರಿಯಲ್​ನಲ್ಲಿ ಪ್ರೀತಿಸಿ ವಿವಾಹ ಆಗಿರೋ ಈ ಜೋಡಿಯ ಮದುವೆ ರಿಯಲ್​ ಮದುವೆಗಿಂತಲೂ ಸಂಭ್ರಮದಿಂದಲೇ ನಡೆಯುತ್ತಿದೆ. ಇದರ ಮೇಕಿಂಗ್​ ವಿಡಿಯೋಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಶೂಟಿಂಗ್​ ಸಮಯದಲ್ಲಿ ಏನೆಲ್ಲಾ ಆಯಿತು, ಏನೆಲ್ಲಾ ತಮಾಷೆ ನಡೆಯಿತು ಎನ್ನುವುದನ್ನು ಇದರಲ್ಲಿ ತೋರಿಸಲಾಗಿದೆ. 

ಅಷ್ಟಕ್ಕೂ, ಇಂದು ಸೀರಿಯಲ್​ಗಳು ಎಂದರೆ ಅವು ಕೇವಲ ಸೀರಿಯಲ್​ಗಳಾಗಿರಲ್ಲ. ಬದಲಿಗೆ ಅದು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಅದರಲ್ಲಿರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್​ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಹಾಗೆಯೇ ಸೀತಾ ಮತ್ತು ರಾಮ್​ ಮದುವೆ ಸಂಭ್ರಮ ಜೋರಾಗಿ ನಡೆದಿದೆ.  ಸೀರಿಯಲ್​ಗಳ ಮದುವೆ ಎಂದರೆ ಅದು ಒಂದೆರಡು ದಿನಗಳ ಮದ್ವೆಯಲ್ಲ. ಇದೀಗ ನಿಜ ಜೀವನದಲ್ಲಿಯೂ ಸೆಲೆಬ್ರಿಟಿ ಮದ್ವೆಗಳು ತಿಂಗಳುಗಳ ಕಾಲ ನಡೆಯುವುದು ಇದೆ. ಇನ್ನು ಧಾರಾವಾಹಿಗಳು ಎಂದ ಮೇಲೆ ಕೇಳಬೇಕೆ. ಒಂದು ಮದುವೆಯ ಸೀನ್​ ವರ್ಷಗಟ್ಟಲೆ ಹೋದರೂ ಅಚ್ಚರಿಯಿಲ್ಲ. ಆದರೆ ಕೆಲವೇ ದಿನಗಳಲ್ಲಿ ಸೀತಾರಾಮರ ಕಲ್ಯಾಣ ಮುಗಿದಿದ್ದು, ಅದರ ಮೇಕಿಂಗ್​ ವಿಡಿಯೋ ನೋಡಬಹುದು.  

ಸೀತಾಳ ಮನೆಯಲ್ಲಿ ಕೊನೆಯ ದಿನದ ಶೂಟಿಂಗ್​ ಹೀಗಿತ್ತು ನೋಡಿ... ಸೀತಾರಾಮ ವೈಷ್ಣವಿ ಗೌಡ ಮಾಹಿತಿ

ಕೆಲ ದಿನಗಳ ಹಿಂದಷ್ಟೇ ಸೀತಾ ಪಾತ್ರಧಾರಿ ವೈಷ್ಣವಿ ಅವರು, ಸೀತಾರಾಮ ಸೀರಿಯಲ್​ನ ಸೀತೆಯ ಮನೆಯ ಬಗ್ಗೆ ತೋರಿಸಿದ್ದರು. ಇನ್ನು ನಾಯಕಿ ಸೀತಾ  ಮದ್ವೆಯಾಗಿ ರಾಮ್​  ಮನೆ ಸೇರುತ್ತಿದ್ದಾಳೆ. ಇದೇ ಕಾರಣಕ್ಕೆ ಸೀತಾಳಿಗೆ ಅವಳ ಅಮ್ಮನ ಮನೆಯಲ್ಲಿ ಇದೀಗ ಕೊನೆಯ ದಿನ. ಇದೇ ಕಾರಣಕ್ಕೆ, ಸೀತಾಳ ಮನೆ ಹೇಗಿದೆ? ಇಷ್ಟು ವರ್ಷ ಅವಳು ಇದ್ದ ಮನೆ ಹೇಗಿತ್ತು ಎಂಬ ಬಗ್ಗೆ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಮಾಹಿತಿ ನೀಡಿದ್ದರು.  ಇನ್ನು ಸೀತಾ ರಾಮ್​ ಮನೆ ಸೇರುತ್ತಿದ್ದಾಳೆ. ಆದ್ದರಿಂದ ಸೀತಾಳ ಮನೆಯಲ್ಲಿ ಇಂದು ಕೊನೆಯ ದಿನ ಶೂಟಿಂಗ್​. ಇನ್ಮುಂದೆ ಇಲ್ಲಿ ಶೂಟಿಂಗ್​ ಇರುವುದಿಲ್ಲ ಎನ್ನುತ್ತಲೇ ವೈಷ್ಣವಿ ಅವರು, ಸೀತಾಳ ಮನೆಯ ಸಂಪೂರ್ಣ ಪರಿಚಯ ಮಾಡಿಸಿದ್ದರು. 

ಅಷ್ಟಕ್ಕೂ, ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್​ ಸ್ಪಾಟ್​ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್​ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಒಂದೇ ಕಡೆ ಸೆಟ್​ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್​ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್​ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ  ಶೂಟಿಂಗ್​ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ. ಇನ್ನು ಕೆಲವು ಸೀರಿಯಲ್​ಗಳಲ್ಲಿ ತಮಗೆ ಬೇಕಾದಂತೆ ಹಳ್ಳಿಯ ವಾತಾವರಣ ನಿರ್ಮಾಣ ಮಾಡಿಕೊಂಡೋ ಅಥವಾ ಓಣಿ, ವಠಾರದ ರೀತಿಯಲ್ಲಿ ನೈಜ ಚಿತ್ರಣ ಬರುವಂತೆ ಶೂಟಿಂಗ್​  ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ.

ಭಾಗ್ಯಳಿಗೆ ಅಭಿನಂದನೆ ಸಲ್ಲಿಸಲು ಬರ್ತಿದ್ದಾರೆ ಸ್ಯಾಂಡಲ್​ವುಡ್​​ ಪ್ರಣಯರಾಜ! ಅತ್ತೆ ಕೂಲ್​ ಆಗ್ತಾಳಾ?


Latest Videos
Follow Us:
Download App:
  • android
  • ios