Lakshana: ನಾನು ನಕ್ಷತ್ರನ್ನ ಕೊಂದು ಸಾಧಿಸೋದಾದ್ರೂ ಏನು! ಕರಗಿ ಹೋಯ್ತು ಮೌರ್ಯನ ಸೇಡು
ಕುತೂಹಲ ಕೆರಳಿಸುವ ನಕ್ಷತ್ರಾ ಸೀರಿಯಲ್‌ನಲ್ಲಿ ಮೌರ್ಯನ ಸೇಡು ಕರಗಿದೆ. ನಾನು ನಕ್ಷತ್ರನ್ನ ಕೊಂದು ಸಾಧಿಸೋದಾದ್ರೂ ಏನು ಅಂತ ಚಾಕು ಬಿಸಾಕಿ ಮೌರ್ಯ ಕತ್ತಲಲ್ಲಿ ಮರೆಯಾಗಿದ್ದಾನೆ. ಅಂದ್ರೆ ಮೌರ್ಯ ಬದಲಾದನಾ? ವಿಲನ್ ಆಗಿದ್ದವನು ಒಳ್ಳೆಯವನಾಗ್ತಿದ್ದಾನಾ?
'ಲಕ್ಷಣ' ಸದ್ಯ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ಎಂಟೂವರೆಗೆ ಪ್ರಸಾರವಾಗ್ತಿರೋ ಸೀರಿಯಲ್. ಇಲ್ಲೀವರೆಗೆ ನಕ್ಷತ್ರಳ ಕೊಲೆಗೆ ಮೌರ್ಯ ಸ್ಕೆಚ್ ಹಾಕ್ತಿದ್ದ. ಆತನ ಈ ಸೇಡಿಗೆ ಕಾರಣ ಆತನಿಗೆ ನಕ್ಷತ್ರ ಮೇಲಿದ್ದ ಅಪನಂಬಿಕೆ. ಆಕೆ ತನ್ನ ಅಣ್ಣನನ್ನು ಮೋಸದಿಂದ ಮದುವೆ ಆಗಿದ್ದಾಳೆ. ತಂದೆ ಶ್ರೀಮಂತ ಉದ್ಯಮಿ ಚಂದ್ರಶೇಖರ್ ನ ಹಣ, ಪ್ರಭಾವದಿಂದ ಆಕೆ ತನ್ನ ಅಣ್ಣ ಭೂಪತಿಯನ್ನು ಬಲವಂತವಾಗಿ ವಿವಾಹ ಆಗಿದ್ದಾಳೆ. ಜೊತೆಗೆ ಇದಕ್ಕಾಗಿ ಆಕೆಯ ತಂದೆ ಚಂದ್ರಶೇಖರ್ ತನ್ನ ಮೇಲೆ ಹಿಟ್ ಆಂಡ್ ರನ್ ಕೇಸ್ ದಾಖಲಿಸಿದ್ದಾರೆ. ತನ್ನನ್ನು, ತನ್ನ ಅಣ್ಣನನ್ನು ದಾಳವಾಗಿ ಬಳಸಿ ತನ್ನ ಇಡೀ ಕುಟುಂಬವನ್ನು ನಕ್ಷತ್ರಾ ಒಡೆದು ಹಾಕಿದ್ದಾಳೆ ಎಂದು ಮೌರ್ಯ ಭಾವಿಸಿದ್ದ. ಭೂಪತಿಯನ್ನು ಮದುವೆ ಆಗಬೇಕೆಂದು ಸ್ಕೆಚ್ ಹಾಕುತ್ತಿದ್ದ ಮತ್ತೊಬ್ಬ ವಿಲನ್ ಶ್ವೇತಾನೂ ಈ ಕೆಲಸದಲ್ಲಿ ಮೌರ್ಯಗೆ ಸಾಥ್ ನೀಡಿದ್ದಳು. ಆದರೆ ಇದೀಗ ಮೌರ್ಯನ ಸೇಡು ಕರಗಿದೆ. ನಾನು ನಕ್ಷತ್ರನ್ನ ಕೊಂದು ಸಾಧಿಸೋದಾದ್ರೂ ಏನು ಅಂತ ಆತ ಚೂರಿ ಕೆಳಗೆಸೆದಿದ್ದಾನೆ.
ಮೌರ್ಯನ ಪರಿವರ್ತನೆಗೆ ಏನು ಕಾರಣ?
ಮೌರ್ಯ ನಕ್ಷತ್ರಳನ್ನು ಕೊಲೆ ಮಾಡಬೇಕು ಅಂತಲೇ ಚಂದ್ರಶೇಖರ್ ಮನೆಗೆ ಬರುತ್ತಾನೆ. ಇನ್ನೇನು ಅವಳನ್ನು ಕೊಲೆ ಮಾಡಬೇಕು ಅಂತ ಹೋಗುವಾಗ ಆತನಿಗೆ ಸತ್ಯದ ದರ್ಶನ ಆಗುತ್ತೆ. ಚಂದ್ರಶೇಖರ್ ತನ್ನ ಕುಟುಂಬದವರ ಜೊತೆಗೆ ಕೂತಿರ್ತಾರೆ. ಅವರ ಪತ್ನಿ, ನಕ್ಷತ್ರ ಅಮ್ಮ ಆರತಿ ಚಂದ್ರಶೇಖರ್ ಮಾಡಿರೋ ತಪ್ಪಿನ ಬಗ್ಗೆ ಪ್ರಶ್ನೆ ಮಾಡ್ತಾಳೆ. ಆಗ ಚಂದ್ರಶೇಖರ್ ತಾನು ಮಗಳ ಮೇಲಿನ ಪ್ರೀತಿಗೆ ಅವಳಿಗಾಗಿ ಮಾಡಿದ್ದನ್ನೆಲ್ಲ ಹೇಳ್ತಾರೆ. ಅವಳು ಭೂಪತಿಯ ಹಿನ್ನೆಲೆಯನ್ನು ಅರಿಯದೇ ಆತನನ್ನು ಪ್ರೀತಿಸಿದ್ದು, ಶ್ವೇತಾಗಾಗಿ ತನ್ನ ಪ್ರೀತಿಯನ್ನು ಬಿಟ್ಟು ಕೊಡಲು ಹೋಗಿದ್ದು, ನೋವನ್ನೆಲ್ಲ ಮುಚ್ಚಿಟ್ಟು ಅವರ ಮದುವೆಯಲ್ಲಿ ನಗು ನಗುತ್ತಲೇ ಓಡಾಡಿಕೊಂಡಿದ್ದು, ಆದರೆ ತನಗೆ ಇಪ್ಪತ್ತಮೂರು ವರ್ಷಗಳ ಬಳಿಕ ಸಿಕ್ಕ ಮಗಳ ಆಸೆಯನ್ನು ಈಡೇರಿಸಲು ತಾನು ಅಡ್ಡದಾರಿ ಹಿಡಿದದ್ದು, ಅವಳಿಗೇ ತಿಳಿಯದಂತೆ ಭೂಪತಿ ಜೊತೆ ಅವಳ ಮದುವೆ ಆಗುವಂತೆ ಮಾಡಿದ್ದು.. ಈ ಎಲ್ಲ ವಿಚಾರಗಳನ್ನು ಹೇಳುತ್ತಾರೆ.
ಇದೇನ್ ಸನ್-ಮೂನ್? ಟ್ಯಾಟೂ ಚೆನ್ನಾಗಿಲ್ಲ: ವೈಷ್ಣವಿ ಗೌಡ ಕಾಲೆಳೆದ ತಾಯಿ ವಿಡಿಯೋ ವೈರಲ್
ಮೌರ್ಯನ ಸೇಡು ಕರಗಿತಾ?
ಇದನ್ನೆಲ್ಲ ಮರೆಯಲ್ಲಿ ನಿಂತು ಕೇಳಿಸಿಕೊಂಡ ಮೌರ್ಯನಿಗೆ ನಕ್ಷತ್ರ ಎಂಥಾ ಇನ್ನೋಸೆಂಟ್(Innocent) ಅನ್ನೋದು ಗೊತ್ತಾಗಿದೆ. ಇತ್ತ ಚಂದ್ರಶೇಖರ್‌ಗೆ ನಕ್ಷತ್ರ ಆತ ಮಾಡಿದ ತಪ್ಪನ್ನು (Mistake) ಹೇಳ್ತಾಳೆ. ಆತನಿಂದ ಭೂಪತಿಯ ಇಡೀ ಕುಟುಂಬ ಹೇಗೆ ಒದ್ದಾಡ್ತಿದೆ, ಓದು ಮುಗಿಸಿ ಬಂದು ದೊಡ್ಡ ಬ್ಯುಸಿನೆಸ್‌ಮೆನ್ (Businessmen) ಆಗಬೇಕಿದ್ದ ಮೌರ್ಯ ಹೇಗೆ ಕ್ರಿಮಿನಲ್ ಪಟ್ಟಿ ಕಟ್ಟಿಸಿಕೊಂಡ ಅನ್ನೋದನ್ನು ತನಗೆ ಗೊತ್ತಿಲ್ಲದೇ ಆತನ ಮುಂದೆಯೇ ನಕ್ಷತ್ರ ಹೇಳಿದ್ದಾಳೆ. ಇದನ್ನೆಲ್ಲ ನೋಡಿ ಮೌರ್ಯನ ಮನಸ್ಸು ಕರಗಿದೆ. ಆತ ನಕ್ಷತ್ರಳನ್ನು ಕೊಲೆ ಮಾಡಬೇಕಾದ ಚಾಕುವನ್ನು ಬಿಸಾಕಿ ಆ ಮನೆಯಿಂದ ಹೊರ ನಡೆದಿದ್ದಾನೆ.
ಆದರೆ ಇತ್ತ ಡೆವಿಲ್ ಭಾರ್ಗವಿ ದ್ವೇಷದ ಬೆಂಕಿ ಆರಿಲ್ಲ. ಈ ಎಲ್ಲ ಘಟನೆಗಳಿಗೆ ಅವಳು ಸಾಕ್ಷಿಯಾಗಿದ್ದಾಳೆ. ಮನೆಗೆ ಮೌರ್ಯ ಬಂದು ಹೋದದ್ದು ಅವಳಿಗೆ ಗೊತ್ತಾಗಿದೆ. ಚಂದ್ರಶೇಖರ್ ಕೈಲಿ ಸಿಕ್ಕೇ ಬಿದ್ಲು ಅನ್ನುವಾಗ ನೂಲಳತೆಯ ಅಂತರದಿಂದ ಪಾರಾದ್ಲು. ಮುಂದೆ ಮೈಯೆಲ್ಲ ಕಣ್ಣಾಗಿರೋದಾಗಿ ಹೇಳಿದ್ದಾಳೆ. ಸದ್ಯ ಮೌರ್ಯ ಬದಲಾದರೂ ಭಾರ್ಗವಿ ಕೈಯಿಂದ ನಕ್ಷತ್ರಾ ತಪ್ಪಿಸಿಕೊಳ್ಳೋದು ಅಷ್ಟು ಸುಲಭವಲ್ಲ.
ಮೌರ್ಯನಿಗೆ ತನ್ನ ತಪ್ಪಿನ ಅರಿವಾಗಿದೆ. ಆತ ಪಶ್ಚಾತ್ತಾಪದಿಂದ ಒದ್ದಾಡುತ್ತಿದ್ದಾನೆ. ಆತನ ಈಗಿನ ನಡೆ ನೋಡಿದರೆ ಆತನೇ ಮುಂದೆ ನಿಂತು ಅಣ್ಣ ಅತ್ತಿಗೆಯನ್ನು ಒಂದು ಮಾಡುವ ಸಾಧ್ಯತೆ ಕಾಣ್ತಿದೆ. ಮೌರ್ಯನ ಈ ಪರಿವರ್ತನೆ ವೀಕ್ಷಕರಿಗೂ ಖುಷಿ (Happiness) ತಂದಿದೆ. ಮೌರ್ಯ ಪಾಸಿಟಿವ್ ರೋಲ್ (Positive role) ನೋಡೋಕೆ ಖುಷಿ ಅಂತ ಜನ ಕಮೆಂಟ್ ಮಾಡ್ತಿದ್ದಾರೆ.
Big Boss9: ಸಾನ್ಯಾ- ರೂಪೇಶ್ ಮೇಲೆ ಕಿಚ್ಚ ಗರಂ, ಬಿಗ್‌ಬಾಸ್ ಬಗ್ಗೆ ಮಾತಾಡಿದ್ದಕ್ಕೆ ಖಡಕ್ ಎಚ್ಚರಿಕೆ!