Asianet Suvarna News Asianet Suvarna News

ಇದೇನ್ ಸನ್-ಮೂನ್? ಟ್ಯಾಟೂ ಚೆನ್ನಾಗಿಲ್ಲ: ವೈಷ್ಣವಿ ಗೌಡ ಕಾಲೆಳೆದ ತಾಯಿ ವಿಡಿಯೋ ವೈರಲ್

 ವೈಷ್ಣವಿ ಟ್ಯಾಟೂ ನೋಡಿ ತಾಯಿ ಏನು ಹೇಳಿದ್ದಾರೆ ಗೊತ್ತಾ? ಸೂರ್ಯ-ಚಂದ್ರ ಇರುವುದು ಹೀಗಂತೆ....

Kannada actress Vaishnavi Gowda shares her Tattoo vlog see her mom reaction vcs
Author
First Published Dec 12, 2022, 2:45 PM IST

ಕನ್ನಡ ಕಿರುತೆರೆ ಜನಪ್ರಿಯ ನಟಿ ಕಮ್ ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ಕೆಲವು ದಿನಗಳ ಹಿಂದೆ ತಮ್ಮ ಮೊದಲ ಟ್ಯಾಟೂ ಫೋಟೋ ಹಂಚಿಕೊಂಡಿದ್ದರು. ತುಂಬಾ ದಿನಗಳ ಸಮಯ ತೆಗೆದುಕೊಂಡು ಡಿಸೈನ್ ನಿರ್ಧಾರ ಮಾಡಿ ಟ್ಯೂಟೂ ಆರ್ಟಿಸ್ಟ್‌ ಜೊತೆ ಚರ್ಚಿಸಿ ಒಂದು ಡಿಸೈನ್ ಫೈನlf ಮಾಡಿ ಕೊನೆಗೂ ಒಂಡು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ವ್ಲಾಗ್ ಮಾಡುವ ಮೂಲಕ ತಮ್ಮ ಟ್ಯೂಟೂ ಜರ್ನಿಯನ್ನು ಹಂಚಿಕೊಂಡಿದ್ದಾರೆ. ವೈಷ್ಣವಿ ಟ್ಯಾಟೂ ನೋಡಿ ತಾಯಿ ಏನು ಹೇಳಿದ್ದಾರೆ ನೋಡಿ...

'ತುಂಬಾ ವರ್ಷಗಳಿಂದ ಟ್ಯಾಟೂ ಹಾಕಿಸಿಕೊಳ್ಳಬೇಕು ಅನ್ನೋ ಆಸೆ ತುಂಬಾ ಇತ್ತು ಆದರೆ ನನ್ನ ಅಮ್ಮ ಬಿಡುತ್ತಿರಲಿಲ್ಲ ಬೇಡ ಬೇಡ ಅದೆಲ್ಲಾ ಒಳ್ಳೆಯದಲ್ಲ ಅಂತ ಹೇಳುತ್ತಿದ್ದರು. ಅಲ್ಲದೆ ಅದೆಲ್ಲ ಒಳ್ಳೆ ಮಕ್ಕಳ ಲಕ್ಷಣ ಅಲ್ಲ ಅಂತ ಹೇಳುತ್ತಿದ್ದರು. ನಾನು ಟ್ಯಾಟೂ ಹಾಕಿಸುತ್ತಿರುವ ವಿಚಾರ ಮನೆಯಲ್ಲಿ ಯಾರಿಗೂ ಹೇಳಿಲ್ಲ ಅವರಿಗೆ ಏನು ಅಂದ್ರೆ ಏನೂ ಗೊತ್ತಿಲ್ಲ. ಮೊದಲ ಟ್ಯಾಟೂ ಅಂತ ತುಂಬಾ ಭಯ ಇದೆ. ಉಷಾರಿಲ್ಲದೆ ಆಸ್ಪತ್ರೆಗೆ ಇಂಜೆಕ್ಷನ್‌ಗೆಂದು  ಹೋದಾಗ ಡಾಕ್ಟರ್ ಅದು ಇದು ಪ್ರಶ್ನೆ ಕೇಳಿ ಇಂಜೆಕ್ಷನ್ ಕೊಡುತ್ತಿದ್ದರೆ ಆದರೆ ಇದು ದೊಡ್ಡ ಸೂಜಿಯಲ್ಲಿ 2 inch ಟ್ಯಾಟೂ ಹಾಕಿಸಿಕೊಳ್ಳುತ್ತಿರುವೆ ಸುಮಾರು 45 ನಿಮಿಷ ಬೇಕಾಗ ಬಹುದು' ಎಂದು ವೈಷ್ಣವಿ ಗೌಡ ಹೇಳಿದ್ದಾರೆ.

ಟ್ಯಾಟೂ ಮಾಡಿಸಿಕೊಳ್ಳುವಾಗ 'ಟ್ಯಾಟೂ ಹಾಕಿಸಿಕೊಂಡ ಮೇಲೆ ನನ್ನ ತಾಯಿ ರಿಯಾಕ್ಷನ್ ನೋಡಲು ಹೋಗುತ್ತಿರುವೆ ಏಕೆಂದರೆ ಅವರಿಗೆ ಈ ವಿಚಾರ ಹೇಳಿಲ್ಲ. ನಾನು ರೈಸಿಂಗ್ ವುಮೆನ್ ಅರ್ಥದ ಟ್ಯಾಟೂ ಹಾಕಿಸಿರುವುದು. ನನ್ನ ಪ್ರಕಾರ ಇದರ ಅರ್ಥ ಏನು ಅಂದ್ರೆ  ನಮ್ಮ ಕಣ್ಣಿಗೆ ಕಾಣುವ ದೇವರ ಅಂದ್ರೆ ಸೂರ್ಯ ಮತ್ತು ಚಂದ್ರ, ಲೈಫ್‌ ಸೋರ್ಸ್‌ ಅಂತ ಬರುವುದು ಅವರಿಂದ. ನೀವು ಶಿವ ಮತ್ತು ಶಕ್ತಿ ಬಗ್ಗೆ ಕೇಳಿರುತ್ತೀರಿ. ಶಿವ ದೊಡ್ಡವನು ಅಂತ ಹೇಳುತ್ತಾರೆ ಪಾರ್ವತಿ ನಾನು ದೊಡ್ಡವರು ಅಂತ ಹೇಳುತ್ತಾರೆ..ನನ್ನಿಂದ ಜಗತ್ತು ಅಂತ ಹೋರಾಟ ಮಾಡುತ್ತಾರೆ..ಅವರಿಬ್ಬರು ಒಂದಾದಗ ಡಿವೈನ್ ಯೂನಿಯನ್‌ ಆಗುತ್ತದೆ. ಈ ಟ್ಯಾಟೂ ಕೂಡ ಅದೇ ಅರ್ಥ ಕೊಡುತ್ತದೆ ಚಂದ್ರ ಅಂದ್ರೆ ಫೀಮೆಲ್ ಎನರ್ಜಿ ಸೂರ್ಯ ಅಂದ್ರೆ ಮ್ಯಾಸ್ಕಲಿನ್‌ ಎನರ್ಜಿ ಪ್ರತಿನಿಧಿಸುತ್ತದೆ..ಅವರಿಬ್ಬರು ಒಂದಾದಗ ಡಿವೈನ್ ಯೂನಿಯನ್ ಆಗುತ್ತದೆ' ಎಂದು ವೈಷ್ಣವಿ ಮಾತನಾಡಿದ್ದಾರೆ.

ವಿವಾದದ ಬೆನ್ನಲೆ ಹೊಸ ಟ್ಯಾಟೂ ಹಾಕಿಸಿಕೊಂಡ ವೈಷ್ಣವಿ ಗೌಡ; ಅರ್ಥ ಏನು ಗೊತ್ತಾ?

ಶೂಟಿಂಗ್ ಮಾಡುವಾಗ ನನಗೆ ಗಾಯವಾಯ್ತು ಎಂದು ಟ್ಯಾಟೂ ತೋರಿಸಿದ ವೈಷ್ಣವಿ. ಒಮ್ಮೆ ಶಾಕ್ ಆದ ತಾಯಿ 'ಒಂದು ಮಾತು ಕೇಳಬೇಕು ಅಲ್ವಾ? ಬೇಡ ಅಂದ್ರೆ ಇದನ್ನು ಒರೆಸಿಬಿಡಬಹುದಾ? ಹೇಗಿದ್ರೂ ಹಾಕಿಸಿಕೊಂಡಿರುವ ಹಿಂದೆ ಬದಲು ಮುಂದೆ ಹಾಕಿಸಿಕೊಳ್ಳಬೇಕು ಅಲ್ವಾ? ಟ್ಯಾಟೂ ನೋಡಲು ಲೂಸ್‌ ತರ ಇದೆ. ಟ್ಯಾಟೂ ನಿಜಕ್ಕೂ ಚೆನ್ನಾಗಿಲ್ಲ. ಚಂದ್ರ ಹಾಫ್‌ ಬನ್ ತರ ಕಾಣಿಸುತ್ತಿದೆ. ಚಂದ್ರ ಹೇಗಿರುತ್ತಾರೆ ಅಂತ ನೋಡಿದ್ಯಾ? ಸನ್ ರೈಂಡ್ ಆಗಿರಬೇಕು ಇದು ಹಾಫ್‌ ಸನ್‌ ತರ ಇದೆ ಏನ್ ಗ್ರಹಣನಾ ಇದು? ಟ್ಯಾಟೂ ಹಾಕಿರುವವರು ದಯವಿಟ್ಟು ಯೋಚನೆ ಮಾಡಿ ಹಾಕಿ ನನಗೆ ಟ್ಯಾಟೂ ಇಷ್ಟ ಆಗಿಲ್ಲ ಈ ವಿಡಿಯೋನ ಇಷ್ಟ ಪಡಿ ಆದರೆ ಈ ರೀತಿ ಟ್ಯಾಟೂ ಹಾಕಿಸಿಕೊಳ್ಳಬೇಡಿ' ಎಂದು ವೈಷ್ಣವಿ ತಾಯಿ ಹೇಳಿದ್ದಾರೆ. 

 

Follow Us:
Download App:
  • android
  • ios