ತಾನು ಕಳುಹಿಸಿರುವ ಬಟ್ಟೆಯನ್ನು ಬಿಗ್‌ಬಾಸ್‌ ರೂಪೇಶ್‌ಗೆ ನೀಡಿಲ್ಲ ಎಂದು ಸಿಟ್ಟಲ್ಲಿ ಪೋಸ್ಟ್‌ ಹಾಕಿದ ಸಾನ್ಯಾ ವಿರುದ್ಧ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ರೂಪೇಶ್‌ ಕರೆದು ಖಡಕ್ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಬಿಗ್‌ಬಾಸ್ ಸೀಸನ್ 9 ನಲ್ಲಿ ಈ ಬಾರಿ ಲವ್ ಬರ್ಡ್ಸ್ ಆಗಿ ಮಿಂಚಿದ ಜೋಡಿ ಸಾನ್ಯಾ ಐಯ್ಯರ್ ಮತ್ತು ರೂಪೇಶ್ ಶೆಟ್ಟಿ. ಬಿಗ್‌ಬಾಸ್ ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಈ ಜೋಡಿ ಜೊತೆಯಾಗಿತ್ತು. ಆದರೆ ದುರದೃಷ್ವವಶಾತ್‌ ಸಾನ್ಯ ರೂಪೇಶ್‌ಗೂ ಮೊದಲೇ ದೊಡ್ಡ ಮನೆಯಿಂದ ಹೊರಬಿದ್ದರು. ಈ ಎಲಿಮಿನೇಷನ್‌ನಿಂದ ರೂಪೇಶ್ ಗೆ ಎಷ್ಟು ಬೇಜಾರಾಗಿತ್ತು ಅಂದರೆ ಅವರು ಸಾನ್ಯ ಮಡಿಲಲ್ಲಿ ಮಲಗಿ ರೂಪೇಶ್‌ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ವೇಳೆ ತಮಗೆ ಪ್ರತಿ ವಾರ ಬಟ್ಟೆ ಕಳುಹಿಸಬೇಕು ಎಂದು ಸಾನ್ಯ ಬಳಿ ರೂಪೇಶ್ ಮನವಿ ಮಾಡಿದ್ದರು. ಅದರಂತೆ ಎರಡು ವಾರ ಸಾನ್ಯಾ ರೂಪೇಶ್‌ಗಾಗಿ ಬಟ್ಟೆಗಳನ್ನು ಕಳುಹಿಸಿದ್ದರು. ಎರಡು ವಾರಗಳ ಬಳಿಕ ಸಾನ್ಯ ಕಳುಹಿಸಿರುವ ಬಟ್ಟೆ ರೂಪೇಶ್‌ಗೆ ಸಿಕ್ಕಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಸಾನ್ಯ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್‌ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು. ಇದು ಸಖತ್ ಸುದ್ದಿ ಆಗಿತ್ತು. ಬಿಗ್‌ಬಾಸ್ ಮನೆಯನ್ನೂ ತಲುಪಿತ್ತು. ಕಳೆದ ವೀಕೆಂಡ್‌ನಲ್ಲಿ ಹೋಸ್ಟ್ ಕಿಚ್ಚ ಸುದೀಪ್ ಈ ಬಗ್ಗೆ ಸ್ಪಷ್ಟತೆ ತಂದಿದ್ದಾರೆ. ಸಾನ್ಯಾ ವರ್ತನೆಗೆ ಕ್ಲಾಸ್ ತೆಗೆದುಕೊಳ್ಳೋದರ ಜೊತೆಗೆ ರೂಪೇಶ್ ಬಳಿಯೇ ಕಿಚ್ಚ ಕ್ಲ್ಯಾರಿಟಿ ಕೇಳಿದ್ದಾರೆ.

ಸುದೀಪ್ ಜೊತೆ ಈ ಬಗ್ಗೆ ಮಾತನಾಡಿದ ರೂಪೇಶ್ ಬಿಗ್‌ಬಾಸ್‌ಗೆ ಬೇಜಾರಾಗಿರೋದಕ್ಕೆ ನನಗೂ ಬೇಜಾರಾಗಿದೆ ಎಂದಿದ್ದಾರೆ. ಎಲ್ಲರ ಎದುರು ಬಿಗ್‌ಬಾಸ್‌ಗೆ ಕ್ಷಮೆ ಯಾಚಿಸಿದ್ದಾರೆ. 'ಬಿಗ್ ಬಾಸ್ ಮನೆ ಒಳಗೆ ನೀವು ಬರೋ ಮೊದಲು ಇವರನ್ನೇ ಸಂಪರ್ಕಿಸಬೇಕು ಅಂತಾ ಹೇಳಿ ಅವರ ಡೀಟೇಲ್ಸ್ ಕೊಟ್ಟು ಹೋಗ್ತೀರಾ. ನಿಮ್ಮ ಕುರಿತಾದ ಏನೇ ವಿಚಾರ ಇದ್ದರೂ ನಾವು ನೀವೇ ಕೊಟ್ಟ ಕಾಂಟ್ಯಾಕ್ಟ್ ಅಂದರೆ ನಿಮ್ಮ ಕುಟುಂಬಕ್ಕೆ ತಿಳಿಸುತ್ತೇವೆ. ಈಗ ನಿಮಗೆ ಎರಡು ಕಡೆಯಿಂದ ಬಟ್ಟೆ ಬರುತ್ತಿದೆ. ಒಂದು ಮನೆಯಿಂದ ಇನ್ನೊಂದು ನಿಮ್ಮ ಆಪ್ತರಾಗಿರುವ ಸಾನ್ಯ ಕಡೆಯಿಂದ. ಸಾನ್ಯ ಹೇಳ್ತಾರೆ ಈ ಬಟ್ಟೆ ಅವರಿಗೆ ಕಳುಹಿಸಿ ಅಂತಾ ಅದು ನಿಮಗೆ ಬಂದಿದೆ. ಆದರೆ ಅದು ನಿಮ್ಮ ಮನೆಯವರಿಗೆ ಸಮಸ್ಯೆಯಿದೆ. ಅವರಿಗೆ ಅವರು ಕಳುಹಿಸುವ ಬಟ್ಟೆ ನಿಮಗೆ ಹೋಗಬೇಕು ಅಂತಿದೆ. ನೀವು ಮೊದಲೇ ಕೊಟ್ಟ ಕುಟುಂಬದವರನ್ನೇ ನಮ್ಮ ತಂಡ ಸಂಪರ್ಕಿಸುತ್ತದೆ, ಅವರ ಸೂಚನೆಯನ್ನೇ ಪಾಲಿಸುತ್ತದೆ. ಆದರೆ ನಾನು ಕಳುಹಿಸಿರುವ ಬಟ್ಟೆ (Cloth) ನಿಮಗೆ ಹೋಗ್ತಾಯಿಲ್ಲ ಅಂತಾ ಸೋಷಿಯಲ್ ಮೀಡಿಯಾದಲ್ಲಿ (Social Media) ಸಾನ್ಯ ಪೋಸ್ಟ್ ಮಾಡುತ್ತಾರೆ' ಎಂದು ಸುದೀಪ್ ನೇರ ಕಾರಣ ಹೇಳಿ ರೂಪೇಶ್‌ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದ್ದಕ್ಕಿದ್ದಂತೆ ರೂಪೇಶ್‌ಗೆ ಶರ್ಟ್‌ ಗಿಫ್ಟ್‌ ತಲುಪಿಸುವುದು ನಿಲ್ಲಿಸಿದ್ದ ಬಿಗ್ ಬಾಸ್; ರಹಸ್ಯ ತಿಳಿದು ಸಾನ್ಯಾ ಶಾಕ್

ಅಷ್ಟೇ ಅಲ್ಲ ಈವೇಳೆ ಸುದೀಪ್ ಸಾನ್ಯಾಗೂ ಕ್ಲಾಸ್(Class) ತಗೊಳ್ತಾರೆ. 'ಸಾನ್ಯ ಅವರೇ ತಾವೂ ಬಿಗ್ ಬಾಸ್ (Big boss Kannada season 9) ಮನೆಯಲ್ಲಿ ಇದ್ರಿ. ಹೀಗಾಗಿ ಬಿಗ್ ಬಾಸ್ನ ನೀವು ಅರ್ಥ ಮಾಡಿಕೊಂಡಿದ್ದೀರಾ ಅಂತಾ ಅಂದುಕೊಂಡಿದ್ವಿ. ಷರತ್ತಿದ್ದರೂ ಸಹ ಬಿಗ್ ಬಾಸ್ ನಿಮ್ಮ ಬಾಂಧವ್ಯವನ್ನು ಅರ್ಥಮಾಡಿಕೊಂಡು ಎರಡು ವಾರ ಬಟ್ಟೆಯನ್ನ ಕಳುಹಿಸಿಕೊಟ್ಟಿದ್ದಾರೆ. ಮುಂದೆ ರೂಪೇಶ್ ಮನೆಯವರ ಎಮೋಷನ್ಸ್‌ಗೆ (Emotions) ಗೌರವ (Respect) ಕೊಟ್ಟು ಅವರು ಹೇಳಿದನ್ನು ಪಾಲೋ ಮಾಡಲಾಗಿದೆ. ನಿಮ್ಮ ಕುಟುಂಬದವರನ್ನು (Family) ನಾವು ಫಾಲೋ ಮಾಡೋದು ಕರೆಕ್ಟ್ ಅಥವಾ ತಪ್ಪಾ ರೂಪೇಶ್ ಅವರೇ?' ಎಂದು ಸುದೀಪ್ ರೂಪೇಶ್‌ಗೆ ಪ್ರಶ್ನೆಯ ಬಾಣ ಎಸೆದಿದ್ದಾರೆ.

ರೂಪೇಶ್‌ಗೆ ಫ್ಯಾಕ್ಟ್ ಏನು ಅಂತ ಅರ್ಥ ಆಗಿದೆ. 'ನಮ್ಮ ಮನೆಯವರು ಏನೋ ಹೇಳ್ತಿದ್ದಾರೆ ಅಂದರೆ ಅದರಲ್ಲಿ ಒಂದು ಅರ್ಥವಿರುತ್ತದೆ. ಸಾನ್ಯ ಸಾರಿ, ಮನೆಯಿಂದ ಹೊರಬಂದ ಮೇಲೆ ನಿನ್ನ ಜೊತೆ ಮಾತನಾಡುತ್ತೀನಿ. ನಿನ್ನ ಪ್ರೀತಿ ನನಗೆ ಅರ್ಥವಾಗುತ್ತದೆ. ನಾನು ಮನೆಯವರ ಪ್ರೀತಿ (Love)ಯಿಂದ ಇಲ್ಲಿಗೆ ಬಂದಿರೋದು, ಇಲ್ಲಿಗೆ ಬಂದ ಮೇಲೆ ನನಗೆ ಸಾನ್ಯ ಸ್ನೇಹ (Friendship) ಸಿಕ್ಕಿರೋದು. ಎರಡು ಕೂಡ ನನಗೆ ಮುಖ್ಯನೇ ಆದರೆ ಸದ್ಯಕ್ಕೆ ನನ್ನ ಮನೆಯವರು ಏನು ಹೇಳ್ತಾರೆ ಅನ್ನೋದನ್ನ ಫಾಲೋ ಮಾಡ್ತೀನಿ. ಬಿಗ್ ಬಾಸ್‌ಗೆ ಬೇಜಾರು ಆಗಿರೋದು ನನಗೂ ಬೇಜಾರಾಗಿದೆ' ಎಂದು ಈ ವೇಳೆ ರೂಪೇಶ್ ಕ್ಷಮೆಯಾಚಿಸಿದ್ದಾರೆ. ಅಲ್ಲಿಗೆ ಸಾನ್ಯಾ ಬಟ್ಟೆ ಮ್ಯಾಟರ್(Matter) ವಿಚಾರದಲ್ಲಿ ವೀಕ್ಷಕರಿಗೂ ಕ್ಲಾರಿಟಿ(Clarity) ಸಿಕ್ಕಂತಾಗಿದೆ.

BBK9 ನಾನು Contestant ಅಲ್ಲ ಅಮೂಲ್ಯ..ಅಮೂಲ್ಯ; ಅವಾಜ್‌ಗೆ ತಕ್ಕ ಬುದ್ಧಿ ಹೇಳಿದ ಕಿಚ್ಚ ಸುದೀಪ್