Asianet Suvarna News Asianet Suvarna News

ಡ್ಯಾನ್ಸ್ ಭಾಗ್ಯ ಡ್ಯಾನ್ಸ್! ಭಾಗ್ಯ ಅದ್ಭುತ ಡ್ಯಾನ್ಸ್‌ಗೆ ಟಿಆರ್‌ಪಿ ಏರೋದು ಗ್ಯಾರಂಟಿ

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಲ ಭಾಗ್ಯಲಕ್ಷ್ಮೀ ಟಿ ಆರ್‌ಪಿ ಏರೋದು ಗ್ಯಾರಂಟಿ.

In Bhagyalakshmi serial Bhagya performing classical dance on the stage
Author
First Published Dec 11, 2023, 10:23 AM IST

ಕನ್ನಡ ಕಿರುತೆರೆ ಫ್ಯಾನ್ಸ್ ಎಲ್ಲರೂ ಈಗ ಭಾಗ್ಯ ಡ್ಯಾನ್ಸ್‌ಗೆ ಎದುರು ನೋಡ್ತಿದ್ದಾರೆ. ಈಗಾಗಲೇ ಕಲರ್ಸ್‌ ಕನ್ನಡದಲ್ಲಿ ಭಾಗ್ಯ ಪಾತ್ರದಲ್ಲಿ ಸುಷ್ಮಾ ಅವರ ಅದ್ಭುತ ಡ್ಯಾನ್ಸ್ ಪರ್ಫಾಮೆನ್ಸ್ ಪ್ರೋಮೋ ಬಿಡುಗಡೆ ಆಗಿದೆ. 'ಜಸ್ಟ್ ಲುಕ್ಕಿಂಗ್ ವ್ಹಾವ್' ಅಂತ ಭರ್ಜರಿ ಕ್ಲಾಪ್ ಮಾಡ್ತಿದ್ದಾರೆ ಫ್ಯಾನ್ಸ್. 'ಭಾಗ್ಯನ ಮುಂದೆ ಕಪಿ ಸೈನ್ಯ ತಲೆ ಬಾಗೋದು ಗ್ಯಾರಂಟಿ. ಅತ್ತೆಗೆ ತಾನು ಒಳ್ಳೆ ಸೊಸೆ ಅನ್ನೋದನ್ನು ಮತ್ತೆ ಸಾಬೀತು ಮಾಡಿದ್ಲು ಭಾಗ್ಯ', 'ಇವತ್ತಿನ ಎಪಿಸೋಡ್‌ಗೆ ಎದುರು ನೋಡ್ತಾ ಇದ್ದೀನಿ' ಅಂತೆಲ್ಲ ಫ್ಯಾನ್ಸ್ ಈ ಪ್ರೋಮೋಗೆ ಕಾಮೆಂಟ್ಸ್ ಪಾಸ್ ಮಾಡಿದ್ದಾರೆ. ಅಷ್ಟಕ್ಕೂ ಭಾಗ್ಯ ಪಾತ್ರ ಮಾಡುತ್ತಿರುವ ಸುಷ್ಮಾ ರಾವ್ ಅದ್ಭುತ ಭರತನಾಟ್ಯ ಕಲಾವಿದೆ. ಈ ವಿಚಾರ ಈಕೆಯನ್ನು ಬಲ್ಲ ಹೆಚ್ಚಿನವರಿಗೆ ಗೊತ್ತು. ಆದರೆ ಸುಷ್ಮಾ ಅವರ ಡ್ಯಾನ್ಸ್ ಅನ್ನು ಹೀಗೆ ಟಿವಿಯಲ್ಲಿ ನೋಡಿದವರು ಕಡಿಮೆ. ಅನೇಕ ಸ್ಟೇಜ್ ಮೇಲೆ ಡ್ಯಾನ್ಸ್ ಪರ್ಫಾಮೆನ್ಸ್ ಮಾಡಿದರೂ ಅದನ್ನು ಸೀರಿಯಲ್ ವೀಕ್ಷಕರು ನೋಡಿಲ್ಲ.

ಇದೀಗ ಸುಷ್ಮಾ ಅವರು ಭಾಗ್ಯ ಪಾತ್ರದಲ್ಲಿ ಸ್ಟೇಜ್‌ ಮೇಲೆ ಸ್ಟೆಪ್ ಹಾಕ್ತಿರೋದು ಹಲವರಿಗೆ ವ್ಹಾವ್ ಫೀಲಿಂಗ್ ತಂದುಕೊಟ್ಟಿದೆ. 'ಜಸ್ಟ್ ಲುಕ್ಕಿಂಗ್ ವ್ಹಾವ್' ಅನ್ನೋದು ಈ ಸೀರಿಯಲ್ ನೋಡೋ ಹೆಚ್ಚಿನವರ ಮೆಚ್ಚುಗೆಯ ಮಾತಾಗಿದೆ. ಅಷ್ಟಕ್ಕೂ ಸ್ಟೇಜ್‌ ಮೇಲೆ ಭಾಗ್ಯ ಅವಮಾನದಿಂದ ಒದ್ದಾಡೋ ಹಾಗೆ ಆಗ್ಬೇಕು ಅಂತ ಕಾಯ್ತಿರೋ ವಿಲನ್ ಗ್ರೂಪ್‌ಗೆ ಭಾಗ್ಯಾಳ ಈ ಪರ್ಫಾಮೆನ್ಸ್ ದೊಡ್ಡ ಚಮಕ್ ಅನ್ನೇ ನೀಡಲಿದೆ. ಅದನ್ನೆಲ್ಲ ನೋಡೋದಕ್ಕೆ ಈ ಸೀರಿಯಲ್ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಸೀರಿಯಲ್ ಈ ಲೆವೆಲ್‌ಗೆ ಕ್ರಿಯೇಟಿವ್ ಆಗಿ ಮುಂದುವರಿದರೆ ಈ ಸೀರಿಯಲ್ ಟಿಆರ್‌ಪಿ ಏರೋದು ಗ್ಯಾರಂಟಿ ಅಂತಿದ್ದಾರೆ ವೀಕ್ಷಕರು.

ಬೃಂದಾವನಕ್ಕೆ ಯಾವ ಹೀರೋ ಬಂದ್ರುನೂ ಜನ ಹೀರೋ ಚೇಂಜ್ ಮಾಡಿ, ನೋಡಕ್ಕಾಗ್ತಿಲ್ಲ ಅಂತಾರಲ್ಲಪ್ಪಾ…

ಭಾಗ್ಯಾಳಿಗೆ ಡ್ಯಾನ್ಸ್ ಬರಲ್ಲ, ಅವಳೊಬ್ಬ ಪೆದ್ದು ಅನ್ನೋದು ಭಾಗ್ಯ ಗಂಡ ತಾಂಡವ್, ಮಗಳು ತನ್ವಿ ಅಭಿಪ್ರಾಯ. ಅವಳಿಗೆ ಅವಮಾನಬೇಕು, ಸ್ಕೂಲ್‌ ಬಿಟ್ಟು ಹೋಗಬೇಕು ಅಂತ ತನ್ವಿ, ತಾಂಡವ್‌, ಶ್ರೇಷ್ಠಾ, ಕನ್ನಿಕಾ ಎಲ್ಲರೂ ಕಾಯುತ್ತಿದ್ದಾರೆ. ಇತ್ತ ಡ್ಯಾನ್ಸ್‌ ಸ್ಪರ್ಧೆ ಆರಂಭವಾಗಿದೆ. ವೇದಿಕೆ ಮೇಲೆ ಒಬ್ಬೊಬ್ಬರೇ ಸ್ಪರ್ಧಿಗಳು ಬಂದು ಡ್ಯಾನ್ಸ್‌ ಮಾಡುತ್ತಿದ್ದಾರೆ. ವೇದಿಕೆ ಮುಂಭಾಗ ಕುಳಿತಿರುವ ಕುಸುಮಾ ಹಾಗೂ ಪೂಜಾಗೆ ಭಾಗ್ಯಾ ಕಾಣುತ್ತಿಲ್ಲ ಎಂಬ ಗಾಬರಿ ಆದ್ರೆ, ಉಳಿದವರೆಗೆ ಖುಷಿಯೋ ಖುಷಿ.

ವೇದಿಕೆ ಮೇಲೆ ಬರುವಂತೆ ಭಾಗ್ಯಾ ಹೆಸರು ಕರೆಯುತ್ತಿದ್ದಂತೆ ಕುಸುಮಾಗೆ ಇನ್ನಷ್ಟು ಬೇಸರವಾಗುತ್ತದೆ. ಕುಸುಮಾಳನ್ನು ಗಮನಿಸುವ ತಾಂಡವ್‌, ಅಮ್ಮನ ಮುಖ ನೋಡು ಹೇಗಾಗಿದೆ. ಸೊಸೆಗೆ ಯಾಕಾದರೂ ಇಷ್ಟು ಸಪೋರ್ಟ್‌ ಮಾಡಿದೆ ಅಂತ ಅಮ್ಮನಿಗೆ ಈಗ ಖಂಡಿತ ಅನ್ನಿಸಿರುತ್ತೆ. ಇವರು ಹೀಗೇ ಅನೌನ್ಸ್‌ ಮಾಡ್ತಾ ಇರಲಿ, ಆ ಭಾಗ್ಯಾ ಎಲ್ಲಿ ಓಡಿಹೋಗಿದ್ದಾಳೋ ಏನೋ ಅಂತ ತಾಂಡವ್‌, ಭಾಗ್ಯಾ ಬಗ್ಗೆ ಶ್ರೇಷ್ಠಾ ಬಳಿ ಕೊಂಕು ಮಾತನಾಡುತ್ತಾನೆ. ನಿನ್ನ ಹೆಂಡತಿ ಓಡಿ ಹೋಗೋ ಪೈಕಿ ಅಲ್ಲ, ಆಕೆ ಏನಾದರೊಂದು ಪರಿಹಾರ ಹುಡುಕಿ ವಾಪಸ್‌ ಬಂದೇ ಬರುತ್ತಾಳೆ ಎನ್ನುತ್ತಾಳೆ.

ಇನ್ನೊಂದೆಡೆ ನನಗೆ ಡ್ಯಾನ್ಸ್‌ ಬರುವುದಿಲ್ಲ ಎಂದು ಅಳುತ್ತಾ ಎತ್ತಲೋ ಹೊರಟ ಭಾಗ್ಯಾಳನ್ನು ಶ್ರೇಷ್ಠಾ ಹಿಂಬಾಲಿಸುತ್ತಾಳೆ. ಭಾಗ್ಯಾ, ಕುಸುಮಾ ಜೊತೆ ಮಾತನಾಡಿ, ನೋವಿನಿಂದ ಸ್ಕೂಲ್‌ನ ಒಂದು ರೂಮ್‌ನೊಳಗೆ ಹೋಗಿ ಲಕ್ಷ್ಮಿಗೆ ವಿಡಿಯೋ ಕಾಲ್‌ ಮಾಡಿ ತನ್ನ ನೋವನ್ನು ಹಂಚಿಕೊಳ್ಳುತ್ತಾಳೆ. ತನ್ವಿ ಸ್ಕೂಲ್‌ನಲ್ಲಿ ತನಗೆ ಮಾಡಿದ ಅವಮಾನ, ಅತ್ತೆ ಕುಸುಮಾ ನನಗೆ ಡ್ಯಾನ್ಸ್‌ ಮಾಡಲೇಬೇಕೆಂದು ಕಂಡಿಷನ್‌ ಮಾಡಿದ್ದು ಎಲ್ಲವನ್ನೂ ಪ್ರೀತಿಯ ತಂಗಿ ಜೊತೆ ಹೇಳಿಕೊಳ್ಳುತ್ತಾಳೆ. ಅಕ್ಕನ ಬೇಸರಕ್ಕೆ ಸದಾ ಒಂದಲ್ಲಾ ಒಂದು ಪರಿಹಾರ ನೀಡುವ ಲಕ್ಷ್ಮೀ ಭಾಗ್ಯಾಗೆ ಡ್ಯಾನ್ಸ್‌ ಚೆನ್ನಾಗಿ ಗೊತ್ತು ಎಂಬುದನ್ನು ನೆನಪಿಸುತ್ತಾಳೆ. ಚಿಕ್ಕಂದಿನಲ್ಲಿ ತನಗೆ ಡ್ಯಾನ್ಸ್‌ ಹೇಳಿಕೊಡುತ್ತಿದ್ದು, ಡ್ಯಾನ್ಸ್‌ ಟೀಚರ್‌ ಶಶಿಕಲಾ ಅವರನ್ನು ಗಮನಿಸುತ್ತಾ ಏಕಲವ್ಯನಂತೆ ಭರತನಾಟ್ಯ ಕಲಿತದ್ದು ಎಲ್ಲವನ್ನೂ ಲಕ್ಷ್ಮೀ, ಭಾಗ್ಯಾಗೆ ನೆನಪಿಸುತ್ತಾಳೆ.

ಲಕ್ಷ್ಮೀ ಜೊತೆ ಮಾತನಾಡುತ್ತಾ, ಭಾಗ್ಯಾ ಹಳೆಯದನ್ನು ನೆನಪಿಸಿಕೊಳ್ಳುತ್ತಾಳೆ. ಲಕ್ಷ್ಮೀ ಜೊತೆ ಮಾತನಾಡಿದ ಸ್ವಲ್ಪ ಹೊತ್ತಿನ ನಂತರ ಭಾಗ್ಯಾಗೆ ಒಂದು ಪಾರ್ಸೆಲ್‌ ಬರುತ್ತದೆ. ಆ ಬ್ಯಾಗ್‌ ಒಳಗೆ ನೋಡಿದಾಗ ಅದರಲ್ಲಿ ಭರತನಾಟ್ಯ ಕಾಸ್ಟ್ಯೂಮ್‌ ಹಾಗೂ ಗೆಜ್ಜೆಗಳಿರುತ್ತವೆ. ಜೊತೆಗೆ ಶಶಿಕಲಾ ಟೀಚರ್‌ ಬರೆದ ಪತ್ರ ಇರುತ್ತದೆ. ಭಾಗ್ಯಾಗೆ ಆಶೀರ್ವಾದ ಮಾಡಿ ಆಕೆಯ ಗುರುಗಳು ಪತ್ರ ಬರೆದಿರುತ್ತಾರೆ. ಆ ಪತ್ರ ಓದುತ್ತಿದ್ದಂತೆ ಭಾಗ್ಯಾ ಭಾವುಕಳಾಗುತ್ತಾಳೆ. ಗೆಜ್ಜೆಯನ್ನು ಕಣ್ಣಿಗೆ ಒತ್ತಿಕೊಂಡು ಮೆಲ್ಲ ಮೆಲ್ಲನೆ ಬಂದಳೇ ಗೋಪಮ್ಮ ಕೇಳೇ... ಹಾಡು ಹಾಡುತ್ತಾಳೆ. ಇದೆಲ್ಲವನ್ನೂ ಗಮನಿಸುವ ಶ್ರೇಷ್ಠಾ, ಭಾಗ್ಯಾ ಡ್ಯಾನ್ಸ್‌ ಮಾಡಬಾರದು ಎಂದು ಆ ರೂಮ್‌ ಲಾಕ್‌ ಮಾಡಿರುತ್ತಾಳೆ.

ಪುಟ್ಟಕ್ಕನ ಮಕ್ಕಳು ರಾಜಿ, ಕಾಳಿ ಭರ್ಜರಿ ಡ್ಯಾನ್ಸ್​: ಕೊಲೆ ಮಾಡಿದ ಖುಷಿಗೆ ಕುಣೀತಿದ್ದೀರಾ? ಕಾಲೆಳೆದ ಫ್ಯಾನ್ಸ್​

ಆದರೆ ಈಗ ಶ್ರೇಷ್ಠಾ ಪ್ಲ್ಯಾನ್‌ ಉಲ್ಟಾ ಆಗಿದೆ. ಭಾಗ್ಯಾ ವೇದಿಕೆ ಏರಿದ್ದಾಳೆ. ಅವಳ ಪರ್ಫಾಮೆನ್ಸ್ ವಿಲನ್ ಟೀಮ್‌ನ ದಂಗು ಬಡಿಸಿದೆ. ವೀಕ್ಷಕರ ಖುಷಿಯನ್ನೂ ಹೆಚ್ಚಿಸಿದೆ.

Follow Us:
Download App:
  • android
  • ios