ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವಿಲನ್ಸ್​ ರಾಜೇಶ್ವರಿ ಮತ್ತು ಕಾಳಿ ಅಕ್ಕ-ಅಮ್ಮ  ಹಾಡೊಂದಕ್ಕೆ ಸಕತ್ ಸ್ಟೆಪ್​ ಮಾಡಿದ್ದರೆ, ಫ್ಯಾನ್ಸ್​ ಇವರ ಕಾಲೆಳೆಯುತ್ತಿದ್ದಾರೆ.  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್​ಪಿಯಲ್ಲಿಯೂ ಸದಾ ಟಾಪೆಸ್ಟ್​ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಗಂಡ ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್​ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದ್ದು ಟಿಆರ್​ಪಿಯಲ್ಲಿಯೂ ಮುಂದಿದೆ. ಇದೀಗ ಧಾರಾವಾಹಿ ಕುತೂಹಲ ಹಂತಕ್ಕೆ ತಲುಪಿದ್ದು, ಪುಟ್ಟಕ್ಕ ಅಪಘಾತದಲ್ಲಿ ಸತ್ತಿರುವ ಪ್ರೊಮೋ ರಿಲೀಸ್​ ಆಗಿದೆ.

ಅಷ್ಟಕ್ಕೂ ಈ ಕೊಲೆ ಮಾಡಿರುವ ಹಿಂದೆ ಸೀರಿಯಲ್​ ವಿಲನ್​ ರಾಜೇಶ್ವರಿ ಮತ್ತು ಆಕೆಯ ತಮ್ಮ ಕಾಳಿಯ ಕೈವಾಡ ಇದೆ. ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರಧಾರಿ, ನಟಿ ಉಮಾಶ್ರಿ ಅವರಷ್ಟೇ ಸಕತ್​ ಫೇಮಸ್​ ಆಗಿರೋ ನಟಿಯೆಂದರೆ ಪುಟ್ಟಕ್ಕನ ಸವತಿ ಅರ್ಥಾತ್​ ಪತಿಯ ಎರಡನೆಯ ಪತ್ನಿಯ ಪಾತ್ರದಲ್ಲಿ ನಟಿಸ್ತಿರೋ ರಾಜೇಶ್ವರಿ. ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​ (Hamsa Pratap)

ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಫ್ಯಾನ್ಸ್​ ಗರಂ- ಟಿಆರ್​ಪಿಗಾಗಿ ಪ್ಲೀಸ್​ ಹೀಗೆ ಮಾಡ್ಬೇಡಿ: ಅಭಿಮಾನಿಗಳ ಕಣ್ಣೀರು

ಅದೇ ಇನ್ನೊಂದೆಡೆ, ಪುಟ್ಟಕ್ಕನ ದೊಡ್ಡ ಮಗಳ ಮೇಲೆ ಕಣ್ಣು ಹಾಕಿ, ಆಕೆಯ ಮದುವೆ ಬೇರೆ ಕಡೆ ಆಯಿತೆಂದು ಸಿಟ್ಟಿನಿಂದ ಮೆಸ್ಸಿಗೇ ಬೆಂಕಿ ಇಟ್ಟು ಜೈಲುಪಾಲಾಗಿ ಈಗ ಜಾಮೀನಿನ ಮೇಲೆ ಬಂದಿರುವ ರಾಜೇಶ್ವರಿ ತಮ್ಮ ಕಾಳಿಯ ನಿಜವಾದ ಹೆಸರು ಅನಿರಿಶ್​. ಈ ಧಾರಾವಾಹಿಯಲ್ಲಿ ರಾಜೇಶ್ವರಿ ಹಾಗೂ ಅನಿರಿಶ್​ ಅವರದ್ದು ಅಕ್ಕ-ತಮ್ಮನ ಪಾತ್ರ. ಇದೀಗ ಈ ಅಕ್ಕ-ತಮ್ಮ ಸೇರಿ ಸಕತ್​ ರೀಲ್ಸ್​ ಮಾಡಿದ್ದಾರೆ. Ontrend Maamadura ಹಾಡಿಗೆ ಇಬ್ಬರೂ ಸಕತ್​ ಸ್ಟೆಪ್​ ಹಾಕಿದ್ದಾರೆ. ಅದಕ್ಕೆ ಫ್ಯಾನ್ಸ್​ ಹಂಸ ಅವರ ಕಾಲೆಳೆಯುತ್ತಿದ್ದಾರೆ.

ಪುಟ್ಟಕ್ಕನ ಕೊಲೆ ಮಾಡಿಸಿದ ಖುಷಿ ಅಕ್ಕ-ತಮ್ಮ ಇಬ್ರೂ ಡ್ಯಾನ್ಸ್​ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ. ನಿಮ್ಮಿಬ್ಬರ ಪಾತ್ರ ಸಕತ್​ ಆಗಿ ಮೂಡಿ ಬರ್ತಿದೆ ಎಂದು ಇನ್ನು ಹಲವರು ಶ್ಲಾಘಿಸುತ್ತಿದ್ದರೆ, ಈ ರೀತಿ ಕೊಲೆ ಮಾಡುವ ಮಟ್ಟಕ್ಕೆ ಹೋಗಬಾರದಿತ್ತು ಮೇಡಂ, ಪಾಪ ಪುಟ್ಟಕ್ಕ ನಿಮಗೆ ಏನು ಮಾಡಿದ್ದಳು ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. 

ಸ್ವರ್ಗದಷ್ಟೇ ಬಿಗ್​ಬಾಸ್​ ಸುರಕ್ಷಿತ ಎಂದದ್ದು ಇದಕ್ಕೇನಾ? ಸಂಗೀತಾ ಸಹೋದರ ಕಿಡಿ- ಸುದೀಪ್​ಗೆ ಪತ್ರ?