ಜಗದೀಶನ ಗಂಡಸ್ತನ ಪ್ರಶ್ನಿಸಿದ್ದ ಮಂಜನ ಬೆವರಿಳಿಸಿದ ಕಿಚ್ಚ ಸುದೀಪ್; ಗಾನವಿಗೆ ಢವ ಢವ
ಬಿಗ್ ಬಾಸ್ 13ರ ಈ ವಾರದ ಸಂಚಿಕೆಯಲ್ಲಿ ಮಂಜು ಆಡಿದ ಗಂಡಸ್ತನದ ಮಾತಿಗೆ ಸುದೀಪ್ ಖಾರವಾಗಿ ಪ್ರಶ್ನಿಸಿದ್ದಾರೆ. ಹಾಗೆಯೇ, ಜಗದೀಶ್ ಅವರ ಸಾಧನೆಯ ಬಗ್ಗೆಯೂ ಮಂಜುವಿಗೆ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ಮೂವರು ಯುವರಾಣಿಯರು ಕಳಪೆಯಾಗಿ ಜೈಲು ಸೇರಿದ್ದಾರೆ.

ಮಂಜನಿಗೆ ಕ್ಲಾಸ್
ಸೀಸನ್ 13ರ ಈ ವಾರದ ಸಂಚಿಕೆಗೆ ವೀಕ್ಷಕರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ. ಈ ವಾರದಲ್ಲಿ ನಡೆದ ಟಾಸ್ಕ್ಗಳು, ನಾಮಿನೇಷನ್, ಯುವರಾಣಿ-ಮಹಾರಾಣಿಯರ ಆಟ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಗಾನವಿ ಮತ್ತು ಜಗದೀಶ್ ನಡುವೆ ನಡೆಯುತ್ತಿದ್ದ ಜಗಳದ ಮಧ್ಯೆ ಪ್ರವೇಶಿಸಿದ್ದ ಸ್ವಯಂಘೋಷಿತ ಮಹಾಕವಿ ಮಂಜ ಎಂದಿನಂತೆ ನಾಲಿಗೆ ಹರಿಬಿಟ್ಟಿದ್ದರು.
ಮಂಜುಗೆ ಪ್ರಶ್ನೆ
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ, ಗಂಡಸ್ತನ ಬಗ್ಗೆ ಪ್ರಶ್ನೆ ಮಾಡಿದ್ದ ಮಂಜುನಾಥ್ ಅವರಿಗೆ ನಿರೂಪಕ ಸುದೀಪ್ ಕೆಲವೊಂದು ಪ್ರಶ್ನೆಗಳನ್ನು ಮಾಡಿದ್ದಾರೆ. ನಿಮಗೆ ಬೇಡವಾದ ವಿಷಯಗಳಲ್ಲಿಯೂ ನೀವು ಧ್ವನಿ ಎತ್ತಿದ್ದೀರಿ ಅಲ್ಲವಾ ಮಂಜು ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಗಂಡಸ್ತನ
ಗಂಡಸ್ತನ ಬಗ್ಗೆ ಮಾತನಾಡ್ತಾನೆ ಸರ್ ಎಂದು ಸುದೀಪ್ ಮುಂದೆ ಜಗದೀಶ್ ತಮ್ಮ ದೂರು ಸಲ್ಲಿಸಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿರುವ ಸುದೀಪ್, ಅಲ್ಲಿ ಜಗದೀಶ್ ನಿಮ್ಮ ಬಗ್ಗೆ ಮಾತಾಡಿರಲಿಲ್ಲ. ಹಾಗಾದ್ರೆ ಗಂಡಸ್ತರ ಹಾಗೆ ಮಾತಾಡೋದು ಹೇಗೆ ಮಂಜು? ಮನೆಯಿಂದ ಹೊರಗಡೆ ಬರೋ ಮುಂಚೆ ಮಾತಾಡಿದಂತೆನಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಒಂದು ಸಿನಿಮಾ ಮಾಡಿ ಒಳಗೆ ಬಂದವನು ನೀನು?
ಮುಂದುವರಿದು ಒಂದು ಸಿನಿಮಾ ಮಾಡಿ ಒಳಗೆ ಬಂದವನು ನೀನು? ಉಸಿರೆತ್ತಿಕೊಂಡವನು ನೀನು? ಉಸಿರೆತ್ತಿ ಅವರು ಬಿಗ್ಬಾಸ್ಗೆ ಬಂದಿದ್ದಾರೆ ಅಂದ್ರೆ ಅದು ಅವರ ಸಾಧನೆ? ನಿಮಗೆ ಯಾರಾದ್ರೂ ನೀನೇನು ಇಲ್ಲಿ ಕಿತ್ಕೊಂಡು ಬಂದಿದ್ದಯಾ ಅಂದ್ರೆ ಹೇಗಿರುತ್ತೆ ಮಂಜುನಾಥ್ ಎಂದು ಸುದೀಪ್ ಕೇಳಿದ್ದಾರೆ. ಸದ್ಯ ಈ ಇದಿಷ್ಟು ಪ್ರೋಮೋದಲ್ಲಿ ತೋರಿಸಲಾಗಿದೆ.
ಮೂವರು ಕಳಪೆ
ವಾರದ ಆರಂಭದಲ್ಲಿ ಯುವರಾಣಿಯರಾಗಿದ್ದ, ಮೂವರು ಮಹಿಳಾ ಸ್ಪರ್ಧಿಗಳು ಕಳಪೆಯಾಗಿ ಜೈಲು ಸೇರಿದ್ದಾರೆ. ಕಿರಣ್ ಶಾಸ್ತ್ರಿ ಈ ಮೂವರಿಂದಲೇ ನಾವು ನಾಮಿನೇಟ್ ಆಗಿದ್ದೇವೆ. ಸೂಕ್ತ ನಿರ್ಣಯ ತೆಗೆದುಕೊಳ್ಳಲು ವಿಫಲವಾಗಿರೋ ಮೂವರು ಯುವರಾಣಿಯರು ಕಳಪೆಯಾಗಿ ಜೈಲು ಸೇರಬೇಕೆಂದು ಬಲವಾಗಿ ವಾದ ಮಂಡಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















