ಉತ್ತರ ಕರ್ನಾಟಕದ ಸೊಗಡಿನ 'ಹುಲಿಬೀರ' ಚಿತ್ರವು ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಡೆಯುವ ಸೌದತ್ತಿ ಯಲ್ಲಮ್ಮನ ಪವಾಡ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದೆ. ನಾಯಕ ನಟ ಅಂಜನ್ ಈ ಯಶಸ್ಸನ್ನು ತಾಯಿಯ ಆಶೀರ್ವಾದ ಎಂದು ಭಾವುಕರಾಗಿ ಹೇಳಿದ್ದಾರೆ.
ಉತ್ತರ ಕರ್ನಾಟಕ ಸೊಗಡಿನ ಮಣ್ಣಿನ ವಾಸನೆ ಹಿಡಿದಿಟ್ಟುರುವ ಹುಲಿಬೀರ ಚಿತ್ರವೂ ಅಲ್ಲಿನ ವೈಭವವನ್ನು ಸಾಕ್ಷೀಕರಿಸಿದೆ. ಆ ಬಯಲುಸೀಮೆಯ ಸೌಂದರ್ಯ ತಾಯಿ ಸೌದತ್ತಿ ಯಲ್ಲಮ್ಮನ ಹಿರಿಮೆ, ಹಾಗೂ ಅವಳ ಮೇಲಿನ ನಂಬಿಕೆ ಮತ್ತ ಭಕ್ತಿಯನ್ನು ಸಾರಿ-ಸಾರಿ ಹೇಳುತ್ತದೆ. ಅಲ್ಲದೇ ಕ್ಲೈ ಮ್ಯಾಕ್ಸ್ ಅಂತು ಆ ಪವಾಡವನ್ನೇ ಕಣ್ತುಂಬಿಕೊಂಡಂತಿದೆ.
ಚಿತ್ರದ ಯಶಸ್ಸಿಗೆ ಪ್ರತಿಕ್ರಿಯಿಸಿದ ಅಂಜನ್!
ಉತ್ತರ ಕರ್ನಾಟಕದ ಸೊಗಡಿನ ಹುಲಿಬೀರ (Hulibeera) ಚಿತ್ರವು ಅಕ್ಟೋಬರ್ 2, 2026 ರಂದು ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಅಭೂತಪೂರ್ವ ರಿಯಾಕ್ಷನ್ ಹಾಗೂ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಿದೆ. ಆ ಭಾಗದ ಭಾಕ್ಸ್ ಆಫೀಸ್‌ನಲ್ಲಿ ದೂಳೇಬ್ಬಿಸುತ್ತಿದೆ. ಆ ನಿಟ್ಟಿನಲ್ಲಿ ರೂರಲ್ ಸ್ಟಾರ್ ಅಂಜನ್ ಪ್ರತಿಕ್ರಿಯಿಸಿದ್ದಾರೆ.
ಕ್ಲೈಮ್ಯಾಕ್ಸ್ ಅಲ್ಲಿ ಯಲ್ಲವನ ಪವಾಡ!
ಚಿತ್ರದ ಕ್ಲೈಮ್ಯಾಕ್ಸ್ ಹಂತವು ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದ್ದು, ಥಿಯೇಟರ್‌ನ ಒಟ್ಟಾರೆ ವಾತಾವರಣವನ್ನೇ ಬದಲಾಯಿಸಿದೆ. ಬಯಲೂರಿನ ಬೀರನ ಮೈಮೇಲೆ ತಾಯಿ ಯಲ್ಲವ್ವ ಬರುವ ದೃಶ್ಯವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್‌ಗೆ ಸಿಗುತ್ತಿರುವ ಅದ್ಭುತ ರಿಯಾಕ್ಷನ್ ಕಂಡು ನಾಯಕ ನಟ 'ರೂರಲ್ ಸ್ಟಾರ್' ಅಂಜನ್ ಅತ್ಯಂತ ಭಾವುಕರಾಗಿದ್ದಾರೆ.
ನಂದೇನು ಇಲ್ಲ ಯಲ್ಲವನ ಪವಾಡ!
ಯಶಸ್ಸಿನ ಕುರಿತು ಮಾತನಾಡಿದ ಅಂಜನ್, ಇದರಲ್ಲಿ ನಂದೇನೂ ಇಲ್ಲ, ಎಲ್ಲವೂ ತಾಯಿ ಎಲ್ಲವ್ವನ ಪವಾಡ ಮತ್ತು ಆಶೀರ್ವಾದ" ಎಂದು ದೈವಭಕ್ತಿಯಿಂದ ನುಡಿದಿದ್ದಾರೆ. ಚಿತ್ರದಲ್ಲಿ ಯಲ್ಲಮ್ಮ ಉತ್ತರದ ಭಾಗದ ತಾಯಿಯಂತೆ ರೂಪಿಸಿದ್ದಾರೆ. ಅದು 100ಕ್ಕೆ ನೂರರಷ್ಟು ನಿಜ ಏಕೆಂದರೆ, ಇಂದಿಗೂ ಎಲ್ಲಮ್ಮ ತಾಯಿ ಉತ್ತರದ ಅಸ್ಮಿತೆಯಾಗಿ ಉಳಿದಿದ್ದಾಳೆ.
ಚಿತ್ರಕ್ಕೆ ಮತ್ತೊಮ್ಮೆ ಹರಿಸಿ ಭಾವುಕಳಾದ ತಾಯಿ!
ಚಿತ್ರದ ಯಶಸ್ಸಿನ ಈ ಮಹತ್ವದ ಸಂದರ್ಭದಲ್ಲಿ ಅಂಜನ್ ತಾಯಿ ಪ್ರತಿಯೊಬ್ಬರು ಬನ್ನಿ, ಮಗನ ಚಿತ್ರವನ್ನು ವೀಕ್ಷಿಸಿ ಹರಿಸಿ ಹಾರೈಸಿ ಎಂದು ಹೇಳಿದ್ದಾರೆ. ಈ ವೇಳೆ ನೆರೆದ ದೈವವೇ ಆ ತಾಯೀ ನುಡಿಗೆ ತಲೆಬಾಗಿದೆ. ಕೊನೆಗೆ ನೀವು ಬನ್ನಿ, ನಿಮ್ಮವರನ್ನು ಕರೆ ತಂದು ಚಿತ್ರ ವೀಕ್ಷಿಸಿ ಎಂದು ಎಲ್ಲರಿಗೂ ಕರೆ ನೀಡಿದ್ದಾರೆ. ಅಲ್ಲದೇ ಚಿತ್ರದಲ್ಲಿ ಹಳ್ಳಿಯ ವಾಸ್ತವತೆ ಮೂಡಿದೆ. ಯುವಕರೆಲ್ಲ ಊರು ಬಿಟ್ಟು ಪಟ್ಟಣ ಸೇರಿದರೆ, ಇಲ್ಲಿನ ಉದ್ದಾರಕರೂ ಯಾರು ಎನ್ನುವುದನ್ನು ಮಾರ್ಮಿಕವಾಗಿ ಬಿತ್ತರಸಿದ್ದಾರೆ. ಅಲ್ಲದೇ ಚಿತ್ರದಲ್ಲಿ ಅಲ್ಲಲ್ಲಿ ಬರುವ ಜಾನಪದ ಗೀತೆಗಳು ಜನರಿಗೆ ಕನೆಕ್ಟ್ ಆಗುವಂತೆ ಇವೆ.


