ಕನ್ನಡ ಕಿರುತೆರೆ ನಟಿ, ‘ನಾ ನಿನ್ನ ಬಿಡಲಾರೆ ’ನಾಯಕಿ ರಿಷಿಕಾ ತಮ್ಮ ಹೊಸ ಫೋಟೋಶೂಟ್ ಮೂಲಕ ಅಭಿಮಾನಿಗಳ ಮನ ಸೆಳೆದಿದ್ದಾರೆ.
tv-talk Nov 03 2026
Author: Pavna Das Image Credits:Instagram
Kannada
ಆರೆಂಜ್ ಡ್ರೆಸಲ್ಲಿ ಮಿಂಚಿಂಗ್
ಕಿತ್ತಳೆ ಬಣ್ಣದ ಆಕರ್ಷಕ ಗೌನ್, ಮ್ಯಾಚಿಂಗ್ ದುಪಟ್ಟಾ ಹಾಗೂ ಸಾಂಪ್ರದಾಯಿಕ ಆಭರಣಗಳಲ್ಲಿ ನಟಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Image credits: Instagram
Kannada
ಅಂದವಾದ ಕ್ಯಾಪ್ಶನ್ ಜೊತೆ ಚೆಂದ ಫೋಟೊ
“ನೀವು ಉತ್ತಮವಾಗುತ್ತಿರುವಾಗ ನಿಮ್ಮ ಹೊಳಪು ವಿಭಿನ್ನವಾಗಿರುತ್ತದೆ” ಎಂಬ ಅರ್ಥದ ಕ್ಯಾಪ್ಶನ್ ಜೊತೆಗೆ ರಿಷಿಕಾ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Image credits: Instagram
Kannada
ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್
ರಿಷಿಕಾ ಅವರ ಸೊಗಸಾದ ಮೇಕಪ್, ಸುಂದರ ಕೇಶವಿನ್ಯಾಸ ಮತ್ತು ಕಾಸ್ಟ್ಯೂಮ್ ಲುಕ್ ಫೋಟೋಗಳಿಗೆ ವಿಶೇಷ ಮೆರುಗು ನೀಡಿವೆ. ನಟಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Image credits: Instagram
Kannada
ಅಭಿಮಾನಿಗಳ ಮೆಚ್ಚುಗೆ
ಫೋಟೋಗಳಿಗೆ ಅಭಿಮಾನಿಗಳು ಹಾರ್ಟ್ ಮತ್ತು ಫೈರ್ ಎಮೋಜಿಗಳ ಮೂಲಕ ಪ್ರತಿಕ್ರಿಯಿಸಿದ್ದು, “ಪ್ರೆಟ್ಟಿ ಪ್ರೆಟ್ಟಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Image credits: Instagram
Kannada
ಗ್ಲಾಮರಸ್ ಲುಕ್
ದುರ್ಗಾ ಪಾತ್ರದ ಮೂಲಕ ಗುರುತಿಸಿಕೊಂಡಿರುವ ರಿಷಿಕಾ ಅವರ ಈ ಹೊಸ ಗ್ಲಾಮರಸ್ ಲುಕ್ ಇದೀಗ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಿದೆ. ಜೊತೆಗೆ ಫ್ಯಾನ್ಸ್ ಈ ಲುಕ್ ನ್ನು ಇಷ್ಟಪಟ್ಟಿದ್ದಾರೆ.
Image credits: Instagram
Kannada
ಧಾರಾವಾಹಿಯಲ್ಲಿ ಏನಾಗ್ತಿದೆ?
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಇದೀಗ ಎರಡನೇ ಅಧ್ಯಾಯ ಆರಂಭವಾಗಿದೆ. ದುರ್ಗಾಗೆ ಈಗ ಮಗುವಾಗಿದ್ದು, ಆ ಮಗು ಕುಟುಂಬವನ್ನು ಒಂದು ಮಾಡುವ ಪಣ ತೊಟ್ಟು ನಿಂತಿದ್ದಾಳೆ.
Image credits: Instagram
Kannada
ದುರ್ಗಾ ಪಾತ್ರಕ್ಕೆ ಸಿಕ್ಕಿದೆ ಪ್ರಶಸ್ತಿ
ನಾ ನಿನ್ನ ಬಿಡಲಾರೆಯ ದುರ್ಗಾ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದು, ಜೀ ಕುಟುಂಬ ಅವಾರ್ಡ್ ಸಮಾರಂಭದಲ್ಲಿ ನಟಿ ‘ಬೆಸ್ಟ್ ಪತ್ನಿ’ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.
Image credits: Instagram
Kannada
ಧಾರಾವಾಹಿ ಕೊನೆಯಾಗುತ್ತಾ?
ನಾ ನಿನ್ನ ಬಿಡಲಾರೆ ಧಾರಾವಾಹಿ ಈಗ ಕೊನೆಯಾಗುವ ಸೂಚನೆ ಇಲ್ಲ, ಅದಕ್ಕೂ ಮುನ್ನ ಶರತ್ ದುರ್ಗಾ ಭೇಟಿ ಆಗಬೇಕು, ಮಾಳವಿಕಾ ಮುಖವಾಡ ಬಯಲಾಗಬೇಕಿದೆ.