ಬಿಗ್‌ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರು ಟಾಕ್ಸಿಕ್ ಸಿನಿಮಾದ 'ತಬಾಹಿ' ಹಾಡಿಗೆ ಮಾಡಿರುವ ರೀಲ್ಸ್ ವಿಡಿಯೋ ವೈರಲ್ ಆಗುತ್ತಿದೆ. ಬೋಲ್ಡ್ ಅವತಾರಗಳಿಗೆ ಕೆಟ್ಟ ಕಮೆಂಟ್ಸ್ ಎದುರಿಸಿದ್ದ ನಟಿ, ಇದೀಗ ವರಮಹಾಲಕ್ಷ್ಮಿ ಹಬ್ಬಕ್ಕೆ ಸೀರೆಯುಟ್ಟು ಗಮನ ಸೆಳೆದಿದ್ದಾರೆ.
ಟಾಕ್ಸಿಕ್ ಸಿನಿಮಾ ರಿಲೀಸ್ ಆಗುವ ಮುನ್ನ ಸಕತ್ ಸದ್ದು ಮಾಡಿದ್ದು, ತಬಾಹಿ ಹಾಡು. ಈ ಹಾಡು ರಿಲೀಸ್ ಆದಾಗಿನಿಂದಲೂ ವಿವಾದ, ಟ್ರೋಲ್ಗಳ ನಡುವೆಯೇ, ಈ ಸಿನಿಮಾ ಬಿಡುಗಡೆಯಾಗಿ ಕಾದವರು ಅದೆಷ್ಟೋ ಮಂದಿ. ಈ ಹಾಡೇ ಇಡೀ ಸಿನಿಮಾ ಬಂಡವಾಳವಾಗಿದ್ದೂ ಇದೆ. ಆ ಪರಿಯಲ್ಲಿ ಈ ಹಾಡು ಹಲ್ಚಲ್ ಸೃಷ್ಟಿಸಿತ್ತು. ಕೊನೆಗೆ ಈ ಹಾಡು ಮಾಡಿದ ಮೋಡಿ ಇಡೀ ಸಿನಿಮಾ ಮಾಡಲಿಲ್ಲ ಎನ್ನುವ ಕೊರಗು ಹಲವು ವೀಕ್ಷಕರಲ್ಲಿ ಇದ್ದರೂ, ಈ ಹಾಡು ಮಾತ್ರ ಇಂದಿಗೂ ಹಲವರ ಫೆವರೆಟ್ ಆಗಿಯೇ ಇದೆ.
ಇದೀಗ ಈ ಹಾಡಿಗೆ ಬಿಗ್‌ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಅವರು ರೀಲ್ಸ್ ಮಾಡಿದ್ದಾರೆ. ಅವರ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಹಲವರು ಸಕತ್ ರೀಲ್ಸ್ ಎಂದು ನಟಿಯನ್ನು ಕೊಂಡಾಡುತ್ತಿದ್ದಾರೆ.
ತನಿಷಾ ಕುಪ್ಪಂಡ ಕುರಿತು
ಇನ್ನು ನಟಿಯ ಕುರಿತು ಹೇಳುವುದಾದರೆ, ಬಿಗ್‌ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ (Bigg Boss Tanisha Kuppanda) ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್ ಆಗಿದ್ದಾರೆ. ಅದರಲ್ಲಿಯೂ ಬಿಗ್‌ಬಾಸ್ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದರು. ಅಂದಹಾಗೆ ತನಿಷಾ, ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್ ಆಗಿದ್ದಾರೆ. ಅದರಲ್ಲಿಯೂ ಬಿಗ್‌ಬಾಸ್ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದಾರೆ. ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಪೆನ್ಡ್ರೈವ್ ಸಿನಿಮಾದಲ್ಲಿಯೂ ಸಕತ್ ನಟನೆ ಮಾಡಿದ್ದಾರೆ. ಇಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಕೆಟ್ಟ ಕಮೆಂಟ್ಸ್ಗೆ ಬೇಸರ
ಹೀಗೆ ಸಕತ್ ಬಿಜಿಯಾಗಿರೋ ತನಿಷಾ ಅವರು, ಸಕತ್ ಹಾಟ್ ಅವತಾರದಲ್ಲಿ ಹಲವು ಬಾರಿ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಸ್ಲಿಟ್ ಡ್ರೆಸ್ ಸೇರಿದಂತೆ ಮಿನಿ ಡ್ರೆಸ್ಗಳಲ್ಲಿ ಕಂಗೊಳಿಸುತ್ತಾರೆ. ಈ ಮೂಲಕ ಪಡ್ಡೆಗಳ ನಶೆ ಏರಿಸುತ್ತಾರೆ. ಇವರ ಈ ಡ್ರೆಸ್ ಸೆನ್ಸ್ಗೆ ಸಾಕಷ್ಟು ಹೊಗಳಿಕೆಗಳು ಬಂದರೂ ಅಷ್ಟೇ ರೀತಿಯಲ್ಲಿ ಕೆಟ್ಟ ಕಮೆಂಟ್ಸ್ಗಳೂ ಬರುತ್ತವೆ. ಕೆಟ್ಟ ಕಮೆಂಟ್ಸ್ ಬಗ್ಗೆ ತನಿಷಾ ನೊಂದು ನುಡಿದಿದ್ದಾರೆ. ಸುದ್ದಿಮನೆ ಕನ್ನಡಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ, ನೋಡಬಾರದು ಎನ್ನಿಸಿದರೂ ಕೆಲವೊಮ್ಮೆ ನೋಡಿ ಹೋಗ್ತದೆ. ಹಲವರು ಫೇಕ್ ಪ್ರೊಫೈಲ್ನಿಂದ ಕೆಟ್ಟ ಕಮೆಂಟ್ಸ್ ಹಾಕಿದ್ರೆ ಮತ್ತೆ ಕೆಲವರು ಒರಿಜಿನಲ್ ಪ್ರೊಫೈಲ್ ಇಟ್ಟುಕೊಂಡೇ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು ನಟಿ. ಇದೀಗ ವರಮಹಾಲಕ್ಷ್ಮೀ ಹಬ್ಬದಂದು ಸೀರೆ ಉಟ್ಟು ಅಪ್ಪಟ ಭಾರತೀಯ ನಾರಿಯಂತೆ ನಟಿ ಕಂಗೊಳಿಸುತ್ತಿದ್ದು, ಸದಾ ಹೀಗೆಯೇ ಇರಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.


