ಅಣ್ಣಯ್ಯ ಮದುವೆ ಸಂಭ್ರಮ : ನಿಜವಾಗಿಯೂ ಗುಂಡಮ್ಮನ ಮದುವೆ ಯಾರ ಜೊತೆ ಆಗುತ್ತೆ??
ಅಣ್ಣಯ್ಯ ಧಾರಾವಾಹಿಯಲ್ಲಿ ಗುಂಡಮ್ಮನ ಮದುವೆ ಸಂಭ್ರಮ ಬಲು ಜೋರಾಗಿಯೇ ನಡೆಯುತ್ತಿದೆ. ಆದರೆ ಇವತ್ತಿಗೂ ಜನರಿಗೆ ಗುಂಡಮ್ಮನ ಮದುವೆ ಯಾರ ಜೊತೆ ನಡೆಯುತ್ತೆ? ಅನ್ನೋ ಕುತೂಹಲ ಹೆಚ್ಚಿದೆ? ನಿಮಗೆ ಏನು ಅನಿಸುತ್ತೆ?

ಅಣ್ಣಯ್ಯ ಧಾರಾವಾಹಿಯಲ್ಲಿ (Annayya Serial) ಕಳೆದ ಒಂದೆರಡು ವಾರದಿಂದ ಮದುವೆ ಸಂಭ್ರಮ ಬಲು ಜೋರಾಗಿಯೇ ನಡೆಯುತ್ತಿದೆ. ಅಣ್ಣಯ್ಯನ ಪ್ರೀತಿಯ ತಂಗಿ ರಶ್ಮಿ ಆಲಿಯಾಸ್ ಗುಂಡಮ್ಮನ ಮದುವೆ ಸಂಭ್ರಮ. ಮನೆಯಲ್ಲಿ ಮೊದಲ ಮದುವೆ, ಮುದ್ದಿನ ತಂಗಿಯ ಮದುವೆಯನ್ನು ಅದ್ಧೂರಿಯಾಗಿಯೇ ಮಾಡಬೇಕೆಂದು ಪಣ ತೊಟ್ಟಿರುವ ಶಿವಣ್ಣ (Shivanna), ತನ್ನ ಸೋದರ ಮಾವನೇ ಮೋಸ ಮಾಡಿ, ಈ ಗಂಡನ್ನು ತಮಗೆ ತಗುಲು ಹಾಕಿದ್ದಾನೆಂಬ ಪುಟ್ಟ ಮಾಹಿತಿಯೂ ಇಲ್ಲದೇ, ಹುಡುಗನ ಕಡೆಯವರು ಹೇಳಿದ್ದನ್ನೆಲ್ಲಾ ಕೇಳಿಕೊಂಡು, ಅವರು ತಾಳಕ್ಕೆ ಕುಣಿಯುತ್ತಾ ಬರುತ್ತಿದ್ದಾರೆ ಶಿವು.
ಹುಡುಗಿ ಡುಮ್ಮಿ ಬೇಡ ಅನ್ನೋ ನೀವು, ಮದ್ವೆಯಾದ್ಮೇಲೆ ಹೆಂಡ್ತಿ ಊದಿಕೊಂಡ್ರೆ ಬಿಟ್ಟು ಬಿಡ್ತೀರಾ?
ಮನೆಯವರೆಲ್ಲಾ ಈ ಡುಮ್ಮಿ ಹುಡುಗಿ ಜೊತೆ ಮದುವೆ ಬೇಡ ಎಂದಾಗ, ಪ್ರಶಾಂತ್ ಇಲ್ಲ ಹುಡುಗಿಯ ಬಾಹ್ಯ ಸೌಂದರ್ಯಕ್ಕಿಂತ ಮನಸ್ಸು ಮುಖ್ಯ ಎಂದು ತನಗೆ ಮದುವೆಗೆ ಒಪ್ಪಿಗೆ ಇದೆ ಎಂದು ನಾಟಕವಾಡಿ, ರಶ್ಮಿಯನ್ನು ಮದುವೆಯಾಗೋದಕ್ಕೆ (Rashmi Marriage) ಒಪ್ಪಿಗೆ ನೀಡಿದ್ದನು. ಇನ್ನೊಂದು ಕಡೆ ವೀರಭದ್ರನ ಜೊತೆ ಕೈ ಜೋಡಿಸಿ, ಆತ ಹೇಳಿದಂತೆ, ಮದುವೆಯಾಗೋದಕ್ಕೆ 5 ಲಕ್ಷ ವರದಕ್ಷಿಣೆ ಕೇಳುತ್ತಾರೆ ಹುಡುಗನ ಮನೆಯವರು. 5 ಲಕ್ಷಕ್ಕಾಗಿ ತನ್ನ ಮನೆ, ಅಂಗಡಿ ಎಲ್ಲವನ್ನು ಅಡ ಇಟ್ಟು ಹಣ ಹೊಂದಿಸಿ, ನೀಡಿದರೆ, ತಾನು ಹೇಳಿದ್ದು 5 ಲಕ್ಷ ಅಲ್ಲ, 10 ಲಕ್ಷ ಎಂದಿದ್ದಾರೆ. ಅದನ್ನೂ ಕೂಡ ಪೂರೈಸೋಕೆ ಶಿವಣ್ಣ ಒದ್ದಾಡ ನಡೆಸಿದ್ದಾನೆ. ಆದರೆ ಇದ್ಯಾವುದರ ಪರಿವೇ ಇಲ್ಲದ ಪಾರು ತನ್ನ ಗಂಡನಿಗೆ ಸಾಥ್ ನೀಡಲು ತಾನು ಹಣ ಹೊಂದಿಸಿ, ಶಿವುಗೆ ನೀಡಿದ್ದಾಳೆ.
ಅಣ್ಣಯ್ಯದಲ್ಲಿ ಗುಂಡಮ್ಮಂಗೆ ಬಾಲ್ಯವಿವಾಹ ಮಾಡ್ತಿದ್ದಾರ? ಗುಂಡಮ್ಮಂಗೆ ಸೀನನೇ ಇರಲಿ ಅಂತಿರೋ ನೆಟ್ಟಿಗರು
ಮತ್ತೊಂದು ಕಡೆ ರಶ್ಮಿಯ ಅರಶಿನ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಬಳೆ ಶಾಸ್ತ್ರಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿವೆ. ಇನ್ನೊಂದೆಡೆ ಮದುವೆಯಾದ ಮೇಲೆ ರಶ್ಮಿಯನ್ನು ಯಾವ ರೀತಿ ಕಾಡಬೇಕು ಅನ್ನೋದನ್ನು ವೀರಭದ್ರ ಪ್ರಶಾಂತ್ ಗೆ ಹೇಳುತ್ತಿದ್ದಾನೆ. ಮತ್ತೊಂದು ಕಡೆ ಶಿವು ಅಮ್ಮ ಜೈಲಿನಿಂದ ಬಿಡುಗಡೆಯಾಗಿ ಮಗಳ ಮದುವೆಗೆ ಬಂದಿದ್ದಾರೆ. ಈ ಜನರಿಗೆ ಕಾಡುತ್ತಿರೋದು ಒಂದೇ ಪ್ರಶ್ನೆ ರಶ್ಮಿ ಮದುವೆ ಶಿವು ನಿಶ್ಚಯಿಸಿರೋ ಹುಡುಗನ ಜೊತೆಯೇ ನಡೆಯುತ್ತಾ ? ಅಥವಾ ಯಾವಾಗಲೂ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಜಿಮ್ ಸೀನಾ (Gym Seena) ಜೊತೆ ನಡೆಯುತ್ತಾ? ಜಿಮ್ ಸೀನಾ ಈಗಾಗಲೇ ಇನ್ನೊಂದು ಹುಡುಗಿಯ ಪ್ರೀತಿಯ ಬಲೆಯಲ್ಲಿ ಬಿದ್ದು, ಆಕೆಯನ್ನೇ ಮದುವೆಯಾಗೋ ಕನಸು ಕಾಣುತ್ತಿದ್ದಾನೆ. ಆದರೆ ಜಿಮ್ ಸೀನಾ ಮತ್ತು ಗುಂಡಮ್ಮ ಕಾಂಬಿನೇಶನ್ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಅವರಿಬ್ಬರೇ ಜೊತೆಯಾದ್ರೆ ಚೆಂದ ಎನ್ನುತ್ತಿದ್ದಾರೆ ಜನ. ಅಷ್ಟಕ್ಕೂ ಮುಂದೆ ಏನೇನು ಆಗುತ್ತೆ ರಶ್ಮಿ ಮದುವೆ ಯಾರ ಜೊತೆ ಆಗುತ್ತೆ ಅನ್ನೋದನ್ನು ಕಾದು ನೋಡಬೇಕು.
Annayya Serial: ರಶ್ಮಿ ಮದುವೆ ಸಂಭ್ರಮ; ಶಿವು ಬದುಕು ಬದಲಾಯಿಸೋ ವ್ಯಕ್ತಿ ಆಗಮನವಾಯ್ತು; ಯಾರದು?