ಅಣ್ಣಯ್ಯದಲ್ಲಿ ಗುಂಡಮ್ಮಂಗೆ ಬಾಲ್ಯವಿವಾಹ ಮಾಡ್ತಿದ್ದಾರ? ಗುಂಡಮ್ಮಂಗೆ ಸೀನನೇ ಇರಲಿ ಅಂತಿರೋ ನೆಟ್ಟಿಗರು
ಅಣ್ಣಯ್ಯ ಸೀರಿಯಲ್‌ನಲ್ಲಿ ಗುಂಡಮ್ಮಂಗೆ ಮದುಮಗಳಾಗೋ ಯೋಗ ಬಂದಿದೆ. ಆದರೆ ನೆಟ್ಟಿಗರು ಈ ಮದುವೆಗೆ ಸುತರಾಂ ಒಪ್ಪುತ್ತಿಲ್ಲ. ಗುಂಡಮ್ಮಂಗೆ ಸೀನನೇ ಇರಲಿ ಅಂತಿದ್ದಾರೆ.
ಅಣ್ಣಯ್ಯ ಸೀರಿಯಲ್ ಗೆ ಅಂದುಕೊಂಡ ಹಾಗೆ ಟಿಆರ್‌ಪಿ ಬರದೆ ಇರಬಹುದು, ಆದರೆ ತೀರಾ ಸೀತಾರಾಮದ ಲೆವೆಲ್‌ಗೆಲ್ಲ ಈ ಸೀರಿಯಲ್ ಹೊಡೆತ ಕೊಟ್ಟಂಗಿಲ್ಲ. ಕಥೆಯಲ್ಲಿ ಏನೇನೋ ಅಚ್ಚರಿ, ತಿರುವುಗಳನ್ನೆಲ್ಲ ತಂದು ಸೀರಿಯಲ್ ಅನ್ನು ತಕ್ಕಮಟ್ಟಿನ ಟಿಆರ್‌ಪಿ ಜೊತೆಗೇ ತಗೊಂಡು ಹೋಗ್ತಿದ್ದಾರೆ. ಮೊನ್ನೇತನಕ ಪಾರು ಓದೋದಕ್ಕೆ ಫಾರಿನ್‌ಗೆ ಹೋಗ್ತಾಳೆ ಅನ್ನೋ ಥರದ ಎಪಿಸೋಡ್‌ಗಳು ಬಂದವು. ಇದೀಗ ಗುಂಡಮ್ಮನ ಮದುವೆಯ ಎಪಿಸೋಡ್‌ಗಳು ಬರೋ ಸೂಚನೆ ಕಾಣ್ತಿವೆ. ಆದರೆ ವೀಕ್ಷಕರಿಗೆ ಯಾಕೋ ಇದು ರುಚಿಸುತ್ತಿಲ್ಲ. ಅವರಿಗೆ ಗುಂಡಮ್ಮನ ಕಂಡರೆ ಮೊದಲಿಂದಲೂ ಬಹಳ ಇಷ್ಟ. ಅವಳನ್ನು ಇಷ್ಟು ಬೇಗ ಬೇರೆ ಮನೆಗೆ ಕಳಿಸೋಕೆ ಇಷ್ಟ ಇಲ್ಲ. ಇನ್ನೊಂದು ವಿಷಯ ಅಂದರೆ ಗುಂಡಮ್ಮ ಮತ್ತು ಸೀನನ ಎಪಿಸೋಡ್‌ಗಳು ಬಹಳ ಕಡಿಮೆ ಬಂದರೂ ಭಲೇ ಮಜಾ ಕೊಡ್ತಿದ್ದವು. ಆ ಸಣ್ಣ ಸೀನ್‌ಗಳನ್ನು ನೋಡಿ ಎನ್‌ಜಾಯ್ ಮಾಡಿದ ವೀಕ್ಷಕರು ಇವರಿಬ್ಬರ ಎಪಿಸೋಡ್‌ಗಳು ಇನ್ನಷ್ಟು ಬರುತ್ತವೆ.
ಭಲೇ ಮಜಾ ಇರುತ್ತೆ ಅಂತ ಎಕ್ಸ್‌ಪೆಕ್ಟೇಶನ್‌ನಲ್ಲಿದ್ದರು. ಆದರೆ ಯಾಕೋ ಇದೀಗ ಗುಂಡಮ್ಮನ್ನ ಬೇರೆಲ್ಲಿಗೋ ಕಟ್ಟೋ ಪ್ಲಾನ್ ನಡೀತಿದೆ. ಇದ್ಯಾಕೋ ಅವಳಿಗೂ ಇಷ್ಟ ಇದ್ದ ಹಾಗಿಲ್ಲ. ಆದರೆ ಅಕ್ಕ, ಅತ್ತಿಗೆ ಒತ್ತಾಯಕ್ಕೆ ಅವಳು ಕಷ್ಟದಿಂದ ಒಪ್ಪಿದ್ದಾಳೆ.
ಶ್ರೇಷ್ಠಾ ಹೊಸ ನಾಟಕ, ಬೆವರಿದ ತಾಂಡವ್, ಕರಗ್ತಾಳಾ ಭಾಗ್ಯಾ ?
ಅಂದಹಾಗೆ ಈ ಸೀರಿಯಲ್‌ನಲ್ಲಿ ಗುಂಡಮ್ಮನಾಗಿ ಎಲ್ಲರ ಗಮನ ಸೆಳೆಯುವ ಆಕ್ಟಿಂಗ್ ಮಾಡುತ್ತಿರುವ ಕಲಾವಿದೆ ಅಪೇಕ್ಷಾ ಶ್ರೀನಾಥ್ ರಿಯಲ್ ಲೈಫನಲ್ಲೂ ಪಳಗಿದ ಕಲಾವಿದೆ. ವಿಶೇಷ ಅಂದರೆ ಈಕೆ ಯಕ್ಷಗಾನ ಕಲಾವಿದೆ. ಯಕ್ಷಗಾನದಲ್ಲಿ ಬಹಳ ಪ್ರಮುಖ ವೇಷಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದವರು. ಅದರಲ್ಲೂ ಶೂರ್ಪನಖಿಯಂಥಾ ಪಾತ್ರಗಳನ್ನು ಮಾಡಿದ್ದಾರೆ. ಯಕ್ಷಗಾನ ಅಂದರೆ ಗಂಡು ಕಲೆ ಎಂದು ಕೆಲಮಂದಿಗೆ ಕಪಾಳಕ್ಕೆ ಹೊಡೆಯುವಂತೆ ಯಕ್ಷಗಾನದಂಥ ಕಲೆಯನ್ನು ಒಂದು ಲಿಂಗ, ಜಾತಿಗೆ ಕಟ್ಟಿಹಾಕೋದು ಮೂರ್ಖತನ ಎಂದು ಪರೋಕ್ಷವಾಗಿ ತೋರಿಸಿಕೊಟ್ಟವರು. ಇಂಥವರಿಂದ ಸ್ಫೂರ್ತಿ ಪಡೆದು ಇಂದು ಯಕ್ಷಗಾನ ಮಹಿಳೆಯರಿಂದ ತುಂಬಿ ತುಳುಕುತ್ತಿದೆ. ಇರಲಿ, ಯಕ್ಷಗಾನದಲ್ಲಿ ಹೆಸರು ಮಾಡಿದ ಈ ಕಲಾವಿದೆ ರಂಗನಟಿಯೂ ಹೌದು. ಒಂದಿಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಹಾಡಿನಲ್ಲಿ ಅಂದರೆ ಗಾಯನದಲ್ಲೂ ಎತ್ತಿದ ಕೈ. ಇಂಥಾ ಬಹುಮುಖ ಪ್ರತಿಭೆ ಇದೀಗ 'ಅಣ್ಣಯ್ಯ' ಸೀರಿಯಲ್‌ನಲ್ಲಿ ಗುಂಡಮ್ಮ ಅಲಿಯಾಸ್ ರಶ್ಮಿ ಪಾತ್ರದ ಮೂಲಕ ಗಮನಸೆಳೆಯುವ ಅಭಿನಯ ತೋರುತ್ತಿದ್ದಾರೆ.
ಈಗ ಮನೆಯ ಈ ಮುದ್ದು ತಂಗಿಯನ್ನು ಬೇರೆ ಮನೆ ಸೇರಿಸೋ ಖುಷಿ ಬೇಸರಲ್ಲಿ ಅಣ್ಣಯ್ಯ ಇದ್ದಾನೆ. ಅಕ್ಕನನ್ನು ನೋಡಲು ಬಂದವರು ಗುಂಡಮ್ಮನನ್ನು ಒಪ್ಪಿಕೊಂಡಿದ್ದಾರೆ. ನಮಗೆ ದೊಡ್ಡ ತಂಗಿಗಿಂತ ಎರಡನೆಯವಳನ್ನು ಮನೆಗೆ ಸೊಸೆಯಾಗಿ ಕರೆಸಿಕೊಳ್ಳುವ ಆಸಕ್ತಿ ಇದೆ ಅಂತ ಹೇಳಿದ್ದಾರೆ. ಇದಕ್ಕೆ ಮೊದಲ ತಂಗಿಗೆ ಬೇಸರವಾದರೂ ತನ್ನ ತಂಗಿಗೆ ಮದುವೆ ಆಗುತ್ತಿದೆಯಲ್ಲ ಎಂಬ ಖುಷಿಯೂ ಇದೆ. ಮನೆಯವರೆಲ್ಲರ ಮಾತಿಗೆ ಅಣ್ಣಯ್ಯನೂ ತಲೆ ಬಾಗಿದ್ದಾನೆ.
ಯಶ್ ನಡತೆ ಬಗ್ಗೆ ಆಕ್ಷೇಪ ಎತ್ತಿದ ಸುದೀಪ್ ಫ್ಯಾನ್ಸ್, ರಾಕಿಂಗ್ ಸ್ಟಾರ್‌ಗೆ ಬುದ್ಧಿ ಹೇಳಿದ್ದ ಕನ್ನಡದ ಕಿಚ್ಚ!
ಆದರೆ ಗುಂಡಮ್ಮ ಮಾತ್ರ ಮನಸ್ಸಿಲ್ಲದ ಮನಸ್ಸಿಂದ ತನ್ನದು ಬಾಲ್ಯ ವಿವಾಹ ಎನ್ನುತ್ತಿದ್ದಾಳೆ. ಇನ್ನೂ ಕಾಲೇಜು ಓದುತ್ತಿರುವ ತನಗೆ ಮದುವೆ ಬೇಡ ಅಂದರೂ ಮನೆಯವರ ಒತ್ತಾಯಕ್ಕೆ ರೆಡಿ ಆಗಲು ಮುಂದಾಗಿದ್ದಾಳೆ. ಅವಳಿಗೆ ಇಷ್ಟು ಬೇಗ ಮದುವೆ ಮಾಡಿಸೋದು ವೀಕ್ಷಕರಿಗೂ ಇಷ್ಟ ಆಗ್ತಿಲ್ಲ. ಸೀನನ ಜೊತೆಗೆ ಗುಂಡಮ್ಮನ ಮದುವೆ ಮಾಡಬೇಕು ಅಂತ ಅವರು ತಾಕೀತು ಮಾಡ್ತಿದ್ದಾರೆ. ಇಲ್ಲಿ ಸೀರಿಯಲ್ ಟೀಮ್ ವೀಕ್ಷಕರ ಮಾತಿಗೆ ಬೆಲೆ ಕೊಡ್ತಾರ, ಗುಂಡಮ್ಮ, ಸೀನನ ಎಪಿಸೋಡ್ ತಂದು ಸೀರಿಯಲ್ ಕಳೆ ಹೆಚ್ಚಿಸ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.