Annayya Serial: ರಶ್ಮಿ ಮದುವೆ ಸಂಭ್ರಮ; ಶಿವು ಬದುಕು ಬದಲಾಯಿಸೋ ವ್ಯಕ್ತಿ ಆಗಮನವಾಯ್ತು; ಯಾರದು?
ʼಅಣ್ಣಯ್ಯʼ ಧಾರಾವಾಹಿಯಲ್ಲಿ ರಶ್ಮಿ ಮದುವೆ ಸಂಭ್ರಮ ಒಂದುಕಡೆಯಾದರೆ, ಇನ್ನೊಂದು ಕಡೆ ಮುಚ್ಚಿಟ್ಟ ಸತ್ಯಗಳು ಹೊರಬೀಳುವ ಸಮಯ ಕೂಡ ಬಂದಾಗಿದೆ. ಒಟ್ಟಿನಲ್ಲಿ ರೋಚಕ ಸತ್ಯಗಳು ಹೊರಬೀಳಲಿವೆ.

ʼಅಣ್ಣಯ್ಯʼ ಧಾರಾವಾಹಿಯಲ್ಲಿ ಶಿವು ತಂಗಿ ಗುಂಡಮ್ಮ ಮದುವೆ ಸಂಭ್ರಮ ಶುರು ಆಗಿದೆ. ನಾಲ್ವರು ತಂಗಿಯರಲ್ಲಿ ಓರ್ವ ತಂಗಿ ಮದುವೆ ಆಗ್ತಿರೋದು ಶಿವುಗೆ ಖುಷಿಯ ಜೊತೆಗೆ ಮನೆ ಖಾಲಿ ಥರ ಅನಿಸುವುದು ಎಂಬ ಭಯ ಕೂಡ ಇದೆ. ಈಗ ಈ ಧಾರಾವಾಹಿಗೆ ರೋಚಕ ತಿರುವು ಸಿಕ್ಕಿದೆ.
ಈ ಧಾರಾವಾಹಿ ಕಥೆ ಏನು?
ಶಿವು ತಾಯಿ ಯಾವುದೋ ಪರಪುರುಷನ ಜೊತೆಗೆ ಓಡಿಹೋದಳು ಅಂತ ಎಲ್ಲರೂ ನಂಬಿದ್ದಾರೆ. ಪಾರ್ವತಿ ಅಪ್ಪನೇ ಮೋಸ ಮಾಡಿ ಶಿವು ತಾಯಿಯನ್ನು ಜೈಲಿಗೆ ಕಳಿಸಿದ್ದಾನೆ. ಇಡೀ ಊರೇ ಬಹಿಷ್ಕಾರ ಹಾಕಿದ್ದಾಗ, ಶಿವು ತನ್ನ ತಂಗಿಯರ ಜೊತೆಗೆ ಚೆನ್ನಾಗಿರಲಿ, ಊರಲ್ಲೇ ಇರಲಿ ಅಂತ ಹೇಳಿದ್ದನು. ಇದು ಅವನು ಮಾಡಿದ್ದ ದೊಡ್ಡ ಮೋಸ. ತನ್ನ ಮಾವ ದೇವರು, ಅವನೇ ನಮ್ಮ ಪಾಲಿನ ಗಾಡ್‌ಫಾದರ್ ಎಂದು ಶಿವು ನಂಬಿದ್ದಾನೆ.
ಹುಡುಗಿ ಡುಮ್ಮಿ ಬೇಡ ಅನ್ನೋ ನೀವು, ಮದ್ವೆಯಾದ್ಮೇಲೆ ಹೆಂಡ್ತಿ ಊದಿಕೊಂಡ್ರೆ ಬಿಟ್ಟು ಬಿಡ್ತೀರಾ?
ಶಿವುಗೆ ತನ್ನ ಮಾವನ ಹಣೆಬರಹ ಗೊತ್ತಿಲ್ಲ, ಆದರೆ ಪಾರ್ವತಿಗೆ ಅವಳ ಅಪ್ಪನ ಕರ್ಮಕಾಂಡ ಎಲ್ಲವೂ ಗೊತ್ತಿದೆ. ತನ್ನ ಅಪ್ಪನಿಂದ ಯಾರಿಗೂ ಏನೂ ತೊಂದರೆ ಆಗಬಾರದು ಅಂತ ಪಾರು ಪ್ರಯತ್ನಪಡುತ್ತಿದ್ದಾಳೆ. ರಶ್ಮಿ ಮದುವೆಯಾಗುವ ಹುಡುಗ ವರದಕ್ಷಿಣೆ ಕೇಳುತ್ತಿರುವ ವಿಚಾರ ಪಾರುಗೆ ಗೊತ್ತಿಲ್ಲ. ರಶ್ಮಿ ದಪ್ಪಗಿದ್ರೂ ಕೂಡ ಅವಳನ್ನು ಮದುವೆಗೆ ಒಪ್ಪಿರೋ ಹುಡುಗ ಭಾರೀ ಒಳ್ಳೆಯವನು ಅಂತ ಎಲ್ಲರೂ ನಂಬಿದ್ದಾರೆ. ರಶ್ಮಿ ಜೀವನವನ್ನು ಹಾಳುಮಾಡಲು ಪಾರು ತಂದೆಯೇ ಅರೇಂಜ್ ಮಾಡಿರೋ ಕೆಲಸ ಇದು ಎನ್ನೋದು ಎಲ್ಲರಿಗೂ ಅರ್ಥ ಆಗಬೇಕಿದೆ.
ತಾಯಿಯನ್ನು ಶಿವು ಒಪ್ತಾನಾ?
ಪಾರು ತಾಯಂದಿರು ಈ ಸತ್ಯವನ್ನು ಶಿವುಗೆ ಹೇಳಬೇಕು ಅಂತ ಪ್ರಯತ್ನಪಟ್ಟರು. ಆದರೂ ಪ್ರಯೋಜನಕ್ಕೆ ಬಾರಲಿಲ್ಲ. ಈಗ ಶಿವು ತಾಯಿ ಎಂಟ್ರಿ ಆಗಿದೆ. ಎಷ್ಟೋ ವರ್ಷಗಳ ಬಳಿಕ ತನ್ನ ಮಕ್ಕಳನ್ನು ನೋಡಬೇಕು ಅಂತ ಶಾರದಾ ಮನೆಗೆ ಬಂದಿದ್ದಾಳೆ. ಪಾರು ತಂದೆ ಮೋಸದಿಂದ ಅವಳು ಜೈಲಿನಲ್ಲಿ ನರಕ ಅನುಭವಿಸುವ ಹಾಗೆ ಆಯ್ತು. ಈಗ ಅವಳು ಮನೆಗೆ ಬಂದಿದ್ದು, ತಂಗಿಯಂದಿರಿಗೆ ಫುಲ್ ಖುಷಿಯಾಗಿದೆ. ಆದರೆ ಶಿವು ಮಾತ್ರ ಶಾಕ್ ಆಗಿದ್ದಾನೆ. ನಮಗೆ ಇಲ್ಲಿಯವರೆಗೂ ತಾಯಿ ಪ್ರೀತಿ ಸಿಕ್ಕಿಲ್ಲ. ಯಾವನಿಗೋಸ್ಕರ ನನ್ನ ತಾಯಿ ನಮ್ಮೆಲ್ಲರನ್ನು ಬಿಟ್ಟು ಹೋದಳು, ಊರವರು ನಮಗೆ ನಿಂದಿಸುವ ಹಾಗೆ ಆಯ್ತು, ನಾವು ಇಷ್ಟು ವರ್ಷ ನರಕದಲ್ಲೇ ಜೀವನ ಮಾಡಿದ್ವಿ ಎನ್ನುವ ಮನೋಭಾವ ಶಿವುಗೆ ಇದೆ. ಹೀಗಾಗಿ ಶಾರದಾ ಮನೆಗೆ ಬಂದರೂ ಕೂಡ ಅವನು ಅವಳನ್ನು ಒಪ್ಪೋದು ಕಷ್ಟ ಇದೆ. ಶಾರದಾ ಗುಣದಿಂದಲೇ ತಂಗಿಯಂದಿರಿಗೆ ಮದುವೆ ಆಗೋದು ಕಷ್ಟ ಇದೆ ಎನ್ನೋದು ಶಿವುಗೆ ಗೊತ್ತು. ಈಗ ಅವನು ಏನು ಮಾಡುತ್ತಾನೋ ಏನೋ!
ಸೀರಿಯಲ್ ವಿಷ್ಯ ಅಲ್ಲ, ಸೀರಿಯಸ್ ವಿಷ್ಯ ಎನ್ನುತ್ತಾ ಪ್ರೀತಿಸುವ ಹುಡುಗಿಯ ಗುಟ್ಟು ಬಿಚ್ಚಿಟ್ಟ ಅಣ್ಣಯ್ಯ ನಟ ವಿಕಾಶ್
ಮುಚ್ಚಿಟ್ಟಿರೋ ಸತ್ಯ ಏನು?
ಶಾರದಾಳಿಂದ ಒಂದಷ್ಟು ಸತ್ಯ ರಿವೀಲ್ ಆಗಬೇಕು. ಈ ಸತ್ಯ ಹೊರಗಡೆ ಬಂದರೆ ಪಾರು ತಂದೆ ಕಥೆ ಮುಗಿದ ಹಾಗೆ. ಇನ್ನು ಶಿವು ಬಳಿ ನೂರಾರು ಎಕರೆ ಆಸ್ತಿ ಇದೆ. ಆದರೆ ಈ ವಿಷಯ ಅವನಿಗೆ ಗೊತ್ತಿಲ್ಲ. ತಂಗಿ ಮದುವೆಗೆ ಹಣ ಹೊಂದಿಸಲು ಒದ್ದಾಡ್ತಿರುವ ಅವನಿಗೆ ಮಾವನ ಹಣೆಬರಹ ಗೊತ್ತಾದ್ರೆ ಏನು ಮಾಡ್ತಾನೋ ಏನೋ! ಈಗ ಮನೆಗೆ ಬಂದಿರೋ ಶಾರದಾಳನ್ನು ಪಾರು ಅಪ್ಪ ಹೊರಗಡೆ ಕಳಿಸೋದಂತೂ ಸತ್ಯ. ಇದಕ್ಕಾಗಿ ಅವನು ಏನು ಮಾಡ್ತಾನೋ ಏನೋ!
ಮದ್ವೆ ಬಗ್ಗೆ ಗುಡ್‌ನ್ಯೂಸ್ ಕೊಡ್ತೀನೆಂದ ರಚಿತಾ ರಾಮ್: ಫಸ್ಟ್ ನೈಟ್ ಹೇಳಿಕೆಯಿಂದ ಸುಮ್ಮನಾದ್ರಾ?
ಪಾತ್ರಧಾರಿಗಳು!
ಶಿವು ಪಾತ್ರದಲ್ಲಿ ವಿಕಾಶ್ ಉತ್ತಯ್ಯ, ಪಾರು ಪಾತ್ರದಲ್ಲಿ ನಿಶಾ ರವಿಕೃಷ್ಣನ್ ಅವರು ನಟಿಸುತ್ತಿದ್ದಾರೆ. ಸುಪ್ರೀತಾ ಶೆಟ್ಟಿ-ಪ್ರಮೋದ್ ಶೆಟ್ಟಿ ಅವರು ಈ ಧಾರಾವಾಹಿಗೆ ಹಣ ಹೂಡಿದ್ದಾರೆ. ಈಗಾಗಲೇ ಟಿಆರ್‌ಪಿಯಲ್ಲಿ ಕೂಡ ಈ ಸೀರಿಯಲ್ ಕಮಾಲ್ ಮಾಡ್ತಿದೆ.